Afghanistan: ಸುಮ್ಮನಿರಲಾರದೇ ತಜಕಿಸ್ತಾನಕ್ಕೆ 6 ಕೋಟಿ ಹಣ ವರ್ಗಾವಣೆ ಮಾಡಿ ಇಂಗು ತಿಂದ ಮಂಗನಂತೆ ಆದ ಅಫ್ಘನ್ ತಾಲಿಬಾನ್ ಸರ್ಕಾರ

Taliban: ಸುಮ್ಮನಿರಲಾರದೆ ಆಕಸ್ಮಿಕವಾಗಿ ತಜಕಿಸ್ತಾನ ದಲ್ಲಿ ಇರುವ ಅಫ್ಘಾನ್ ರಾಯಭಾರ ಕಚೇರಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ ಬಳಿಕ ತನ್ನ ತಪ್ಪಿನ ಅರಿವಾಗಿ ಅಫ್ಘಾನಿಸ್ತಾನದಲ್ಲಿ ಇರುವ ತಾಲಿಬಾನ್ ಅಧಿಕಾರಿಗಳು ಹಣ ವಾಪಸ್ ಮಾಡುವಂತೆ, ತಜಕಿಸ್ತಾನಕ್ಕೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಹಣ ವಾಪಸ್ ಕಳಿಸುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದಾರೆ

ತಾಲಿಬಾನ್ ಉಗ್ರರು

ತಾಲಿಬಾನ್ ಉಗ್ರರು

 • Share this:
  ತಾಲಿಬಾನ್‌ (Taliban) ಉಗ್ರರು, ಅಫ್ಘಾನಿಸ್ತಾನ (Afghanistan) ವಶಪಡಿಸಿಕೊಂಡ ಬಳಿಕ ಇಡೀ ದೇಶವ ಜೈಲಿನಂತಾಗಿದೆ. ನಾಗರಿಕರೆಲ್ಲಾ ಬದುಕಿದ್ದರೂ ಸತ್ತವರಂತೆ ಜೀವನ (Life) ಸಾಗಿಸುವ ಪರಿಸ್ಥಿತಿ ಎದುರಾಗಿದೆ. ಒಂದೆಡೆ ತಾಲಿಬಾನ್ ಉಗ್ರರು ದಾಳಿ ಹಾಗೂ ಕಟ್ಟು ನಿಟ್ಟಾದ ಷರಿಯಾ (Shariya) ನಿಯಮ (Law), ಮತ್ತೊಂದೊಡೆ ಬಾಂಬ್ ಸ್ಫೋಟಗಳಿಂದ ಜನರು ಅಕ್ಷರಶಃ ನರಕದಲ್ಲಿ ದಿನದೂಡುತ್ತಿದ್ದಾರೆ. ಇದರ ನಡುವೆ ಆಡಳಿತ ನಡೆಸಲು ಬರೆದ ತಾಲಿಬಾನ್ ಉಗ್ರರು ಪ್ರತಿನಿತ್ಯ ಒಂದಲ್ಲ ಒಂದು ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ.. ಆರಂಭದಲ್ಲಿ ಆಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡ ಬಳಿಕ ಚಿಕ್ಕ ಮಕ್ಕಳಂತೆ ಆಡಿ ವಿಶ್ವದ ಮುಂದೆ ನಗೆಪಾಟಲಿಗೆ ಈಡಾಗಿದ್ದ ತಾಲಿಬಾನ್ ಉಗ್ರರು ಈಗ ಹಣಕಾಸು ವಿಷಯದಲ್ಲಿ ದೊಡ್ಡ ಎಡವಟ್ಟು ಮಾಡಿಕೊಂಡು, ಬಾಲ ಸುಟ್ಟ ಬೆಕ್ಕಿನಂತೆ ಒದ್ದಾಡುತ್ತಿದ್ದಾರೆ.

  ಹಣ ವರ್ಗಾಯಿಸಿ ಸಂಕಷ್ಟಕ್ಕೆ ಸಿಲುಕಿದ ಅಫ್ಘಾನಿಸ್ತಾನ್ ತಾಲಿಬಾನ್ ಸರ್ಕಾರ

  ಇಡೀ ಅಫ್ಘಾನಿಸ್ತಾನ ದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬಳಿಕ ಅಲ್ಲಿನ ಜನರ ನಿಯಂತ್ರಣ ಮಾಡಲು ಪ್ರಯತ್ನಪಡುತ್ತಿರುವ ತಾಲಿಬಾನ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದೆ.. ಅಫ್ಘಾನಿಸ್ತಾನದ ಜನರು ತಮ್ಮ ಮಕ್ಕಳನ್ನು ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.. ಇದರ ನಡುವೆ ಹುಚ್ಚು ದೊರೆಯಂತೆ ಇರುವ ತಾಲಿಬಾನ್ ಅಧಿಕಾರಿಗಳು ಸರಿಯಾಗಿ ಸರ್ಕಾರ ನಡೆಸಲು ಬಾರದೆ ದೊಡ್ಡ ಯಡವಟ್ಟು ಮಾಡಿಕೊಂಡಿದ್ದಾರೆ. ಹೌದು ಈಗಾಗಲೇ ಆರ್ಥಿಕ ಮುಗ್ಗಟ್ಟಿನಿಂದ ಸಂಕಷ್ಟದಲ್ಲಿರುವ ಅಫ್ಘಾನಿಸ್ಥಾನದ ತಾಲಿಬಾನ್ ಸರ್ಕಾರ ಸುಮ್ಮನಿರಲಾರದೆ ಆಕಸ್ಮಿಕವಾಗಿ ತಜಕಿಸ್ತಾನ ದಲ್ಲಿ ಇರುವ ಅಫ್ಘಾನ್ ರಾಯಭಾರ ಕಚೇರಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿ ಇಂಗು ತಿಂದ ಮಂಗನಂತೆ ಆಗಿದೆ .

  ಇದನ್ನೂ ಓದಿ: ಅಫ್ಘಾನಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ: ಮೂವರು ಸಾವು, 15ಕ್ಕೂ ಹೆಚ್ಚು ಜನರಿಗೆ ಗಾಯ

  ಹಣ ವಾಪಸ್ ಕಳಿಸುವಂತೆ ತಾಲಿಬಾನ್ ಪಟ್ಟು..!

  ಸುಮ್ಮನಿರಲಾರದೆ ಆಕಸ್ಮಿಕವಾಗಿ ತಜಕಿಸ್ತಾನ ದಲ್ಲಿ ಇರುವ ಅಫ್ಘಾನ್ ರಾಯಭಾರ ಕಚೇರಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ ಬಳಿಕ ತನ್ನ ತಪ್ಪಿನ ಅರಿವಾಗಿ ಅಫ್ಘಾನಿಸ್ತಾನದಲ್ಲಿ ಇರುವ ತಾಲಿಬಾನ್ ಅಧಿಕಾರಿಗಳು ಹಣ ವಾಪಸ್ ಮಾಡುವಂತೆ, ತಜಕಿಸ್ತಾನಕ್ಕೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಹಣ ವಾಪಸ್ ಕಳಿಸುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದಾರೆ.

  ಹಣ ವಾಪಸ್ ನೀಡಲು ನಕಾರ

  ತಾಲಿಬಾನ್ $ 8,00,000 ಅನ್ನು ತಜಕಿಸ್ತಾನದ ಆಫ್ಘನ್ ರಾಯಭಾರ ಕಚೇರಿಗೆ ವರ್ಗಾಯಿಸಿದೆ. (ಭಾರತೀಯ ಕರೆನ್ಸಿಯಲ್ಲಿ ಸುಮಾರು 6 ಕೋಟಿ ರೂ) ಈ ಹಣ ಹಿಂತಿರುಗಿಸಲು ತಾಲಿಬಾನ್ ಸರ್ಕಾರ ತಜಕಿಸ್ತಾನ ರಾಯಭಾರ ಕಚೇರಿಯನ್ನು ಕೇಳಿದೆ. ಆದ್ರೆ ತಾಲಿಬಾನ್‌ನ ಕಟು ಟೀಕಾಕಾರರಾಗಿರುವ ತಜಕಿಸ್ತಾನದ ಅಧಿಕಾರಿಗಳು ಹಣವನ್ನು ತಿರುಗಿಸಲು ನಿರಾಕರಿಸಿದ್ದಾರೆ.

  ರಾಷ್ಟ್ರದ ಶಾಲಾ ಮಕ್ಕಳಿಗಾಗಿ ಇದ್ದ ಹಣ.

  ಇನ್ನು ಆಫ್ಘನ್ ತಾಲಿಬಾನ್ ಸರ್ಕಾರದ ಅಧಿಕಾರಿಗಳು ತಜಕಿಸ್ತಾನದ ರಾಯಭಾರಿ ಕಚೇರಿಗೆ ವರ್ಗಾವಣೆ ಮಾಡಿರುವ ಹಣವನ್ನ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಅವರು ತಜಕಿಸ್ತಾನ್‌ನಲ್ಲಿ ನಿರಾಶ್ರಿತರಾಗಿ ವಾಸಿಸುವ ಮಕ್ಕಳಿಗೆ ಶಾಲಾ ಶಿಕ್ಷಣ ನೀಡಲು ವಿನಿಯೋಗ ಮಾಡಿದ ಹಣ ವಾಗಿತ್ತು.. ಆದ್ರೆ ಯಾವಾಗ ಅಫ್ಘಾನಿಸ್ಥಾನ ತಾಲಿಬಾನ್ ಉಗ್ರರ ವಶವಾಯಿತೋ ಆಗ ಘನಿ ಅಫ್ಘಾನಿಸ್ತಾನದಿಂದ ಪಲಾಯನ ಮಾಡಿದ್ರು. ಬಳಿಕ ತಾಲಿಬಾನ್ ತಜಕಿಸ್ತಾನ್‌ನಲ್ಲಿ ನಿರಾಶ್ರಿತರಾಗಿರುವ ಮಕ್ಕಳಿಗೆ ಹಣ ವಿನಿಯೋಗ ಮಾಡುವ ಒಪ್ಪಂದವನ್ನು ರದ್ದುಗೊಳಿಸಿತ್ತು.

  ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಊಟಕ್ಕೂ ಹಾಹಾಕಾರ..! ತೀವ್ರವಾದ ಆಹಾರ ಅಭದ್ರತೆಗೆ ಕಾರಣ ಇಲ್ಲಿದೆ..

  ಆದರೆ ತಪ್ಪಾಗಿ, ಮೊತ್ತವನ್ನು ತಜಕಿಸ್ತಾನಕ್ಕೆ ಈಗ ವರ್ಗಾವಣೆ ಮಾಡಿದೆ..ಇನ್ನು ತಜಕಿಸ್ತಾನಕ್ಕೆ ಹಣ ನೀಡುವಂತೆ ತಾಲಿಬಾನಿಗಳು ದುಂಬಾಲು ಬಿದ್ದಿದ್ದಾರೆ, ಹಣವನ್ನು ಆ ಹಣವನ್ನು ಮಕ್ಕಳ ಶಿಕ್ಷಣಕ್ಕಾಗಿ ಖರ್ಚು ಮಾಡಿದ್ದೇವೆ ಎಂದು ತಜಕಿಸ್ತಾನ ತಾಲಿಬಾನಿಗಳಿಗೆ ಹೇಳುತ್ತಾ ಚಳ್ಳೆಹಣ್ಣು ತಿನ್ನಿಸುತ್ತಾ ಬಂದಿದೆ. ಒಟ್ಟಾರೆ ಈಗಾಗಲೇ ಆರ್ಥಿಕ ಸಂಕಷ್ಟದಿಂದ ನರಳುತ್ತಿರುವ ಅಫ್ಘಾನಿಸ್ತಾನದಲ್ಲಿ ಈಗಾಗಲೇ, ಜನರು ಪಡಬಾರದ ಪಾಡು ಪಡುತ್ತಿದ್ದಾರೆ.. ಇದಿಷ್ಟು ಸಾಲದು ಎಂಬಂತೆ ಸರಿಯಾಗಿ ಆಡಳಿತ ನಡೆಸಲು ಭಾರದ ತಾಲಿಬಾನ್ ಉಗ್ರರು ಇರುವ ಹಣವನ್ನು ಸರಿಯಾಗಿ ವಿನಯೋಗ ಮಾಡದೆ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ.
  Published by:ranjumbkgowda1 ranjumbkgowda1
  First published: