ಕಾಬೂಲ್ (ಆಗಸ್ಟ್ 17); ಅಮೇರಿಕ ತನ್ನ ಸೈನಿಕರನ್ನು ಹಿಂಪಡೆದುಕೊಂಡ ಬೆನ್ನಿಗೆ ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಕೈಮೀರಿದೆ. ತಾಲಿಬಾನ್ ಬಂಡುಕೋರರು ಭಾನುವಾರ ಕಾಬೂಲ್ ಪ್ರವೇಶಿಸಿ ಇಡೀ ದೇಶವನ್ನು ತಮ್ಮ ವಶಕ್ಕೆ ಪಡೆದುಕೊಂಡಿ ದ್ದಾರೆ. ಅಘ್ಘಾನ್ ಅಧ್ಯಕ್ಷ ಅಶ್ರಫ್ ಘಾನಿ ಕೂಡ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ತಜಕಿಸ್ಥಾನಕ್ಕೆ ಪಲಾಯನ ಮಾಡಿದ್ದಾರೆ. ದೇಶದ ಜನ ಜೀವ ಉಳಿಸಿಕೊಂಡರೆ ಸಾಕು ಎಂಬ ಭಯದಲ್ಲಿ ಅನ್ಯ ದೇಶಗಳಿಗೆ ಪಲಾಯನ ಮಾಡಲು ವಿಮಾನ ನಿಲ್ದಾಣಗಳ ಲ್ಲಿ ಜಮಾಯಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಒಳಗಾಗುತ್ತಿದೆ. ಈ ನಡುವೆ ಬಂದೂಕುಗಳ ಜೊತೆಗೆ ಕಾಬೂಲ್ನಲ್ಲಿರುವ ಸಂಸತ್ ಅನ್ನು ವಶಕ್ಕೆ ಪಡೆದು ಇಂದು ಮೊದಲ ಪತ್ರಿಕಾಗೋಷ್ಠಿಯನ್ನೂ ನಡೆಸಿರುವ ತಾಲಿಬಾನ್ ನಾಯಕರು "ಯಾರ ವಿರುದ್ಧವೂ ನಾವು ದ್ವೇಷ ಸಾಧಿಸುವುದಿಲ್ಲ. ಎಲ್ಲರಿಗೂ ಕ್ಷಮೆ ನೀಡಲಾಗಿದೆ" ಎಂದು ಘೋಷಿಸಿದ್ದಾರೆ.
LIVE: The Taliban holds a news conference in Kabul.
🔴 Latest updates: https://t.co/ZXmnmCnbM1
https://t.co/62lc8slwMS
— Al Jazeera English (@AJEnglish) August 17, 2021
ಅಫ್ಘಾನಿಸ್ತಾನದಿಂದ ಯಾವುದೇ ಅಪಾಯವಿಲ್ಲ ಎಂದು ‘ಇಸ್ಲಾಮಿಕ್ ಎಮಿರೇಟ್’ ಜಗತ್ತಿನ ಎಲ್ಲ ದೇಶಗಳಿಗೆ ಪ್ರತಿಜ್ಞೆ ಮಾಡುತ್ತಿದೆ ಎಂದು ಮುಜಾಹಿದ್ ಹೇಳಿದ್ದಾರೆ. ಅಫ್ಘಾನಿಸ್ತಾನದ ಆರ್ಥಿಕತೆ ಮತ್ತು ಜನ ಜೀವನೋಪಾಯದಲ್ಲಿ ಸುಧಾರಣೆಯಾಗಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಂಗಳವಾರ ಮುಂಜಾನೆ, ತಾಲಿಬಾನ್ ಸರ್ಕಾರಿ ಅಧಿಕಾರಿಗಳಿಗೆ ‘ಸಾಮಾನ್ಯ ಕ್ಷಮಾದಾನ’ ಘೋಷಿಸಿದ್ದು, ಅವರನ್ನು ಕೆಲಸಕ್ಕೆ ಮರಳುವಂತೆ ಒತ್ತಾಯಿಸಿದೆ ಎಂದು ವರದಿಯಾಗಿದೆ. ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ದೇಶದಿಂದ ಪಲಾಯನ ಮಾಡಿದ ನಂತರ ಬಂಡುಕೋರ ರು 20 ವರ್ಷಗಳ ಯುದ್ಧವನ್ನು ಗೆದ್ದಿದ್ದಾರೆ ಎಂದು ಘೋಷಿಸಿದ್ದಾರೆ. ಪ್ರಸ್ತುತ ದೇಶವು ತಾಲಿಬಾನ್ ನಿಯಂತ್ರಣದಲ್ಲಿದೆ.
ಇದನ್ನೂ ಓದಿ: Afghanistan Crisis| ತ್ವರಿತ ಪರಿಶೀಲನೆಗೆ ಅಫ್ಘಾನಿಸ್ತಾನ ಜನತೆಗೆ ಇ-ವೀಸಾ ಪರಿಚಯಿಸಿದ ಕೇಂದ್ರ ಸರಕಾರ
ಭಾರತವು ಇ-ಎಮರ್ಜೆನ್ಸಿ ಎಕ್ಸ್-ಮಿಸ್ಕ್ ವೀಸಾ ಎಂಬ ಹೊಸ ವರ್ಗದ ಎಲೆಕ್ಟ್ರಾನಿಕ್ ವೀಸಾವನ್ನು ಪರಿಚಯಿಸಿದ್ದು, ಇದು ದೇಶಕ್ಕೆ ಪ್ರವೇಶಿಸುವ ವೀಸಾ ಅರ್ಜಿಗಳನ್ನು ತ್ವರಿತಗತಿ ಯಲ್ಲಿ ಪರಿಣಿಸಲಿದೆ. ಅಫ್ಘಾನಿಸ್ತಾನದಲ್ಲಿ ಅಮೆರಿಕವು ಅಶಾಂತಿ, ವಿಭಜನೆ ಮತ್ತು ಒಡೆದ ಕುಟುಂಬ ಗಳ ಭೀಕರ ಅವ್ಯವಸ್ಥೆಯನ್ನು ಬಿಟ್ಟಿದೆ ಎಂದು ಚೀನಾ ಹೇಳಿದೆ.
ಭಾನುವಾರ ವಷ್ಟೇ, ತಾಲಿಬಾನ್ ಕಮಾಂಡರ್‌ಗಳು ತಾವು ಅಫ್ಘಾನ್ ಅಧ್ಯಕ್ಷರ ಅರಮನೆ ಯ ನಿಯಂತ್ರಣವನ್ನು ಪಡೆದುಕೊಂಡಿದ್ದೇವೆ ಎಂದು ಘೋಷಿಸಿದ್ದರು. ಮೇ 1 ರಂದು ಬಹುಪಾಲು ಅಮೆರಿಕಾ ಸೈನ್ಯವನ್ನು ಹಿಂತೆಗೆದುಕೊಂಡ ನಂತರ, ತಾಲಿಬಾನ್ ಅಫ್ಘಾನ್ ಅನ್ನು ಶೀಘ್ರವಾಗಿ ಆವರಿಸಿ, ರಾಜಧಾನಿಯನ್ನು ವಶಪಡಿಸಿಕೊಂಡಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ