Suicide Bombers ಅನ್ನು ಸೇನೆಗೆ ನೇಮಿಸಿಕೊಳ್ಳುತ್ತಿರುವ ತಾಲಿಬಾನ್​ ಸರ್ಕಾರ

ದೇಶಾದ್ಯಂತ ಆತ್ಮಹತ್ಯಾ ಬಾಂಬರ್‌ಗಳ ಸ್ಕ್ವಾಡ್‌ಗಳನ್ನು ಸುಧಾರಿಸಲು ಮತ್ತು ಸಂಘಟಿಸಲು ಬಯಸಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ಅಫ್ಘಾನಿಸ್ತಾನವನ್ನು (Afghanistan) ವಶಕ್ಕೆ ಪಡೆದ ತಾಲಿಬಾನ್​ ಸರ್ಕಾರ ರಚನೆ ಮಾಡಿ ನಾಲ್ಕು ತಿಂಗಳು ಕಳೆದಿದೆ. ಈ ನಡುವೆ ಸೇನೆಯನ್ನು ಕಟ್ಟಲು ಮುಂದಾಗಿರುವ ತಾಲಿಬಾನ್​ ತಮ್ಮ ಪ್ರತಿಸ್ಪರ್ಧಿ ಇಸ್ಲಾಮಿಕ್ ಸ್ಟೇಟ್‌ನಿಂದ  ಅತಿದೊಡ್ಡ ಭದ್ರತಾ ಬೆದರಿಕೆಯನ್ನು ಎದುರಿಸುತ್ತಿದೆ. ಇದೇ ಹಿನ್ನಲೆ ತನ್ನ ಶಕ್ತಿ ಬಲಗೊಳಿಸಲು ಮುಂದಾಗಿರುವ ತಾಲಿಬಾನ್ ಸರ್ಕಾರ ಇದೀಗ ಸೇನೆಯಲ್ಲಿ  ಅಧಿಕೃತವಾಗಿ  ಆತ್ಮಹತ್ಯಾ ಬಾಂಬರ್‌ಗಳನ್ನು (Suicide Bombers) ನೇಮಿಸಿಕೊಳ್ಳಲು ಮುಂದಾಗಿದೆ.

    ಬಾಂಬರ್‌ಗಳ ಸ್ಕ್ವಾಡ್‌ ಸಂಘಟನೆ

    ಕಳೆದ ವರ್ಷ ಅಧಿಕಾರಕ್ಕೆ ಬರುವ ಮೊದಲು ತಾಲಿಬಾನ್ ಇದೇ ಅಸ್ತ್ರವನ್ನು ಬಳಕೆ ಮಾಡಿತ್ತು. ಅಫ್ಘಾನ್​ನಲ್ಲಿ  ಕಳೆದ  20 ವರ್ಷಗಳ  ಯುಎಸ್ ಮತ್ತು ಅಫ್ಘಾನ್ ಪಡೆಗಳ ಮೇಲೆ ದಾಳಿ ಮಾಡಲು ಮತ್ತು ಸೋಲಿಸಲು ಆತ್ಮಹತ್ಯಾ ಬಾಂಬರ್‌ಗಳನ್ನು ಈ ತಾಲಿಬಾಬ್ ಬಳಸಿಕೊಂಡಿತು. ಈಗ ಆ ಗುಂಪು ಒಂದೇ ಘಟಕದ ಅಡಿಯಲ್ಲಿ ಕಾರ್ಯನಿರ್ವಹಿಸಲು ಮತ್ತು ಅಫ್ಘಾನಿಸ್ತಾನವನ್ನು ರಕ್ಷಿಸಲು ಮುಂದಾಗಿದೆ. ಇದಕ್ಕಾಗಿ ದೇಶಾದ್ಯಂತ ಆತ್ಮಹತ್ಯಾ ಬಾಂಬರ್‌ಗಳ ಸ್ಕ್ವಾಡ್‌ಗಳನ್ನು ಸುಧಾರಿಸಲು ಮತ್ತು ಸಂಘಟಿಸಲು ಬಯಸಿದೆ ಎಂದು ತಾಲಿಬಾನ್‌ನ ಉಪ ವಕ್ತಾರ ಬಿಲಾಲ್ ಕರಿಮಿ ಹೇಳಿದ್ದಾರೆ.

    ಸೇನೆ ಬಲಕ್ಕೆ ನಿರ್ಧಾರ
    ತಾಲಿಬಾನ್​​ ಸೇನೆಯ ಮುಖ್ಯ ಗುರಿ ಇಸ್ಲಾಮಿಕ್ ಸ್ಟೇಟ್‌ನ ಸ್ಥಳೀಯ ಶಾಖೆಯಾಗಿದೆ, ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದಿಂದ ಅಮೆರಿಕಾದ ಸೇನಾ ಪಡೆ ಹಿಂದಿರುಗಿದ ನಂತರ ತಾಲಿಬಾನ್ ಅಧಿಕಾರವನ್ನು ಬಲಪಡಿಸಲು ಮುಂದಾಯಿತು. ಈ ವೇಳೆ ಕನಿಷ್ಠ ಐದು ಪ್ರಮುಖ ದಾಳಿಗಳನ್ನು ನಡೆಸಿದೆ. ಅವುಗಳಲ್ಲಿ ಹಲವು ದಾಳಿಗಳನ್ನು ಆತ್ಮಹತ್ಯಾ ಬಾಂಬರ್‌ಗಳು ನಡೆಸಿದ್ದರು.

    ಸೇನೆಯ ವಿಶೇಷ ಪಡೆಗಳನ್ನು ಹೆಚ್ಚು ಅತ್ಯಾಧುನಿಕ ಮತ್ತು ವಿಶೇಷ ಕಾರ್ಯಾಚರಣೆಗಳಿಗೆ ಬಳಸಲಾಗುವುದು, ಎಂದು ಕರಿಮಿ ಫೋನ್ ಮೂಲಕ ವಿವರಣೆ ನೀಡಿದ್ದಾರೆ ಎಂದು ಎನ್​ಡಿಟಿವಿ ವರದಿ ಮಾಡಿದೆ.

    ಇದನ್ನು ಓದಿ: ಶಬರಿಮಲೆ ಪ್ರವೇಶಿಸಿದ ಕಾರ್ಯಕರ್ತೆ ಬಿಂದು ಅಮ್ಮಿಣಿ ಮೇಲೆ ಅಪರಿಚಿತ ವ್ಯಕ್ತಿಯಿಂದ ಹಲ್ಲೆ

    ಆತ್ಮಹತ್ಯಾ ಬಾಂಬರ್‌ಗಳು ಕಾರ್ಯತಂತ್ರದ ಅವಿಭಾಜ್ಯ ಅಂಗ

    ಉಗ್ರಗಾಮಿ ಗುಂಪು ರಾಷ್ಟ್ರವ್ಯಾಪಿ ಮತ್ತು ಗಡಿಯಲ್ಲಿ ಆತ್ಮಹತ್ಯಾ ಬಾಂಬರ್‌ಗಳು ಕಾರ್ಯತಂತ್ರದ ಅವಿಭಾಜ್ಯ ಅಂಗವಾಗುವುದರೊಂದಿಗೆ ರಕ್ಷಣೆಯನ್ನು ಹೆಚ್ಚಿಸಲು ಬಲವಾದ ಮತ್ತು ಸಂಘಟಿತ ಸೈನ್ಯವನ್ನು ನಿರ್ಮಿಸುತ್ತಿದೆ. ಸುಮಾರು 150,000 ಯೋಧರನ್ನು ಸೇನೆಗೆ ಸೇರಲು ಆಹ್ವಾನಿಸಲಾಗುವುದು ಎಂದು ತಾಲಿಬಾನ್‌ನ ಮುಖ್ಯಸ್ಥ ಕ್ವಾರಿ ಫಸಿಹುದ್ದೀನ್‌ರನ್ನು ಉಲ್ಲೇಖಿಸಿದ್ದಾರೆ ಎಂದು ಅಲ್ ಜಜೀರಾ ನವೆಂಬರ್‌ನಲ್ಲಿ ವರದಿ ಮಾಡಿದೆ.

    ತಾಲಿಬಾನ್ ಮಿಲಿಟರಿ ಶ್ರೇಣಿಯನ್ನು ಪುನರ್​ರಚಿಸಿ ನಂತರ ನೇಮಕಾತಿಗೆ ಚಾಲನೆ ಬಂದಿದೆ. ಈಗಾಗಲೇ  ತಮ್ಮ ಶ್ರೇಣಿಯೊಳಗೆ ಸಂಭವನೀಯ ಇಸ್ಲಾಮಿಕ್ ಸ್ಟೇಟ್ ನುಸುಳುಕೋರರನ್ನು ಗುರುತಿಸಲು ಮತ್ತು ಸೆರೆಹಿಡಿಯಲು ಪ್ರಾರಂಭಿಸಿದೆ ಎಂದು ಗುಂಪು ಹೇಳಿದೆ.

    ಇದನ್ನು ಓದಿ: ಫಿರೋಜ್​ಪುರ್​ ಫ್ಲೈಓವರ್‌ ಮೇಲೆ ನಡೆದಿದ್ದೇನು? ಇಲ್ಲಿದೆ ಇನ್​ಸೈಡ್ ಸ್ಟೋರಿ

    ಇಸ್ಲಾಮಿಕ್ ಸ್ಟೇಟ್ ಹೋರಾಟಗಾರರು ನಿರಂತರವಾಗಿ ತಾಲಿಬಾನ್ ಅಧಿಕಾರವನ್ನು ಪ್ರಶ್ನಿಸಿದ್ದಾರೆ, ಅಫ್ಘಾನಿಸ್ತಾನವು ಮತ್ತೊಂದು ಯುದ್ಧಕ್ಕೆ ಇಳಿಯಬಹುದೆಂಬ ಕಳವಳವನ್ನು ತಾಲಿಬಾನ್​ನಲ್ಲಿ ಮೂಡಿದೆ. ಈ ಗುಂಪಿನ ಮಾರಣಾಂತಿಕ ದಾಳಿಯು ಆಗಸ್ಟ್ 26 ರಂದು ಕಾಬೂಲ್ ವಿಮಾನ ನಿಲ್ದಾಣದಲ್ಲಿನಡೆದಿತ್ತು.

    ಮಹಿಳಾ ಬಾಂಬರ್​ಗೂ ಅವಕಾಶ

    ಮಹಿಳೆಯರಿಗೂ ಸೇನೆಯಲ್ಲಿ ಅವಕಾಶ ನೀಡಲಾಗುವುದು ಎಂದು ಮುಜಾಹಿದ್ ಸ್ಪಷ್ಟಪಡಿಸಿದ್ದಾರೆ. ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿರುವ ತಾಲಿಬಾನ್ ನೇತೃತ್ವದ ಆಫ್ಘನ್ ಸೇನೆಯ ಭವಿಷ್ಯವು ಘನಿ ಅಧಿಕಾರಾವಧಿಯಲ್ಲಿ ಈ ಹಿಂದೆ ಆಫ್ಘನ್ ಸೇನೆಯಲ್ಲಿ ಸೇವೆ ಸಲ್ಲಿಸಿದವರನ್ನು ಒಳಗೊಂಡಿರುತ್ತದೆ. ಇದಕ್ಕಾಗಿ ವಿಶೇಷ ತರಬೇತಿಯನ್ನೂ ನೀಡಲಾಗುವುದು ಎಂದು ತಿಳಿಸಿದ್ದಾರೆ.

    ಒಬ್ಬ ವ್ಯಕ್ತಿಯು ಸೈನ್ಯಕ್ಕೆ ಸೇರಲು ನೋಂದಾಯಿಸಿದಾಗ, ಅವರಿಗೆ ಕೆಲವು ಜವಾಬ್ದಾರಿಗಳನ್ನು ನೀಡಲಾಗುತ್ತದೆ. ವ್ಯವಸ್ಥೆ ಹೇಗಿರಲಿದೆ ಎಂಬುದರ ಕುರಿತು ಶೇ.80ರಷ್ಟು ಕೆಲಸ ನಡೆದಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಅಯತೊಲ್ಲಾ ಖ್ವಾರಿಝಾಮಿ ಹೇಳಿದ್ದಾರೆ.
    Published by:Seema R
    First published: