Taliban: ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪಿಸುವ ಭರವಸೆ ನೀಡಿದ ತಾಲಿಬಾನ್​​

ಸದ್ಯ ಈಗ ದೇಶಕ್ಕೆ ಸೇವೆ ಸಲ್ಲಿಸುವ ಸಮಯ ಬಂದಿದೆ, ನಾವು ಇಡೀ ರಾಷ್ಟ್ರದಲ್ಲಿ ಶಾಂತಿ ನೀಡುತ್ತೇವೆ. ಜನರ ಜೀವನ ಸಾಧ್ಯವಾದಷ್ಟು ಸುಧಾರಿಸಲಿದೆ

ಮುಲ್ಲಾ ಅಬ್ದುಲ್ಲಾ ಘನಿ ಬರದಾರ್

ಮುಲ್ಲಾ ಅಬ್ದುಲ್ಲಾ ಘನಿ ಬರದಾರ್

 • Share this:
  20 ವರ್ಷಗಳ ಬಳಿಕ ಮತ್ತೆ ಅಫ್ಘಾನಿಸ್ತಾನ್​ ಆಡಳಿತವನ್ನು ವಶಕ್ಕೆ ಪಡೆದಿರುವ ತಾಲಿಬಾನ್​ ದೇಶದಲ್ಲಿ ಶಾಂತಿಯನ್ನು ಸ್ಥಾಪಿಸುವ ಭರವಸೆ ನೀಡಿದೆ. ಅಲ್ಲದೇ ಜನರ ಜೀವನ ಸುಧಾರಣೆಗೆ ಸಾಧ್ಯವಾದಷ್ಟು ಪ್ರಯತ್ನ ನಡೆಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದೆ. ತಾಲಿಬಾನ್​ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ಲಾ ಘನಿ ಬರದಾರ್​ ವಿಡಿಯೋದಲ್ಲಿ ಈ ಸಂದೇಶವನ್ನು ಅಫ್ಘಾನ್​ ಜನರಿಗೆ ನೀಡಿದ್ದಾರೆ. ಹೊಸ ವಿಡಿಯೋದಲ್ಲಿ ಮಾತನಾಡಿರುವ ಅವರು, ಅಫ್ಘಾನ್​ ಜನರ ಜೀವನ ಸುಧಾರಿಸುವ ಸಮಯ ಈಗ ಬಂದಿದೆ. ನಾವು ಜನರಿಗೆ ಇದನ್ನು ಒದಗಿಸುತ್ತೇವೆ ಎಂದಿದ್ದಾರೆ. ಅಫ್ಘಾನ್​ ರಾಜಧಾನಿ ಕಾಬೂಲ್​ ಅನ್ನು ವಶಕ್ಕೆ ಪಡೆದು ವಿಜಯ ಸಾಧಿಸಿದ ಬಳಿಕ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

  ವಿಡಿಯೋ ದಲ್ಲಿ ಮಾತನಾಡಿರುವ ಮುಲ್ಲಾ ಅಬ್ದುಲ್ಲಾ ಘನಿ ಬರದಾರ್, ಇಡೀ ಅಫಘಾನ್ ರಾಷ್ಟ್ರಕ್ಕೆ ವಿಶೇಷವಾಗಿ ಕಾಬೂಲ್ ಜನರಿಗೆ, ನಮ್ಮ ಮುಜಾಹಿದ್ದೀನ್ ಗಳಿಗೆ ನಾವು ವಿಜಯವನ್ನು ಅಭಿನಂದಿಸುತ್ತೇವೆ. ನಿರೀಕ್ಷೆ ಮಾಡದ ಸ್ಥಾನವನ್ನು ನಾವು ಅನೀರಿಕ್ಷಿತವಾಗಿ ನಾವು ತಲುಪಿದ್ದೇವೆ, ಅಲ್ಲಾಹು ಸಹಾಯದಿಂದ ನಾವು ಈ ಸ್ಥಾನ ತಲುಪಿದ್ದೇವೆ. ಅದಕ್ಕೆ ನಾವು ಅವರಿಗೆ ಧನ್ಯವಾದ ಹೇಳಬೇಕು. ಅವರು ನಮಗೆ ಎಲ್ಲಾ ವಿಜಯವನ್ನು ನೀಡಿದ್ದು, ಯಾವುದೇ ದುರ್ವತನೆ ತೋರಬಾರದು ಎಂದು ತಿಳಿಸಿದ್ದಾರೆ.

  ಸದ್ಯ ಈಗ ದೇಶಕ್ಕೆ ಸೇವೆ ಸಲ್ಲಿಸುವ ಸಮಯ ಬಂದಿದೆ, ನಾವು ಇಡೀ ರಾಷ್ಟ್ರದಲ್ಲಿ ಶಾಂತಿ ನೀಡುತ್ತೇವೆ. ಜನರ ಜೀವನ ಸಾಧ್ಯವಾದಷ್ಟು ಸುಧಾರಿಸಲಿದೆ

  ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮೇಲೆ ತಾಲಿಬಾನ್​ಗಳಿ ಹಿಡಿತ ಸಾಧಿಸುತ್ತಿದ್ದಂತೆ ಅಧ್ಯಕ್ಷ ಅಶ್ರಫ್ ಘನಿ ದೇಶವನ್ನು ತೊರೆದರು. ಈ ಮೂಲಕ ಅಫ್ಘಾನ್​ ಸರ್ಕಾರ ಪತನವಾಯಿತು. ಬಳಿಕ ತಾಲಿಬಾನ್​ ಮಿಲಿಟರಿ ದೇಶವ್ಯಾಪ್ತಿ ವಿಜಯೋತ್ಸವ ಆಚರಿಸಿತು.
  ಕಳೆದ 10 ದಿನಗಳಿಂದ ತಾಲಿಬಾನ್ ಅಫ್ಘಾನಿಸ್ತಾನದ ಬಹುತೇಕ ನಗರಗಳನ್ನು ಈಗಾಗಲೇ ವಶಕ್ಕೆ ತೆಗೆದುಕೊಂಡಿದ್ದು, ಕಾಬೂಲ್ ಅಲ್ಲಿನ ಕೊನೆಯ ಪ್ರಮುಖ ನಗರವಾಗಿತ್ತು. ಒಂದು ತಿಂಗಳ ಹಿಂದೆಯಷ್ಟೇ ಆರಂಭವಾದ ತಾಲಿಬಾನ್‌ ದಾಳಿ, ದಿನಗಳ ಅಂತರದಲ್ಲಿ ವೇಗವಾಗಿ ಪ್ರಾಂತ್ಯಗಳ ನಿಯಂತ್ರಣ ಪಡೆದುಕೊಂಡರು. . ಹೆಚ್ಚಿನ ವಿದೇಶಿ ಪಡೆಗಳು ದೇಶದಿಂದ ಹೊರಬಂದ ನಂತರ ಉಗ್ರರು ನಿಯಂತ್ರಣ ಸಾಧಿಸಲು ಹಾಗೂ ವಶಪಡಿಸಿಕೊಳ್ಳಲು ಸಾಧ್ಯವಾಯಿತು.

  ಇದನ್ನು ಓದಿ: ಕೊಟ್ಟ ಮಾತು ಈಡೇರಿಸಿದ ಪ್ರಧಾನಿ; ಸಿಂಧು ಜೊತೆ ಐಸ್​ ಕ್ರೀಂ ಸವಿದ ಮೋದಿ

  ಅಧ್ಯಕ್ಷ ಘನಿ ಪಲಾಯನ ಮಾಡಿದ ನಂತರ ತಾಲಿಬಾನ್ ಉಗ್ರರು ಕಾಬೂಲ್‌ ಅನ್ನು ವಶಪಡಿಸಿಕೊಂಡರು. ಅಶ್ರಫ್‌ ಘನಿ ಇರುವ ಸ್ಥಳದ ಬಗ್ಗೆ ದೃಢಪಟ್ಟಿಲ್ಲವಾದರೂ, ಆತ ನೆರೆಯ ಉಜ್ಬೇಕಿಸ್ತಾನ್‌ನ ತಾಷ್ಕೆಂಟ್‌ಗೆ ಹಾರಿದ್ದಾರೆ ಎಂದು ಅಲ್‌ ಜಜೀರಾ ಹೇಳಿದೆ.

  ಜನರ ನಿರೀಕ್ಷೆಗಳನ್ನು ಪೂರೈಸುವ ಮೂಲಕ ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಅವರಿಗೆ ಸೇವೆ ಸಲ್ಲಿಸುವುದರೊಂದಿಗೆ ನಮ್ಮ ನಿಜವಾದ ಪರೀಕ್ಷೆ ಈಗ ಆರಂಭವಾಗಲಿದೆ ಎಂದು ಹೇಳಿದ್ದಾರೆ ಎಂದು ಅಲ್​ ಜಜೀರಾ ವರದಿ ಮಾಡಿದೆ

  ತಾಲಿಬಾನ್ ಗೆಲುವಿಗೆ ಹತ್ತಿರವಾಗುತ್ತಿದ್ದಂತೆ ಕಾಬೂಲ್‌ನಲ್ಲಿ ಭೀತಿ ಉಂಟಾಗಿದೆ. ನಿವಾಸಿಗಳು ವಿಮಾನ ನಿಲ್ದಾಣಕ್ಕೆ ತೆರಳಿದ್ದು, ತಮ್ಮ ಕಾರು, ವಾಹನಗಳನ್ನು ಬಿಟ್ಟು ದೇಶದಿಂದ ಹೊರಹೋಗುವ ಹತಾಶ ಪ್ರಯತ್ನದಲ್ಲಿ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  Published by:Seema R
  First published: