ತಾಲಿಬಾನ್ಗಳು (taliban) ಅಫ್ಘಾನಿಸ್ತಾನ (Afghanistan) ಅಧಿಕಾರ ಚುಕ್ಕಾಣಿ ಹಿಡಿದು ಮೂರುವಾರ ಕಳೆದಿದೆ. ಈ ನಡುವೆ ಅಫ್ಘಾನಿಸ್ತಾನದ ಆಡಳಿತದಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡಲು ಮುಂದಾಗಿದೆ. ಇದರಿಂದ ರೊಚ್ಚಿಗೆದ್ದ ಕಾಬೂಲ್ (kabul)ನ ನಿವಾಸಿಗಳು ಇಂದು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪಾಕಿಸ್ತಾನದ (pakistan) ಕೈಗೊಂಬೆ ಸರ್ಕಾರ ನಮಗೆ ಬೇಡ. ಪಾಕಿಸ್ತಾನ ಅಫ್ಘಾನಿಸ್ತಾನವನ್ನು ತೊರೆಯಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಪಾಕಿಸ್ತಾನ ವಿರುದ್ದಾ ಕಾಬೂಲ್ ನಗರದ ಜನರು ನಡೆಸುತ್ತಿರುವ ಪ್ರತಿಭಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಜನರ ಪ್ರತಿಭಟನಾ ಗುಂಪು ಚದುರಿಸಲು ತಾಲಿಬಾನಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಎಎಫ್ಪಿ ವರದಿ ಮಾಡಿದೆ.
ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ (ISI) ತಾಲಿಬಾನ್ ಜೊತೆ ಕೆಲಸ ಮಾಡುತ್ತಿದ್ದು, ಹೊಸ ಸರ್ಕಾರ ರಚನೆಗೆ ಸಹಾಯ ಮಾಡುತ್ತಿದೆ ಎನ್ನಲಾಗಿದೆ. ಇದೇ ಹಿನ್ನಲೆ ಕಾಬೂಲ್ ಜನರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಐಸಿಐ ಇದರಿಂದ ದೂರ ಇರುವಂತೆ ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರ ಮೇಲೆ ತಾಲಿಬಾನ್ ಗುಂಡಿನ ದಾಳಿ ನಡೆಸಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಕಳೆದ ವಾರದಿಂದ ಪಾಕಿಸ್ತಾನದ ಐಎಸ್‌ಐ ನಿರ್ದೇಶಕರು ಕಾಬೂಲ್ ಸೆರೆನಾ ಹೋಟೆಲ್ ನಲ್ಲಿ ತಂಗಿದ್ದು, ಆ ಹೋಟೆಲ್ಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಲು ಮುಂದಾದರು. ‘
ಕಾಬೂಲ್‌ನ ಬೀದಿಗಳಲ್ಲಿ ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದೆ.
ಶುಕ್ರವಾರವೇ ಸರ್ಕಾರ ರಚಿಸುವ ಕುರಿತು ಮುಂದಾಗಿದ್ದ ತಾಲಿಬಾನ್ ಇನ್ನು ಕೂಡ ಸರ್ಕಾರ ರಚೆನಗೆ ಮುಂದಾಗಿಲಲ. ತಾಲಿಬಾನ್ ಸರ್ಕಾರ ರಚಿಸಿದರೆ, ಮುಲ್ಲಾ ಮೊಹಮ್ಮದ್ ಹಸನ್ ಅಖುಂಡ್, ಅಫ್ಘಾನಿಸ್ತಾನದ ಮುಂದಿನ ಪ್ರಧಾನ ಮಂತ್ರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನು ಓದಿ: ಕಲಬುರಗಿ ಪಾಲಿಕೆ ಮೈತ್ರಿಗೆ ಖರ್ಗೆ ನಮ್ಮ ಜೊತೆ ಮಾತನಾಡಿದ್ದಾರೆ; ಎಚ್ಡಿ ದೇವೇಗೌಡ
ಇನ್ನು ಅಫ್ಘಾನಲ್ಲಿ ತಾಲಿಬಾನ್ ಗುಂಪುಗಳ ನಡುವೆಯೇ ಭಿನ್ನಾಭಿಪ್ರಾಯವಿದೆ. ಇದೇ ಕಾರಣ ಸರ್ಕಾರ ರಚನೆ ವಿಳಂಬವಾಗಿದೆ. ಮುಲ್ಲಾ ಬರದಾರ್ ನೇತೃತ್ವದ ತಾಲಿಬಾನ್‌ನ ದೋಹಾ ಘಟಕ, ಪೂರ್ವ ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುವ ಅರೆ ಸ್ವತಂತ್ರ ಭಯೋತ್ಪಾದಕ ಸಂಘಟನೆಯಾದ ಹಕ್ಕಾನಿ ನೆಟ್‌ವರ್ಕ್ ಮತ್ತು ತಾಲಿಬಾನ್‌ನ ಕಂದಹಾರ್ ಬಣವು ಅಧಿಕಾರದ ಪ್ರಮುಖ ಸ್ಪರ್ಧಿಗಳಾಗಿವೆ.
ತಾಲಿಬಾನ್ ಪಂಜಶೀರ್ ಕಣಿವೆಯನ್ನು ವಶಪಡಿಸಿಕೊಂಡಿದೆ ಈ ಹಿನ್ನಲೆ ಪಂಜಶೀರ್ ಮೇಲೆ ಆಕ್ರಮಣ ಮಾಡುವ ಹಕ್ಕು ಯಾರಿಗೂ ಇಲ್ಲ, ಪಾಕಿಸ್ತಾನ ಅಥವಾ ತಾಲಿಬಾನ್ ಅಲ್ಲ. ಪ್ರತಿರೋಧ ಪಡೆಗಳು ತಾಲಿಬಾನ್ ವಿರುದ್ಧ ತೀವ್ರ ಹೋರಾಟ ನಡೆಸಿದ್ದವು.
ತಾಲಿಬಾನ್ ಪಾಕಿಸ್ತಾನ ಎರಡನೇ ಮನೆ ಎಂದಿದ್ದು, ಶೀಘ್ರದಲ್ಲೇ ಸರ್ಕಾರ ರಚನೆ ಸಮಾರಂಭಕ್ಕೆ ದೇಶವನ್ನು ಆಹ್ವಾನಿಸಿದೆ. ಪಾಕಿಸ್ತಾನವು ಹೊಸ ತಾಲಿಬಾನ್ ಆಡಳಿತಕ್ಕೆ ಅತ್ಯಂತ ಮಹತ್ವದ್ದಾಗಿದೆ. ತಾಲಿಬಾನ್ ಅನೇಕರು ತಮ್ಮ ಕುಟುಂಬಗಳನ್ನು ಪಾಕಿಸ್ತಾನದಲ್ಲಿವೆ
ಪಾಕ್ ಜೊತೆಯಲ್ಲಿ ಹೊಸ ಸರ್ಕಾರ ರಚನೆಯ ಸಮಾರಂಭಕ್ಕೆ ಪಾಕಿಸ್ತಾನ, ಕತಾರ್, ಟರ್ಕಿ, ರಷ್ಯಾ, ಚೀನಾ ಮತ್ತು ಇರಾನ್ ದೇಶಗಳಿಗೆ ತಾಲಿಬಾನ್ ಅಹ್ವಾನ ಕೊಟ್ಟಿದೆಯಂತೆ.
ಇನ್ನು ಅಫ್ಘಾನ್ನಲ್ಲಿ ಎಲ್ಲಾ ಪಂಗಡಗಳನ್ನ ಆಡಳಿತದಲ್ಲಿ ಒಳಗೊಂಡು ಸರ್ಕಾರ ರಚಿಸುವುದಾಗಿ ಅದು ಹೇಳಿದೆ. ಹಿಂದಿನ ಆಫ್ಘನ್ ಸರ್ಕಾರಕ್ಕೆ ಹಾಗೂ ಅಮೆರಿಕ ಸೇನೆಗೆ ಸಹಾಯ ಮಾಡಿದವರ ಮೇಲೆ ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಮಹಿಳೆಯರಿಗೆ ಷರಿಯಾ ಕಾನೂನಿನ ಪ್ರಕಾರ ಎಲ್ಲಾ ಸ್ವಾತಂತ್ರ್ಯ ನೀಡಲಾಗುವುದು. ಶಾಲೆ ಕಾಲೇಜುಗಳಿಗೆ ಮಹಿಳೆಯರು ಹೋಗಬಹುದು. ಆದರೆ, ಹಿಜಾಬ್ ಧರಿಸುವುದು ಕಡ್ಡಾಯ. ಪುರುಷರೊಂದಿಗೆ ಸಹ ಶಿಕ್ಷಣ ಮಹಿಳೆಯರಿಗೆ ನಿಷಿದ್ಧ. ಇಂಥ ಕೆಲ ನಿರ್ಬಂಧಗಳನ್ನ ತಾಲಿಬಾನ್ ವಿಧಿಸಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ