ಕಾಬೂಲ್ (ಆಗಸ್ಟ್ 22); ಕಳೆದ ಒಂದು ವಾರದಲ್ಲಿ ಆಫ್ಘಾನಿಸ್ತಾನದಲ್ಲಿ ಎಲ್ಲವೂ ಬದಲಾಗಿದೆ. ಜನರಿಂದ ಚುನಾಯಿತಗೊಂಡ ಸರ್ಕಾರ ಉರುಳಿದೆ. ಅಘ್ಘಾನ್ ಅಧ್ಯಕ್ಷ ಅಶ್ರಫ್ ಘಾನಿ ಕೂಡ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ತಜಕಿಸ್ಥಾನಕ್ಕೆ ಪಲಾಯ ನ ಮಾಡಿದ್ದಾರೆ. 20 ವರ್ಷಗಳಿಂದ ಅಧಿಕಾರದ ದಾಹದಲ್ಲಿ ಹಪಹಪಿಸುತ್ತಿದ್ದ ತಾಲಿಬಾನಿಗಳು ಕೊನೆಗೂ ಆಫ್ಘನ್ನಲ್ಲಿ ತಮ್ಮ ಅಧಿಕಾರದ ಚುಕ್ಕಾಣಿ ಯನ್ನು ಹಿಡಿದಿದ್ದಾರೆ. ಅಲ್ಲದೆ, ತಾಲಿಬಾನಿ ನಾಯಕರು ಶೀಘ್ರದಲ್ಲೇ ಹೊಸ ಸರ್ಕಾರವನ್ನೂ ಘೋಷಿಸುವ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ನಡುವೆ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರು ಅಫ್ಘಾನಿಸ್ತಾನದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿ, ಕಾಬೂಲ್ ನಲ್ಲಿ ನಡೆಯುತ್ತಿರುವ ಸ್ಥಳಾಂತರಿಸುವಿಕೆ ಮತ್ತು ಯುಎಸ್ ಭದ್ರತೆಗೆ ಸಂಬಂಧಿಸಿ ದಂತೆ ಅಧಿಕಾರಿಗಳ ಜೊತೆಗೆ ಚರ್ಚಿಸಿದ ನಂತರ ಇಂದು ಸಂಜೆ 4 ಗಂಟೆಗೆ (ಅಂದರೆ ಭಾರತೀಯ ಕಾಲಮಾನದ ಪ್ರಕಾರ ನಾಳೆ ಮುಂಜಾನೆ 1: 30ಕ್ಕೆ) ಅಮೆರಿಕ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎನ್ನಲಾಗಿದೆ.
ಅಫ್ಘಾನಿಸ್ತಾನ ಬಿಕ್ಕಟ್ಟಿನಿಂದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜನಪ್ರಿಯತೆ ತೀವ್ರ ಕುಸಿದಿದೆ. ಅವರ 7 ತಿಂಗಳ ಅಧ್ಯಕ್ಷತೆಯ ಅವಧಿಯಲ್ಲಿ ಅವರ ಅನುಮೋದನೆಯ ರೇಟಿಂಗ್ ಅತ್ಯಂತ ಕೆಳಮಟ್ಟಕ್ಕೆ ಇಳಿದಿದ್ದು, ಈ ಹಿನ್ನೆಲೆ ಬೈಡೆನ್ ಅವರನ್ನು ಬದಲಿಸಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ರನ್ನು ಅಧ್ಯಕ್ಷರನ್ನಾಗಿ ಮಾಡಬಹುದು ಎಂದು ಅನೇಕ ಅಮೆರಿಕನ್ನರು ಭಾವಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಕಮಲಾ ಹ್ಯಾರಿಸ್ ಅಧ್ಯಕ್ಷರಾಗುವ ಬಗ್ಗೆ ಒಲವು ವ್ಯಕ್ತವಾಗುತ್ತಿದೆ.
ಈ ಬಗ್ಗೆ ರಾಸ್ಮುಸ್ಸೆನ್ ರಿಪೋರ್ಟ್ಸ್ ಇತ್ತೀಚೆಗೆ ಸಮೀಕ್ಷೆಯೊಂದನ್ನು ನಡೆಸಿದ್ದು, ಕಮಲಾ ಹ್ಯಾರಿಸ್ ರಾಷ್ಟ್ರವನ್ನು ನಡೆಸಲು ಅರ್ಹತೆ ಹೊಂದಿದ್ದಾರೆ ಎಂದು 43% ಜನತೆ ನಂಬಿದ್ದಾರೆ ಎಂದು ತಿಳಿದುಬಂದಿದೆ. ಆದರೂ, 55% ಜನರು ಕಮಲಾ ಹ್ಯಾರಿಸ್ ಅಧ್ಯಕ್ಷರಾಗಲು ಅರ್ಹತೆ ಹೊಂದಿದ್ದಾರೆ ಎಂದು ನಂಬುವುದಿಲ್ಲ. ಈ ಪೈಕಿ 47% ಸಂಭಾವ್ಯ ಮತದಾರರು ಕಮಲಾ ಅಧ್ಯಕ್ಷರಾಗಲು ಸ್ವಲ್ಪವೂ ಅರ್ಹತೆ ಹೊಂದಿಲ್ಲ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: ಸಿಎಎ ಜಾರಿಗೆ ಇದೇ ಸರಿಯಾದ ಸಮಯ; ಆಫ್ಘನ್ ಸಿಖ್ ಮತ್ತು ಹಿಂದುಗಳಿಗೆ ಉಪಯೋಗ ಎಂದ ಕೇಂದ್ರ ಸಚಿವ
ಇನ್ನು, ಗಡಿ ಬಿಕ್ಕಟ್ಟನ್ನು ಸರಿಪಡಿಸಲು ಮತ್ತು ಕಾಂಗ್ರೆಸ್ನಲ್ಲಿ ಉದಾರವಾದ ಚುನಾವಣಾ ಸುಧಾರಣೆಗಳನ್ನು ಪಡೆಯುವಲ್ಲಿ ವಿಫಲವಾದ ಕಾರಣದಿಂದಾಗಿ ಕಮಲಾ ಹ್ಯಾರಿಸ್ ಅಮೆರಿಕದ ಮೇಲೆ ಬಿಟ್ಟುಹೋದ "ಕೆಟ್ಟ ಪ್ರಭಾವ" ದಿಂದಾಗಿ ಅಷ್ಟು ಕಡಿಮೆ ಸಂಖ್ಯೆಯ ಬೆಂಬಲ ಉಂಟಾಗಿರಬಹುದು ಎಂದು ವಾಷಿಂಗ್ಟನ್ ಪರೀಕ್ಷಕರ ವರದಿ ಈ ಸಮೀಕ್ಷೆ ಬಗ್ಗೆ ಹೇಳಿದೆ.
ಮತ್ತೊಂದೆಡೆ, ಯುಎಸ್ ಬೆಂಬಲಿತ ಅಫ್ಘಾನಿಸ್ತಾನ ಸರ್ಕಾರವು ವಾರಾಂತ್ಯದಲ್ಲಿ ಪತನವಾಗಿದ್ದರಿಂದ ಸಾವಿರಾರು ನಾಗರಿಕರು ಮತ್ತು ಅಫ್ಘಾನ್ ಸೇನಾ ಮಿತ್ರರು ತಮ್ಮ ಸುರಕ್ಷತೆಗಾಗಿ ಪಲಾಯನಗೈದ ಕಾರಣ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅನುಮೋದನೆ ರೇಟಿಂಗ್ ಶೇಕಡಾ 7 ಪಾಯಿಂಟ್ಗಳಷ್ಟು ಕುಸಿದಿದೆ ಎಂದು ರಾಯಿಟರ್ಸ್/ಇಪ್ಸೊಸ್ ಸಮೀಕ್ಷೆ ವರದಿ ಮಾಡಿದೆ.
ಇದನ್ನೂ ಓದಿ: DK Shivakumar vs CT Ravi| ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದದ್ದೇ ಸಿ.ಟಿ. ರವಿ ಹೋರಾಟದಿಂದ: ಡಿ.ಕೆ. ಶಿವಕುಮಾರ್ ವ್ಯಂಗ್ಯ
ಈ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾತನಾಡಲೇಬೇಕಿದೆ. ಅಲ್ಲದೆ, ಜೋ ಬಿಡೆನ್ ಅಫ್ಘನ್ ಬಿಕ್ಕಟ್ಟಿನ ಬಗ್ಗೆ ಏನು ಮಾತನಾಡಲಿದ್ದಾರೆ? ಎಂಬ ಕುರಿತು ಇಡೀ ವಿಶ್ವ ಕುತೂಹಲದಿಂದ ಕಾಯುತ್ತಿದೆ. ಹೀಗಾಗಿ ಜೋ ಬಿಡೆನ್ ಅಮೆರಿಕವನ್ನು ಉದ್ದೇಶಿಸಿ ಮಾತನಾಡಲಿರುವ ಈ ಭಾಷಣ ಇದೀಗ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ.
ಅಫ್ಘನ್ ಬಗ್ಗೆ ವಿಶ್ವಸಂಸ್ಥೆ ಗಮನ ಸೆಳೆಯಲಿರುವ ಇಂಗ್ಲೆಂಡ್ ಪ್ರಧಾನಿ;
ಜಿ 7 ನಾಯಕರು ವರ್ಚುವಲ್ ಶೃಂಗಸಭೆಯಲ್ಲಿ ಮಂಗಳವಾರ ಅಫ್ಘಾನಿಸ್ತಾನದ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲಿರುವುದಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಇಂದು ಘೋಷಿಸಿದ್ದಾರೆ. "ಸುರಕ್ಷಿತ ಸ್ಥಳಾಂತರಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು, ಮಾನವೀಯ ಬಿಕ್ಕಟ್ಟನ್ನು ತಡೆಗಟ್ಟಲು ಮತ್ತು ಕಳೆದ 20 ವರ್ಷಗಳ ಪ್ರಜಾಪ್ರಭುತ್ವ ಸರ್ಕಾರದ ಆಡಳಿತದ ಲಾಭಗಳನ್ನು ಪಡೆಯುವ ಸಲುವಾಗಿ ಅಂತಾರಾಷ್ಟ್ರೀಯ ಸಮುದಾಯ ಅಫ್ಘಾನ್ ಜನರನ್ನು ಬೆಂಬಲಿಸಲು ಒಟ್ಟಾಗಿ ಕೆಲಸ ಮಾಡುವುದು ಅತ್ಯಗತ್ಯ" ಎಂದು ಜಾನ್ಸನ್ ಭಾನುವಾರ ಟ್ವೀಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ