Taliban Punishments: ಕತ್ತು, ಕೈ ಕತ್ತರಿಸೋ ಶಿಕ್ಷೆ ಅಗತ್ಯ, ಇದು ಜನರಲ್ಲಿ ಭಯ ಹೆಚ್ಚಿಸುತ್ತೆ ಎಂದ ತಾಲಿಬಾನಿ ಮುಖಂಡ

Taliban leader Mullah Nooruddin: ಸಂದರ್ಶನ ನೀಡಿರುವ ಮುಲ್ಲಾ ನೂರೂದ್ಧೀನ್, ತಪ್ಪು ಮಾಡೋರನ್ನ ಕೊಲ್ಲುವುದು ಮತ್ತು ಅವರ ಅಂಗಾಂಗಗಳನ್ನು ಕತ್ತರಿಸುವ ಶಿಕ್ಷೆಗಳು ಶೀಘ್ರದಲ್ಲೇ ಮರಳಲಿವೆ ಎಂದಿದ್ದಾನೆ.

ತಾಲಿಬಾನಿ ಮುಖಂಡ ಮುಲ್ಲಾ ನೂರೂದ್ಧೀನ್ ತುರಾಬಿ

ತಾಲಿಬಾನಿ ಮುಖಂಡ ಮುಲ್ಲಾ ನೂರೂದ್ಧೀನ್ ತುರಾಬಿ

  • Share this:
ಕಾಬೂಲ್: ಅಫ್ಘಾನಿಸ್ತಾನ (Afghanistan )ದಲ್ಲಿ ತಾಲಿಬಾನಿಗಳ ಕ್ರೂರ ಶಿಕ್ಷೆ (Punishment)ಮುಂದುವರಿಸುವ ಬಗ್ಗೆ ತಾಲಿಬಾನಿಗಳು ಸ್ಪಷ್ಟಪಡಿಸಿದೆ. ತಾಲಿಬಾನಿ ಮುಖಂಡ ಮುಲ್ಲಾ ನೂರೂದ್ಧೀನ್ ತುರಾಬಿ (Mullah Nooruddin Turabi) ಹೇಳಿರುವ ಬಗ್ಗೆ ವರದಿಯಾಗಿದೆ. ನ್ಯೂಸ್ ಏಜೆನ್ಸಿಗೆ ಸಂದರ್ಶನ ನೀಡಿರುವ ಮುಲ್ಲಾ ನೂರೂದ್ಧೀನ್, ತಪ್ಪು ಮಾಡೋರನ್ನ ಕೊಲ್ಲುವುದು ಮತ್ತು ಅವರ ಅಂಗಾಂಗಗಳನ್ನು ಕತ್ತರಿಸುವ ಶಿಕ್ಷೆಗಳು ಶೀಘ್ರದಲ್ಲೇ ಮರಳಲಿವೆ. ಬಹುಶಃ ಈ ಬಾರಿ ಶಿಕ್ಷೆ ಸಾರ್ವಜನಿಕವಾಗಿ ಇರಲಾರದು ಹೇಳಿರುವ ಬಗ್ಗೆ ಸುದ್ದಿಗಳು ಪ್ರಕಟವಾಗಿವೆ.

ಶಿಕ್ಷೆ ಕುರಿತು ತಾಲಿಬಾನಿ (Taliban) ಕ್ಯಾಬಿನೆಟ್‍ನಲ್ಲಿ ಚರ್ಚೆ

ಕೈ ಕತ್ತರಿಸುವಂತಹ ಶಿಕ್ಷೆಗಳು ಜನರ ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದು. ಈ ರೀತಿಯ ಶಿಕ್ಷೆಗಳಿಂದ ಜನರಲ್ಲಿ ಭಯ ಹೆಚ್ಚಿಸುತ್ತದೆ. ಮುಂದೆ ಇಂತಹ ತಪ್ಪುಗಳನ್ನು ಮಾಡಬಾರದು ಎಂಬ ಸಂದೇಶ ರವಾನೆಯಾಗಲಿದೆ. ಈ ಸಂಬಂಧ ತಾಲಿಬಾನಿ ಕ್ಯಾಬಿನೆಟ್ ನಲ್ಲಿ ಶಿಕ್ಷೆ ಬಹಿರಂಗವಾಗಿ ನೀಡಬೇಕಾ ಅಥವಾ ನಿರ್ದಿಷ್ಟ ಪ್ರದೇಶದಲ್ಲಿ ನೀಡುವ ಕುರಿತ ಕಾನೂನಿನಲ್ಲಿ ಬದಲಾವಣೆ ತರುವ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಕಾನೂನು ಸಾಧಕ-ಬಾಧಕಗಳ ಕುರಿತು ಚರ್ಚಿಸಿ ತಮ್ಮ ಅಂತಿಮ ನಿರ್ಧಾರವನ್ನು ಶೀಘ್ರದಲ್ಲಿಯೇ ಪ್ರಕಟಿಸುವ ಸಾಧ್ಯತೆಗಳಿವೆ.

ಇಸ್ಲಾಂ ಪಾಲನೆ, ಕುರಾನ್ ಆಧಾರದ ಮೇಲೆಯೇ ಕಾನೂನು ರಚನೆ

ಸ್ಟೇಡಿಯಂನಲ್ಲಿ ಬಹಿರಂಗವಾಗಿ ಶಿಕ್ಷೆ ನೀಡುವ ಕುರಿತು ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿರೋದು ಸತ್ಯ. ಆದ್ರೆ ಯಾರೂ ನಮ್ಮ ಕಾನೂನು ಮತ್ತು ಶಿಕ್ಷೆ ತಪ್ಪೆಂದು ಹೇಳಿಲ್ಲ. ಹಾಗಾಗಿ ಯಾರೂ ನಮ್ಮ ಕಾನೂನುಗಳ ಬಗ್ಗೆ ಚರ್ಚೆ ನಡೆಸುವ ಬಗ್ಗೆ ಅಗತ್ಯವಿಲ್ಲ. ನಾವು ಇಸ್ಲಾಂ ಧರ್ಮವನ್ನು ಪಾಲಿಸುತ್ತೇವೆ ಮತ್ತು ಕುರಾನ್ ಆಧಾರದ ಮೇಲೆಯೇ ನಮ್ಮ ಕಾನೂನುಗಳು ರಚನೆಯಾಗಲಿವೆ ಎಂದು ಮುಲ್ಲಾ ನೂರೂದ್ಧೀನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

90ರ ದಶಕದ ಕರಾಳ ನೆನಪು

ಅಫ್ಘಾನಿಸ್ತಾನ ತಾಲಿಬಾನಿಗಳ ಕ್ರೂರ ರಾಕ್ಷಸ ವರ್ತನೆಯನ್ನು ಇನ್ನೂ ಮರೆತಿಲ್ಲ. 90ರ ದಶಕದಲ್ಲಿ ಅಫ್ಘಾನಿಸ್ತಾನ ತಾಲಿಬಾನಿಗಳ ವಶದಲ್ಲಿತ್ತು. ಅಂದು ತಾಲಿಬಾನಿಗಳನ್ನು ಕಾಬೂಲ್ ನಗರದ ಸ್ಟೇಡಿಯಂ ಮತ್ತು ಈದ್ಗಾ ಮೈದಾನದಲ್ಲಿ ಕ್ರೂರ ಶಿಕ್ಷೆಯನ್ನು ನೀಡಲಾಗುತ್ತಿತ್ತು. ಈ ಶಿಕ್ಷೆಗಳನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು. ಆದ್ರೆ ಈಗ ಅಧಿಕಾರಕ್ಕೆ ಬಂದಿರುವ ತಾಲಿಬಾನಿಗಳು ಆರಂಭದಲ್ಲಿ ನಾವು ಬದಲಾಗಿದ್ದೇವೆ ಎಂದು ಹೇಳಿದ್ದರು. ಆದ್ರೆ ಮತ್ತೆ ತಮ್ಮ ಹಳೆಯ ಅಮಾನವೀಯ, ಕ್ರೂರ ಶಿಕ್ಷೆಯ ಕಾನೂನುಗಳನ್ನು ಜಾರಿಗೆ ತರಲು ಮುಂದಾಗಿರೋದು ಅಫ್ಘಾನಿಸ್ತಾನದ ಆತಂಕಕ್ಕೆ ಕಾರಣವಾಗಿದೆ.

ತಾಲಿಬಾನಿಗಳ ಸರ್ಕಾರದಲ್ಲಿ ಉಗ್ರರು ಶಾಮೀಲು

ಅಫ್ಘಾನಿಸ್ತಾನಕ್ಕೆ ವಶಕ್ಕೆ ಪಡೆದುಕೊಂಡಿರುವ ತಾಲಿಬಾನಿಗಳು ವಿಶ್ವದ ಮುಂದೆ ಸಹಾಯ ಕೇಳುತ್ತಿದ್ದಾರೆ. ಸಂಯುಕ್ತ ರಾಷ್ಟ್ರಗಳ ಜೊತೆ ಸಭೆ ನಡೆಸಲು ತಾಲಿಬಾನಿಗಳು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಭಾರತ, ಅಮೆರಿಕ ಸೇರಿದಂತೆ ಪ್ರಪಂಚದ ಹಲವು ಪ್ರಮುಖ ರಾಷ್ಟ್ರಗಳು ಅಫ್ಘಾನಿಸ್ತಾನದ ತಾಲಿಬಾನಿ ಸರ್ಕಾರವನ್ನು ಮಾನ್ಯ ಮಾಡಿಲ್ಲ. ಕಾರಣ ತಾಲಿಬಾನಿ ಸರ್ಕಾರದಲ್ಲಿ ಭಯೋತ್ಪಾದಕ ಸಂಘಟನೆಯಾಗಿರುವ ಹಕ್ಕಾನಿ ನೆಟ್ ವರ್ಕ್ ಸದಸ್ಯರು ಭಾಗಿಯಾಗಿದ್ದಾರೆ. ಇದರಲ್ಲಿ ಬಹುತೇಕರು ಅಮೆರಿಕ ಮತ್ತು ಸಂಯುಕ್ತ ರಾಷ್ಟ್ರಗಳ ಭಯೋತ್ಪಾದಕರ ಪಟ್ಟಿಯಲ್ಲಿದ್ದಾರೆ.

ಇದನ್ನೂ ಓದಿ: Army:15 ವರ್ಷಗಳ ಬಳಿಕ ಹಳೆ ರೂಟ್‍ಗಳನ್ನ ಆ್ಯಕ್ಟಿವ್ ಮಾಡ್ತಿರೋ ಉಗ್ರರು; ಭಾರತೀಯ ಸೇನೆಯಿಂದ ತಿರುಗೇಟು

ಇತ್ತ ಪಾಕಿಸ್ತಾನ(Pakistan)ದ ವಿದೇಶಾಂಗ ಸಚಿವ ಶಾ ಮಹಮೂದ್, ಸಂಯುಕ್ತ ರಾಷ್ಟ್ರದ ಎಲ್ಲ ಅಂತರಾಷ್ಟ್ರೀಯ ಸಮುದಾಯಗಳಿಗೆ ತಾಲಿಬಾನಿಗಳ ಸರ್ಕಾರಕ್ಕೆ ಮಾನ್ಯತೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ತಾಲಿಬಾನಿಗಳು ತಮ್ಮ ಸಾಮಥ್ರ್ಯದ ಮೇಲೆ ಸರ್ಕಾರ ರಚನೆ ಮಾಡಿರೋದರಿಂದ ಇನ್ನುಳಿದ ರಾಷ್ಟ್ರಗಳು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದರು.

ವರದಿ: ಮಹ್ಮದ್ ರಫೀಕ್ ಕೆ.
Published by:Kavya V
First published: