ಕಾಬೂಲ್: 1971ರಲ್ಲಿ ಪಾಕಿಸ್ತಾನ (Pakistan) ಭಾರತದ (India) ಎದುರು ಶರಣಾಗಿದ ಫೋಟೋವನ್ನು ತಾಲಿಬಾನ್ (Taliban) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ವ್ಯಂಗ್ಯವಾಡಿದೆ. ಪಾಕಿಸ್ತಾನವೇ ಸೃಷ್ಟಿಸಿದ ಉಗ್ರ ಸಂಘಟನೆ, ಇದೀಗ ಪಾಕಿಸ್ತಾನದ ವಿರುದ್ಧವೇ ತಿರುಗಿ ಬಿದ್ದಿದೆ. 1971ರಲ್ಲಿ ಭಾರತದ ವಿರುದ್ಧ ಸೋಲು ಅನುಭವಿಸಿದ ಪಾಕಿಸ್ತಾನ ಪೂರ್ವ ಪಾಕಿಸ್ತಾನವನ್ನು ಕಳೆದುಕೊಂಡಿತು. ಇದರಿಂದ ಬಾಂಗ್ಲಾ ದೇಶದ ಉಗಮವಾಯಿತು. ಈ ಯುದ್ಧದಂತೆಯೇ ತಾಲಿಬಾನ್ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಬೇಕಾಗಿರುತ್ತದೆ ಎಂದು ಎಚ್ಚರಿಸಿದೆ. ಈ ಕುರಿತಂತೆ ತಾಲಿಬಾನ್ ನಾಯಕ ಮತ್ತು ಉಪ ಪ್ರಧಾನಿ ಅಹ್ಮದ್ ಯಾಸಿರ್ (Taliban leader and deputy Prime Minister Ahmad Yasir) ಟ್ವೀಟ್ ಮಾಡಿದ್ದು, ಬಾಂಗ್ಲಾದೇಶ (Bangla Pradesh) ರಚನೆಗೆ ಕಾರಣವಾದ 1971 ರ ಯುದ್ಧದ ನಂತರ ಇಸ್ಲಾಮಾಬಾದ್ (Islamabad) ಭಾರತಕ್ಕೆ ಶರಣಾಗುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ನಮ್ಮ ವಿರುದ್ದ ಮಿಲಿಟರಿ ದಾಳಿ ಮಾಡೋ ಯೋಚ್ನೆ ಮಾಡ್ಬೇಡಿ
ಫೋಟೋ ಜೊತೆಗೆ ಸಿರಿಯಾದಲ್ಲಿ ಕುರ್ದಿಶ್ಗಳನ್ನು ಗುರಿಯಾಗಿಸಿ ದಾಳಿ ನಡೆಸಿದಂತೆ ನಮ್ಮ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲ. ದೊಡ್ಡ ದೊಡ್ಡ ಸಾಮ್ರಾಜ್ಯಗಳೇ ನಮ್ಮ ಮುಂದೆ ಸಮಾಧಿಯಾಗಿವೆ. ನಮ್ಮ ವಿರುದ್ದ ಮಿಲಿಟರಿ ದಾಳಿ ಮಾಡುವ ಯೋಚನೆಯನ್ನೇ ಮಾಡಬೇಡಿ. 1971ರಲ್ಲಿ ಭಾರತ ಸೇನೆಯು ನಿಮ್ಮನ್ನು ಸೋಲಿಸಿ ಮಿಲಿಟರಿ ಒಪ್ಪಂದಕ್ಕೆ ಸಹಿ ಹಾಕಿಸಿದ್ದು ನೆನಪಿಲ್ಲವೇ? ಇದೇ ನಾಚಿಕೆಗೇಡಿನ ಪ್ರಸಂಗವನ್ನು ನೀವು ಮತ್ತೆ ಎದುರಿಸಬೇಕಾಗುತ್ತದೆ ಎಂದು ಕ್ಯಾಪ್ಷನ್ನಲ್ಲಿ ಉರ್ದುವಿನಲ್ಲಿ ಬರೆದುಕೊಳ್ಳುವ ಮೂಲಕ ಎಚ್ಚರಿಕೆ ನೀಡಿದ್ದಾರೆ.
د پاکستان داخله وزیر ته !
عالي جنابه! افغانستان سوريه او پاکستان ترکیه نده چې کردان په سوریه کې په نښه کړي.
دا افغانستان دى د مغرورو امپراتوريو هديره.
په مونږ دنظامي يرغل سوچ مه کړه کنه دهند سره دکړې نظامي معاهدې د شرم تکرار به وي داخاوره مالک لري هغه چې ستا بادار يې په ګونډو کړ. pic.twitter.com/FFu8DyBgio
— Ahmad Yasir (@AhmadYasir711) January 2, 2023
ಭಾರತದ ಮುಂದೆ ಪಾಕ್ ಶರಣಾದ ಫೋಟೋ ಶೇರ್
ಪಾಕಿಸ್ತಾನದ ಸೇನೆಯ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ಸೋಲನ್ನು ಒಪ್ಪಿಕೊಂಡು ಢಾಕಾದಲ್ಲಿ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (ಜಿಒಸಿ-ಇನ್-ಸಿ), ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಅರೋರಾ ಸಮ್ಮುಖದಲ್ಲಿ ಶರಣಾಗತಿ ಒಪ್ಪಂದಕ್ಕೆ ಸಹಿ ಹಾಕುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ. ಇದರಿಂದ ನೂತನ ಬಾಂಗ್ಲಾದೇಶ ಉದಯವಾಯಿತು.
ಭಾರತದಲ್ಲಿ ಡಿ.16ರನ್ನು ವಿಜಯ್ ದಿವಸ್ ಎಂದು ಆಚರಣೆ
ಈ ಫೋಟೋವನ್ನು 1971ರ ಡಿಸೆಂಬರ್ 16ರಂದು ಕ್ಲಿಕ್ಕಿಸಲಾಗಿದ್ದು, ಈ ದಿನವನ್ನು ಭಾರತದಲ್ಲಿ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ. ಇದು ಬಾಂಗ್ಲಾದೇಶದ ವಿಮೋಚನೆಗೆ ಭಾರತ ಸಹಾಯ ಮಾಡಿದ ದಿನವಾಗಿ ಗುರುತಿಸಲಾಗುತ್ತದೆ.
ಟ್ವೀಟ್ ಮೂಲಕ ಪಾಕ್ಗೆ ಯಾಸಿರ್ ವಾರ್ನ್
ಪಾಕಿಸ್ತಾನದ ಆಂತರಿಕ ಸಚಿವ ರಾಣಾ ಸನಾವುಲ್ಲಾ, ಅಫ್ಘಾನಿಸ್ತಾನದಲ್ಲಿ ದಂಗೆಕೋರರ ಅಡಗುತಾಣಗಳನ್ನು ಕೆಡವಲು ಇಸ್ಲಾಮಾಬಾದ್ ಅಧಿಕಾರ ಹೊಂದಿದೆ ಎಂದು ಹೇಳಿದ ಬಳಿಕ ಈ ಟ್ವೀಟ್ ಮಾಡುವ ಮೂಲಕ ಯಾಸಿರ್ ವಾರ್ನ್ ಮಾಡಿದ್ದಾರೆ.
ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಲು ಬಿಡಲ್ಲ
ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಲು ತಾಲಿಬಾನ್ ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಅಫ್ಘಾನಿಸ್ತಾನವು ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಬಯಸುತ್ತದೆ. ಆದರೆ ಅಧಿಕಾರಿಗಳು ಹೇಳಿಕೆ ನೀಡುವಾಗ ಎಚ್ಚರದಿಂದ ನೀಡಬೇಕು ಎಂದು ಆರ್ಎಫ್ಇಆರ್ಎಲ್ ವಕ್ತಾರ ಜಬಿಯುಲ್ಲಾ ಮುಜಾಹಿದ್ ಹೇಳಿದ್ದಾರೆ.
ಕಾಬೂಲ್ನಲ್ಲಿರುವ ತಾಲಿಬಾನ್ನ ರಕ್ಷಣಾ ಸಚಿವಾಲಯವು, ಪಾಕಿಸ್ತಾನದ ಈ ಹೇಳಿಕೆಗಳಿಂದ ಚೆನ್ನಾಗಿರುವ ಬಾಂಧವ್ಯ ಹಾಳಾಗುತ್ತಿದೆ. ಯಾವುದೇ ಸಮಸ್ಯೆಯಾದರೂ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
1971ರಲ್ಲಿ ಭಾರತದ ಮುಂದೆ ಶರಣಾಗಿದ್ದ 93 ಸಾವಿರ ಪಾಕ್ ಸೇನಿಕರು
1971ರಲ್ಲಿ ಭಾರತೀಯ ಸೇನೆ ಎದುರು ಪಾಕಿಸ್ತಾನದ ಬರೋಬ್ಬರಿ 93 ಸಾವಿರ ಸೈನಿಕರು ಶರಣಾಗಿದ್ದರು. ಎರಡನೇ ವಿಶ್ವ ಯುದ್ಧದ ಬಳಿಕ ಇದು ಅತಿ ದೊಡ್ಡ ಶರಣಾಗತಿಯಾಗಿದೆ. ಇಡೀ ವಿಶ್ವವೇ ಭಾರತೀಯ ಸೇನೆಯ ಪರಾಕ್ರಮವನ್ನು ನೋಡಿ ಅಚ್ಚರಿಗೊಂಡಿತ್ತು. ಪಾಕಿಸ್ತಾನ ಸೇನೆಯ 93 ಸಾವಿರ ಸೈನಿಕರು ತಮ್ಮ ಶಸ್ತ್ರಾಸ್ತ್ರವನ್ನು ಕೆಳಗಿಟ್ಟು ಭಾರತೀಯ ಸೇನೆ ಎದುರು ಮಂಡಿ ಊರಿದ್ದರಿಂದ ಬೇರೆ ದಾಯಿ ಇಲ್ಲದೇ ಪಾಕಿಸ್ತಾನ ಸೇನೆಯ ಮುಖ್ಯಸ್ಥರು ಭಾರತ ಹೇಳಿದಂತೆ ಕೇಳಬೇಕಾಯಿತು. ಭಾರತ ಸೂಚಿಸಿದಂತೆ ಮಿಲಿಟರಿ ಒಪ್ಪಂದಕ್ಕೆ ಮರು ಮಾತಿಲ್ಲದೇ ಸಹಿ ಹಾಕಿದ್ದರು. ಇದಾದ ನಂತರ ಪೂರ್ವ ಪಾಕಿಸ್ತಾನದ ಬದಲಿಗೆ ನೂತನ ಬಾಂಗ್ಲಾ ದೇಶ ಉದಯವಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ