ಕಾಬುಲ್, ಅಫ್ಘನಿಸ್ತಾನ: ಒಂದು ಕಡೆ ತಮ್ಮ ಬದುಕು ಹೇಗಿದೆ, ಭವಿಷ್ಯವೇ ಇದೆಯೋ ಇಲ್ಲವೋ ಇನ್ನೆಷ್ಟು ಕ್ಷಣ ಬದುಕಿರುತ್ತೇವೆ ಎಂದು ಅಫ್ಘನಿಸ್ತಾನದ ಜನ ಇದ್ದರೆ ಮತ್ತೊಂದೆಡೆ ಇಡೀ ರಾಷ್ಟ್ರದ ಮೇಲೆ ಹಿಡಿತ ಸಾಧಿಸಿರುವ ತಾಲಿಬಾನ್ ಅಕ್ಷರಶಃ ಈ ಕ್ಷಣಗಳನ್ನು ಸೆಲಬ್ರೇಟ್ ಮಾಡುತ್ತಿದೆ. ತಾಲಿಬಾನ್ ಎದುರು ಅಫ್ಘನಿಸ್ತಾನ ಮಂಡಿಯೂರಿ ಒಂದು ದಿನ ಆಗುವುದರಲ್ಲಿ ತಾಲಿಬಾನಿ ಉಗ್ರರು ಕಾಬುಲ್ನ ಅಮ್ಯೂಸ್ಮೆಂಟ್ ಪಾರ್ಕಿನಲ್ಲಿ ಮೋಜು ಮಸ್ತಿ ಮಾಡುತ್ತಿರುವ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಈಗಾಗಲೇ ಇರುವ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ, ಜನರ ಮನಸ್ಸನ್ನು ಮತ್ತಷ್ಟು ತಲ್ಲಣಗೊಳಿಸುತ್ತವೆ ಎನ್ನುವ ಉದ್ದೇಶದಿಂದ ಟ್ವಿಟರ್ ಸೇರಿದಂತೆ ಕೆಲವು ಸಾಮಾಜಿಕ ಜಾಲತಾಣಗಳು ಆ ವಿಡಿಯೋಗಳನ್ನು ನಿಷೇಧಿಸಿವೆ. ಆದರೆ ಜನರ ಜೀವದ ಜೊತೆ ಆಟವಾಡುತ್ತಿರುವ ಉಗ್ರರು ಹೀಗೆ ಖುಷಿಯಾಗಿ ಮೋಜು ಮಸ್ತಿಯಲ್ಲಿ ತೊಡಗಿಕೊಂಡಿರುವುದು ವಿಕ್ರತಿ ಎನ್ನುವ ಅನಿಸಿಕೆಗಳು ಎಲ್ಲೆಡೆ ವ್ಯಕ್ತವಾಗುತ್ತಿದೆ.
ನಿನ್ನೆಯಷ್ಟೇ ಬದುಕುವ ಆಸೆಯಿಂದ ಕೊನೆಯ ಮಾರ್ಗ ಎನ್ನುವಂತೆ ಅಮೇರಿಕಾದ ಏರ್ ಫೋರ್ಸ್ ವಿಮಾನದ ಚಕ್ರಕ್ಕೆ ತಮ್ಮನ್ನು ತಾವು ಕಟ್ಟಿಕೊಂಡಿದ್ದ ಅಫ್ಘನಿಸ್ತಾನದ ಕೆಲ ಜನರ ವಿಡಿಯೋಗಳೇ ಬಹಳ ಖೇದಕರವಾಗಿತ್ತು. ಏನಾದರೂ ಮಾಡಿ ತಾವು ಈ ದೇಶ ಬಿಟ್ಟು ಹೊರಹೋಗಬೇಕು, ಆಗ ಮಾತ್ರ ಬದುಕಲು ಸಾಧ್ಯ ಎನ್ನುವಂಥಾ ಪರಿಸ್ಥಿತಿಯಲ್ಲಿ ಅಲ್ಲಿನ ಜನ ಇದ್ದಾರೆ. ಈಗಲೂ ಕಾಬುಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ತುಂಬಾ ಜನ ತಮ್ಮನ್ನು ನೆಮ್ಮದಿಯ ತಾಣಕ್ಕೆ ಕರೆದುಕೊಂಡು ಹೋಗುವ ವಿಮಾನಕ್ಕಾಗಿ ಕಾಯುತ್ತಿದ್ದಾರೆ.
ಇದನ್ನೂ ಓದಿ: 4 ಕಾರ್, 1 ಹೆಲಿಕಾಪ್ಟರ್ ತುಂಬಾ ದುಡ್ಡು ತುಂಬಿಕೊಂಡೇ ಓಡಿಹೋಗಿದ್ದಾನೆ ಅಫ್ಘನಿಸ್ತಾನದ ಅಧ್ಯಕ್ಷ, ಮತ್ತಷ್ಟು ಹಣ ಇನ್ನೂ ಅರಮನೆಯಲ್ಲೇ ಇದ್ಯಂತೆ!
ನೂರಾರು ಜನ ಒಂದೇ ವಿಮಾನದಲ್ಲಿ ನಿಂತುಕೊಂಡಾದರೂ ಹೊರಟುಬಿಡುತ್ತೇವೆ ಎನ್ನುವಂಥಾ ಶೋಚನೀಯ ಪರಿಸ್ಥಿತಿಯಲ್ಲಿ ಇದ್ದಾರೆ. ಇಂಥಾ ಸಂದರ್ಭದಲ್ಲಿ ಸಂಪೂರ್ಣ ಅಧಿಕಾರ ತಮ್ಮ ಕೈಗೆ ಬಂದಿದ್ದೇ ಖುಷಿಯಾಗಿ ಓಡಾಡಿಕೊಂಡಿದ್ದಾರೆ ತಾಲಿಬಾನಿಗಳು. ಇನ್ನು ಅವರನ್ನು ಹಿಡಿಯುವವರೇ ಇಲ್ಲದಂತಾಗಿದೆ. ಕಾಬುಲ್ನ ಮಕ್ಕಳ ಅಮ್ಯೂಸ್ಮೆಂಟ್ ಪಾರ್ಕ್ ಒಂದರಲ್ಲಿ ಆಟವಾಡುವ ಕಾರುಗಳಲ್ಲಿ, ಆಟಿಕೆ ಕುದಿರೆಗಳ ಮೇಲೆ ತಮ್ಮ ದೊಡ್ಡ ಮಷೀನ್ ಗನ್ಗಳ ಸಮೇತ ಕುಳಿತು ಆಟವಾಡ್ತಿರೋ ತಾಲಿಬಾನಿಗಳ ಚಿತ್ರಗಳು ಎಲ್ಲೆಲ್ಲೂ ಹರಿದಾಡುತ್ತಿವೆ. ಅಧಿಕಾರ ಸಿಕ್ಕ ಮೊದಲನೇ ದಿನದ ಇವರ ಮೋಜು ಮಸ್ತಿ ಸದ್ಯ ಭಾರೀ ಚರ್ಚೆಯಲ್ಲಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ