ಕಾಬೂಲ್ (ಆಗಸ್ಟ್ 20); ಅಫ್ಘಾನಿಸ್ತಾನದಲ್ಲಿ ಉಗ್ರಗಾಮಿ ತಾಲಿಬಾನ್ ಪಡೆ ತನ್ನ ಅಧಿಪತ್ಯವನ್ನು ಸಾಧಿಸುತ್ತಿದ್ದಂತೆ ಎಲ್ಲಾ ದೇಶಗಳೂ ಕಾಬೂಲ್ನಲ್ಲಿದ್ದ ತಮ್ಮ ರಾಯಭಾರ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಹಿಂದಕ್ಕೆ ಕರೆಸಿಕೊಂಡಿತ್ತು. ಅದರಂತೆ ಭದ್ರತಾ ದೃಷ್ಟಿಯಿಂದ ಭಾರತ ಸರ್ಕಾರ ಸಹ ಎರಡು ವಿಶೇಷ ವಿಮಾನಗಳಲ್ಲಿ ತನ್ನ ರಾಯಭಾರ ಕಚೇರಿ ಅಧಿಕಾರಗಳನ್ನು ಸುರಕ್ಷಿತವಾಗಿ ದೇಶಕ್ಕೆ ಕರೆಸಿಕೊಂಡಿದೆ. ಆದರೆ, ಭಾರತ ಸರ್ಕಾರ ತನ್ನ ಕಾಬೂಲ್ ರಾಯಭಾರ ಕಚೇರಿಯಿಂದ ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವುದನ್ನು ತಾಲಿಬಾನ್ ನಾಯಕರು ಬಯಸಿರಲಿಲ್ಲ ಎಂದು ಉನ್ನತ ಮೂಲಗಳು ಎನ್ಡಿಟಿವಿಗೆ ಮಾಹಿತಿ ನೀಡಿವೆ. ಅಲ್ಲದೆ, ತಾಲಿಬಾನಿಗಳು ಭಾರತೀಯ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯ ಸುರಕ್ಷತೆಯ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂದೇಶಗಳು - ತಾಲಿಬಾನ್‌ನ ರಾಜಕೀಯ ಘಟಕದ ಮುಖ್ಯಸ್ಥರಾದ ಅಬ್ಬಾಸ್ ಸ್ಟಾನಿಕ್‌ಜಾಯ್ ಅವರ ಕಚೇರಿಯಿಂದ ಕಳುಹಿಸಲ್ಪಟ್ಟಿವೆ. ಕಾಬೂಲ್ ಮತ್ತು ದೆಹಲಿಯ ಸಂಪರ್ಕಗಳ ಮೂಲಕ ರವಾನೆಯಾದ ಈ ಸಂದೇಶಗಳನ್ನು ರಾಯಭಾರ ಕಚೇರಿ ಸಿಬ್ಬಂದಿಗಳ ಸ್ಥಳಾಂತರಕ್ಕಿಂತ ಮೊದಲೇ ತಲುಪಿಸಲಾಗಿತ್ತು ಎಂದು ತಿಳಿದುಬಂದಿದೆ.
Movement of the Indian Ambassador and the Embassy staff from Kabul to India was a difficult and complicated exercise. Thank all those whose cooperation and facilitation made it possible.
— Dr. S. Jaishankar (@DrSJaishankar) August 17, 2021
ಇದನ್ನೂ ಓದಿ: Afghanistan Crisis: ಹುಡುಕಿದ ಪತ್ರಕರ್ತ ಸಿಕ್ಕಿಲ್ಲವೆಂದು ಆತನ ಸಂಬಂಧಿಗಳನ್ನು ಕೊಂದ ತಾಲಿಬಾನಿಗಳು!
ಆದಾಗ್ಯೂ, ಈ ಭಯೋತ್ಪಾದಕ ಗುಂಪುಗಳಿಂದ ಬೆದರಿಕೆಯಿದೆ ಎಂದು ಗುಪ್ತಚರ ಇಲಾಖೆ ಖಚಿತ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಭಾರತೀಯ ರಾಜತಾಂತ್ರಿಕರನ್ನು ಅಫ್ಘನ್ನಿಂದ ಸ್ಥಳಾಂತರಿಸಲಾಗಿದೆ. ತಾಲಿಬಾನ್ ಉಗ್ರರು ಅಫ್ಘಾನ್ ರಾಜಧಾನಿ ಕಾಬೂಲ್ಗೆ ಪ್ರವೇಶಿಸುತ್ತಿದ್ದಂತೆ ಭಾರತವು ಕಳೆದ ಭಾನುವಾರವೇ ಎರಡು ವಾಯುಪಡೆಯ C-17 ಸಾರಿಗೆ ವಿಮಾನಗಳನ್ನು ಕಾಬೂಲ್ ವಿಮಾನ ನಿಲ್ದಾಣಕ್ಕೆ ಕಳುಹಿಸಿಕೊಟ್ಟಿತ್ತು.
#WATCH | Indian Air Force C-17 aircraft that took off from Kabul, Afghanistan with Indian officials, lands in Jamnagar, Gujarat. pic.twitter.com/1w3HFYef6b
— ANI (@ANI) August 17, 2021
ಇದನ್ನೂ ಓದಿ: ತಾಲಿಬಾನ್ ಪ್ರಮುಖ ನಾಯಕ ಶೇರ್ ಮೊಹಮ್ಮದ್ಗೆ ಭಾರತದ ನಂಟು; ನೆನಪು ಹಂಚಿಕೊಂಡ ಮಿಲಿಟರಿ ಸ್ನೇಹಿತರು
ಅಫ್ಘಾನ್ನಲ್ಲಿರುವ ಗುರುದ್ವಾರದಲ್ಲಿ 200ಕ್ಕೂ ಹೆಚ್ಚು ಸಿಖ್ಖರು ಇದ್ದಾರೆ. ಅಲ್ಲದೆ, ಹಲವು ಹಿಂದೂಗಳು ಅಲ್ಲಿ ಆಶ್ರಯ ಪಡೆದಿದ್ದಾರೆ. ಇವರನ್ನು ರಕ್ಷಣೆ ಮಾಡುವಂತೆ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ, ತಾಲಿಬಾನ್ ನಾಯಕರು ಗುರುವಾರ ಆ ಗುರುದ್ವಾರಕ್ಕೆ ಖುದ್ದು ಭೇಟಿ ನೀಡಿ ತಮ್ಮಿಂದ ಯಾವ ಸಿಖ್ಖರು ಮತ್ತು ಹಿಂದೂಗಳಿಗೂ ತೊಂದರೆ ಆಗುವುದಿಲ್ಲ ಎಂದು ಭರವಸೆ ನೀಡಿದ್ದರು. ಅವರು ಭರವಸೆ ನೀಡಿದ್ದ ವಿಡಿಯೋ ನಿನ್ನೆ ಟ್ವಿಟರ್ನಲ್ಲಿ ಟ್ರೆಂಡ್ ಆಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ