ತಾಲಿಬಾನ್ - ಚೀನಾ ನಡುವೆ ಸ್ನೇಹ..! ಈ ಸಂಬಂಧದ ಹಿಂದಿನ ಗುಟ್ಟೇನು ಗೊತ್ತಾ..?

ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವು, ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ ತಾಲಿಬಾನ್‍ಗೆ ಕಾನೂಬದ್ಧತೆ ನೀಡಲು ಆತುರ ತೋರುತ್ತಿದೆ

ತಾಲಿಬಾನಿ ನಿಯೋಗದೊಂದಿಗೆ ಚೀನಾ ಅಧಿಕಾರಿಗಳು

ತಾಲಿಬಾನಿ ನಿಯೋಗದೊಂದಿಗೆ ಚೀನಾ ಅಧಿಕಾರಿಗಳು

  • Share this:

ಯುಎಸ್ ಮಿಲಿಟರಿ ಪಡೆಗಳು 2021ರ ಆಗಸ್ಟ್ 31ರಂದು ಅಪಘಾನಿಸ್ತಾನದಿಂದ ಹೊರ ಬರಲಿವೆ, ಅದಕ್ಕಿಂತ ಒಂದು ತಿಂಗಳು ಮೊದಲೇ, ತಾಲಿಬಾನ್ ನಿಯೋಗವೊಂದು ಚೀನಾದ ಟಿಯಾಂಜಿನ್‍ನಲ್ಲಿ ಜುಲೈ 28ರಂದು ಸ್ನೇಹ ಸಂಬಂಧದ ಮಾತುಕತೆ ನಡೆಸಿದೆ. ಚೀನಾದ ವಿದೇಶಿ ಸಚಿವಾಲಯದ ವೆಬ್‍ಸೈಟ್‍ನಲ್ಲಿ, ಚೀನಾದ ವಿದೇಶಾಂಗ ಮಂತ್ರಿ ವಾಂಗ್ ಯಿ ಜೊತೆ ತಾಲಿಬಾನ್‍ ಸಂಸ್ಥಾಪಕ ಮುಲ್ಲಾ ಓಮರ್‌ನ ನಿಕಟ ಸಹವರ್ತಿ ಮತ್ತು ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರಾದರ್ ಪೋಸ್ ನೀಡಿರುವ ಫೋಟೋವೊಂದನ್ನು ಪೋಸ್ಟ್ ಮಾಡಲಾಗಿದೆ.ಇನ್ನೊಂದು ಚಿತ್ರದಲ್ಲಿ ಚೀನಾದ ಅಧಿಕಾರಿಗಳು ಮತ್ತು ಇಡೀ ತಾಲಿಬಾನ್ ನಿಯೋಗವಿದೆ. ಆ ಫೋಟೋಗೆ “ಸಹಾಯಕ ವಿದೇಶಾಂಗ ಮಂತ್ರಿ ವೂ ಜಿಯಾಂಗವೋ , ಬರಾದಾರ್ ಮತ್ತು ಅವರ ನಿಯೋಗದೊಂದಿಗೆ , ಸಾಮಾನ್ಯ ಸಂಗತಿಗಳ ವಿಷಯಗಳ ಕುರಿತು ಆಳವಾದ ಅಭಿಪ್ರಾಯಗಳ ವಿನಿಮಯದ ಕುರಿತು ಮಾತುಕತೆ ನಡೆಸಿದರು, ಅದು ಪರಸ್ಪರ ತಿಳುವಳಿಕೆ ಹೆಚ್ಚಿಸಲು ಮತ್ತು ಹೊಂದಾಣಿಕೆ ವಿಸ್ತರಿಸಲು ಸಹಾಯ ಮಾಡಿತು” ಎಂಬ ಅಡಿಬರಹ ನೀಡಲಾಗಿದೆ.


ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವು, ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ ತಾಲಿಬಾನ್‍ಗೆ ಕಾನೂಬದ್ಧತೆ ನೀಡಲು ಆತುರ ತೋರುತ್ತಿದೆ ಎಂದು ಕಂಡು ಬರುತ್ತಿದೆ. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ತಾಲಿಬಾನ್ ಜೊತೆ ಮಾತುಕತೆ ನಡೆಸಿರುವ ರೀತಿಯಲ್ಲಿ ಇದು ಸ್ಪಷ್ಟವಾಗಿ ಕಂಡುಬಂದಿದೆ.


ಈ ಮಧ್ಯೆ ಪುನರುಜ್ಜೀವನಗೊಂಡಿರುವ ತಾಲಿಬಾನ್, ಮತ್ತೆ ಅಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ಪಡೆಯುವ ಗುರಿ ಸಾಧಿಸಲು ಹೊರಟಿದೆ. ಅವರ ಪಡೆಗಳು ದೇಶದ ಅರ್ಧದಷ್ಟು ಭಾಗದ ಮೇಲೆ ಹಿಡಿತ ಸಾಧಿಸಿದ್ದು, ಈಗ ನಡೆಯುತ್ತಿರುವ ಶಾಂತಿ ಮಾತುಕತೆಯಲ್ಲಿ ಅಫ್ಘಾನ್‌ ಸರಕಾರದ ಜೊತೆ ಷರತ್ತುಗಳನ್ನು ನಿಗದಿಪಡಿಸುವಲ್ಲಿಯೂ ಮೇಲುಗೈ ಸಾಧಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ, ಬೆಂಬಲ ಮತ್ತು ಮನ್ನಣೆ ಕೋರಿ, ಕೆಲವೊಂದು ದೇಶಗಳಿಗೆ ರಾಜತಾಂತ್ರಿಕ ನಿಯೋಗಗಳನ್ನು ಕಳುಹಿಸುತ್ತಿದೆ.


ತಾಲಿಬಾನ್ ಪ್ರತಿನಿಧಿಗಳು , ರಷ್ಯಾ ಮತ್ತು ಟೆಹರಾನ್‍ನಲ್ಲಿ ಕೂಡ ಕಂಡುಬಂದಿದ್ದು, ಅಲ್ಲಿಯೂ ಮಾತುಕತೆಗಳು ನಡೆದಿರಬಹುದು ಎಂಬುದನ್ನು ಸುಲಭವಾಗಿ ಊಹಿಸಬಹುದು.


ಈ ಸನ್ನಿವೇಶದಲ್ಲಿ ಜುಲೈ 28ರಂದು ಟಿಯಾಂಜ್‍ನಲ್ಲಿ ನಡೆದ ಮಾತುಕತೆ ಮಹತ್ವ ಪಡೆಯುತ್ತದೆ, ಏಕೆಂದರೆ ಅಫ್ಘಾನಿಸ್ತಾನದ ನೆರೆಯ ಅತ್ಯಂತ ದೊಡ್ಡ ಮತ್ತು ಬಲಿಷ್ಠ ದೇಶ ಚೀನಾ ತಾಲಿಬಾನ್‍ಗೆ ಕಾನೂನು ಬದ್ಧತೆ ನೀಡಲು ಸಿದ್ಧವಿರುವುದು ಮಾತ್ರವಲ್ಲ, ಅಫ್ಘಾನಿಸ್ತಾನದ ಭವಿಷ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಆಶಯ ಕೂಡ ಸ್ಪಷ್ಟಪಡಿಸುತ್ತಿದೆ.


ಅಫ್ಘಾನಿಸ್ತಾನ ಮೇಲೆ ಚೀನಾ ತೋರಿಸುತ್ತಿರುವ ಆಸಕ್ತಿ ಪ್ರಾಯಶಃ ಪ್ರಾಯೋಗಿಕ ಹಣಕಾಸು ಮತ್ತು ವ್ಯಾಪಾರ ಅಗತ್ಯಗಳ ಕಾರಣದಿಂದ ಇರಬಹುದು. ಏಕೆಂದರೆ, ಅಫ್ಘಾನಿಸ್ತಾನ ಹೊಂದಿರುವ ಅಪರೂಪದ ಭೂಮಿ, ಖನಿಜ ನಿಕ್ಷೇಪಗಳ ಮೌಲ್ಯ ಸುಮಾರು 3 ಟ್ರಿಲಿಯನ್ ಡಾಲರ್‌ಗಳಷ್ಟಿರಬಹುದು ಎಂದು ನಂಬಲಾಗಿದೆ. 2014ರಲ್ಲಿ, ಯುಎಸ್ ಭೂ ವೈಜ್ಞಾನಿಕ ಸಮೀಕ್ಷೆಯು 60 ದಶ ಲಕ್ಷ ಟನ್ ತಾಮ್ರ, 2.2 ಶತ ಕೋಟಿ ಟನ್ ಕಬ್ಬಿಣದ ಅದಿರು, 1.4 ಮಿಲಿಯನ್ ಟನ್ ಭೂಮಿಯ ಅಪರೂಪದ ಅಂಶಗಳಾದ ಲ್ಯಾಂಥನಮ್, ಸಿರಿಯಂ ಮತ್ತು ನಿಯೋಡೈಮಿಯಂ, ಅಲ್ಯೂಮಿನಿಯಂ, ಚಿನ್ನ, ಬೆಳ್ಳಿ, ಝಿಂಕ್, ಪಾದರಸ ಮತ್ತು ಲಿಥಿಯಂ ನಿಕ್ಷೇಪಗಳು ಅಫ್ಘಾನಿಸ್ತಾನದಲ್ಲಿ ಇವೆ ಎಂದು ಅಂದಾಜು ಮಾಡಿದ್ದವು.


ಇದನ್ನು ಓದಿ: ಶ್ರೀಲಂಕಾದಲ್ಲಿ ಸಿಕ್ಕ ವಿಶ್ವದ ಅತಿದೊಡ್ಡ ನಕ್ಷತ್ರ ನೀಲಮಣಿ ಕ್ಲಸ್ಟರ್ ಬಗ್ಗೆ ಇಲ್ಲಿದೆ ಕುತೂಹಲಕಾರಿ ಸಂಗತಿ

ಈಗಾಗಲೇ ಲೋಗರ್ ಪ್ರಾಂತ್ಯದಲ್ಲಿ ತಾಮ್ರದ ಗಣಿಗಾರಿಕೆ ಮಾಡುತ್ತಿರುವ ಚೀನಾದ ಕಂಪನಿಗಳ ಒಕ್ಕೂಟವು ತೈಲ ನಿಕ್ಷೇಪವನ್ನೂ ಪತ್ತೆ ಹಚ್ಚಿದ್ದು, 25 ವರ್ಷಗಳ ಕಾಲ 3 ತೈಲ ಕ್ಷೇತ್ರಗಳನ್ನು ಕೊರೆಯಲು ಚೀನಾ ರಾಷ್ಟ್ರೀಯ ಪೆಟ್ರೋಲಿಯಂ ಕಾರ್ಪೊರೇಶನ್ ಬಿಡ್ ಗೆದ್ದಿದೆ.


ಬೀಜಿಂಗ್‍ನ ಎರಡನೇ ಆಸಕ್ತಿಯ ಕ್ಷೇತ್ರವೆಂದರೆ, ಚೀನಾದ ಮಹತ್ವಾಕಾಂಕ್ಷೆಯ ಬೆಲ್ಟ್ ಅಂಡ್ ರೋಡ್ ಉಪಕ್ರಮ (ಬಿಆರ್‌ಐ), ಇದು ಈವರೆಗೆ ಅಫ್ಘಾನಿಸ್ತಾನವನ್ನು ಒಳಗೊಂಡಿರಲಿಲ್ಲ. ಬಿಆರ್‌ಐ ಭೂಮಿ ಮತ್ತು ಸಮುದ್ರ ಮಾರ್ಗಗಳ ಜಾಲವಾಗಿದ್ದು, ಯುರೇಶಿಯಾದ ಭೂ ಪ್ರದೇಶವನ್ನು ವ್ಯಾಪಿಸುತ್ತದೆ. ಚೀನಾ ಈಗಾಗಲೇ ಅಫ್ಘಾನಿಸ್ತಾನದಲ್ಲಿ ಮತ್ತೊಂದು ಮಹತ್ವದ ರಸ್ತೆ ಕೂಡ ನಿರ್ಮಿಸುತ್ತಿದೆ. ಇದರ ಮೂಲಕ, ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ಮತ್ತು ಇರಾನ್‍ಗೆ ಸಂಪರ್ಕ ಕಲ್ಪಿಸುತ್ತಿರುವ ರಸ್ತೆ ಮಾರ್ಗಗಳನ್ನು ಬಳಸಿಕೊಂಡು, ಪಶ್ಚಿಮ ಚೀನಾದ ವ್ಯಾಪಾರಕ್ಕಾಗಿ ಹತ್ತಿರದ ಸಮುದ್ರ ಮಾರ್ಗ ರೂಪಿಸುವ ಯೋಜನೆ ಚೀನಾದ್ದು.


ಶತಮಾನಗಳಿಂದ ವಿದೇಶಿ ಶಕ್ತಿಗಳು ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸುವಲ್ಲಿ ವಿಫವಾಗಿವೆ. ಯುಎಸ್‍ಎಸ್‍ಆರ್ ಮತ್ತು ಯುಸ್ ಕೂಡ ಈ ವಿಷಯದಲ್ಲಿ ಸೋಲು ಕಂಡಿಲ್ಲದಿದ್ದರೂ, ಸ್ಥಿರ ಅಧಿಕಾರ ಸ್ಥಾಪಿಸಲು ಸಾಧ್ಯವಾಗದೆ ಹಿಂದೆ ಸರಿಯಬೇಕಾಯಿತು. ಇದೀಗ ಚೀನಾ ಅಫ್ಘಾನಿಸ್ತಾನವನ್ನು ಬೇರೆಯೇ ದೃಷ್ಟಿಕೋನದಲ್ಲಿ ನೋಡುತ್ತಿದೆ. ಅದರದ್ದು ಯುದ್ಧ ಮಾರ್ಗವಲ್ಲ, ವಾಣಿಜ್ಯ ಸಂಬಂಧದ ಮೂಲಕ ಅಫ್ಘಾನಿಸ್ತಾನದ ಮೇಲೆ ಪ್ರಭಾವ ಬೀರುವುದು.First published: