Taliban: ಭಾರತದ ಜೊತೆಗೆ ತನ್ನ ಉತ್ತಮ ಭಾಂಧವ್ಯವನ್ನು ಉಳಿಸಿಕೊಳ್ಳುವ ಸಲುವಾಗಿ ತಾಲಿಬಾನ್ ಹಿಡಿಡಿತದಲ್ಲಿ ಇರುವ ಅಫ್ಘಾನಿಸ್ಥಾನದ (Afghanistan) ನಾಯಕರುಗಳು ತಮ್ಮ ಆಸಕ್ತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ತನ್ನ ರಾಜತಾಂತ್ರಿಕ ಅಸ್ತಿತ್ವವನ್ನು ಉಳಿಸಿಕೊಳ್ಳಲು ಭಾರತವನ್ನು ತಾಲಿಬಾನ್ ನಾಯಕರು ಕೇಳಿಕೊಂಡಿದ್ದರು. ತಾಲಿಬಾನ್ ನಾಯಕ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್‌ಜಾಯ್ ಮತ್ತೊಮ್ಮೆ ಅಫ್ಘಾನಿಸ್ತಾನದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಹೈಲೈಟ್ ಮಾಡಲು ಪ್ರಯತ್ನಿಸಿದರು ಮತ್ತು ಅವುಗಳನ್ನು ಉಳಿಸಿಕೊಳ್ಳಲು ಆಸಕ್ತಿ ವ್ಯಕ್ತಪಡಿಸಿದರು.
ಕಾಬೂಲ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಮಿಲಿಟರಿಯ ಉನ್ನತ ಶ್ರೇಣಿಯ ನಾಯಕರುಗಳು ಈ ವಿಷಯದ ಬಗ್ಗೆ ಮಾತನಾಡುತ್ತಿರುವುದು ಇದೇ ಮೊದಲು ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ತಾಲಿಬಾನ್‌ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಸ್ಟಾನೆಕ್‌ಜಾಯ್ ಅಫ್ಘಾನಿಸ್ತಾನದಲ್ಲಿ ಯುದ್ಧಕ್ಕೆ ಅಂತ್ಯ ಹಾಡಲಾಗುವುದು ಮತ್ತು ಶರಿಯಾವನ್ನು ಆಧರಿಸಿ ಇಸ್ಲಾಮಿಕ್ ಆಡಳಿತವನ್ನು ರೂಪಿಸುವ ಯೋಜನೆಗಳ ಕುರಿತು ಮಾತನಾಡಿದ್ದಾರೆ. ಭಾರತ, ಪಾಕಿಸ್ತಾನ, ಚೀನಾ ಮತ್ತು ರಷ್ಯಾ ಸೇರಿದಂತೆ ಈ ಪ್ರದೇಶದ ಪ್ರಮುಖ ದೇಶಗಳೊಂದಿಗಿನ ಸಂಬಂಧಗಳ ಬಗ್ಗೆಯೂ ಅವರು ಮಾತನಾಡಿದರು ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ಆದರೂ, ಹಿಂದುಸ್ತಾನ್ ಟೈಮ್ಸ್‌ನ ವರದಿಯಲ್ಲಿ, ಸ್ಟಾನೆಕ್‌ಜಾಯ್ ಹೇಳಿದ್ದನ್ನು ಈ ರೀತಿಯಾಗಿ ಉಲ್ಲೇಖಿಸಲಾಗಿದೆ, “ಈ ಉಪಖಂಡಕ್ಕೆ ಭಾರತದ ಪಾತ್ರವು ಬಹಳ ಮುಖ್ಯವಾಗಿದೆ. ನಾವು ಹಿಂದಿನಂತೆ ಭಾರತದೊಂದಿಗೆ ನಮ್ಮ ಸಾಂಸ್ಕೃತಿಕ, ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳನ್ನು ಮುಂದುವರಿಸಲು ಬಯಸುತ್ತೇವೆ ... ಪಾಕಿಸ್ತಾನದ ಮೂಲಕ ಭಾರತದೊಂದಿಗಿನ ವ್ಯಾಪಾರವು ನಮಗೆ ಬಹಳ ಮುಖ್ಯವಾಗಿದೆ. ಭಾರತದೊಂದಿಗೆ, ಏರ್ ಕಾರಿಡಾರ್‌ಗಳ ಮೂಲಕ ವ್ಯಾಪಾರ ಮಾಡಲು ನಾವು ಸದಾ ಸಿದ್ದರಿದ್ದೇವೆ ಎಂದು ಹೇಳಿದ್ದಾರೆ.
ಇದೆಲ್ಲದರ ನಡುವೆಯೂ, top Taliban leaderಗಳಲ್ಲಿ ಒಬ್ಬರಾದ ಶಾಹೀನ್, ದ್ವಿಮುಖ ವ್ಯಾಪಾರದ ಬಗ್ಗೆ ಏನನ್ನೂ ಹೇಳಲಿಲ್ಲ. CNN-News18 ಸಂದರ್ಶನದಲ್ಲಿ ಕೂಡ, ಅಫ್ಘನ್ನರ ಲಾಭಕ್ಕಾಗಿ ಯೋಜನೆಗಳು ನಿರ್ಮಾಣ ಹಂತದಲ್ಲಿದ್ದರೆ ಪೂರ್ಣಗೊಳ್ಳಬೇಕು ಎಂದು ಹೇಳಿದ್ದರು.
ಕಳೆದ 20 ವರ್ಷಗಳಲ್ಲಿ ಭಾರತವು ಅಫ್ಘಾನಿಸ್ತಾನದಲ್ಲಿ ಸಾಕಷ್ಟು ಹೂಡಿಕೆಗಳನ್ನು ಮಾಡಿದೆ - ರಸ್ತೆಗಳು, ಅಣೆಕಟ್ಟುಗಳಿಂದ ಹಿಡಿದು ಸಂಸತ್ತಿನ ಕಟ್ಟಡದವರೆಗೆ ಭಾರತ ಹಣ ಸುರಿದಿದೆ. ವರದಿಗಳ ಪ್ರಕಾರ, ಇದು $ 3 ಬಿಲಿಯನ್ ಹಣವನನ್ನು ವಿವಿಧ ಅಭಿವೃದ್ಧಿ ಯೋಜನೆಗಳಲ್ಲಿ ಹೂಡಿಕೆ ಮಾಡಿದೆ, ಅಫ್ಘಾನ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಿತು ಮತ್ತು $ 90 ಮಿಲಿಯನ್ ವೆಚ್ಚದಲ್ಲಿ ಸಂಸತ್ತಿನ ಕಟ್ಟಡವನ್ನು ನಿರ್ಮಿಸಲು ಸಹಾಯ ಮಾಡಿದೆ.
ಈ ವರದಿಯಲ್ಲಿ, ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಹ್ಯಾಪಿಮನ್ ಜೇಕಬ್ (Happymon Jacob) ಅವರ ಹೇಳಿಕೆಯನ್ನೂ ಸಹ ಉಲ್ಲೇಖಿಸಲಾಗಿದೆ: "ಭಾರತವು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಎಲ್ಲಾ ರೀತಿಯ ಆಟಗಳಿಂದ ಹೊರಗುಳಿದಿದೆ ಎಂದು ನನಗೆ ತೋರುತ್ತದೆ." ಎಂಬುದಾಗಿ ಅವರು ಹೇಳಿದ್ದಾರೆ.
ಅವರು ಕಳೆದ 20 ವರ್ಷಗಳಲ್ಲಿ ಅಫ್ಘಾನಿಸ್ತಾನದಲ್ಲಿ ಭಾರತೀಯರು ಸಕಾರಾತ್ಮಕ ಪಾತ್ರವನ್ನು ವಹಿಸಿದ್ದಾರೆ ಎಂದು ಅಲ್ ಜಜೀರಾ ಟಿವಿಗೆ ಅವರು ಹೇಳಿದ್ದಾರೆ, ಆದರೆ ಈಗ ಆ ರಾಜತಾಂತ್ರಿಕತೆಯು "ಅಸ್ತಿತ್ವದಲ್ಲಿಲ್ಲ", ಮತ್ತು ನಮ್ಮ ದೇಶದ ಪಾಲು "ನಾಟಕೀಯವಾಗಿ ಕಡಿಮೆಯಾಗಿದೆ", ಎಂದಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದಂತೆ, 1980 ರ ದಶಕದಲ್ಲಿ ಡೆಹ್ರಾಡೂನ್‌ನಲ್ಲಿರುವ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ವಿದೇಶಿ ಕೆಡೆಟ್ ಆಗಿ ತರಬೇತಿಯನ್ನು ಪಡೆದ ಸ್ಟಾನೆಕ್‌ಜಾಯ್, ಚೀನಾ, ತಜಕಿಸ್ತಾನ್, ಉಜ್ಬೇಕಿಸ್ತಾನ್, ಪಾಕಿಸ್ತಾನ ಮತ್ತು ರಷ್ಯಾಗಳೊಂದಿಗಿನ ಸಂಬಂಧಗಳ ಬಗ್ಗೆ ಮಾತನಾಡಿದರು, ಪಾಕಿಸ್ತಾನವು ತನ್ನ ದೇಶದಲ್ಲಿ ಲಕ್ಷಾಂತರ ಆಫ್ಘನ್ ನಿರಾಶ್ರಿತರಿಗೆ ಆತಿಥ್ಯ ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು ಅಫ್ಘಾನಿಸ್ತಾನ ನಿರಾಶ್ರಿತರು ಮತ್ತು ಅಫ್ಘಾನಿಸ್ತಾನವು ಪಾಕಿಸ್ತಾನದೊಂದಿಗೆ "ಸಹೋದರ ಸಂಬಂಧಗಳನ್ನು" ಹೊಂದಲು ಬಯಸಿದೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ