Taliban behead: ಆಫ್ಘನ್ ಮಹಿಳಾ ವಾಲಿಬಾಲ್ ಆಟಗಾರ್ತಿಯ ಹತ್ಯೆ; ಶಿರಚ್ಚೇದ ಮಾಡಿ ಕ್ರೌರ್ಯ ಮೆರೆದ ತಾಲಿಬಾನಿಗಳು

Taliban behead women vollyball player: ಅಫ್ಘಾನಿಸ್ತಾನ ರಾಷ್ಟ್ರೀಯ ವಾಲಿಬಾಲ್​ ತಂಡದ ಜ್ಯೂನಿಯರ್​ ಆಟಗಾರ್ತಿ ಮಹಜಬಿನ್ ಹಕಿಮಿ ಶಿರಚ್ಚೇದ ಮಾಡಲಾಗಿದೆ. ಇಂತಹದ್ದೊಂದು ಭಯಾನಕ ಕೃತ್ಯದ ಬಗ್ಗೆ ಆಕೆಯ ಕೋಚ್​ ಬಹಿರಂಗಪಡಿಸಿದ್ದಾರೆ.

ತಾಲಿಬಾನ್​ ಕ್ರೌಯಕ್ಕೆ ಬಲಿಯಾದ ವಾಲಿಬಾಲ್​ ಆಟಗಾರ್ತಿ

ತಾಲಿಬಾನ್​ ಕ್ರೌಯಕ್ಕೆ ಬಲಿಯಾದ ವಾಲಿಬಾಲ್​ ಆಟಗಾರ್ತಿ

  • Share this:
Taliban behead women vollyball player: ಅಫ್ಘಾನಿಸ್ತಾನ(Afghanistan) ತಾಲಿಬಾನ್​​(Taliban) ಉಗ್ರರ ಕಪಿ ಮುಷ್ಟಿಯಲ್ಲಿ ಸಿಲುಕಿ ನಲುಗುತ್ತಿದೆ. ಪ್ರತಿದಿನ ತಮ್ಮ ಬಂದೂಕು(Guns)ಗಳಿಗೆ ಉಗ್ರರು ಹೆಚ್ಚಿನ ಕೆಲಸ ನೀಡುತ್ತಿದ್ದಾರೆ. ಸಿಕ್ಕ ಸಿಕ್ಕವರನ್ನು ಕೊಂದು ಕ್ರೌರ್ಯ ಮರೆಯುತ್ತಿದ್ದಾರೆ. ಪ್ರತಿ ದಿನ ಉಗ್ರ(Terrorist)ರ ಕೈಯಲ್ಲಿ ನರಳಿ ನರಳಿ ಪ್ರಾಣ ಬಿಡುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೆಕ್ಕೆಲ್ಲ ಎಂದಿಗೂ ಕೊನೆಯಿಲ್ಲ ಎಂಬುದು ಅವರಿಗೂ ಗೊತ್ತಿದೆ. ದೇಶ ಬಿಟ್ಟು ಹೊರ ಬರಲಾಗದ ಪರಿಸ್ಥತಿ ಒಂದೆಡೆಯಾದರೆ, ಮತ್ತೊಂದೆಡೆ ಹಸಿವಿ(Hungry)ನಿಂದ ಪುಟ್ಟ ಪುಟ್ಟ ಮಕ್ಕಳು(Children's)  ಸಾವನ್ನಪ್ಪುತ್ತಿದ್ದಾರೆ. ಈ ಘನಘೋರ ಪರಿಸ್ಥಿತಿಯಿಂದ ಜನ ಪಾರಾಗುವ ಸಾಧ್ಯತೆ ಕಡಿಮೆಯಿದೆ. ಪ್ರತಿದಿನ ತಾಲಿಬಾನ್​ ಉಗ್ರರ ಕ್ರೌರ್ಯಗಳು ಬಹಿರಂಗಗೊಳ್ಳುತ್ತಲೆ ಇದೆ. ತಾಲಿಬಾನ್​ ಉಗ್ರರ ಆಟಾಟೋಪಕ್ಕೆ ಬ್ರೇಕ್​ ಇಲ್ಲದಂತಾಗಿದೆ. ಆದರೆ ಯಾರಿಗೂ ತಿಳಿಯದ ಹಾಗೇ ಅದೆಷ್ಟೋ ಉಗ್ರ ಕೃತ್ಯಗಳು ಅಫ್ಘಾನಿಸ್ತಾನದಲ್ಲಿ ನಡೆದು ಹೋಗಿದೆ. ಇಂತದ್ದೆ ಬೆಚ್ಚಿ ಬೀಳಿಸುವ ಘಟನೆಯೊಂದನ್ನು ಅಫ್ಘಾನಿಸ್ತಾನ ವಾಲಿಬಾಲ್​ ಕೋಚ್​(Vollyball Coach) ಬಹಿರಂಗಪಡಿಸಿದ್ದಾರೆ.

ವಾಲಿಬಾಲ್​ ಆಟಗಾರ್ತಿಯ ತಲೆ ಕತ್ತರಿಸಿ ಕೊಂದ ಉಗ್ರರು

ಹೌದು ಅಫ್ಘಾನಿಸ್ತಾನ ರಾಷ್ಟ್ರೀಯ ವಾಲಿಬಾಲ್​ ತಂಡದ ಜ್ಯೂನಿಯರ್​ ಆಟಗಾರ್ತಿ ಮಹಜಬಿನ್ ಹಕಿಮಿ ಶಿರಚ್ಚೇದ ಮಾಡಲಾಗಿದೆ. ಇಂತಹದ್ದೊಂದು ಭಯಾನಕ ಕೃತ್ಯದ ಬಗ್ಗೆ ಆಕೆಯ ಕೋಚ್​ ಬಹಿರಂಗಪಡಿಸಿದ್ದಾರೆ. ಮಹಜಬಿನ್ ಹಕಿಮಿ ಕಾಬೂಲ್ ಮುನ್ಸಿಪಾಲಿಟಿ ಕ್ಲಬ್ ಪರ ವಾಲಿಬಾಲ್​ ಆಟವನ್ನು ಆಡುತ್ತಿದ್ದರು. ಆಶ್ರಫ್​ ಘನಿ ಸರ್ಕಾರದ ಸಂದರ್ಭದಲ್ಲಿ ಕ್ಲಬ್​ ಪರ ಆಡುತ್ತಿದ್ದ ಹಕಿಮಿ​ ಸಖತ್​ ಫೇಮ್​ಸ್​​ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದರು. ಆದರೆ ಅಫ್ಘಾನಿಸ್ತಾನವನ್ನು ತಾಲಿಬಾನ್​ ಉಗ್ರರು ತಮ್ಮ ಕೈವಶ ಮಾಡಿಕೊಂಡ ಬಳಿಕ ಹಕಿಮಿ ಸುಳಿವೇ ಇರಲಿಲ್ಲ. ಆಫ್ಘನ್​​ನಲ್ಲಿ ಎಲ್ಲರೂ ಜೀವ ಭಯದಲ್ಲಿ ಬದುಕುವ ಪರಿಸ್ಥಿತಿ ಎದುರಾಗಿತ್ತು. ಇದಾದ ಕೆಲ ದಿನಗಳ ಬಳಿಕ ತಾಲಿಬಾನ್​ ರಕ್ಕಸರು ಆಕೆಯ ಶಿರಚ್ಚೇದನ ಮಾಡಿದ ಫೋಟೋ ಎಲ್ಲೆಡೆ ಹರಿದಾಡತೊಡಗಿತ್ತು ಎಂದು ತಮ್ಮ ಬಗ್ಗೆ ಮಾಹಿತಿ ನೀಡಲು ಇಚ್ಚಿಸದ ವಾಲಿಬಾಲ್​ ಕೋಚ್​ ತಾಲಿಬಾನಿಗಳ ಕರಾಳ ಕೃತ್ಯವನ್ನ ಬಹಿರಂಗಪಡಿಸಿದ್ದಾರೆ.

ಇದನ್ನು ಓದಿ : ತಾಲಿಬಾನಿಗಳಿಂದ ಸೂಸೈಡ್​ ಬಾಂಬರ್​ಗಳ ಕುಟುಂಬಕ್ಕೆ ಹಣ, ಭೂಮಿ ನೀಡುವ ಭರವಸೆ

ವಿಕೃತಿ ಮೆರೆಯುತ್ತಿರುವ ತಾಲಿಬಾನ್ ರಕ್ಕಸರು

ಹಕಿಮಿ ಹತ್ಯೆಯ ಬಳಿ ಇತರ ಮಹಿಳಾ ವಾಲಿಬಾಲ್​ ಆಟಗಾರ್ತಿಯರನ್ನ ನಾನು ಸಂಪರ್ಕಿಸಿದೆ. ಅವರಿಂದ ಹಕಿಮಿ ಕುಟುಂಬಸ್ಥರನ್ನ ಸಂಪರ್ಕಿಸಿ ಸಂಪೂರ್ಣ ಮಾಹಿತಿ ಪಡದುಕೊಂಡೆ. ತಾಲಿಬಾನ್​ ಕ್ರೌರ್ಯಕ್ಕೆ ವಾಲಿಬಾಲ್​ ಆಟಗಾರ್ತಿ ಹಕಿಮಿ ಬಲಿಯಾಗಿದ್ದಾಳೆ. ಆದರೆ ಆಫ್ಘಾನಿಸ್ತಾನ ರಾಷ್ಟ್ರೀಯ ವಾಲಿಬಾಲ್ ಪ್ಲೇಯರ್ ಆಗಿರುವ ಕಾರಣ ಮಾಹಿತಿ ಬಹಿರಂಗ ಪಡಿಸದಂತೆ ತಾಲಿಬಾನ್ ಎಚ್ಚರಿಕೆ ನೀಡಿತ್ತು. ಬಹಿರಂಗ ಪಡಿಸಿದರೇ ಕುಟುಂಬವೇ ಸರ್ವನಾಶ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿತ್ತು ಎಂದು ಕೋಚ್​ ತಿಳಿಸಿದ್ದಾರೆ.

ಇಬ್ಬರು ದೇಶ ತೊರೆದಿದ್ದಾರೆ, ಉಳಿದವರ ಸುಳಿವಿಲ್ಲ!

ಇನ್ನೂ ಉಗ್ರರ ಕ್ರೌರ್ಯಕ್ಕೆ ಅಕ್ಷರಶಃ ಅಫ್ಘಾನಿಸ್ತಾನ ನಲುಗಿಹೋಗಿದೆ. ಆಫ್ಘನ್​ ತಾಲಿಬಾನ್​ ಕೈವಶಕ್ಕೂ ಮುನ್ನ ವಾಲಿಬಾಲ್​ ತಂಡ ಕೇವಲ ಇಬ್ಬರು ಮಹಿಳಾ ಆಟಗಾರ್ತಿಯರು ದೇಶ ತೊರೆದಿದ್ದಾರೆ. ಇನ್ನುಳಿದವರ ಏನಾದರೂ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹಕಿಮಿ ಕೂಡ ದೇಶ ಬಿಟ್ಟು ಹೋಗಲು ಪ್ರಯತ್ನ ನಡೆಸಿದ್ದಾರೆ. ಆರ್ಥಿಕ ಸಂಕಷ್ಟ ಕಾರಣದಿಂದ ಅವರ ಪ್ರಯತ್ನ ವಿಫಲವಾಗಿತ್ತು.

ಇದನ್ನು ಓದಿ : ಅಪಘಾನಿಸ್ತಾನದಲ್ಲಿ ಶತ್ರುಗಳ ಜೊತೆ ಯುದ್ಧವಿಲ್ಲದೇ ತಾಲಿಬಾನಿಗಳು ಏನು ಮಾಡುತ್ತಿದ್ದಾರೆ..?

ತಾಲಿಬಾನ್ ಉಗ್ರರು ಮಹಿಳಾ ಕ್ರೀಡಾಪಟುಗಳು ಹುಡುಕಿ ಹುಡುಕಿ ಹತ್ಯೆ ಮಾಡುತ್ತಿದ್ದಾರೆ. ತಾಲಿಬಾನ್ ಉಗ್ರರ ಕಾನೂನಿನಲ್ಲಿ ಮಹಿಳೆಯರಿಗೆ ಯಾವುದೇ ಸ್ಥಾನವಿಲ್ಲ. ಮಹಿಳಾ ಕ್ರೀಡಾಪಟುಗಳು ಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ. ಮಹಿಳೆಯರಿಗೆ ನಾವು ಯಾವುದೇ ತೊಂದರೆ ಕೊಡಲ್ಲ ಎಂದು ಮಾಧ್ಯಮದ ಮುಂದೆ ಫೋಸ್​ ಕೊಡುವ, ತಾಲಿಬಾನಿಗಳು ಹಿಂದೆ ಈ ರೀತಿಯ ಕೃತ್ಯಗಳ ಮಾಡುತ್ತಿದ್ದಾರೆ.
Published by:Vasudeva M
First published: