No Shave: ಗಡ್ಡ ತೆಗೆಯುವಂತಿಲ್ಲ, ಟ್ರಿಮ್​ ಮಾಡುವಂತಿಲ್ಲ...ಕ್ಷೌರ ಮಾಡಿಸಲೂ ನಿಯಮ ಹೇರಿದ ತಾಲಿಬಾನ್​ಗಳು

Taliban: ಕ್ಷೌರಿಕರು ಹೇರ್ ಕಟ್​​ಮಾಡುವಾಗ ಮತ್ತು ಗಡ್ಡ ಶೇವಿಂಗ್​ ಮಾಡುವಾಗ ಶೆರಿಯಾ ಕಾನೂನು ಅನುಸರಿಸಬೇಕು. ಇದು ಇಸ್ಲಾಮಿಕ್​ ಕಾನೂನಿಗೆ ಪೂರಕ ಎಂದು ಹೆಲ್ಮಾಂಡ್​ ಪ್ರಾಂತ್ಯದ ಸಲೂನ್​ನಲ್ಲಿ ಪ್ರಕಟಿಸಲಾದ ನೋಟೀಸ್​ನಲ್ಲಿ ಹೀಗೆ ಬರೆಯಲಾಗಿದೆ.

AFP via Getty Images

AFP via Getty Images

  • Share this:
    ಅಪ್ಘಾನಿಸ್ತಾನವನ್ನು ತಾಲಿಬಾನ್​ಗಳು ವಶಪಡಿಸಿಕೊಂಡ ನಂತರ ಹಲವಾರು ನಿಯಮಗಳನ್ನು ಬದಲಾಯಿಸಿಕೊಂಡಿದ್ದರೆ. ಅಲ್ಲಿನ ಸಾಮಾನ್ಯರಿಗೆ ಕಟ್ಟುನಿಟ್ಟಾದ ಕ್ರಮವನ್ನು ಹೇರುತ್ತಾ ಬಂದಿದ್ದಾರೆ. ಇದೀಗ ಕ್ಷೌರಿಕರಿಗೂ ಹೊಸ ಆದೇಶ ಹೊರಡಿಸಿದ್ದು, ಕೂದಲು ಕಟ್ಟಿಂಗ್​ ಹಾಗೂ ಗಡ್ಡ ಶೇವಿಂಗ್​ ಮಾಡಲು ನಿಯಮವನ್ನು ಮಾಡಿದ್ದಾರೆ.

    ತಾಲಿಬಾನ್​ ಅಟ್ಟಹಾಸಕ್ಕೆ ಅಲ್ಲಿನ ಜನರು ಕೆಲವು ನಿಯಮವನ್ನು ಒಪ್ಪಿಕೊಂಡು ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ.  ಅದರಂತೆ ಇದೀಗ ಕ್ಷೌರ ಮಾಡುವ ನಿಯಮ ಬದಲಾಗಿದ್ದು, ಜನರು ಗಡ್ಡ ಶೇವ್​ ಮತ್ತು ಟ್ರಿಮ್​ ಮಾಡುವುದನ್ನು ನಿಲ್ಲಿಸಬೇಕು ಎಂದು ಆದೇಶ ಹೊರಡಿಸಿದೆ. ಅಫ್ಘಾನಿನ ಹೆಲ್ಮಾಂಡ್​  ಪ್ರಾಂತ್ಯದಲ್ಲಿ ಈ ನಿಯಮವನ್ನು ತರಲಾಗಿದೆ.

    ಕ್ಷೌರಿಕರು ಹೇರ್ ಕಟ್​​ಮಾಡುವಾಗ ಮತ್ತು ಗಡ್ಡ ಶೇವಿಂಗ್​ ಮಾಡುವಾಗ ಶೆರಿಯಾ ಕಾನೂನು ಅನುಸರಿಸಬೇಕು. ಇದು ಇಸ್ಲಾಮಿಕ್​ ಕಾನೂನಿಗೆ ಪೂರಕ ಎಂದು ಹೆಲ್ಮಾಂಡ್​ ಪ್ರಾಂತ್ಯದ ಸಲೂನ್​ನಲ್ಲಿ ಪ್ರಕಟಿಸಲಾದ ನೋಟೀಸ್​ನಲ್ಲಿ ಹೀಗೆ ಬರೆಯಲಾಗಿದೆ.

    ತಾಲಿಬಾನ್​ಗಳು ಹೇರಿರುವ ಈ ನಿಯಮವನ್ನು ಅಲ್ಲಿನ ಜನರು ಕಡೆಗಣಿಸುವಂತಿಲ್ಲ. ಒಂದು ವೇಳೆ ಶೆರಿಯಾ ಕಾನೂನಿಗೆ ವಿರುದ್ಧವಾಗಿ ವರ್ತಿಸಿದರೆ ಶಿಕ್ಷೆ ಕಟ್ಟಿಟ್ಟಬುತ್ತಿ. ಹಾಗಾಗಿ ಕ್ಷೌರದ ನಿಯಮ ಪಾಲನೆಗಾಗಿ ತಾಲಿಬಾನ್​ಗಳು ಧಾರ್ಮಿಕ ಪೊಲೀಸರನ್ನು ನಿಯೋಜಿಸಿದ್ದಾರೆ.

    ಹೆಲ್ಮಾಂಟ್​ ಮತ್ತು ಕಾಬೂಲ್​ನಲ್ಲೂ ಈ ನಿಯಮವನ್ನು ತಾಲಿಬಾನ್​ಗಳು ಹೇರಿದ್ದಾರೆ. ಎಲ್ಲರು ಈ ನಿಯಮವನ್ನು ಪಪಾಲಿಸಬೇಕು ಎಂದು ಎಚ್ಚರಿಸಿದ್ದಾರೆ. ಇನ್ನು ಕ್ಷೌರದ ನಿಯಮದ ಕುರಿತಾಗಿ ಯಾರೂ ಕೂಡ ದೂರು ನೀಡುವಂತಿಲ್ಲ ಎಂದು ನೋಟೀಸ್​ನಲ್ಲಿ ತಿಳಿಸಿದೆ.

    ತಾಲಿಬಾನ್​ಗಳ ತೊಂದರೆ ಅನೇಕರು ಸಂಕಷ್ಟ ಎದುರಿಸುತ್ತಿದ್ದರು ಅಲ್ಲೇ ಅನಿವಾರ್ಯತೆಯೆ ಬದುಕು ಸಾಗಿಸುತ್ತಿರುವವರು ಅನೇಕರಿದ್ದಾರೆ. ಇದೀಗ ಕ್ಷೌರದ ವಿಚಾರವಾಗಿಯೂ ನಿಯಮಗಳನ್ನು ಹೇರಲಾಗಿದ್ದು, ಇದರಿಂದ ನೊಂದ ಕೆಲವರು ಹೋರಾಟ ಮಾಡುತ್ತಿದ್ದಾರೆ. ಆದರೆ ತಾಲಿಬಾನ್​ಗಳು ಶೆರಿಯಾದಂತೆ ಶೇವಿಂಗ್​ ಹಾಗೂ ಟ್ರಿಮ್​ ಮಾಡಬೇಕು ಎಂದು ಹೇಳಿದ್ದು, ನಿಯಮ ಮೀರಿದರೆ ಬಂಧಿಸಲು ಜನರನ್ನು ನೇಮಿಸಿದ್ದಾರೆ ಎಂದು ಕಾಬೂಲ್​ ಕೌರಿಕರೊಬ್ಬರು ಹೇಳಿದ್ದಾರೆ.

    1996 ರಿಂದ 2002ರವರೆಗೆ ಅಂದರೆ ತಾಲಿಬಾನ್​ ಮೊದಲು ಅಧಿಕಾರದಲ್ಲಿದ್ದಾರೆ ಪುರುಷರಿಗೆ ಕೇಶವಿನ್ಯಾಸವನ್ನು ನಿಷೇಧಿಸಿತ್ತು. ಜೊತೆಗೆ ಗಡ್ಡ ಬೆಳೆಸಬೇಕು ಎಂದು ಅದೇಶಿಶಿತ್ತು. ಇದೀಗ ಅಪ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಮತ್ತೆ ನಿಯಮವನ್ನು ಜಾರಿಗೊಳಿಸಿದೆ.

    ಅಷ್ಟು ಮಾತ್ರವಲ್ಲದೆ, ಸರ್ಕಾರವನ್ನು ರಚನೆ ಮಾಡಿ ಅಡಳಿತ ನಡೆಸಿದೆ. ತಾಲಿಬಾನ್​ಗಳು ಕಾಬೂಲ್​ ವಶಪಡಿಸಿಕೊಂಡ ಸಮಯದಲ್ಲಿ ಅನೇಕರು ಇವರ ನಿಯಮಗಳಿಗೆ ಬಲಿಯಾಗಬಾರದೆಂದು ಅನೇಕ ದೇಶಗಳಿಗೆ ವಲಸ ಹೋಗಿದ್ದಾರೆ. ಸಾಕಷ್ಟು ಸಾವು ನೋವುಗಳು ಅಲ್ಲಿ ಸಂಭವಿಸಿತ್ತು. ಮಾತ್ರವಲ್ಲದೆ ವಿಮಾನದಿಂದ ಹಾರಿ ಕೆಲವರು ಪ್ರಾಣ ಬಿಟ್ಟಿದ್ದರು. ವಿಶ್ವದಾದ್ಯಂತ ತಾಲಿಬಾನ್ ಅಟ್ಟಹಾಸ ದೊಡ್ಡದಾಗಿ ಸುದ್ದಿಯಾಗಿತ್ತು.

    2001 ರ ಬಳಿಕ 20 ವರ್ಷಗಳ ನಂತರ ತಾಲಿಬಾನ್​ಗಳು ಅಪ್ಘಾನಿಸ್ತಾನವನ್ನು ವಶ ಪಡಿಸಿಕೊಳ್ಳುವ ಮೂಲಕ ಮೆರೆಯುತ್ತಿದ್ದಾರೆ. ಸರ್ಕಾರ ರಚನೆ ಮಾಡಿ ಮಧ್ಯಂತರ ಸರ್ಕಾರ ಘೋಷಣೆ ಮಾಡಿದೆ.

    Read Also: Girlfriend On Rent: ಒಂಟಿತನ ಕಾಡುತ್ತಿದ್ಯಾ? ಚಿಂತೆ ಬೇಡ..ಇಲ್ಲಿ ಗರ್ಲ್​​​ಫ್ರೆಂಡ್ ಬಾಡಿಗೆಗೆ ಸಿಗ್ತಾರೆ!

    ಈಗಾಗಲೇ ಹಲವಾರು ನಿಯಮವನ್ನುಗಳು ಅಲ್ಲಿನ ಜನರು ಅನುಸರಿಸುತ್ತಾ ಬಂದದಿದ್ದಾರೆ. ರೇಡಿಯೋ  ಸ್ಟೇಷನ್​ಗಳಲ್ಲಿ ಸಂಗೀತ ಹಾಕುವುದನ್ನು ರದ್ದು ಮಾಡಲಾಗಿದ್ದು, ದೇಶಭಕ್ತಿ ಗೀತೆಯನ್ನು ಹಾಕುವಂತೆ ತಿಳಿಸಿದ್ದಾರೆ. ಮಹಿಳೆಯರಿಗೆ ಉದ್ಯೋಗವನ್ನು ನಿಲ್ಲಿಸಿದೆ. ಮಹಿಳೆಯರು ಕ್ರೀಡೆಗಳಲ್ಲಿ ಭಾಗವಹಿಸದಂತೆ ನಿಷೇಧ ಹೇರಿದೆ.

    ಇನ್ನು ಜೀನ್ಸ್​ ತೊಡುವಂತಿಲ್ಲ. ಯವುದೇ ನಿಯಮ, ಆದೇಶಗಳನ್ನು ವಿರೋಧಿಸಿ ಪ್ರತಿಭಟನೆ ಮಾಡುವಂತಿಲ್ಲ ಎಂದಿದೆ.
    Published by:Harshith AS
    First published: