Taliban: ಅಫ್ಘನ್​ನಲ್ಲಿ ಕೋ- ಎಜುಕೇಶನ್​ ಬಂದ್​: ಮೊದಲ ಫತ್ವಾ ಹೊರಡಿಸಿದ ತಾಲಿಬಾನ್​

ಫರೀದ್ ಸಹ-ಶಿಕ್ಷಣವನ್ನು 'ಸಮಾಜದಲ್ಲಿನ ಎಲ್ಲಾ ಅನಿಷ್ಟಗಳ ಮೂಲ' ಎಂದು ಕರೆದಿದ್ದಾರೆ ಎಂದು ವರದಿ ಹೇಳಿದೆ. ಕಳೆದ ಎರಡು ದಶಕಗಳಲ್ಲಿ, ಅಫ್ಘಾನಿಸ್ತಾನವು ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳಲ್ಲಿ ಸಹ-ಶಿಕ್ಷಣ ಮತ್ತು ಲಿಂಗ ಆಧಾರಿತ ಪ್ರತ್ಯೇಕ ತರಗತಿಗಳ ಮಿಶ್ರ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ತಾಲಿಬಾನ್ ಅಧಿಕಾರಿಗಳು ಶನಿವಾರ ಅಫ್ಘಾನಿಸ್ತಾನದಲ್ಲಿ ತಮ್ಮ ಮೊದಲ 'ಫತ್ವಾ'ವನ್ನು ಹೊರಡಿಸಿದ್ದಾರೆ, ಹೆರಾತ್ ಪ್ರಾಂತ್ಯದ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ಸಹ-ಶಿಕ್ಷಣವನ್ನು ಅಂದರೆ ಹುಡುಗ- ಹುಡುಗಿ ಒಟ್ಟಿಗೆ ಒಂದೇ ಕಡೆ ಓದುವುದನ್ನು ನಿಷೇಧಿಸಲಾಗಿದೆ.

  ’’ಕೋ- ಎಜುಕೇಷನ್​ ಸಮಾಜದಲ್ಲಿನ ಎಲ್ಲಾ ಅನಿಷ್ಟಗಳ ಮೂಲ’’  ಎಂದು ಹೇಳಿರುವ ತಾಲಿಬಾನ್​ ಅಧಿಕಾರಿಗಳು, ದೇಶವು ದೊಡ್ಡ ಹಿಂಜರಿಕೆಗೆ ಒಳಗಾಗುವ ಭಯವನ್ನು ಇದು ಹೆಚ್ಚು ಮಾಡುತ್ತದೆ. ಅಲ್ಲದೇ ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡ ನಂತರ ತಾಲಿಬಾನ್​ ನಾಯಕರುಗಳು ಕೊಟ್ಟಿದ್ದ ಭರವಸೆಗಳ ಹೊರತಾಗಿಯೂ ಈ ಫತ್ವಾ ಹೊರಬಿದ್ದಿದೆ.

  ಅಫ್ಘಾನಿಸ್ತಾನದಲ್ಲಿ ಮಹಿಳಾ ಹಕ್ಕುಗಳನ್ನು ಗೌರವಿಸುವುದಾಗಿ ಭಯೋತ್ಪಾದಕ ಗುಂಪು ಪ್ರತಿಜ್ಞೆ ಮಾಡಿದ ಮೇಲೂ ಕೂಡ ಈ ಘೋಷಣೆ ಬಂದಿರುವುದು ನೋಡಿದರೆ, ಇನ್ನೂ ಮುಂದೆ ಸಾಕಷ್ಟು ಇದೇ ರೀತಿಯ ಫತ್ವಾಗಳು ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು, ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರು ಮತ್ತು ತಾಲಿಬಾನ್ ಅಧಿಕಾರಿಗಳ ನಡುವೆ ನಡೆದ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಖಾಮಾ ಪ್ರೆಸ್ ನ್ಯೂಸ್ ಏಜೆನ್ಸಿ ಶನಿವಾರ ವರದಿ ಮಾಡಿದೆ.


  ಕಳೆದ ವಾರ ಅಫ್ಘಾನಿಸ್ತಾನವನ್ನು ತ್ವರಿತವಾಗಿ ಸ್ವಾಧೀನಪಡಿಸಿಕೊಂಡ ನಂತರ ತಾಲಿಬಾನ್ ಹೊರಡಿಸಿದ ಮೊದಲ ‘ಫತ್ವಾ’ ಇದಾಗಿದೆ. ರಾಜಧಾನಿ ಕಾಬೂಲ್ ಅನ್ನು ಭಾನುವಾರ ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡ ನಂತರ, ಯುಎಸ್​ನ ಸುದೀರ್ಘ ಯುದ್ಧದ ಅಂತ್ಯವನ್ನು ಇದು ಕೊನೆಗಾಣಿಸಿದೆ, ಇದು ಸೆಪ್ಟೆಂಬರ್ 11, 2001 ಭಯೋತ್ಪಾದಕ ದಾಳಿಯ ನಂತರ ಪ್ರಾರಂಭವಾದ ಈ ಸಂಘರ್ಷ ಒಂದು ಹಂತಕ್ಕೆ ಬಂದು ಮುಟ್ಟಿದೆ. ಮಂಗಳವಾರ, ಜಬೀಹುಲ್ಲಾ ಮುಜಾಹಿದ್, ತಾಲಿಬಾನ್‌ನ  ವಕ್ತಾರರು ತಮ್ಮ ಮೊದಲ ಸಾರ್ವಜನಿಕ ಸಮಾವೇಶದ ಸುದ್ದಿಗೋಷ್ಠಿಯಲ್ಲಿ ಆ ಕಳವಳಗಳನ್ನು ಪರಿಹರಿಸಲು ಒಂದಷ್ಟು ಮಾರ್ಗ ಸೂಚಿಗಳನ್ನು ತಿಳಿಸಿದರು, ಇಸ್ಲಾಮಿಕ್ ಕಾನೂನಿನ ನಿಯಮಗಳ ಅಡಿಯಲ್ಲಿ ಮಹಿಳಾ ಹಕ್ಕುಗಳನ್ನು ಗೌರವಿಸುವ ಭರವಸೆ ನೀಡಿದರು, ಹೆಚ್ಚು ಕಡಿಮೆ  ಮಧ್ಯಮ ನಿಲುವನ್ನು ಈ ತಾಲಿಬಾನ್​ ಸಂಘಟನೆಗಳ ಸರ್ಕಾರ ಹೊಂದಬಹುದು ಎಂದು ಹೇಳಲಾಗಿದೆ.

  ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರು, ತಾಲಿಬಾನ್ ಪ್ರತಿನಿಧಿ ಮತ್ತು ಅಫ್ಘಾನಿಸ್ತಾನದ ಉನ್ನತ ಶಿಕ್ಷಣದ ಮುಖ್ಯಸ್ಥರು ನಡೆಸಿದ, ಮೂರು ಗಂಟೆಗಳ ಸಭೆಯ ನಂತರ ಮಾತನಾಡಿದ ಮುಲ್ಲಾ ಫರೀದ್ ಅವರು ಯಾವುದೇ ಪರ್ಯಾಯವಿಲ್ಲ ಮತ್ತು ಸಹ-ಶಿಕ್ಷಣವನ್ನು ಕೊನೆಗೊಳಿಸಬೇಕು ಎಂದು ಹೇಳಿದರು. ಸದ್ಗುಣಶೀಲ ಮಹಿಳಾ ಉಪನ್ಯಾಸಕರಿಗೆ ಕೇವಲ ವಿದ್ಯಾರ್ಥಿನಿಯರಿಗೆ ಮಾತ್ರ ಕಲಿಸಲು ಅವಕಾಶವಿದೆ ಆದರೆ ಪುರುಷರಿಗೆ ಮಾತ್ರ ಕಲಿಸಲು ಎಂದಿಗೂ ಅವಕಾಶವಿಲ್ಲ ಎಂದು ಅವರು ಹೇಳಿದರು.


  ಫರೀದ್ ಸಹ-ಶಿಕ್ಷಣವನ್ನು 'ಸಮಾಜದಲ್ಲಿನ ಎಲ್ಲಾ ಅನಿಷ್ಟಗಳ ಮೂಲ' ಎಂದು ಕರೆದಿದ್ದಾರೆ ಎಂದು ವರದಿ ಹೇಳಿದೆ. ಕಳೆದ ಎರಡು ದಶಕಗಳಲ್ಲಿ, ಅಫ್ಘಾನಿಸ್ತಾನವು ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳಲ್ಲಿ ಸಹ-ಶಿಕ್ಷಣ ಮತ್ತು ಲಿಂಗ ಆಧಾರಿತ ಪ್ರತ್ಯೇಕ ತರಗತಿಗಳ ಮಿಶ್ರ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು.


  ಇದನ್ನೂ ಓದಿ: Explainer: ತಾಲಿಬಾನ್ ಶಕ್ತಿಶಾಲಿ ಮಿಲಿಟರಿ ಪಡೆಯಾಗಿದ್ದು ಹೇಗೆ..? ಅಷ್ಟೊಂದು ಹಣ ಎಲ್ಲಿಂದ ಬರುತ್ತಿದೆ ಗೊತ್ತಾ..?

  ಈ ನಿರ್ಧಾರದಿಂದ ಸರ್ಕಾರಿ ವಿಶ್ವವಿದ್ಯಾನಿಲಯಗಳ ಮೇಲೆ ಏನೂ ಪರಿಣಾಮ ಬೀರುವುದಿಲ್ಲ ಎಂದು ಶಿಕ್ಷಣ ತಜ್ಞರು ಹೇಳಿದ್ದಾರೆ ಆದರೆ ಖಾಸಗಿ ಸಂಸ್ಥೆಗಳು ಈಗಾಗಲೇ ಕಡಿಮೆ ಸಂಖ್ಯೆಯ ವಿದ್ಯಾರ್ಥಿನಿಯರು ಇರುವ ಕಾರಣ ತೊಂದರೆ ಅನುಭವಿಸ ಬೇಕಾಗುತ್ತದೆ. ಹೆರಾತ್, ಅಧಿಕೃತ ಅಂದಾಜಿನ ಪ್ರಕಾರ, ಖಾಸಗಿ ಮತ್ತು ಸರ್ಕಾರಿ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ 40,000 ವಿದ್ಯಾರ್ಥಿಗಳು ಮತ್ತು 2,000 ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: