ಅಫ್ಘಾನಿಸ್ತಾನದ (Afghanistan) ಅಧಿಕಾರಿ ವಶಪಡಿಸಿಕೊಂಡಿರುವ ತಾಲಿಬಾನ್ಗಳು (Taliban) ನಾಳೆ ಅಂದರೆ ಶುಕ್ರವಾರ ಸರ್ಕಾರ ರಚನೆಗೆ ತಯಾರಿ ನಡೆಸಿದ್ದಾರೆ. ಶುಕ್ರವಾರದ ಪವಿತ್ರ ಪ್ರಾರ್ಥನೆ ಬಳಿಕ ಅವರು ಸರ್ಕಾರ ರಚನೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ 15 ದಿನಗಳ ಹಿಂದೆ ಕಾಬೂಲ್ ವಶಪಡಿಸಿಕೊಳ್ಳುವ ಮೂಲಕ ಅವರು 20 ವರ್ಷಗಳ ಬಳಿಕ ದೇಶದ ಆಡಳಿತವನ್ನು ವಶಕ್ಕೆ ಪಡೆದಿದ್ದರು. ಅಮೆರಿಕ ತನ್ನ ಸೇನಾ ನೆಲೆಯನ್ನು ಸ್ಥಳಾಂತರಿಸಲು ಒಪ್ಪಂದ ಮಾಡಿಕೊಂಡಿದ್ದ ತಾಲಿಬಾನ್ಗಳು ಸುರಕ್ಷಿತ ಸ್ಥಳಾಂತರಕ್ಕೆ ನೆರವು ನೀಡುವ ಭರವಸೆ ನೀಡಿದ್ದರು. ಆಗಸ್ಟ್ 31ರವರೆಗೆ ಅವರ ಸ್ಥಳಾಂತ ಕಾರ್ಯ ಮಾಡುವುದಾಗಿ ತಿಳಿಸಿದ್ದರು. ಅಮೆರಿಕಾ ಸಂಪೂರ್ಣ ಸ್ಥಳಾಂತರ ನಡೆಸಿದ ಬಳಿಕ ಈಗ ತಾಲಿಬಾನ್ಗಳ ಸರ್ಕಾರ ರಚನೆಗೆ ಮುಂದಾಗಿದ್ದಾರೆ.
ಅಮೆರಿಕ ಪಡೆಗಳ ನಿರ್ಗಮನದ ಬಳಿಕ ದೇಶದಲ್ಲಿ ಉತ್ತರ ಸರ್ಕಾರ ರಚನೆ ಭರವಸೆ ನೀಡಿರುವ ತಾಲಿಬಾನ್ಗಳು ದೇಶದಲ್ಲಿನ ಆರ್ಥಿಕ ಬಿಕ್ಕಟ್ಟಿನ ನಡುವೆಯೇ ಈಗ ಸರ್ಕಾರ ರಚನೆಗೆ ಮುಂದಾಗಿರುವ ಅವರು, ಅಂತರರಾಷ್ಟ್ರೀಯ ನೆರವಿನ ಎದುರು ನೋಡುತ್ತಿದ್ದಾರೆ.
ಅಫ್ಘಾನ್ನದಲ್ಲಿ ಹೂಡಿಕೆ ಮಾಡಲು ಅಂತರಾಷ್ಟ್ರೀಯ ಹೂಡಿಕೆದಾರರು ಮುಂದಾಗುತ್ತಾರಾ ಎಂಬ ಪ್ರಶ್ನೆ ಕೂಡ ಎದುರಾಗಿದೆ. ಆರ್ಥಿಕ ಕುಸಿತ, ಬರಗಾಲ, ಅಫ್ಘಾನ್ ಯುದ್ಧಗಳು ಹೂಡಿಕೆ ದಾರರರ ಮುಂದೆ ಸವಾಲ್ ಆಗಿವೆ.
ಬೃಹತ್ ಸ್ಥಳಾಂತರಕ್ಕೆ ಯಾವುದೆ ಅಡ್ಡಿ ಮಾಡುವುದಿಲ್ಲ ಎಂದು ತಾಲಿಬಾನ್ ಅಧಿಕಾರ ಚುಕ್ಕಾಣಿ ಹಿಡಿದ ಬಳಿಕ ತಿಳಿಸಿತ್ತು. ಆದರೆ, ವಿಮಾನ ನಿಲ್ದಾಣದಲ್ಲಿ ನಡೆದ ದಾಳಿಗಳ ಬಳಿಕ ಸೋಮವಾರ ಕಾಬೂಲ್ ವಿಮಾನ ನಿಲ್ದಾಣವನ್ನು ಮುಚ್ಚಲಾಯಿತು. ಈ ನಡುವೆ ಜನರು ಗಡಿ ಭಾಗದ ಮೂಲಕ ವಲಸೆ ಹೋಗಲು ಯತ್ನಿಸುತ್ತಿರುವ ಘಟನೆಗಳು ಕಂಡು ಬಂದಿದೆ.
ಇದನ್ನು ಓದಿ: ಪ್ರವಾಹ ಸಂಕಷ್ಟ ನಡುವೆಯೂ ಲಸಿಕೆ; ದೋಣಿಗಳನ್ನೇ ಲಸಿಕಾ ಕೇಂದ್ರ ಮಾಡಿದ ಆರೋಗ್ಯ ಕಾರ್ಯಕರ್ತರು
ಅಫ್ಘಾನ್ನಲ್ಲಿ ಭೀಕರ ಬರಗಾಲದ ಜೊತೆಗೆ ಯುದ್ಧದ ವಾತವಾರಣಗಳಿಂದ ಜನರು ಕಂಗೆಟ್ಟಿದ್ದು, ದೇಶ ತೊರೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಈ ನಡುವೆ ಸರ್ಕಾರ ರಚನೆಗೆ ಮುಂದಾಗಿರುವ ತಾಲಿಬಾನ್ರಿಗೆ ಹಣದ ಅವಶ್ಯಕತೆ ಎದುರಾಗಿದೆ. ಈ ನಡುವೆ ವಿದೇಶದಲ್ಲಿರುವ ಅಫ್ಘಾನ್ ಸೆಂಟ್ರಲ್ ಬ್ಯಾಂಕ್ನ 10 ಬಿಲಿಯನ್ ಸ್ವತ್ತು ಕೂಡ ತಾಲಿಬಾನ್ರಿಗೆ ಕೈ ಸೇರುವ ಸಾಧ್ಯತೆ ತುಂಬಾ ವಿರಳವಾಗಿದೆ.
ಅಫ್ಘಾನಿಸ್ತಾನದ ಒಟ್ಟು ಆಂತರಿಕ ಉತ್ಪನ್ನವು ಈ ಆರ್ಥಿಕ ವರ್ಷದಲ್ಲಿ 9.7% ನಷ್ಟು ಕುಗ್ಗುವ ನಿರೀಕ್ಷೆಯಿದೆ. ಮುಂದಿನ ವರ್ಷದಲ್ಲಿ 5.2% ನಷ್ಟು ಕುಸಿತ ಕಂಡುಬರಲಿದೆ ಎಂದು ರೇಟಿಂಗ್ ಏಜೆನ್ಸಿ ಫಿಚ್ ಗ್ರೂಪ್‌ನ ಸಂಶೋಧನಾ ವಿಭಾಗವಾದ ಫಿಚ್ ಸೊಲ್ಯೂಷನ್ಸ್‌ನ ವರದಿಯಲ್ಲಿ ವಿಶ್ಲೇಷಕರು ಹೇಳಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ