New Passport in Afghanistan: ಅಪ್ಘಾನಿಸ್ತಾನದ ನಾಗರಿಕರಿಗೆ ಹೊಸ ಪಾಸ್‍ಪೋರ್ಟ್ ಮತ್ತು ರಾಷ್ಟ್ರೀಯ ಗುರುತಿನ ಚೀಟಿ: ತಾಲಿಬಾನ್ ಘೋಷಣೆ

New Passport for Afghanistan: ಅಪ್ಘಾನಿಸ್ತಾನವನ್ನು ವಶಕ್ಕೆ ಪಡೆದ ಸುಮಾರು ಒಂದು ತಿಂಗಳಿನ ಬಳಿಕ, ತಾಲಿಬಾನ್ ಸರಕಾರ ಅಲ್ಲಿನ ನಾಗರೀಕರಿಗಾಗಿ ಮತ್ತೊಂದು ನೀತಿಯನ್ನು ಘೋಷಿಸಿದೆ

AFP via Getty Images

AFP via Getty Images

 • Share this:
  ಅಫ್ಘಾನಿಸ್ತಾನದಲ್ಲಿ ಹೊಸತಾಗಿ ರಚನೆಯಾದ ಸರಕಾರ ಎಲ್ಲಾ ಅಫ್ಘಾನ್ ಪ್ರಜೆಗಳಿಗೂ ಒಂದು ಹೊಸ ಪಾಸ್‍ಪೋರ್ಟ್ ಮತ್ತು ರಾಷ್ಟ್ರೀಯ ಗುರುತಿನ ಚೀಟಿಯನ್ನು ನೀಡುವುದಾಗಿ ಘೋಷಣೆ ಮಾಡಿದೆ. ತಾಲಿಬಾನ್ ಸರಕಾರ ನೀಡುವ ಆ ಹೊಸ ಪಾಸ್‍ಪೋರ್ಟ್ ಮತ್ತು ರಾಷ್ಟ್ರೀಯ ಗುರುತಿನ ಚೀಟಿಯಲ್ಲಿ “ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನ್” ಎಂದು ಬರೆದಿರುತ್ತದೆ.

  ಅಪ್ಘಾನಿಸ್ತಾನವನ್ನು ವಶಕ್ಕೆ ಪಡೆದ ಸುಮಾರು ಒಂದು ತಿಂಗಳಿನ ಬಳಿಕ, ತಾಲಿಬಾನ್ ಸರಕಾರ ಅಲ್ಲಿನ ನಾಗರೀಕರಿಗಾಗಿ ಮತ್ತೊಂದು ನೀತಿಯನ್ನು ಘೋಷಿಸಿದೆ. ಅಪ್ಘಾನಿಸ್ತಾನದಲ್ಲಿ ಹೊಸತಾಗಿ ರಚನೆಯಾದ ಸರಕಾರವು ಎಲ್ಲಾ ಅಪ್ಘಾನ್ ಪ್ರಜೆಗಳಿಗೂ ಒಂದು ಹೊಸ ಪಾಸ್‍ಪೋರ್ಟ್ ಮತ್ತು ರಾಷ್ಟ್ರೀಯ ಗುರುತಿನ ಚೀಟಿಯನ್ನು ನೀಡುವುದಾಗಿ ಘೋಷಣೆ ಮಾಡಿದೆ.

  ತಾಲಿಬಾನ್ ಸರಕಾರ ನೀಡುವ ಆ ಹೊಸ ಪಾಸ್‍ಪೋರ್ಟ್ (New Passport for Afghanistan Citizens) ಮತ್ತು ರಾಷ್ಟ್ರೀಯ ಗುರುತಿನ ಚೀಟಿಯಲ್ಲಿ “ಇಸ್ಲಾಮಿಕ್ ಎಮಿರೇಟ್ ಆಫ್ ಅಪ್ಘಾನಿಸ್ತಾನ್” (Islamic Emirate of Afghanistan) ಎಂದು ಬರೆದಿರುತ್ತದೆ. ಈ ಹಿಂದೆ ಅಪಘಾನಿಸ್ತಾನದಲ್ಲಿ ಆಡಳಿತ ಮಾಡುತ್ತಿದ್ದ ಸರಕಾರ ನೀಡಿದ್ದ ಪಾಸ್‍ಪೋರ್ಟ್ ಮತ್ತು ರಾಷ್ಟ್ರೀಯ ಗುರುತಿನ ಚೀಟಿಯಲ್ಲಿ “ರಿಪಬ್ಲಿಕ್ ಆಫ್ ಅಫ್ಘಾನ್” (Republic of Afghanistan) ಎಂಬ ಹೆಸರಿತ್ತು. ಅದನ್ನು ಬದಲಾಯಿಸುವ ಉದ್ದೇಶ ತಾಲಿಬಾನ್‍ನದ್ದು. ಅಪ್ಘಾನ್ ಪಾಸ್‍ಪೋರ್ಟ್ ಮತ್ತು ರಾಷ್ಟ್ರೀಯ ಗುರುತಿನ ಚೀಟಿಗಳು “ ಇಸ್ಲಾಮಿಕ್ ಎಮಿರೇಟ್ ಆಫ್ ಅಪ್ಘಾನಿಸ್ತಾನ್” ಎಂಬ ಹೆಸರನ್ನು ಹೊಂದುವ ಸಾಧ್ಯತೆ ಇದೆ ಎಂದು ತಾಲಿಬಾನ್ ಸರಕಾರದ ಮಾಹಿತಿ ಮತ್ತು ಸಂಸ್ಕೃತಿ ಇಲಾಖೆಯ ಉಪ ಮಂತ್ರಿ ಹಾಗೂ ತಾಲಿಬಾನ್‍ನ ವಕ್ತಾರ ಜಬಿಯುಲ್ಲಾ ಮುಜಾಹಿದ್ ಹೇಳಿರುವುದಾಗಿ ಖಾಮಾ ಪ್ರೆಸ್ ನ್ಯೂಸ್ ಏಜನ್ಸಿ ವರದಿ ಮಾಡಿದೆ.

  ಈ ಮಧ್ಯೆ, ಹಿಂದೆ ಅಪ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿದ್ದ ಸರಕಾರ ಕೊಡ ಮಾಡಿದ್ದ ರಾಷ್ಟ್ರೀಯ ಗುರುತಿನ ಚೀಟಿಗಳು ಮತ್ತು ಪಾಸ್‍ಪೋರ್ಟ್‍ಗಳು ಸದ್ಯದ ಮಟ್ಟಿಗೆ ಮಾತ್ರ ಮಾನ್ಯವಾಗಿವೆ ಎಂದು ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಪ್ಘಾನಿಸ್ತಾನ್ ತಿಳಿಸಿದೆ. ತಾಲಿಬಾನ್ ಸರಕಾರದ ಮಾಹಿತಿ ಮತ್ತು ಸಂಸ್ಕೃತಿ ಇಲಾಖೆಯ ಉಪ ಮಂತ್ರಿ ಹಾಗೂ ತಾಲಿಬಾನ್‍ನ ವಕ್ತಾರ ಜಬಿಯುಲ್ಲಾ ಮುಜಾಹಿದ್ ಅವರು, ಹಿಂದಿನ ಅಪಘಾನ್ ಸರಕಾರ ಬಿಡುಗಡೆ ಮಾಡಿದ್ದ ದೇಶದ ಕಾನೂನು ದಾಖಲೆಗಳು ಇಂದಿಗೂ ಮಾನ್ಯವಾಗಿವೆ ಎಂದು ಹೇಳಿರುವುದಾಗಿ ಖಾಮಾ ಪ್ರೆಸ್ ನ್ಯೂಸ್ ಏಜನ್ಸಿ ವರದಿ ಮಾಡಿದೆ.

  ಇದನ್ನೂ ಓದಿ: ಲಡಾಕ್ ಗಡಿಯಲ್ಲಿ ಸೇನಾ ಶಿಬಿರ ನಿರ್ಮಾಣಕ್ಕೆ ಮುಂದಾದ ಚೀನಾ; 8 ಕಡೆ 84 ಟೆಂಟ್​​ಗಳು!

  ಅಪ್ಘಾನಿಸ್ತಾನದ ಪಾಸ್‍ಪೋರ್ಟ್ ಮತ್ತು ರಾಷ್ಟ್ರೀಯ ಗುರುತಿನ ಚೀಟಿ ವಿಭಾಗಗಳು ಇಂದಿಗೂ ಮುಚ್ಚಿದ ಸ್ಥಿತಿಯಲ್ಲೇ ಇದ್ದು, ಆದರೆ ತಮ್ಮ ಬಯೋಮೆಟ್ರಿಕ್ ಮಾಡಿದವರು ಮಾತ್ರ ಪಾಸ್‍ಪೋರ್ಟ್ ಮತ್ತು ರಾಷ್ಟ್ರೀಯ ಗುರುತಿನ ಚೀಟಿ ಪಡೆದುಕೊಳ್ಳಬಹುದು. ಪಾಸ್‍ಪೋರ್ಟ್ ಮತ್ತು ರಾಷ್ಟ್ರೀಯ ಗುರುತಿನ ಚೀಟಿ ಅಪ್‍ಡೇಟ್ ಮಾಡುವ ಪ್ರಕ್ರಿಯೆಯ ಕುರಿತು ತಾಲಿಬಾನ್ ಸರಕಾರದ ಅಧಿಕಾರಿಗಳು ಅಲ್ಲಿನ ನಾಗರೀಕರಿಗೆ ಸೂಕ್ತ ಸಮಯದಲ್ಲಿ ಸೂಚನೆ ನೀಡುತ್ತಾರೆ.

  ಇದನ್ನೂ ಓದಿ: ಗಡ್ಡ ತೆಗೆಯುವಂತಿಲ್ಲ, ಟ್ರಿಮ್​ ಮಾಡುವಂತಿಲ್ಲ...ಕ್ಷೌರ ಮಾಡಿಸಲೂ ನಿಯಮ ಹೇರಿದ ತಾಲಿಬಾನ್​ಗಳು

  ಕಾಬೂಲನ್ನು ತಾಲಿಬಾನ್ ವಶಪಡಿಸಿಕೊಂಡ ದಿನದಿಂದ ಅಪ್ಘಾನಿಸ್ತಾನ ಅವ್ಯವಸ್ಥೆ ಮತ್ತು ಅಡಚಣೆಯ ಸ್ಥಳವಾಗಿ ಪರಿವರ್ತನೆ ಆಗಿದೆ. ಅಲ್ಲಿನ ಪ್ರಜೆಗಳು ಭಯ ಮತ್ತು ಗೊಂದಲದಿಂದ ನಿತ್ಯವೂ ಒದ್ದಾಡುತ್ತಿದ್ದಾರೆ. ಈ ತಿಂಗಳ ಆರಂಭದಲ್ಲಿ, ತಾಲಿಬಾನ್ ನಾಯಕ ಹಾಗೂ ಸಹ ಸಂಸ್ಥಾಪಕ ಮುಲ್ಲಾ ಬರಾದರ್ ಅವರ ನಿಧನದ ವದಂತಿಗಳು ಎಲ್ಲೆಡೆ ಹರಡಿದ್ದವು. ಅದಕ್ಕೆ ತಕ್ಕಂತೆ ಮುಲ್ಲಾ ಬರಾದಾರ್ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ, ನಾಪತ್ತೆ ಆಗಿದ್ದರು. ಆದರೆ ಮುಲ್ಲಾ ಬರಾದರ್, ಸ್ವತಃ ತಾನು ಕ್ಷೇಮವಾಗಿದ್ದೇನೆ ಎಂದು ಹೇಳಿರುವ ವಿಡಿಯೋವೊಂದನ್ನು ಬಿಡುಗಡೆ ಮಾಡುವ ಮೂಲಕ, ತನ್ನ ಸಾವಿನ ಕುರಿತ ವದಂತಿಗಳನ್ನು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.
  Published by:Sharath Sharma Kalagaru
  First published: