ಮಹಿಳೆಯರಷ್ಟೇ ಅಲ್ಲ, ಶಾಲಾ- ಕಾಲೇಜುಗಳನ್ನು ಕಂಡರೂ ತಾಲಿಬಾನಿಗಳಿಗೆ ಅಲರ್ಜಿ: ಇಲ್ಲಿದೆ ಸಂಪೂರ್ಣ ವರದಿ

2002 ರ ನಂತರದ ಆರಂಭಿಕ ವರ್ಷಗಳಲ್ಲಿ ಲಕ್ಷಾಂತರ ಜನರು ಶಾಲೆಗೆ ಸೇರಿಕೊಂಡರು, ಹೆಚ್ಚುತ್ತಿರುವ ಅಭದ್ರತೆ ಸೇರಿದಂತೆ, ಜೀವನ ನಿರ್ವಹಣೆ, ಜೀವ ಭಯದ ಕಾರಣದಿಂದಾಗಿ 2014 ರ ನಂತರ ರಾಷ್ಟ್ರವ್ಯಾಪಿಯಲ್ಲಿ ವರದಿಗಳನ್ನು ನೋಡುತ್ತಾ ಹೋದರೆ ಶಾಲೆಯಲ್ಲಿ ಹುಡುಗಿಯರ ಸಂಖ್ಯೆ ತೀರ ಕೆಳಗೆ ಕುಸಿಯಲಾರಂಭಿಸಿತು , ತಾರತಮ್ಯ, ಭ್ರಷ್ಟಾಚಾರ ಮತ್ತು ಕಡಿಮೆಯಾದ ಧನಸಹಾಯದಿಂದ ಈ ಕುಸಿತ ಕಂಡು ಬಂದಿತು ಎಂದು ಹೇಳಲಾಗುತ್ತಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:

  ತಾಲಿಬಾನ್ ತನ್ನ ಅಕ್ಕ-ಪಕ್ಕದ ದೇಶಗಳಿಗೆ ಹಾಗೂ ಇತರೇ ಹೊರ ದೇಶಗಳಿಗೆ ಹೊಸದಾಗಿ ತನ್ನ  ಕ್ಲೀನರ್ ಇಮೇಜ್ ಅನ್ನು ಚಿತ್ರಿಸಲು ಪ್ರಯತ್ನಿಸುತ್ತಿದೆ, ಇದೇ ಉಗ್ರಗಾಮಿ ಗುಂಪು ಕಳೆದ 20 ವರ್ಷಗಳ ಹಿಂದೆ ನಡೆಸಿದ ಕುಖ್ಯಾತ ಆಡಳಿತದಿಂದ ಬಂದಿರುವ ತನ್ನ ಕೆಟ್ಟ ಇಮೇಜ್​ಅನ್ನು ಸಂಪೂರ್ಣವಾಗಿ ಕೈ ತೊಳೆದುಕೊಳ್ಳಲು ಪ್ರಯತ್ನಿಸುತ್ತಿದೆ.


  ಆದ ಕಾರಣ ತಾಲಿಬಾನ್​ ನಾಯಕರುಗಳು ಹೆಚ್ಚಾಗಿ ತಮ್ಮ ಚರ್ಚೆಯನ್ನು ಮಹಿಳಾ ಸುರಕ್ಷತೆ ಮತ್ತು ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದಾರೆ, ಆದರೆ ಒಂದಷ್ಟು ವಲಯಗಳ ತಜ್ಞರು ಶಿಕ್ಷಣದ ಮೇಲೆ ಆಗಬಹುದಾದ ಹಾನಿಕಾರಕ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.


  2009 ರಿಂದ ಫೆಬ್ರವರಿಯಲ್ಲಿ ಪ್ರಕಟವಾದ 'ತಾಲಿಬಾನ್ ವರ್ತನೆಗಳು ಮತ್ತು ಶಿಕ್ಷಣದ ಬಗೆಗಿನ ನೀತಿಗಳು' ಎಂಬ ಹೆಸರಿನ ಸಶಸ್ತ್ರ ಗುಂಪುಗಳ ಅಧ್ಯಯನ ಕೇಂದ್ರ ಹೊರಡಿಸುವ ಪತ್ರಿಕೆಯ ಪ್ರಕಾರ, 2009 ರಿಂದ, ತಾಲಿಬಾನ್  ಶಿಕ್ಷಣ ಹಾಗೂ ಶಾಲೆಯ ಮೇಲಿನ ದಾಳಿ ಮತ್ತು ಶಾಲೆಗಳನ್ನು ಮುಚ್ಚುವುದಕ್ಕೆ ವಿರೋಧ ವ್ಯಕ್ತಪಡಿಸಿದೆ. ಪ್ರಸ್ತುತ ನೀತಿಯು ಶಾಲೆಗಳನ್ನು ತೆರೆಯಲು ಮತ್ತು ಶಿಕ್ಷಣದ ಪ್ರವೇಶಕ್ಕೆ ಮುಕ್ತ ಅವಕಾಶವನ್ನು ಒತ್ತು ನೀಡುತ್ತದೆ  ಎಂದು ಹೇಳಲಾಗಿದೆ.

  ಆದಾಗ್ಯೂ, ತಾಲಿಬಾನ್‌ನ ವಿರುದ್ದ ಹೋರಾಡುತ್ತಿರುವ ಶತ್ರು ಹೋರಾಟಗಾರನು ಶೈಕ್ಷಣಿಕ ಪ್ರದೇಶಗಳನ್ನು ಆಕ್ರಮಿಸಿಕೊಂಡರೆ, ಅದು ಅದರ ಸಂರಕ್ಷಿತ ಸ್ಥಾನಮಾನವನ್ನು ಕಳೆದುಕೊಂಡು ಅದರ ಮೇಲೆ ದಾಳಿ ಮಾಡಬಹುದು ಎಂದು ಹೇಳಿದೆ.


  ಇದು ಶಾಲೆಗಳು ಮತ್ತು ಶಿಕ್ಷಣ ಸಿಬ್ಬಂದಿಯ ರಕ್ಷಣೆಗೆ ಸಂಬಂಧಿಸಿದ ಇತರ ತಾಲಿಬಾನ್ ಸಾರ್ವಜನಿಕ ಹೇಳಿಕೆಗಳ ಜೊತೆಗೆ ಈ ವಿಚಾರಕ್ಕೂ ಬದ್ದವಾಗಿದೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಶಾಲೆಗಳು ಬಾಗಿಲು ಹಾಕಿಕೊಂಡಿವೆ. ಆದರೆ ಇದರ ಬೆನ್ನಲ್ಲೇ ಉಗ್ರರಿಂದ (ಮುಚ್ಚಿದ) ಶಾಲೆಗಳ ಮೇಲೆ ಆಕ್ರಮಣ ಹೆಚ್ಚಾಗುವ ಸೂಚನೆಗಳೂ ಇವೆ ಎಂದು ಹೇಳಲಾಗುತ್ತಿದೆ.

  ಚುನಾವಣೆಯಲ್ಲಿ ಶಾಲೆಗಳನ್ನು ಮತದಾನ ಕೇಂದ್ರಗಳಾಗಿ ಬಳಕೆ ಮಾಡುವ ಕಾರಣ ತಾಲಿಬಾನಿಗಳು ಶಾಲೆಗಳ ಮೇಲಿನ ದಾಳಿಯನ್ನು ಕಾನೂನುಬದ್ಧ ಗುರಿಗಳೆಂದು ಪರಿಗಣಿಸಿದ್ದಾರೆ. ಉದಾಹರಣೆಗೆ, 2018 ರ ಸಂಸತ್ತಿನ ಚುನಾವಣೆಗಳಲ್ಲಿ, 92 ಪ್ರಕರಣಗಳು ಇದೇ ರೀತಿಯ ದಾಳಿಗೆ ಸಂಬಂಧಿಸಿವೆ,  ಚುನಾವಣೆ ನಡೆಯುತ್ತಿದ್ದ ಹೊತ್ತಿನಲ್ಲೇ ಘಟನೆಗಳು ನಡೆದ ಬಗ್ಗೆ ವರದಿ ಮಾಡಿದೆ, ಅವುಗಳಲ್ಲಿ ಹೆಚ್ಚಿನವು ತಾಲಿಬಾನ್ (UNAMA ಮಾನವ ಹಕ್ಕುಗಳ ಉಲ್ಲಂಘನೆ, 2019) ಮಾಡಿರುವುದಕ್ಕೆ ನೇರ ಉದಾಹರಣೆಗಳು ಎಂದು ಹೇಳಲಾಗುತ್ತಿದೆ.

  2019 ರಲ್ಲಿ, ಅಧ್ಯಕ್ಷೀಯ ಚುನಾವಣೆಗಳು ನಡೆದಾಗ, ಯುಎನ್ ಯು ಚುನಾವಣೆಗೆ ಸಂಬಂಧಿಸಿದ 21 ಹಿಂಸಾಚಾರಗಳನ್ನು ವರದಿ ಮಾಡಿತು, ಇದು ಹೆಚ್ಚಿನಂಶ ಶಾಲೆಗಳ ಮೇಲೆ ಪರಿಣಾಮ ಬೀರಿತು, ಈ ಘಟನೆಗಳಿಗೆ ಯಾರು ಜವಾಬ್ದಾರರು ಎಂದು ನಿರ್ದಿಷ್ಟಪಡಿಸದೆ ಇದ್ದರೂ ತೆರೆ ಮರೆಯ ಆಟ ಎಲ್ಲರಿಗೂ ತಿಳಿದೆ ಇದೆ. (UNAMA ಮಾನವ ಹಕ್ಕುಗಳು, 2020 ವರದಿ ಪ್ರಕಾರ)


  ಯುಎನ್, ನ್ಯೂಯಾರ್ಕ್ ಟೈಮ್ಸ್ ಮತ್ತು ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆಗಳು, ನಡೆಸಿದ ವರದಿ ಹಾಗೂ ಸಮೀಕ್ಷೆಗಳಲ್ಲಿ, ದಂಗೆಕೋರರು ಶಾಲೆಗಳ ಮೇಲೆ ನಡೆಸಿದ ದಾಳಿ, ಬೆದರಿಕೆ ಅಥವಾ ಮುಚ್ಚಿದ ನಿದರ್ಶನಗಳನ್ನು ದಾಖಲಿಸಿದ್ದಾರೆ.


  2002 ರಿಂದ, ಅಫಘಾನ್ ಸರ್ಕಾರದ ನಿಯಂತ್ರಣದಲ್ಲಿರುವ ನಗರಗಳಲ್ಲಿ, ಲಕ್ಷಾಂತರ ಅಫಘಾನ್ ಹುಡುಗಿಯರು ಶಾಲೆಗೆ ಹೋಗಿದ್ದಾರೆ ಮತ್ತು ಅಫ್ಘಾನಿಸ್ತಾನದ ಮಹಿಳೆಯರು ರಾಜಕೀಯ ಅಧಿಕಾರ ಅನುಭವಿಸಿದ್ದಾರೆ, ಇದೆಲ್ಲಾ ಸೇರಿದಂತೆ ಸಾರ್ವಜನಿಕ ಜೀವನದಲ್ಲಿ ಭಾಗವಹಿಸಿದ್ದಾರೆ, ಅಫ್ಘಾನಿಸ್ತಾನದ ಇತಿಹಾಸದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಈ ಐತಿಹಾಸಿಕ ಘಟನೆಗಳು ನಡೆದಿವೆ.


  ಆದರೂ ಈ ಬೆಳವಣಿಗೆ ಭಾಗಶಃ ಮತ್ತು ಸರ್ಕಾರೀ-ನಿಯಂತ್ರಿತ ಪ್ರದೇಶಗಳಲ್ಲಿ ಬರು ಬರುತ್ತಾ ದುರ್ಬಲವಾಗುತ್ತಾ ಬಂದಿತು ಸರ್ಕಾರದ ನಿರಂತರ ಪ್ರಯತ್ನಗಳು ಮತ್ತು ದಾನಿಗಳ ಧನಸಹಾಯದ ಕಾರ್ಯಕ್ರಮಗಳು ಶಾಲೆಯಲ್ಲಿ ಹುಡುಗಿಯರ ಸಂಖ್ಯೆಯನ್ನು ಒಂದು ರೀತಿಯಲ್ಲಿ ನಾಟಕೀಯ ಬೆಳವಣಿಗೆ ಅಂದರೆ, ದಿಡೀರ್​ ಏರಿಕೆಗೆ ಕಾರಣವಾದವು,

  2002 ರ ನಂತರದ ಆರಂಭಿಕ ವರ್ಷಗಳಲ್ಲಿ ಲಕ್ಷಾಂತರ ಜನರು ಶಾಲೆಗೆ ಸೇರಿಕೊಂಡರು, ಹೆಚ್ಚುತ್ತಿರುವ ಅಭದ್ರತೆ ಸೇರಿದಂತೆ, ಜೀವನ ನಿರ್ವಹಣೆ, ಜೀವ ಭಯದ ಕಾರಣದಿಂದಾಗಿ 2014 ರ ನಂತರ ರಾಷ್ಟ್ರವ್ಯಾಪಿಯಲ್ಲಿ ವರದಿಗಳನ್ನು ನೋಡುತ್ತಾ ಹೋದರೆ ಶಾಲೆಯಲ್ಲಿ ಹುಡುಗಿಯರ ಸಂಖ್ಯೆ ತೀರ ಕೆಳಗೆ ಕುಸಿಯಲಾರಂಭಿಸಿತು , ತಾರತಮ್ಯ, ಭ್ರಷ್ಟಾಚಾರ ಮತ್ತು ಕಡಿಮೆಯಾದ ಧನಸಹಾಯದಿಂದ ಈ ಕುಸಿತ ಕಂಡು ಬಂದಿತು ಎಂದು ಹೇಳಲಾಗುತ್ತಿದೆ.

  ಹ್ಯೂಮನ್ ರೈಟ್ಸ್ ವಾಚ್ ಮತ್ತು ಇತರರ ಸಂಶೋಧನೆಯು ಅಫ್ಘಾನಿಸ್ತಾನದಲ್ಲಿ ಶಿಕ್ಷಣಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ತನ್ನ ವರದಿಯಲ್ಲಿ ಹೇಳಿದೆ, ಇದರಲ್ಲಿ ದೇಶದ ಅನೇಕ ಭಾಗಗಳಲ್ಲಿ ಹುಡುಗಿಯರ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟಿರುವ ಅಂಶವೂ ಸೇರಿದೆ.

  "ಸಮುದಾಯ ಆಧಾರಿತ ಶಿಕ್ಷಣ" ವನ್ನು ಬೆಂಬಲಿಸುವ NGO ಗಳು ಹೆಚ್ಚಾಗಿ ಅಭದ್ರತೆ ಕಾಡುತ್ತಿರುವ ಪ್ರದೇಶಗಳು ಸೇರಿದಂತೆ, ಕೌಟುಂಬಿಕ ಪ್ರತಿರೋಧದಿಂದಾಗಿ ಸರ್ಕಾರಿ ಶಾಲೆಗಳಿಗೆ ಹಾಜರಾಗಲು ಸಾಧ್ಯವಾಗದ ಪ್ರದೇಶಗಳಲ್ಲಿ ಹುಡುಗಿಯರು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಹೋಗಲು ಅನುವು ಮಾಡಿಕೊಡುವಲ್ಲಿ ಹೆಚ್ಚು ಯಶಸ್ವಿಯಾಗಿದ್ದಾರೆ.  ಆದರೆ ಈ ಶಾಲೆಗಳನ್ನು ರಾಜ್ಯ ಶಿಕ್ಷಣ ವ್ಯವಸ್ಥೆಯಲ್ಲಿ ಸಂಯೋಜಿಸಲು ಸರ್ಕಾರ ವಿಫಲವಾಗಿರುವುದು ಹೆಚ್ಚು ಕಂಡು ಬರುತ್ತಿದೆ, ಈ ಶಾಲೆಗಳಿಗೆ ಅಸಮಂಜಸವಾದ ಧನಸಹಾಯ ಹಾಗೂ ಸರ್ಕಾರದ ಸರಿಯಾದ ಬೆಂಬಲ ಇಲ್ಲದೇ ಇರುವುದು ಕೂಡ ಅನೇಕ ಹುಡುಗಿಯರು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದೆ ಎಂದು ಈ ವರದಿ ಹೇಳಿದೆ.

  ತಾಲಿಬಾನ್ ಅಧಿಕೃತವಾಗಿ ತಾವು ಇನ್ನು ಮುಂದೆ ಬಾಲಕಿಯರ ಶಿಕ್ಷಣವನ್ನು ವಿರೋಧಿಸುವುದಿಲ್ಲ ಎಂದು ಹೇಳಿದ್ದರೂ, ಕೆಲವೇ ಕೆಲವು ತಾಲಿಬಾನ್ ಅಧಿಕಾರಿಗಳು ಹುಡುಗಿಯರು ಪ್ರೌ ಡವಸ್ಥೆಗೆ ತಲುಪುವುದಕ್ಕಿಂತ ಮುಂಚಿತವಾಗಿ ಶಾಲೆಗೆ ಹೋಗಲು ಅನುಮತಿ ನೀಡುವುದಾಗಿ ಹೇಳಿದ್ದಾರೆ. ಪ್ರೌಡವಸ್ಥೆಗೆ ತಲುಪಿದ ಬಾಲಕಿಯರು ಶಾಲೆಗಳಿಗೆ ಹೋಗಲು ಅನುಮತಿ ನೀಡುವುದಿಲ್ಲ ಎನ್ನುವುದು ಕಾಡುತ್ತಿರುವ ಅನುಮಾನ.


  ಇದನ್ನೂ ಓದಿ: NEET 2021: ನೀಟ್ ಎಕ್ಸಾಂ ಸೆಂಟರ್, ಪರೀಕ್ಷೆಗೆ ತಯಾರಾಗುವ ಬಗ್ಗೆ ನಿಮ್ಮೆಲ್ಲಾ ಗೊಂದಲಗಳಿಗೆ ಇಲ್ಲಿದೆ ಉತ್ತರ

  ಕೆಲವು ಜಿಲ್ಲೆಗಳಲ್ಲಿ, ತಾಲಿಬಾನ್‌ಗಳು ಶಿಕ್ಷಕರ ವೇತನದ ಮೇಲೆ "ತೆರಿಗೆ" ವಿಧಿಸಿದ್ದಾರೆ ಮತ್ತು ಹತ್ತಿರದ ಸರ್ಕಾರಿ ನಿಯಂತ್ರಣದಲ್ಲಿರುವ ಶಾಲೆಗಳಲ್ಲಿ ಪಾಠ ಮಾಡುವ ಶಿಕ್ಷಕರು ಮತ್ತು ನಿವಾಸಿಗಳಿಗೆ ಬೆದರಿಕೆ ಹಾಕಿದ್ದಾರೆ.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: