• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Rising India: ದೇಶದಲ್ಲಿ ಅಪಘಾತಗಳು ಕಡಿಯಾಗಬೇಕಾದ್ರೆ ಈ ನಿಯಮಗಳನ್ನು ಪಾಲಿಸಲೇಬೇಕು, ರೈಸಿಂಗ್ ಇಂಡಿಯಾ ಸಮಾವೇಶದಲ್ಲಿ ನಿತಿನ್​ ಗಡ್ಕರಿ ಕರೆ

Rising India: ದೇಶದಲ್ಲಿ ಅಪಘಾತಗಳು ಕಡಿಯಾಗಬೇಕಾದ್ರೆ ಈ ನಿಯಮಗಳನ್ನು ಪಾಲಿಸಲೇಬೇಕು, ರೈಸಿಂಗ್ ಇಂಡಿಯಾ ಸಮಾವೇಶದಲ್ಲಿ ನಿತಿನ್​ ಗಡ್ಕರಿ ಕರೆ

ನಿತಿನ್​ ಗಡ್ಕರಿ

ನಿತಿನ್​ ಗಡ್ಕರಿ

ವಿದೇಶಗಳಲ್ಲಿ ಪ್ರಯಾಣದ ವೇಳೆ ಹೆಲ್ಮೆಟ್, ಸೀಟ್​ಬೆಲ್ಟ್​ಗಳನ್ನು ಧರಿಸುತ್ತಾರೆ. ಆದರೆ ನಮ್ಮಲ್ಲಿ, ಜನರು ಕಾನೂನನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಕೇಂದ್ರ ಸಚಿವ ನಿತಿನ್​ ಗಡ್ಕರಿ ಬೇಸರ ವ್ಯಕ್ತಪಡಿಸಿದ್ದಾರೆ.

  • News18 Kannada
  • 4-MIN READ
  • Last Updated :
  • Mumbai, India
  • Share this:

ಮುಂಬೈ: ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು (Accident) ಹೆಚ್ಚಾಗುತ್ತಿವೆ. ಈ ಎಲ್ಲಾ ಅಪಘಾತಗಳು ಮಾನವ ತಪ್ಪುಗಳಿಂದಲೇ (Human Error) ಆಗುತ್ತಿವೆ. ಅವಸರ, ವೇಗದಿಂದ ಅಮಾಯಕರು ಜೀವ ಕಳೆದುಕೊಂಡು, ತಮ್ಮನ್ನು ನಂಬಿಕೊಂಡವರನ್ನು ಬೀದಿಪಾಲು ಮಾಡುತ್ತಿದ್ದಾರೆ. ಕುಡಿದು ವಾಹನ ಚಾಲನೆ (Drunk and Drive) ಮಾಡುವುದು, ಮೊಬೈಲ್‌ನಲ್ಲಿ ಮಾತನಾಡುತ್ತಾ ಚಾಲನೆ ಮಾಡುವ ಮೂಲಕ ತಮ್ಮ ಜೀವಕ್ಕೆ ತಾವೇ ಕುತ್ತು ತಂದುಕೊಳ್ಳುತ್ತಿದ್ದಾರೆ. ಬುಧವಾರ ನಡೆದ ನ್ಯೂಸ್ 18 ರೈಸಿಂಗ್ ಇಂಡಿಯಾದ (News18 Rising India) ಮೂರನೇ ಆವೃತ್ತಿಯ ವಿಶೇಷ ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತನಾಡುವ ವೇಳೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ( Nitin Gadkari), ಜನರಿಗೆ ಕಾನೂನಿನ ಬಗ್ಗೆ ಭಯ ಅಥವಾ ಗೌರವವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


ಟ್ರಾಫಿಕ್ ಸಿಗ್ನಲ್ ಪಾಲಿಸಲು ಮನವಿ


ನೀವು ಟ್ರಾಫಿಕ್ ಸಿಗ್ನಲ್​ಗಳನ್ನು (Traffic Signal) ತಪ್ಪದೇ ಪಾಲಿಸಬೇಕು. ಹೊರ ದೇಶಗಳಲ್ಲಿ ವಯಸ್ಸಾದವರು ರಸ್ತೆ ದಾಟುತ್ತಿದ್ದರೆ ಚಾಲಕರು ದೂರದಲ್ಲೇ ವಾಹನವನ್ನು ನಿಲ್ಲಿಸುತ್ತಾರೆ. ಅವರು ಲೇನ್ ಶಿಸ್ತನ್ನು ಅನುಸರಿಸುತ್ತಾರೆ. ರೆಡ್​ ಲೈಟ್​ ನೋಡಿದರೆ ವಾಹನವನ್ನು ನಿಲ್ಲಿಸುತ್ತಾರೆ. ಪ್ರಯಾಣದ ವೇಳೆ ಹೆಲ್ಮೆಟ್, ಸೀಟ್​ಬೆಲ್ಟ್​ಗಳನ್ನು ಧರಿಸುತ್ತಾರೆ. ಆದರೆ ನಮ್ಮಲ್ಲಿ, ಜನರು ಕಾನೂನನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಗಡ್ಕರಿ ಹೇಳಿದರು.


ಪರೀಕ್ಷೆ ಬರೆಯದೇ ಲೈಸೆನ್ಸ್ ಪಡೆಯುತ್ತಾರೆ


ಜನರು ಡ್ರೈವಿಂಗ್ ಲೈಸೆನ್ಸ್ ಅನ್ನು ಹೇಗೆ ಪಡೆಯುತ್ತಾರೆ ಎಂಬುದನ್ನು ವಿವರಿಸುತ್ತಾ," ಯುನೈಟೆಡ್ ಸ್ಟೇಟ್ಸ್ (ಯುಎಸ್) ನಲ್ಲಿ ಜನರು ಒಂದು ತಿಂಗಳು ಅಧ್ಯಯನ ಮಾಡಬೇಕು, ಥಿಯರಿ ಪರೀಕ್ಷೆಯನ್ನು ಬರೆಯಬೇಕು, ಅದರ ನಂತರ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಬೇಕು. ಚಾಲನಾ ಪರವಾನಗಿ ಪಡೆಯಲು ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್‌ಟಿಒ) ಹೋಗಿ ಎಷ್ಟು ಮಂದಿ ಪರೀಕ್ಷೆ ತೆಗೆದುಕೊಂಡಿದ್ದಾರೆ ಎಂದು ನಾನು ಪ್ರೇಕ್ಷಕರನ್ನು ಕೇಳಿದರೆ, ಸಂಖ್ಯೆ ತುಂಬಾ ಕಡಿಮೆ ಇದೆ, ಆದರೆ ಬಹುತೇಕ ಮಂದಿಯ ಬಳಿ ಪರವಾನಗಿ ಇದೆ ಎಂದರು.


ಇದನ್ನೂ ಓದಿ: Rising India Summit: 'ನ್ಯೂ ಇಂಡಿಯಾ ಅಂದ್ರೆ ಫಿಟ್​​ ಇಂಡಿಯಾ': ತಮ್ಮ ಫಿಟ್ನೆಸ್​ ಸೀಕ್ರೆಟ್​ ರಿವೀಲ್​ ಮಾಡಿದ ಜೈಶಂಕರ್


ಐದು ಲಕ್ಷ ರಸ್ತೆ ಅಪಘಾತ


ಭಾರತವು ವರ್ಷಕ್ಕೆ ಐದು ಲಕ್ಷ ರಸ್ತೆ ಅಪಘಾತಗಳಿಗೆ ಸಾಕ್ಷಿಯಾಗಿದೆ, ಇದರಿಂದ 1.5 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಶೇಕಡಾ 60% ರಷ್ಟು ಸಂತ್ರಸ್ತರು 18-34 ವಯಸ್ಸಿನ ಯುವ ವೃತ್ತಿಪರರು. ನಾವು ನಿಯಮಗಳನ್ನು ಅನುಸರಿಸಿದರೆ, ನಾವು ಜೀವವನ್ನು ಉಳಿಸಬಹುದು. ಪ್ರಸ್ತುತ ರಸ್ತೆ ಅಪಘಾತದಲ್ಲಿ ನಾವು ಪ್ರಪಂಚದಲ್ಲಿಯೇ ಅತ್ಯುನ್ನತ ಸ್ಥಾನದಲ್ಲಿದ್ದೇವೆ, ಇದು ಹೆಮ್ಮೆಪಡುವ ವಿಷಯವಲ್ಲ. ಮಾನವನ ನಡವಳಿಕೆ ಬದಲಾದರೆ ಸಮಸ್ಯೆ ಬಗೆಹರಿಯುತ್ತದೆ ಎಂದರು.




ಭ್ರಷ್ಟಾಚಾರ ಮುಕ್ತ  ಡಿಜಿಟಲ್ ಆಡಳಿತ ವ್ಯವಸ್ಥೆ


ಏಜೆನ್ಸಿಗಳು ಹೇಗೆ ಬದಲಾವಣೆಗಳನ್ನು ತರಬಹುದು ಎಂದು ಕೇಳಿದಾಗ, ನಾವು RTO ಡಿಜಿಟಲ್‌ನಲ್ಲಿ 16 ಹಂತಗಳನ್ನು ಮಾಡಿದ್ದೇವೆ. ನಾವು ಭ್ರಷ್ಟಾಚಾರ ಮುಕ್ತ, ಡಿಜಿಟಲ್ ಆಡಳಿತ ವ್ಯವಸ್ಥೆಯನ್ನು ನೋಡುತ್ತಿದ್ದೇವೆ.  17 ವರ್ಷ ಹಳೆಯ ವಾಹನಗಳಿಗೆ ಸ್ಕ್ರ್ಯಾಪಿಂಗ್ ನೀತಿಯನ್ನು ತರುತ್ತಿದ್ದೇವೆ. ಮಾಲಿನ್ಯ ನಮಗೆ ದೊಡ್ಡ ಸಮಸ್ಯೆಯಾಗಿದೆ. ಜನರು ಹೆಚ್ಚು ಜಾಗೃತರಾಗಿದ್ದಾರೆ ಮತ್ತು ಸಹಕರಿಸುತ್ತಿದ್ದಾರೆ ಎಂದರು.


ಶೀಘ್ರದಲ್ಲೇ ಹೈಡ್ರೋಜನ್​ ಬಸ್​

top videos


    ಸರ್ಕಾರದ ಯೋಜನೆಗಳ ಬಗ್ಗೆ ಪ್ರತಿಕ್ರಿಯಿಸಿದ ಗಡ್ಕರಿ " ಭಾರತದಲ್ಲಿ ಹೈಡ್ರೋಜನ್ ಬಸ್ ಶೀಘ್ರದಲ್ಲೇ ಸಿದ್ಧವಾಗಲಿದೆ. ಎಲೆಕ್ಟ್ರೋಲೈಸರ್‌ಗಳನ್ನು ತಯಾರಿಸುವಲ್ಲಿ ನಾವು ನಂಬರ್ ಒನ್ ಆಗಿದ್ದೇವೆ. ನಾವು ಅದನ್ನು ಯುಎಸ್‌ಗೆ ರಫ್ತು ಮಾಡುತ್ತಿದ್ದೇವೆ. ನಾವು ಮುಂದಿನ ದಿನಗಳಲ್ಲಿ ವಿಮಾನಗಳಲ್ಲೂ ಹೈಡ್ರೋಜನ್ ಅನ್ನು ಬಳಸಲಾಗುತ್ತದೆ. ಹಾಗಾಗಿ ನಾವು ಇಂಧನ ಆಮದುದಾರರಾಗಿ ಉಳಿದುಕೊಳ್ಳುವ ದಿನಗಳು ಅಂತ್ಯವಾಗಿ ರಫ್ತುದಾರರಾಗುತ್ತೇವೆ ಎಂದು ತಿಳಿಸಿದರು.

    First published: