Win Prizes - ವ್ಯಾಕ್ಸಿನ್ ಹಾಕಿಸಿಕೊಂಡರೆ ಜನರಿಗೆ ಟಿವಿ ಮೊಬೈಲ್ ಗೆಲ್ಲುವ ಆಫರ್

Manipur Vaccination Drive- ಮಣಿಪುರದ ಇಂಫಾಲ್ ಜಿಲ್ಲೆಯ ಜನರಿಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಉತ್ತೇಜಿಸಲು ವಿವಿಧ ಬಹುಮಾನಗಳ ಆಮಿಷಗಳನ್ನ ಒಡ್ಡಲಾಗುತ್ತಿದೆ. ಲಸಿಕೆ ಹಾಕಿಸಿಕೊಂಡವರಿಗೆ ಟಿವಿ, ಮೊಬೈಲ್ ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
    ಮಣಿಪುರ್: ಮಣಿಪುರ ರಾಜ್ಯದ ಇಂಫಾಲ್ ಪಶ್ಚಿಮ ಜಿಲ್ಲೆಯ ಜನರು ಮೆಗಾ ವ್ಯಾಕ್ಸಿನೇಷನ್ ಶಿಬಿರದಲ್ಲಿ ಕೋವಿಡ್ -19 Covid-19 ಲಸಿಕೆಯನ್ನು ತೆಗೆದುಕೊಂಡರೆ ಟೆಲಿವಿಷನ್ ಸೆಟ್, ಮೊಬೈಲ್ ಫೋನ್ ಅಥವಾ ಹೊದಿಕೆಗಳನ್ನು ಗೆಲ್ಲುವ ಅವಕಾಶವನ್ನು ಪಡೆಯುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವ್ಯಾಕ್ಸಿನೇಷನ್ ಹಾಕಿಸಿಕೊಂಡವರ ವ್ಯಾಪ್ತಿಯನ್ನು ಹೆಚ್ಚಿಸಲು ಇಂಫಾಲ್ ಪಶ್ಚಿಮ ಜಿಲ್ಲಾಡಳಿತ ಅಕ್ಟೋಬರ್ 24, ಅಕ್ಟೋಬರ್ 31 ರಂದು ಜಿಲ್ಲೆಯ ಮೂರು ಕೇಂದ್ರಗಳಲ್ಲಿ ನಡೆಸಲು ಉದ್ದೇಶಿಸಿರುವ "ಕೋವಿಡ್ ಲಸಿಕೆ ಪಡೆಯಿರಿ, ಬಹುಮಾನವನ್ನು ಗೆಲ್ಲಿರಿ"(Get a shot, win a prize) ಎಂಬ ಘೋಷಣೆಯೊಂದಿಗೆ ಮೆಗಾ ವ್ಯಾಕ್ಸಿನೇಷನ್ ಕಮ್ ಬಂಪರ್ ಡ್ರಾ ಕಾರ್ಯಕ್ರಮವನ್ನು ನಡೆಸಲು ನವೆಂಬರ್ 7ರಂದು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಮೂರು ಕೇಂದ್ರಗಳಲ್ಲಿ ಲಸಿಕೆ ಹಾಕಿಸಿಕೊಂಡವರು ಬಂಪರ್ ಡ್ರಾದಲ್ಲಿ (bumper draw and win prizes) ಭಾಗವಹಿಸಿ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಹೊಂದಿರುತ್ತಾರೆ ಎಂದು Imphal West district ಇಂಫಾಲ್ ಪಶ್ಚಿಮ ಜಿಲ್ಲೆ ಉಪ ಆಯುಕ್ತ ಟಿ ಕಿರಣಕುಮಾರ್ ಅವರು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಟಿವಿ, ಮೊಬೈಲ್ ಹಾಗು ಇತರೆ ವಸ್ತುಗಳ ಬಹುಮಾನ: 

    ಮೊದಲ ಬಹುಮಾನವು ದೊಡ್ಡ ಪರದೆಯ ಟಿವಿ ಸೆಟ್, ಎರಡನೆಯದು ಮೊಬೈಲ್ ಫೋನ್, ಮೂರನೆಯದಾಗಿ 10 ಇತರ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು ಅಂದರೆ ಹೊದಿಕೆ ನೀಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಕೋವಿಡ್ -19 ಲಸಿಕೆಯ ಮೊದಲ ಅಥವಾ ಎರಡನೇ ಡೋಸ್‌ಗೆ 18 ವರ್ಷಕ್ಕಿಂತ ಮೇಲ್ಪಟ್ಟ ಯಾರಾದರೂ ಭಾಗವಹಿಸಲು ಅರ್ಹರಾಗಿರುತ್ತಾರೆ ಮತ್ತು ಲಕ್ಕಿ ಡ್ರಾ ವಿಜೇತರನ್ನು ಜಿಎಂ ಹಾಲ್, ಪೊಲೊ ಮೈದಾನ ಮತ್ತು ಧರ್ಮಶಾಲಾ ಮೂರು ಕೇಂದ್ರಗಳಲ್ಲಿ ಯಾರು ಅದೃಷ್ಟವಂತರು ಎಂದು ನಿರ್ಧರಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. ಇಂಫಾಲ್ ಪಶ್ಚಿಮ ಜಿಲ್ಲೆಗೆ ಸೇರಿದ ನಾಗರಿಕರಿಗೆ ಮಾತ್ರ ಈ ಅವಕಾಶ ಎಂದು ಹೇಳಲಾಗಿದೆ.

    ಇದನ್ನೂ ಓದಿ: Sidhu letter to Sonia- ಇದೇ ಕೊನೆ ಅವಕಾಶ; ಸೋನಿಯಾ ಗಾಂಧಿಗೆ ಪತ್ರ ಬರೆದ ನವಜೋತ್ ಸಿಂಗ್ ಸಿಧು

    ಇಂಫಾಲ್​ನಲ್ಲಿ ಲಸಿಕೆಗೆ ಹೆದರುತ್ತಿರುವ ಜನರು: 

    ರಾಜ್ಯದ ಎಲ್ಲ 16 ಜಿಲ್ಲೆಗಳಿಗಿಂತ ಇಂಫಾಲ್ ಪಶ್ಚಿಮ ಜಿಲ್ಲೆಯು ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಅಲ್ಲದೇ ದೇಶದ ಅನೇಕ ರಾಜ್ಯಗಳಲ್ಲಿ ಕೆಲಸ ಮಾಡುವ ಈ ಭಾಗದ ಜನರಿಗೆ ಹೆಚ್ಚು ಕೋವಿಡ್ ಹರಡಿದ್ದ ಕಾರಣ ಹಾಗೂ ಈ ಭಾಗದಲ್ಲಿ ಹೆಚ್ಚು ಜನರು ಕೋವಿಡ್ ಲಸಿಲೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.

    ಅಲ್ಲದೇ ದೇಶದಲ್ಲಿ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಹಾಕಿಸಿಕೊಳ್ಳುವ ಅಭಿಯಾನ ಸಾಕಷ್ಟು ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ. ಆದರೂ ಸಹ ಗ್ರಾಮೀಣ ಭಾಗದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಕಾರಣ ಈ ರೀತಿಯ ಜನಪ್ರಿಯ ಘೋಷಣೆಗಳ ಮೂಲಕ ಮತ್ತಷ್ಟು ಜನರಿಗೆ ಲಸಿಕೆ ಬಗ್ಗೆ ಇರುವ ಪೂರ್ವಾಗ್ರಹ ಹೋಗಲಿ ಎಂದು ಮಾಡಲಾಗುತ್ತಿದೆ.

    (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ಕರ್ನಾಟಕ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.)

    - ರಮೇಶ್ ಹಂಡ್ರಂಗಿ
    Published by:Vijayasarthy SN
    First published: