ಲಕ್ನೋ (ನವೆಂಬರ್ 24); ಲವ್ ಜಿಹಾದ್ ಎಂಬ ಪದ ಇತ್ತೀಚೆಗೆ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಮಟ್ಟದ ಸುದ್ದಿಗೆ ಗ್ರಾಸವಾಗಿದೆ. ಸಮಾಜದಲ್ಲಿ ಚರ್ಚಾಸ್ಪದ ವಿಚಾರವಾಗಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಈ ನಡುವೆ ಉತ್ತರಪ್ರದೇಶದ ಸರ್ಕಾರ "ಲವ್ ಜಿಹಾದ್" ವಿರುದ್ಧ ಕಾನೂನನ್ನೇ ರೂಪಿಸಲು ಮುಂದಾಗಿದೆ. ಆದರೆ, ಉತ್ತರಪ್ರದೇಶದ ಅಲಹಾಬಾದ್ ಉಚ್ಚ ನ್ಯಾಯಾಲಯ ವಯಸ್ಸಿಗೆ ಬಂದ ಯಾವುದೇ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಬಾಳಲು ಕಾನೂನಿನಲ್ಲಿ ಅವಕಾಶ ಇದೆ. ಅವರಿಬ್ಬರ ಶಾಂತಿಯುತ ಬದುಕಿಗೆ ಬೇರಾವುದೇ ವ್ಯಕ್ತಿ ಅಥವಾ ಕುಟುಂಬದಿಂದ ತೊಂದರೆ ಆಗಬಾರದು. ಸರ್ಕಾರ ಕೂಡ ಇಬ್ಬರು ವಯಸ್ಕರ ಸಂಬಂಧಕ್ಕೆ ಅಡ್ಡಗಾಲು ಹಾಕುವಂತಿಲ್ಲ" ಎಂದು ಮಹತ್ವದ ತೀರ್ಪು ನೀಡಿದೆ. ಆದರೆ, ಈ ತೀರ್ಪಿಗೂ ಮುನ್ನವೇ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿರುವ ಖ್ಯಾತ ಉರ್ದು ಕವಿ ಮುನವ್ವರ್ ರಾಣಾ "ಈ ಲವ್ ಜಿಹಾದ್ ಕಾಯ್ದೆಯನ್ನು ಮೊದಲು ಬಿಜೆಪಿ ನಾಯಕರ ಕುಟುಂಬಗಳ ಮೇಲೆ ಪ್ರಯೋಗಿಸಿ" ಎಂದು ಕಿಡಿಕಾರಿದ್ದಾರೆ.
इस पर बने क़ानून को हम समर्थन इस शर्त पर देते हैं कि इसकी शुरुआत पहले केंद्र सरकार में बैठे 2 बड़े 'ल.जिहादियों' से की जाए ताकि बाद में 2 मुस्लिम लड़कियों के निकाह उनसे हो सके, और जिन भी भाजपा नेता या उनके परिवार के लोगों ने गैर-धर्म में शादियां की हैं उन पर भी कार्रवाई हो।
(2/2)
ಹಿಂದಿಯಲ್ಲಿ ಟ್ವೀಟ್ ಮಾಡುವ ಮೂಲಕ ಲವ್ ಜಿಹಾದ್ ಕಾನೂನನ್ನು ಜಾರಿಗೆ ತರಲು ಪ್ರಯತ್ನಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಖ್ಯಾತ ಉರ್ದು ಕವಿ ಮುನವ್ವರ್ ರಾಣಾ, "ಕೇಂದ್ರ ಬಿಜೆಪಿ ನಾಯಕರ ಎರಡು ಪ್ರಮುಖ ಕುಟುಂಬಗಳು ತಮ್ಮ ಧರ್ಮದಿಂದ ಹೊರಗೆ ಮುಸ್ಲಿಂ ಹುಡುಗಿಯರನ್ನು ಸೊಸೆಯಾಗಿ ಪಡೆದಿದ್ದಾರೆ. ಇದಲ್ಲದೆ, ಹಲವು ನಾಯಕರು ತಮ್ಮ ಧರ್ಮದಿಂದ ಹೊರಗೆ ಬೇರೆ ಧರ್ಮದಲ್ಲಿ ಸಂಬಂಧ ಹೊಂದಿದ್ದಾರೆ. ಲವ್ ಜಿಹಾದ್ ಕಾನೂನನ್ನು ಮೊದಲು ಈ ಕುಟುಂಬಗಳ ಮೇಲೆ ಪ್ರಯೋಗಿಸಬೇಕು. ಹೀಗೆ ಪ್ರಯೋಗಿಸಿದರೆ ಮಾತ್ರ ನಾವು ಈ ಕಾನೂನಿಗೆ ಬೆಂಬಲ ನೀಡುತ್ತೇವೆ" ಎಂದು ವಾಗ್ದಾಳಿ ನಡೆಸಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, "ಲವ್ ಜಿಹಾದ್ ಎಂಬುದು ಕೇವಲ ಸಮಾಜದಲ್ಲಿ ದ್ವೇಷವನ್ನು ಹರಡಲು ಬಳಸುವ ಜುಮ್ಲಾ ಆಗಿದ್ದು, ಮುಸ್ಲಿಂ ಹುಡುಗಿಯರು ಇದರಿಂದ ಹೆಚ್ಚು ಬಳಲುತ್ತಿದ್ದಾರೆ ಯಾಕೆಂದರೆ ಸಮುದಾಯದ ಯುವಕರು ಹೊರಗಿನ ಯುವತಿಯರನ್ನು ಮದುವೆಯಾಗುತ್ತಿದ್ದಾರೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಪ್ರವಾದಿ ಮುಹಮ್ಮದ್ರ ರೇಖಾಚಿತ್ರವನ್ನು ಬಿಡಿಸಿದ್ದಕ್ಕಾಗಿ ಫ್ರಾನ್ಸ್ನಲ್ಲಿ ನಡೆದಿದ್ದ ಮೂವರ ಹತ್ಯೆಗಳನ್ನು ಕವಿ ಮುನವ್ವರ್ ಸಮರ್ಥಿಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಅವರ ವಿರುದ್ಧ ಇತ್ತೀಚಿಗೆ FIR ದಾಖಲಿಸಲಾಗಿತ್ತು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ