HOME » NEWS » National-international » TAJ MAHALS TOMBS CLEANED FOR FIRST TIME IN TRUMP VISIT SESR

Namaste Trump: 300 ವರ್ಷದಲ್ಲಿ ಇದೇ ಮೊದಲ ಬಾರಿ ಸ್ವಚ್ಛಗೊಂಡ ತಾಜ್​ಮಹಲ್​ ಸಮಾಧಿಗಳು

ಇದೇ ಮೊದಲ ಬಾರಿ ಜೇಡಿಮಣ್ಣಿನ (ಕ್ಲೇ ಪ್ಯಾಕ್​ ಟ್ರೀಟ್​ಮೆಂಟ್​​) ಮೂಲಕ ಈ ಪ್ರತಿಕೃತಿಗಳ ಸ್ವಚ್ಛತೆ ನಡೆಸಲಾಗಿದೆ. ಈ ಸ್ವಚ್ಛತಾ ಕಾರ್ಯದಲ್ಲಿ ಗೋರಿಗಳ ಮೇಲೆ ಜೇಡಿನ ಮಣ್ಣನನ್ನು ದಟ್ಟವಾಗಿ ಲೇಪನ ಮಾಡಿ ಬಳಿಕ ಅದನ್ನು ಡಿಸ್ಟಿಲ್ಡ್​ ನೀರಿನಿಂದ ತೊಳೆಯಲಾಗಿದೆ.


Updated:February 24, 2020, 5:23 PM IST
Namaste Trump: 300 ವರ್ಷದಲ್ಲಿ ಇದೇ ಮೊದಲ ಬಾರಿ ಸ್ವಚ್ಛಗೊಂಡ ತಾಜ್​ಮಹಲ್​ ಸಮಾಧಿಗಳು
ಆಗ್ರಾದಲ್ಲಿರುವ ತಾಜ್​ ಮಹಲ್​
  • Share this:
ನವದೆಹಲಿ(ಫೆ.24): ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​  ತಮ್ಮ ಭಾರತ ಪ್ರವಾಸ ವೇಳೆ ಜಗತ್ ಪ್ರಸಿದ್ಧ ತಾಜ್​ ಮಹಲ್​ ವೀಕ್ಷಣೆಗೆ ​ ಮುಂದಾಗಿದ್ದಾರೆ. ಈ  ಹಿನ್ನೆಲೆ 300 ವರ್ಷ ಇತಿಹಾಸದಲ್ಲಿಯೇ  ಇದೇ ಮೊದಲ ಬಾರಿ ತಾಜ್​ ಮಹಲ್​ನಲ್ಲಿರುವ ಅಮರ ಪ್ರೇಮಿಗಳಾದ ಶಹಜಹಾನ್​ ಹಾಗೂ ಮಮ್ತಾಜ್​​ ಅವರ​ ಸಮಾಧಿಗಳ ಪ್ರತಿಕೃತಿಗಳಿಗೆ ಸ್ವಚ್ಛತಾ ಕಾರ್ಯ ನಡೆಸಲಾಗಿದೆ.

377 ವರ್ಷಗಳ ಹಿಂದೆ ತಾಜ್​​ ಮಹಲ್​ ನಿರ್ಮಾಣವಾಗಿದ್ದು, 300 ವರ್ಷದ  ಹಿಂದೆ ಇಬ್ಬರು ಅಮರಪ್ರೇಮಿಗಳ ಸಮಾಧಿಗಳಿಗೆ ಪ್ರತಿಕೃತಿಗಳನ್ನು ನಿರ್ಮಿಸಲಾಗಿತ್ತು. ಆಗಿನಿಂದಲೂ ಈವರೆಗೂ ಸ್ವಚ್ಛತಾ ಕಾರ್ಯ ಮಾಡಿಯೇ ಇರಲಿಲ್ಲ.

ಟ್ರಂಪ್ ಭೇಟಿಯ ದೆಸೆಯಿಂದಾಗಿ ಆ ಭಾಗ್ಯ ಸಿಕ್ಕಿದೆ. ಇದೇ ಮೊದಲ ಬಾರಿ ಜೇಡಿಮಣ್ಣಿನ (ಕ್ಲೇ ಪ್ಯಾಕ್​ ಟ್ರೀಟ್​ಮೆಂಟ್​​) ಮೂಲಕ ಈ ಪ್ರತಿಕೃತಿಗಳ ಸ್ವಚ್ಛತೆ ನಡೆಸಲಾಗಿದೆ. ಈ ಸ್ವಚ್ಛತಾ ಕಾರ್ಯದಲ್ಲಿ ಗೋರಿಗಳ ಮೇಲೆ ಜೇಡಿನ ಮಣ್ಣನನ್ನು ದಟ್ಟವಾಗಿ ಲೇಪನ ಮಾಡಿ ಬಳಿಕ ಅದನ್ನು ಡಿಸ್ಟಿಲ್ಡ್​ ನೀರಿನಿಂದ ತೊಳೆಯಲಾಗಿದೆ. ಈ ಜೇಡಿಮಣ್ಣಿನ ಸ್ವಚ್ಛತಾ ಕಾರ್ಯ ಮೂಲತಃ ಮಹಿಳೆಯರು ಸಾಂಪ್ರದಾಯಿಕವಾಗಿ ಮುಖದ ಅಂದ ಹೆಚ್ಚಿಸಲು ಮಾಡುವ ಚಿಕಿತ್ಸೆಯಾಗಿದೆ.

ತಾಜ್​ ಮಹಲ್​ ಅನ್ನು ಈಗಾಗಲೇ 5 ಬಾರಿ ಈ ಕ್ರಮದ ಮೂಲಕ ಸ್ವಚ್ಛತೆ ಮಾಡಲಾಗಿದೆ. ಆದರೆ, ಅದರಲ್ಲಿನ ಘೋರಿಗಳ ಪ್ರತಿಕೃತಿಗಳನ್ನು ಇದೇ ಮೊದಲ ಬಾರಿ ಈ ರೀತಿ ಶುದ್ಧಗೊಳಿಸಲಾಗಿದೆ. ಶಹಜಹಾನ್ ಮತ್ತು ಮುಮ್ತಾಜ್ ಅವರ ಸಮಾಧಿಗಳು ಈ ಪ್ರತಿಕೃತಿಗಳ ಕೆಳಗೇ ಇವೆ.

ಗುಜರಾತ್​ ಕಾರ್ಯಕ್ರಮದ ಬಳಿಕ ಸಂಜೆ ಅವರು ಟ್ರಂಪ್​ ಕುಟುಂಬ ಸಮೇತರಾಗಿ ತಾಜ್​ ಮಹಲ್​ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ತಾಜ್​ಮಹಲ್​ನಲ್ಲಿರುವ ಸಮಾಧಿ ಬಳಿ ಅವರು ಹೋಗುವುದು ಅನುಮಾನವಾಗಿದೆ. ಕಾರಣ ಇದರ ಪ್ರವೇಶ ದ್ವಾರ ಕೇವಲ ಐದು ಅಡಿ ಉದ್ದವಿರುವುದು. ಇತ್ತೀಚೆಗೆ ತಾಜ್​ ಮಹಲ್​ ಭದ್ರತಾ ವೀಕ್ಷಣೆಗೆ ಬಂದಿದ್ದ ಅಮೆರಿಕಾ ರಕ್ಷಣಾ ತಂಡ ಈ ವಿಷಯ ಹೊರಹಾಕಿತ್ತು. ಇದರ ದ್ವಾರದ ಎತ್ತರ ಚಿಕ್ಕದಿರುವ ಹಿನ್ನೆಲೆಯಲ್ಲಿ ಆರೇಳು ಅಡಿಯ ಟ್ರಂಪ್​ ತಲೆಬಾಗಿ ನಡೆಯುವವರಲ್ಲ. ಈ ಹಿನ್ನೆಲೆ 17ನೇ ಶತಮಾನದ ಈ ಗೋರಿಯ ಪ್ರತಿಕೃತಿಯನ್ನು ಅವರು ವೀಕ್ಷಣೆ ಮಾಡುವ ಸಾಧ್ಯತೆ ಕಡಿಮೆ ಎಂದಿದ್ದರು.

ಇದನ್ನು ಓದಿ: ಗುಜರಾತಿ ಖಮಾನ್​, ಮಸಾಲ ಚಾಯ್, ಬ್ರೊಕೋಲಿ ಸಮೋಸಾ!​ ಇಲ್ಲಿದೆ ಟ್ರಂಪ್​ ಸೇವಿಸಲಿರುವ ಆಹಾರದ ಮೆನು

ತಾಜ್​ಮಹಲ್​ನಲ್ಲಿರುವ ನಿಜವಾದ ಗೋರಿಯನ್ನು ವರ್ಷದಲ್ಲಿ ಮೂರು ದಿನ ಮಾತ್ರ ಸಾರ್ವಜನಿಕರಿಗೆ ನೋಡಲು ಅವಕಾಶವಿದೆ. ಇದರಲ್ಲಿ ಒಂದು ದಿನ ಶಹಜಹಾನ್​ ಪುಣ್ಯತಿಥಿಯಾದ ಉರುಸ್​ ದಿನದಂದು.ಇನ್ನು ಈ ಸ್ವಚ್ಛತಾ ಕಾರ್ಯವನ್ನು ಪುರಾತತ್ವ ಸರ್ವೇಕ್ಷಣಾ ಇಲಾಖೆ ನಡೆಸುತ್ತಿದೆ. ತಾಜ್​ ಮಹಲ್​ನ ಸ್ಮಾರಕದ ಮೇಲೆ ಮೂಡಿದ್ದ ಕಪ್ಪು ಚುಕ್ಕಿಗಳನ್ನು ಇದೇ ಇಲಾಖೆ ಸ್ವಚ್ಛಗೊಳಿಸಿ ನೀಗಿಸಿತ್ತು.
First published: February 24, 2020, 5:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories