• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Taj Mahal: ಸೆ. 21ರಿಂದ ತಾಜಮಹಲ್ ವೀಕ್ಷಣೆಗೆ ಮುಕ್ತ; ದಿನಕ್ಕೆ 5 ಸಾವಿರ ಪ್ರವಾಸಿಗರಿಗೆ ಮಾತ್ರ ಅನುಮತಿ

Taj Mahal: ಸೆ. 21ರಿಂದ ತಾಜಮಹಲ್ ವೀಕ್ಷಣೆಗೆ ಮುಕ್ತ; ದಿನಕ್ಕೆ 5 ಸಾವಿರ ಪ್ರವಾಸಿಗರಿಗೆ ಮಾತ್ರ ಅನುಮತಿ

ತಾಜಮಹಲ್

ತಾಜಮಹಲ್

ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದ್ದ ವಿಶ್ವಪ್ರಸಿದ್ಧ ತಾಜ್‍ಮಹಲ್‍ ಮತ್ತು ಆಗ್ರಾ ಕೋಟೆ ಸೆಪ್ಟೆಂಬರ್ 21ರಿಂದ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಲಿವೆ.

 • Share this:

  ನವದೆಹಲಿ (ಸೆ. 8): ವಿಶ್ವವಿಖ್ಯಾತ ತಾಜ್​ಮಹಲ್ ಮತ್ತು ಆಗ್ರಾ ಕೋಟೆಯ ಪ್ರವೇಶಕ್ಕೆ ಲಾಕ್​ಡೌನ್ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗಿತ್ತು. ಇದೀಗ 6 ತಿಂಗಳ ಬಳಿಕ ತಾಜಮಹಲ್ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಸೆಪ್ಟೆಂಬರ್ 21ರಿಂದ ಪ್ರೇಮಸೌಧ ತಾಜಮಹಲ್ ಪ್ರವಾಸಿಗರಿಗೆ ಮುಕ್ತವಾಗಲಿದೆ. ಆದರೆ, ಪ್ರತಿದಿನಕ್ಕೆ 5 ಸಾವಿರ ಪ್ರವಾಸಿಗರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಅನ್​ಲಾಕ್ ಜಾರಿಯಾಗುತ್ತಿದ್ದಂತೆ ದೇಶದ ಬಹುತೇಕ ಎಲ್ಲ ದೇವಾಲಯಗಳು, ಪ್ರವಾಸಿ ಸ್ಥಳಗಳು, ಕೋಟೆಗಳು ವೀಕ್ಷಣೆಗೆ ಮುಕ್ತವಾಗಿವೆ. ದೇವಸ್ಥಾನಗಳಲ್ಲಿ ಪೂಜೆ ಪ್ರಾರಂಭವಾಗಿದೆ. ಇದರ ಬೆನ್ನಲ್ಲೇ ವಿಶ್ವವಿಖ್ಯಾತ ತಾಜಮಹಲ್ ಕೂಡ ವೀಕ್ಷಣೆಗೆ ಮುಕ್ತವಾಗಿದೆ.


  ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದ್ದ ವಿಶ್ವಪ್ರಸಿದ್ಧ ತಾಜ್‍ಮಹಲ್‍ ಮತ್ತು ಆಗ್ರಾ ಕೋಟೆ ಸೆಪ್ಟೆಂಬರ್ 21ರಿಂದ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಲಿವೆ. ಸೆ. 21ರಿಂದ ವಿಶ್ವಪ್ರಸಿದ್ಧ ತಾಜ್ ಮಹಲ್ ಮತ್ತು ಕೋಟೆಯನ್ನು ಪ್ರವಾಸಿಗರಿಗಾಗಿ ತೆರೆಯಲಾಗುವುದು. ಆಗ್ರಾದಲ್ಲಿನ ಇತರೆ ಎಲ್ಲಾ ಸ್ಮಾರಕಗಳನ್ನು ಸೆಪ್ಟೆಂಬರ್ 1ರಿಂದಲೇ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ. ನಿನ್ನೆ ಆಗ್ರಾದಲ್ಲಿ ಪರಿಶೀಲನೆ ನಡೆಸಿದ ಬಳಿಕ ತಾಜ್‍ಮಹಲ್‍ ಮತ್ತು ಆಗ್ರಾ ಕೋಟೆಯನ್ನು ಸಹ ಸೆಪ್ಟೆಂಬರ್ 21ರಿಂದ ತೆರೆಯುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.


  ಇದನ್ನೂ ಓದಿ: Drug Mafia: ನಾನು ಚಿತ್ರರಂಗದಲ್ಲಿದ್ದಾಗ ಈ ರೀತಿಯ ಡ್ರಗ್ಸ್​ ದಂಧೆ ಇರಲಿಲ್ಲ; ಸಚಿವ ಬಿ.ಸಿ. ಪಾಟೀಲ್ ಪ್ರತಿಕ್ರಿಯೆ


  ದಿನವೊಂದಕ್ಕೆ ಕೇವಲ 5 ಸಾವಿರ ಪ್ರವಾಸಿಗರಿಗೆ ಮಾತ್ರ ತಾಜಮಹಲ್ ವೀಕ್ಷಣೆಗೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. ಆಗ್ರಾ ಕೋಟೆಗೆ ದಿನವೊಂದಕ್ಕೆ 2,500 ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಆರು ತಿಂಗಳಿಂದ ತಾಜಮಹಲನ್ನು ಮುಚ್ಚಿರುವುದರಿಂದ ಪ್ರವಾಸೋದ್ಯಮಕ್ಕೆ ಭಾರೀ ನಷ್ಟ ಉಂಟಾಗಿದೆ. ದೇಶದೆಲ್ಲೆಡೆ ಮಾರ್ಚ್​ ಅಂತ್ಯದಲ್ಲಿ ಲಾಕ್​ಡೌನ್ ಘೋಷಿಸುವುದಕ್ಕೂ ಮೊದಲೇ ತಾಜಮಹಲ್ ವೀಕ್ಷಣೆಗೆ ನಿರ್ಬಂಧ ಹೇರಲಾಗಿತ್ತು.


  ವಿದೇಶೀ ಪ್ರವಾಸಿಗರಿಗೆ ಇನ್ನೂ ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ಆರಂಭಿಸದ ಕಾರಣದಿಂದ ತಾಜಮಹಲ್​ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಕಡಿಮೆಯಾಗಲಿದೆ. ಕೊರೋನಾ ಆತಂಕ ಇನ್ನೂ ಕಡಿಮೆಯಾಗದ ಕಾರಣದಿಂದ ಪ್ರವಾಸಿಗರಿಗೆ ಎಲೆಕ್ಟ್ರಾನಿಕ್ ಟಿಕೆಟ್ ನೀಡಲಾಗುವುದು. ಹಾಗೇ, ಪ್ರವಾಸಿಗರು ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.

  Published by:Sushma Chakre
  First published: