ಪ್ರತಿ ವರ್ಷ ಆಗಸ್ಟ್ ತಿಂಗಳು ಬಂತೆಂದರೆ ಸಾಕು ನಮಗೆ ಎಲ್ಲೆಡೆ ನಮ್ಮ ತ್ರಿವರ್ಣ ಧ್ವಜಗಳು (Tricolor Flag) ನೋಡುವುದಕ್ಕೆ ಮತ್ತು ದೇಶಭಕ್ತಿ ಗೀತೆಗಳು (Patriotic Song) ಕೇಳುವುದಕ್ಕೆ ಸಿಗುತ್ತವೆ ಎಂದು ಹೇಳಬಹುದು. ಅದರಲ್ಲೂ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯು (Independence Day) ತುಂಬಾನೇ ವಿಶೇಷ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಭಾರತ ಸರ್ಕಾರವು ಸ್ವಾತಂತ್ರ್ಯದ ಈ ವಜ್ರಮಹೋತ್ಸವ ದಂದು 'ಆಜಾದಿ ಕಾ ಅಮೃತ್ ಮಹೋತ್ಸವ' (Azadi Ka Amrit Mahotsav) ವನ್ನು ಆಚರಿಸುತ್ತಿದೆ. ಇದರ ಆಚರಣೆಯ ಭಾಗವಾಗಿ ಈಗಾಗಲೇ ದೇಶದಲ್ಲಿರುವಂತಹ ಅನೇಕ ಸ್ಥಳಗಳಲ್ಲಿರುವ ಐತಿಹಾಸಿಕ ಕಟ್ಟಡಗಳನ್ನು ತ್ರಿವರ್ಣ ದೀಪಗಳಿಂದ ಅಲಂಕರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಆ ನಿಯಮವು ತಾಜ್ ಮಹಲ್ ವಿಷಯದಲ್ಲಿ ಅನ್ವಯಿಸುವುದಿಲ್ಲ ನೋಡಿ. ಹೌದು.. ಇದಕ್ಕೆ ಕಾರಣ ಎಂದರೆ ಸರ್ವೋಚ್ಚ ನ್ಯಾಯಾಲಯದ ವಿಶೇಷ ನಿರ್ದೇಶನದಿಂದಾಗಿ, ರಾತ್ರಿಯಲ್ಲಿ ತಾಜ್ ಮಹಲ್ ನಲ್ಲಿ ಯಾವುದೇ ಲೈಟಿಂಗ್ ಮಾಡಲು ಸಾಧ್ಯವಿಲ್ಲ.
ಎರಡನೇ ಮಹಾಯುದ್ಧ ಗೆದ್ದಾಗ ವಿವಿಧ ದೀಪಗಳಿಂದ ಅಲಂಕಾರಗೊಂಡಿತ್ತಂತೆ ತಾಜ್ ಮಹಲ್
ಕಾಕತಾಳೀಯವೆಂಬಂತೆ, ತಾಜ್ ಮಹಲ್ ಆಚರಣೆಗಾಗಿ ರಾತ್ರಿಯಲ್ಲಿ ಬೆಳಗಿದ ಭಾರತದ ಮೊದಲ ಸ್ಮಾರಕವಾಗಿದೆ. ಆಗ್ರಾದ ಟೂರಿಸ್ಟ್ ವೆಲ್ಫೇರ್ ಚೇಂಬರ್ ನ ಸಂಪಾದಕ ವಿಶಾಲ್ ಶರ್ಮಾ ಅವರು "ಸುಮಾರು 77 ವರ್ಷಗಳ ಹಿಂದೆ ಮಿತ್ರಪಡೆಗಳು ಎರಡನೇ ಮಹಾಯುದ್ಧವನ್ನು ಗೆದ್ದಾಗ, ತಾಜ್ ಮಹಲ್ ಅನ್ನು ವಿವಿಧ ದೀಪಗಳಲ್ಲಿ ಬೆಳಗಿಸಲಾಯಿತು" ಎಂದು ಹೇಳಿದರು. ಅಷ್ಟೇ ಅಲ್ಲ, ಸ್ಮಾರಕದೊಳಗೆ ವಿಶೇಷ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿತ್ತು.
ತಾಜ್ ಮಹಲ್ ನಲ್ಲಿ ರಾತ್ರಿ ಲೈಟಿಂಗ್ ಏಕೆ ಇರುವುದಿಲ್ಲ
ಸಾಮಾಜಿಕ ಕಾರ್ಯಕರ್ತ ವಿಜಯ್ ಉಪಾಧ್ಯಾಯ ಅವರ ಪ್ರಕಾರ, 1997 ರ ಮಾರ್ಚ್ 20 ರಂದು ಪ್ರಸಿದ್ಧ ಪಿಯಾನೋ ವಾದಕ ಯಾನಿ ಅವರ ಸಂಗೀತ ಕಛೇರಿಯ ಸಮಯದಲ್ಲಿ ತಾಜ್ ಮಹಲ್ ಅನ್ನು ಕೊನೆಯ ಬಾರಿಗೆ ರಾತ್ರಿಯಲ್ಲಿ ಬೆಳಗಿಸಲಾಯಿತು. ಮರುದಿನ ಬೆಳಿಗ್ಗೆ ಎದ್ದು ನೋಡಿದರೆ ತಾಜ್ ಮಹಲ್ ಸತ್ತ ಕೀಟಗಳಿಂದ ತುಂಬಿರುವುದು ಕಂಡು ಬಂದಿತು. ಅದರ ನಂತರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ರಾಸಾಯನಿಕ ವಿಭಾಗವು ತಾಜ್ ಮಹಲ್ ಅನ್ನು ರಾತ್ರಿಯಲ್ಲಿ ಬೆಳಗಿಸಬಾರದು ಎಂದು ಶಿಫಾರಸು ಮಾಡಿತು. ಏಕೆಂದರೆ ಕೀಟಗಳು ಸ್ಮಾರಕದ ಅಮೃತಶಿಲೆಯನ್ನು ಹಾನಿಗೊಳಿಸುತ್ತವೆ ಎಂದು ಈ ನಿರ್ಧಾರವನ್ನು ತೆಗೆದುಕೊಂಡರು.
ಇದನ್ನೂ ಓದಿ: Independence Day: ಕಣ್ಣಿನೊಳಗೇ ತ್ರಿವರ್ಣ ಧ್ಜಜ ಮಾಡಿದ ತಮಿಳುನಾಡಿನ ರಾಜಾ!
ಅಂದಿನಿಂದ ಇಂದಿನವರೆಗೂ ತಾಜ್ ಮಹಲ್ ನಲ್ಲಿ ಬೆಳಕಿನ ಮೇಲಿನ ನಿಷೇಧವನ್ನು ತೆಗೆದು ಹಾಕಲಾಗಿಲ್ಲ. ಈ ದಿನಗಳಲ್ಲಿ ಅನೇಕ ಉತ್ತಮ ಬೆಳಕಿನ ಆಯ್ಕೆಗಳು ಲಭ್ಯವಿದ್ದರೂ ಸಹ ಯಾವುದನ್ನು ತಾಜ್ ಮಹಲ್ ಮೇಲೆ ಬಳಸಲಾಗಿಲ್ಲ ಎಂದು ಹೇಳಲಾಗುತ್ತಿದೆ.
ದೇಶದ ಸುಮಾರು 3,500 ಸ್ಮಾರಕಗಳಿಗೆ ಉಚಿತ ಪ್ರವೇಶ
'ಆಜಾದಿ ಕಾ ಅಮೃತ ಮಹೋತ್ಸವ' ಆಚರಣೆಯ ಭಾಗವಾಗಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸಂರಕ್ಷಿಸಲ್ಪಟ್ಟ ದೇಶದ ಸುಮಾರು 3,500 ಸ್ಮಾರಕಗಳಿಗೆ ಆಗಸ್ಟ್ 5 ಮತ್ತು 15 ರ ನಡುವೆ ಉಚಿತವಾಗಿ ಭೇಟಿ ನೀಡಬಹುದು. ಈ ನಿಯಮವು ತಾಜ್ ಮಹಲ್ ಗೂ ಅನ್ವಯವಾಗಲಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಗಂಗಾಪುರಂ ಕಿಶನ್ ರೆಡ್ಡಿ ಅವರು ಹೇಳಿದ್ದಾರೆ.
'ಆಜಾದಿ ಕಾ ಅಮೃತ ಮಹೋತ್ಸವ' ಆಚರಣೆ
ಕಾಕತಾಳೀಯವೆಂಬಂತೆ, ದೇಶವು ಸ್ವಾತಂತ್ರ್ಯದ 75ನೇ ವರ್ಷಕ್ಕೆ ಕಾಲಿಡುತ್ತಿರುವಾಗ, ಕೇಂದ್ರವು ಇಡೀ ವರ್ಷವನ್ನು ಆಚರಿಸಲು ಯೋಜಿಸಿದೆ. ಸ್ವಾತಂತ್ರ್ಯೋತ್ಸವದ ವಜ್ರಮಹೋತ್ಸವದಂದು 'ಆಜಾದಿ ಕಾ ಅಮೃತ ಮಹೋತ್ಸವ'ವನ್ನು ಆಚರಿಸಲಾಗುತ್ತಿದೆ. ಆಗಸ್ಟ್ ನಲ್ಲಿ ಸ್ವಾತಂತ್ರ್ಯದ ತಿಂಗಳು ಬಂದ ಕೂಡಲೇ ಆಚರಣೆಗಳು ಪ್ರಾರಂಭವಾಗಿವೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೇಶದ ಜನರು ತಮ್ಮ ಸಾಮಾಜಿಕ ಮಾಧ್ಯಮ ಚಿತ್ರಗಳಲ್ಲಿ ತ್ರಿವರ್ಣ ಧ್ವಜವನ್ನು ಪೋಸ್ಟ್ ಮಾಡಬೇಕು ಎಂದು ಸ್ವತಃ ಪ್ರಧಾನ ಮಂತ್ರಿ ಅವರೇ ವಿನಂತಿಸಿದ್ದಾರೆ.
ಇದನ್ನೂ ಓದಿ: Independence Day 2022: ಗೂಗಲ್‌ನಿಂದ 'ಇಂಡಿಯಾ ಕಿ ಉಡಾನ್' ಲಾಂಚ್! ಏನಿದು ಗೊತ್ತಾ ಹೊಸ ಯೋಜನೆ?
ಅವರ ಮನವಿಗೆ ಸ್ಪಂದಿಸಿ, ಕೇಂದ್ರದ ನಾಯಕರು ಮತ್ತು ಸಚಿವರ ಪ್ರೊಫೈಲ್ ಚಿತ್ರಗಳನ್ನು ಈಗಾಗಲೇ ಬದಲಾಯಿಸಲಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ತನ್ನ ಸಾಮಾಜಿಕ ಮಾಧ್ಯಮದಲ್ಲಿ ತ್ರಿವರ್ಣ ಧ್ವಜದ ಚಿತ್ರವನ್ನು ಸಹ ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ