ಮುಂಬೈ(ಜೂ.30): ಪ್ರತಿಷ್ಠಿತ ಮುಂಬೈ ತಾಜ್ ಹೋಟೆಲ್ಗೆ ಪಾಕಿಸ್ತಾನದಿಂದ ಬಾಂಬ್ ಬೆದರಿಕೆ ಬಂದಿದೆ. ಸೋಮವಾರ ಮಧ್ಯರಾತ್ರಿ 12.30ಕ್ಕೆ ಪಾಕಿಸ್ತಾನದ ಕರಾಚಿಯಿಂದ ಬಾಂಬ್ ಬೆದರಿಕೆ ಕರೆ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ ತಾಜ್ ಹೋಟೆಲ್ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇನ್ನು, ಮುಂಬೈನ ತಾಜ್ ಹೋಟೆಲ್ ಮತ್ತು ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್ಸ್ ಬಾಂಬ್ ಬೆದರಿಕೆ ಕರೆಗಳನ್ನು ಸ್ವೀಕರಿಸಿದ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ಧಾರೆ. ಎರಡು ಹೋಟೆಲ್ಗಳ ಸುತ್ತ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಹೀಗಾಗಿ ಯಾರೇ ಒಳಗೆ ಬರಬೇಕಾದರೂ, ಹೊರಗೆ ಹೋಗಬೇಕಾದರೂ ಪೊಲೀಸರ ಅನುಮತಿ ಪಡೆಯಬೇಕಿದೆ.
ಹೋಟೆಲ್ ಸುತ್ತ ಸಂಚಾರ ಮಾಡುತ್ತಿರುವ ವಾಹನಗಳ ತಪಾಸಣೆ ನಡೆಯುತ್ತಿದೆ. ಹಾಗೆಯೇ ಬಾಂಬ್ಗಾಗಿ ಪೊಲೀಸರ ಶೋಧಕಾರ್ಯ ಮುಂದುವರಿದಿದೆ. ಎಲ್ಲ ರೀತಿಯ ಮುಂಜಾಗೃತ ಕ್ರಮಗಳನ್ನು ಪೊಲೀಸ್ ಇಲಾಖೆ ಮಾಡಿದೆ.
ಇದನ್ನೂ ಓದಿ: ‘ವಿದೇಶಿ ಹೂಡಿಕೆದಾರರ ಹಕ್ಕು ರಕ್ಷಣೆ ಭಾರತದ ಹೊಣೆ – 59 ಆ್ಯಪ್ ನಿಷೇಧಿಸುವ ಕ್ರಮಕ್ಕೆ ಚೀನಾ ಕೆಂಗಣ್ಣು
ಮುಂಬೈನಲ್ಲಿ ತಾಜ್ ವೆಸ್ಟ್ ಹೋಟೆಲ್ ಮೇಲೆ ಉಗ್ರರು ನಡೆಸಿದ ದಾಳಿಗೆ 12 ವರ್ಷ ಕಳೆದಿದೆ. ಈ ದಾಳಿಯಲ್ಲಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಜನ ತೀವ್ರವಾಗಿ ಗಾಯಗೊಂಡು, ಶಾಶ್ವತವಾಗಿ ಅಂಗವಿಕಲರಾಗಿದ್ದಾರೆ. ಈ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಇನ್ನೂ ಹೆಚ್ಚುತ್ತಿತ್ತೇನೋ. ಆದರೆ ಅದನ್ನು ತಡೆದಿದ್ದು ನಮ್ಮ ದೇಶದ ಸೈನಿಕರು ಎಂಬುದು ಮಾತ್ರ ಕರಾಳ ಇತಿಹಾಸ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ