ಟೋಕಿಯೊ ಒಲಿಂಪಿಕ್ಸ್ನಲ್ಲಿ ನಡೆದ ಟೇಬಲ್ ಟೆನ್ನಿಸ್ ಮೊದಲ ಸುತ್ತಿನ ಪಂದ್ಯದ ವೇಳೆ ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ ಅವರು ರಾಷ್ಟ್ರೀಯ ತರಬೇತುದಾರ ಸೌಮ್ಯದೀಪ್ ರಾಯ್ ಅವರ ಸಲಹೆಗಳನ್ನು ತೆಗೆದುಕೊಳ್ಳಲು ನಿರಾಕರಿಸಿದರು. ವಿಶ್ವದ 62 ನೇ ಕ್ರಮಾಂಕದ ಮನಿಕಾ 94 ನೇ ಶ್ರೇಯಾಂಕಿತ ಬ್ರಿಟನ್ನ ಟಿನ್-ಟಿನ್ ಹೋ ವಿರುದ್ಧದ ಪಂದ್ಯವನ್ನು 4-0 ಅಂತರದಲ್ಲಿ ಗೆದ್ದರು.
ಆದರೆ ಕೋಚ್ ಕುಳಿತುಕೊಳ್ಳುವ ಸ್ಥಾನದಲ್ಲಿ ಯಾರೂ ಕುಳಿತುಕೊಳ್ಳದೆ ಇರುವುದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಗಮನ ಸೆಳೆಯಿತು. ಮನಿಕಾ ಅವರ ವೈಯಕ್ತಿಕ ತರಬೇತುದಾರ ಸನ್ಮಯ್ ಪರಂಜಪೆ ಅವರೊಂದಿಗೆ ಟೋಕಿಯೊಗೆ ಪ್ರಯಾಣಿಸಬೇಕು ಎಂದಿದ್ದರು ಈ ವಿಚಾರ ವಿವಾದದ ಸ್ವರೂಪ ಪಡೆದಿತ್ತು. ಆದರೆ ರಾಷ್ಟ್ರೀಯ ತಂಡದೊಂದಿಗೆ ಗೇಮ್ಸ್ ವಿಲೇಜ್ನಲ್ಲಿ ಉಳಿಯಲು ವೈಯಕ್ತಿಕ ಕೋಚ್ ಅವರಿಗೆ ಅವಕಾಶವಿರಲಿಲ್ಲ. ಆದ ಕಾರಣ ಅವರು ಖಾಸಗಿ ಹೋಟೆಲ್ನಲ್ಲಿ ಉಳಿದುಕೊಂಡಿದ್ದು ಮತ್ತು ತರಬೇತಿ ಅವಧಿಗಳಲ್ಲಿ ಮಾತ್ರ ಮನಿಕಾ ಜೊತೆ ಇರಲಿದ್ದಾರೆ ಎಂದು ವರದಿ ಹೇಳಿದೆ.
26 ರ ಹರೆಯದ ಮನಿಕಾ ಅವರು ತಮ್ಮ ಆಟದ ಗುಣಮಟ್ಟವನ್ನು ಹೆಚ್ಚಿಕೊಳ್ಳಲು ಆಟದ ವೇಳೆ ಕೋಚ್ ಪರಂಜಪೆ ಇರಬೇಕೆಂದು ಮನವಿ ಮಾಡಿದರು, ತಂಡದ ನಾಯಕ ಹಾಗೂ ಟಿಟಿಎಫ್ಐ ಸಲಹೆಗಾರ ಎಂ.ಪಿ. ಸಿಂಗ್ ಅವರು ಅಲ್ಲಿನ ಸಂಘಟಕರಿಗೆ ಮನಿಕಾ ಅವರ ಬೇಡಿಕೆಯನ್ನು ತಲುಪಿಸಿದರು ಆದರೆ ಈ ವೇಳೆಯಲ್ಲಿ ವೈಯಕ್ತಿಕ ಕೋಚ್ ಪ್ರವೇಶಕ್ಕೆ ಟೋಕಿಯೋ ಒಲಂಪಿಕ್ ಸಂಘಟಕರು ನಿರಾಕರಿಸಿದರು.
ವೈಯಕ್ತಿಕ ಕೋಚ್ ಪ್ರವೇಶಕ್ಕಾಗಿ ಮನಿಕಾ ಮಾಡಿದ ಮನವಿಯನ್ನು ನಿರಾಕರಿಸಿದ ನಂತರ, ನಾನು ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕಾಯಿತು ಈ ವೇಳೆ ನಾನು ರಾಷ್ಟ್ರೀಯ ತರಬೇತುದಾರ ರಾಯ್ ಅವರ ಸಲಹೆ ಪಡೆಯುವಂತೆ ಹೇಳಿದೆ ಆದರೆ ಅವರ ಸಲಹೆಯನ್ನು ತೆಗೆದುಕೊಳ್ಳಲು ಅವಳು ನಿರಾಕರಿಸಿದಳು "ಎಂದು ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಶರತ್ ಕಮಲ್ ಮತ್ತು ಮಾನಿಕಾ ಅವರ ಮಿಶ್ರ ಡಬಲ್ಸ್ ಪಂದ್ಯದ ವೇಳೆ ರಾಯ್ ಕೋರ್ಟ್ನಲ್ಲಿ ಕಾಣಿಸಿಕೊಂಡರು. ರಾಯ್ 2006 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಪುರುಷರ ತಂಡದ ಸದಸ್ಯ ಮತ್ತು ಭಾರತದ ಟೇಬಲ್ ಟೆನಿಸ್ ಶ್ರೇಷ್ಠ ಆಟಗಾರ ಶರತ್ಗೆ ದೀರ್ಘಕಾಲದವರೆಗೆ ಜೊತೆಗಾರರಾಗಿದ್ದವರು. ಈ ವಿಚಾರವಾಗಿ ಪ್ರತಿಕ್ರಿಯೆ ಪಡೆಯಲು ಮನಿಕಾ ಲಭ್ಯವಾಗಲಿಲ್ಲ.
ಇದನ್ನೂ ಓದಿ: ರಂಟೆ ಹೊಡಿಯೋಕೆ, ಹಾಲು ಕರೆಯೋಕೆ, ಚಕ್ಕಡಿ ಗಾಡಿ ಹೂಡುವುದಕ್ಕೂ ಸೈ ಈ ವಿಶೇಷ ಚೇತನ ಯುವತಿ
ಕೊರೋನಾ ಕಾರಣದಿಂದ ತಂಡದೊಂದಿಗೆ ಸಾಮಾನ್ಯಕ್ಕಿಂತ ಹೆಚ್ಚಿನ ಸಂಖ್ಯೆಯ ಸಹಾಯಕ ಸಿಬ್ಬಂದಿಗಳು ಹೋಗುವುದಕ್ಕೆ ಅನುಮತಿ ಇಲ್ಲ. ಆದರೆ ಪುಣೆ ಮೂಲದ ಪರಂಜಪೆ ಅವರನ್ನು ಟೋಕಿಯೊಗೆ ಪ್ರಯಾಣಿಸಲು ಅನುಮತಿ ನೀಡಲಾಗಿತ್ತು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ