ಕಾನೂನುಬದ್ಧವಾಗಿ ಮದುವೆಯಾದ ಪುರುಷ ಮತ್ತು ಮಹಿಳೆಯ ನಡುವಿನ ಲೈಂಗಿಕ ಸಂಭೋಗವು ಅದು ಬಲವಂತವಾಗಿ ಅಥವಾ ಪತ್ನಿಯ ಇಚ್ಛೆಗೆ ವಿರುದ್ಧವಾಗಿದ್ದರೂ ಕೂಡ ಅತ್ಯಾಚಾರವಲ್ಲ ಎಂದು ತೀರ್ಪು ನೀಡುವ ಮೂಲಕ ಛತ್ತೀಸ್‌ಗಢ್ ಹೈಕೋರ್ಟ್ ಇತ್ತೀಚೆಗೆ ವೈವಾಹಿಕ ಅತ್ಯಾಚಾರದ ಆರೋಪಿಯನ್ನು ಖುಲಾಸೆಗೊಳಿಸಿತು. ಇದಕ್ಕೆ ಪ್ರತಿಕ್ರಿಸಿರುವ ನಟಿ ತಾಪ್ಸಿ ಪನ್ನು ಈ ತೀರ್ಪು ನಾಚಿಕೆಗೇಡಿನ ತೀರ್ಪು ಎಂದಿದ್ದಾರೆ.
ನಮ್ಮ ಟ್ವಿಟ್ಟರ್ ಖಾತೆಯಲ್ಲಿ ಖಾಸಗಿ ವಾಹಿನಿಯೊಂದರ ಈ ತೀರ್ಪಿನ ಬಗ್ಗೆ ವಿಡಿಯೋ ಶೇರ್ ಮಾಡಿಕೊಂಡಿರುವ ಅವರು, ತೀರ್ಪಿನ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಬಿಲಾಸ್ಪುರ್ ಹೈಕೋರ್ಟ್ ಇತ್ತೀಚಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪಿನಲ್ಲಿ ಕಾನೂನುಬದ್ಧವಾಗಿ ಮದುವೆಯಾದ ಪತ್ನಿಯೊಂದಿಗೆ ಲೈಂಗಿಕ ಸಂಭೋಗ ಅಥವಾ ಯಾವುದೇ ಲೈಂಗಿಕ ಕ್ರಿಯೆಯು ಅತ್ಯಾಚಾರವಲ್ಲ, ಅದು ಬಲವಂತವಾಗಿದ್ದರೂ ಅಥವಾ ಆಕೆಯ ಇಚ್ಛೆಗೆ ವಿರುದ್ಧವಾಗಿದ್ದರೂ ಕೂಡ ಎಂದು ಹೇಳುವ ಮೂಲಕ ವಿವಾದ ಹುಟ್ಟು ಹಾಕಿದೆ.
Bas ab yehi sunna baaki tha . https://t.co/K2ynAG5iP6
— taapsee pannu (@taapsee) August 26, 2021
ಈ ತೀರ್ಪಿನ ವಿರುದ್ಧವಾಗಿ ತಾಪ್ಸಿ ಮಾತ್ರವಲ್ಲದೆ ಗಾಯಕಿ ಸೋನಾ ಮೊಹಾಪಾತ್ರಾ ಕೂಡ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ತಮ್ಮ ಸಾಮಾಜಿಕ ಜಾಲಾತಾಣ ಖಾತೆಯಲ್ಲಿ ಟ್ವೀಟ್ ಮಾಡಿರುವ ಸೋನಾ, ನನಗೆ ಈ ವಿಚಾರವನ್ನು ಓದುವಾಗ ಅಯ್ಯೋ ಅನಿಸುತ್ತದೆ, ಭಾರತದ ಬಗ್ಗೆ ಬರೆಯಲು ಸಾಧ್ಯವಿಲ್ಲ, ಎಲ್ಲವನ್ನುಭಾರತ ಮೀರಿದೆ ಎಂದಿದ್ದಾರೆ.
The sickness I feel reading this #India , is beyond anything I can write here. 🤢🤢🤢 https://t.co/uUm7l9bzxM
— Sona Mohapatra (@sonamohapatra) August 26, 2021
ಪ್ರಕರಣದಲ್ಲಿ, ಆರೋಪಿಯನ್ನು ಖುಲಾಸೆ ಮಾಡಲಾಗಿದೆ. ಆತನ ಹೆಂಡತಿಯೊಂದಿಗಿನ ಅಸಹಜ ದೈಹಿಕ ಸಂಬಂಧ ಎಂದು ಐಪಿಸಿ ಸೆಕ್ಷನ್ 377 ರ ಅಡಿಯಲ್ಲಿ ಆರೋಪ ಮಾಡಲಾಗಿತ್ತು ಹೈಕೋರ್ಟ್ ನೀಡಿದ ಈ ತೀರ್ಪು ವಿವಾದ ಸೃಷ್ಟಿ ಮಾಡಿದ್ದು, ಬಾಲಿವುಡ್ ತಾರೆಯರು ಸೇರಿದಂತೆ ನೆಟ್ಟಿಗರು ಇದರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ