Man Eater Tiger: ಹುಲಿಗಳು ನರಭಕ್ಷಕರಾಗಲು ಕಾರಣಗಳೇನು ಗೊತ್ತಾ? T-23 `ವ್ಯಾಘ್ರ’ ಸೆರೆಸಿಕ್ಕಿದ್ದೇ ಬಲು ರೋಚಕ!

Man Eater Tiger: ಅಕ್ಟೋಬರ್ 15ರಂದು T-23 ಎಂದು ಕರೆಯಲಾದ ಕುಖ್ಯಾತ ಹುಲಿ MDT-23 (ಮುದುಮಲೈ ವಿಭಾಗ 23) ಅನ್ನು ಸೆರೆಹಿಡಿಯಲಾಗಿತ್ತು. 21 ದಿನ ಸತತ ಕಾರ್ಯಾಚರಣೆಯ ನಂತರ, ಮಸಿನ ಗುಡಿ ಅರಣ್ಯ (Masinagudi Forest ) ಪ್ರದೇಶದಲ್ಲಿ ಹುಲಿಯನ್ನು ಸುತ್ತುವರಿದು ಸೆರೆಹಿಡಿಯಲಾಯಿತು.

ಚಿಕಿತ್ಸೆಗೆ ಸ್ಪಂದಿಸುತ್ತಿರುವ T-23 ಎಂಬ ಹೆಸರಿನ ಹುಲಿ

ಚಿಕಿತ್ಸೆಗೆ ಸ್ಪಂದಿಸುತ್ತಿರುವ T-23 ಎಂಬ ಹೆಸರಿನ ಹುಲಿ

  • Share this:
ತಮಿಳುನಾಡಿ(Tamilnadu)ನ ಜನರು ಈ ಹುಲಿ(Tiger) ಹೆಸರು ಕೇಳಿದರೆ ನಡುಗುತ್ತಿದ್ದರು. ಅಷ್ಟರ ಮಟ್ಟಿಗೆ ಈ ನರಭಕ್ಷಕ ಮಸಿನ ಗುಡಿ (Masinagudi) ಪ್ರದೇಶದ ಗ್ರಾಮಸ್ಥರನ್ನು ಕಾಡಿತ್ತು. ಈ ಹುಲಿಯನ್ನು ಕೊಲ್ಲಲೂ ಆದೇಶ ಕೂಡ ನೀಡಲಾಗಿತ್ತು. ಕೊನೆಗೂ ಅಕ್ಟೋಬರ್ 15ರಂದು T-23 ಎಂದು ಕರೆಯಲಾದ ಕುಖ್ಯಾತ ಹುಲಿ MDT-23 (ಮುದುಮಲೈ ವಿಭಾಗ 23) ಅನ್ನು ಸೆರೆಹಿಡಿಯಲಾಗಿತ್ತು. 21 ದಿನ ಸತತ ಕಾರ್ಯಾಚರಣೆಯ ನಂತರ, ಮಸಿನ ಗುಡಿ ಅರಣ್ಯ (Masinagudi Forest ) ಪ್ರದೇಶದಲ್ಲಿ ಹುಲಿಯನ್ನು ಸುತ್ತುವರಿದು ಸೆರೆಹಿಡಿಯಲಾಯಿತು. 4 ಜನರನ್ನು ತಿಂದು ತೇಗಿದ್ದ T-23 ಹೆಸರಿನ ಹುಲಿಗೆ ವಯಸ್ಸಾಗಿತ್ತು. ಅರವಳಿಕೆ ಕೊಟ್ಟರು ಹುಲಿ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಿತ್ತು. ಹಲವಾರು ಸವಾಲುಗಳ ನಡುವೆ ಆ ನರಭಕ್ಷಕನ್ನು ಅರಣ್ಯ ಇಲಾಖೆ(Forest Department)ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದರು.

5 ತಂಡ, 60 ಅಧಿಕಾರಿಗಳು,  21 ದಿನ!

ಸರಿಸುಮಾರು 60 ಅರಣ್ಯ ಅಧಿಕಾರಿಗಳನ್ನು 5 ತಂಡಗಳನ್ನಾಗಿ ವಿಭಜಿಸಲಾಯಿತು. ಐವರು ವೈದ್ಯರು, ಒಂದು ಡ್ರೋನ್, 25 ಕ್ಯಾಮೆರಾ ಟ್ರಾಪ್‌ಗಳು (ಮೊಬೈಲ್ ಕ್ಯಾಮೆರಾ) ನೆಟ್ ಗನ್, ಪೆಪ್ಪರ್ ಗನ್, ಮೂರು ಸ್ನಿಫರ್ ಶ್ವಾನಗಳು ಹಾಗೂ ಏಳು ಔಷಧ ಗನ್‌ಗಳನ್ನು ಬಳಸಿ ಮಸಿನಗುಡಿ ಹಾಗೂ ತಮಿಳುನಾಡಿನ ತೆಪ್ಪಕಾಡು ನಡುವಿನ ದಟ್ಟ ಕಾನನದಲ್ಲಿ ಹುಲಿ ಕಾರ್ಯಾಚರಣೆ ನಡೆಸಲಾಯಿತು. ಕೊನೆಗೂ ಅಕ್ಟೋಬರ್​ 15ರಂದು ಹುಲಿ ಸೆರೆಸಿಕ್ಕಿತ್ತು. ಅಕ್ಟೋಬರ್​ 16ರಂದು ಮಸಿನಗುಡಿಯಿಂದ ಚಾಮುಂಡಿ ಪ್ರಾಣಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ - ಕರ್ನಾಟಕದ ಮೈಸೂರು ಮೃಗಾಲಯಕ್ಕೆ ಹೊಂದಿಕೊಂಡಿರುವ ಹುಲಿ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರಕ್ಕೆ ಸಾಗಿಸಲಾಯಿತು. 

ಈಗ ಚೇತರಿಸಿಕೊಳ್ಳುತ್ತಿದೆ T-23 ಹುಲಿ

4 ಮನುಷ್ಯರನ್ನು ಕೊಂದಿರುವುದರಲ್ಲದೆ ಅರಣ್ಯದ ಸುತ್ತಮುತ್ತಲಿನ ಊರುಗಳಲ್ಲಿ ಜಾನುವಾರುಗಳನ್ನ ಈ ಹುಲಿ ಬೇಟೆಯಾಡಿತ್ತು. ಈ ಹುಲಿಯನ್ನ ಕೊಲ್ಲಲ್ಲು ಆದೇಶ ನೀಡಿದ್ದರೂ, ಜೀವಂತವಾಗಿ ಸೆರೆ ಹಿಡಿಯಲಾಗಿದೆ. ಆದರೂ ಹುಲಿ ಬದುಕುಳಿಯುತ್ತದೆ ಎಂಬುದನ್ನು ಈಗಲೇ ಹೇಳಲು ಆಗಲ್ಲ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಹುಲಿಯನ್ನು ಮೈಸೂರಿಗೆ ಅದು ಶಾಂತವಾಗಿತ್ತು. ಔಷಧ ನೀಡಿದ ಬಳಿಕ ಅದು ಗಾಯಗಳಿಂದ ಚೇತರಿಸಿಕೊಳ್ಳುತ್ತಿದೆ. ಹುಲಿಯು ಔಷಧಿಗೆ ಧನಾತ್ಮಕವಾಗಿ ಪ್ರತಿಕ್ರಿಯಿಸುತ್ತದೆಯೇ ಚೇತರಿಕೆ ಕಾಣಬಹುದೇ ಎಂಬುದನ್ನು ನಾವು ಕಾದು ನೋಡಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.ಇದನ್ನು ಓದಿ:  ನಾಲ್ಕು ಜನರನ್ನ ತಿಂದು ತೇಗಿದ ಹುಲಿರಾಯ! ಕಂಡಲ್ಲಿ ಗುಂಡಿಕ್ಕಿ ಕೊಲ್ಲುವಂತೆ ಆರ್ಡರ್

ಹುಲಿಗಳು ನರಭಕ್ಷಕಗಳಾಗಿ ಹೇಗೆ ಮಾರ್ಪಡುತ್ತವೆ?

ಪ್ರತಿಯೊಂದು ಹುಲಿಗೂ ತನ್ನದೇ ಆದ ವೈಯಕ್ತಿಕ ಇತಿಹಾಸವಿದ್ದು ಅವುಗಳಲ್ಲಿ ಕೆಲವು ಮಾತ್ರ ಕುಖ್ಯಾತ ನರಭಕ್ಷಕ ಪ್ರಾಣಿಗಳಾಗಿ ಬದಲಾಗುತ್ತವೆ. ಹುಲಿಗಳು ಸಾಮಾನ್ಯವಾಗಿ ಮಾನವರು ವಾಸಿಸುವ ಸ್ಥಳಗಳಿಗೆ ಭೇಟಿ ನೀಡುವುದಿಲ್ಲ. ಕಾಡಿನಲ್ಲಿ ಒಳ್ಳೆಯ ಆಹಾರಗಳು ಸಿಗದೇ ಇದ್ದರೆ ಅವು ಮನುಷ್ಯ ವಾಸಿಸುವ ಸ್ಥಳಗಳಿಗೆ ಬರುತ್ತವೆ. ಸಂಭೋಗದ ಸಮಯದಲ್ಲಿ ಮಾತ್ರವೇ 30-35 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಗಂಡುಹುಲಿಗಳು, ಹೆಣ್ಣು ಹುಲಿಗಳಿಗೆ ತಮ್ಮ ವಾಸಸ್ಥಾನವನ್ನು ಪ್ರವೇಶಿಸಲು ಅನುಮತಿಸುತ್ತವೆ. ಆದರೆ ಎರಡು ಶಕ್ತಿಶಾಲಿ ಗಂಡು ಹುಲಿಗಳು ಎಂದಿಗೂ ಒಂದೇ ಪ್ರದೇಶದಲ್ಲಿ ಕಂಡುಬರುವುದಿಲ್ಲ.

ಕಾಡು ಬಿಟ್ಟು ಬರುವುದು ವಯಸ್ಸಾದ ಹುಲಿಗಳು 

ಇತರೆ ಹುಲಿಗಳೊಂದಿಗೆ ಕಾದಾಡಲು ಶಕ್ತಿ ಇಲ್ಲದ ವಯಸ್ಸಾದ ಹುಲಿಗಳೇ ಹೆಚ್ಚು ಕಾಡು ಬಿಟ್ಟು ಬರುತ್ತವೆ. ಕಾಡಿನಲ್ಲಿ ಬೇಟೆಯಾಡಲು ಆಗದೇ, ಇತರೆ ಹುಲಿಗಳ ಎದುರು ಸೋತ ಹುಲಿಗಳು ಮನುಷ್ಯ ವಾಸಿಸುವ ಸ್ಥಳಗಳಿಗೆ ಆಹಾರ ಅರಸಿ ಬರುತ್ತವೆ. T -23 ಹುಲಿಯು ನರಭಕ್ಷಕನಾಗಲು ಇದೇ ಕಾರಣ ಎಂದು ಹೇಳಲಾಗುತ್ತಿದೆ. ಹುಲಿಯ ಮುಖದ ಕೆಳಗೆ ಹಾಗೂ ಎದೆಯ ಭಾಗದಲ್ಲಿ ಗಾಯಗಳನ್ನು ಹೊಂದಿದೆ. ಇದು ಬೇರೆ ಹುಲಿ ವಿರುದ್ಧ ಸೋತು ಹಳ್ಳಿಗಳಿಗೆ ಬಂದು ನರಭಕ್ಷಕ ಹುಲಿಯಾಗಿತ್ತು.

ಇದನ್ನು ಓದಿ : ನ್ನ ಮರಿಯನ್ನು ಉಳಿಸಿಕೊಳ್ಳಲು ಈ ಆನೆ ಮಾಡಿದ್ದೇನು ಗೊತ್ತಾ? ನೀವು ನೋಡಿದರೆ ದಂಗಾಗ್ತೀರಾ!

ನರಭಕ್ಷಕನಿಗೆ ಆ್ಯಂಟಿಬಯಾಟಿಕ್​ ನೀಡಿ ಚಿಕಿತ್ಸೆ

ಹುಲಿಯ ಗಾಯಗಳನ್ನು ಶುಚಿಗೊಳಿಸಿದ ನಂತರ ಹುಲಿಗೆ ಆ್ಯಂಟಿಬಯಾಟಿಕ್ ಮತ್ತು ನಂಜುನಿರೋಧಕ ಚಿಕಿತ್ಸೆಯನ್ನು ನೀಡಿದ್ದೇವೆ ಎಂದು ವೈದ್ಯ ಮದನ್ ಹೇಳಿದ್ದಾರೆ. ಹುಲಿಗಳ ಮೇಲಾಗುವ ಗಾಯಗಳು ಅವುಗಳ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ವೈದ್ಯರಾದ ಶ್ರೀಧರ್ ಹಾಗೂ ಮದನ್ ತಿಳಿಸುತ್ತಾರೆ. ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಹುಲಿಗೆ ಅರವಳಿಕೆಯನ್ನ ಹೆಚ್ಚು ನೀಡಲಾಗಿದೆ. ಹೀಗಾಗಿ ಹುಲಿಯನ್ನು ಶಾಂತಗೊಳಿಸಲು ನಿದ್ರಾಜನಕ ಅರವಳಿಕೆಯನ್ನು ನೀಡಲಾಗಿದೆ.
First published: