• Home
  • »
  • News
  • »
  • national-international
  • »
  • ಕೋವಿಶೀಲ್ಡ್ ಲಸಿಕೆ ಪಡೆದವರ ಯುರೋಪ್ ಪ್ರಯಾಣಕ್ಕೆ ಒಪ್ಪಿಗೆ: ಸ್ವಿಜರ್​​​ಲ್ಯಾಂಡ್​​ ಸೇರಿ 9 ದೇಶಗಳಲ್ಲಿ ಗ್ರೀನ್​​ಸಿಗ್ನಲ್​​

ಕೋವಿಶೀಲ್ಡ್ ಲಸಿಕೆ ಪಡೆದವರ ಯುರೋಪ್ ಪ್ರಯಾಣಕ್ಕೆ ಒಪ್ಪಿಗೆ: ಸ್ವಿಜರ್​​​ಲ್ಯಾಂಡ್​​ ಸೇರಿ 9 ದೇಶಗಳಲ್ಲಿ ಗ್ರೀನ್​​ಸಿಗ್ನಲ್​​

ಕೋವಿಶೀಲ್ಡ್​​, ಕೋವ್ಯಾಕ್ಸಿನ್​ ಲಸಿಕೆಗಳು

ಕೋವಿಶೀಲ್ಡ್​​, ಕೋವ್ಯಾಕ್ಸಿನ್​ ಲಸಿಕೆಗಳು

ಕೋವಿಶೀಲ್ಡ್​ ಲಸಿಕೆ ಪಡೆದವರು ಸ್ವಿಜರ್​​ಲ್ಯಾಂಡ್​​, ಆಸ್ಟ್ರಿಯಾ, ಜರ್ಮನಿ, ಸ್ಲೊವೇನಿಯಾ, ಐಲ್ಯಾಂಡ್​​, ಐರ್ಲೆಂಡ್​​, ಸ್ಟೇನ್​​ ಹಾಗೂ ಎಸ್ಟೋಲಿಯಾ ಹಾಗೂ ಗ್ರೀಸ್​ ರಾಷ್ಟ್ರಕ್ಕೆ ಪ್ರಯಾಣಿಸಬಹುದಾಗಿದೆ.

  • Share this:

ನವದೆಹಲಿ: ಭಾರತ ಸರ್ಕಾರದ ಮನವಿ ಮೇಲೆಗೆ ಕೋವಿಶೀಲ್ಡ್​ ಲಸಿಕೆ ಪಡೆದವರು ಯುರೋಪ್​​ ದೇಶಗಳ ಪ್ರಯಾಣಕ್ಕೆ ಐರೋಪ್ಯ ಒಕ್ಕೂಟ ಒಪ್ಪಿಗೆ ನೀಡಿದೆ. ಸಿರಂ ಕಂಪನಿಯ ಕೋವಿಶೀಲ್ಡ್​ ಲಸಿಕೆ ಪಡೆದವರು ಯುರೋಪಿನ್​ ಒಕ್ಕೂಟದಲ್ಲಿರುವ 9 ರಾಷ್ಟ್ರಗಳಿಗೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಈ ಮೊದಲು ಯುರೋಪ್​ ದೇಶಗಳ ಪ್ರಯಾಣದ ಷರತ್ತುಗಳಲ್ಲಿ ಕೋವಿಶೀಲ್ಡ್​ ಲಸಿಕೆಯನ್ನು ಹೊರಗಿಡಲಾಗಿತ್ತು. ಲಸಿಕೆ ಪಡೆದವರಷ್ಟೇ ವಿದೇಶ ಪ್ರಯಾಣ ಮಾಡಬಹುದು ಎಂದು ನಿಯಮ ರೂಪಿಸಲಾಗಿದೆ. ಯಾವ ಲಸಿಕೆ ಪಡೆದವರು ಪ್ರಯಾಣಕ್ಕೆ ಅರ್ಹರು ಎಂಬ ಪಟ್ಟಿಯಿಂದ ಕೋವಿಶೀಲ್ಡ್​ ಲಸಿಕೆಯನ್ನು ಹೊರಗಿಡಲಾಗಿತ್ತು.


ಭಾರತದಲ್ಲಿ ಹೆಚ್ಚಾಗಿ ಕೋವಿಶೀಲ್ಡ್​​, ಕೋವ್ಯಾಕ್ಸಿನ್​ ನೀಡುತ್ತಿದ್ದು, ಈ ಲಸಿಕೆಗಳಿಗೂ ವಿನಾಯಿತಿ ನೀಡುವಂತೆ ಐರೋಪ್ಯ​ ಒಕ್ಕೂಟವನ್ನು ಭಾರತ ಸರ್ಕಾರ ಕೇಳಿಕೊಂಡಿತ್ತು. ಭಾರತದ ಮನವಿ ಮೇಲೆಗೆ ಒಕ್ಕೂಟ ಕೋವಿಶೀಲ್ಡ್​​ ಲಸಿಕೆಯನ್ನು ವಿನಾಯಿತಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಜುಲೈ 1 ರಿಂದ ಜಾರಿಗೆ ಬರಲಿರುವ ಲಸಿಕೆ ಪಾಸ್‌ಪೋರ್ಟ್‌ಗಾಗಿ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಎರಡನ್ನೂ ತಮ್ಮ ವಿನಾಯಿತಿ ಪಟ್ಟಿಯಲ್ಲಿ ಸೇರಿಸಬೇಕೆಂದು ಭಾರತ ಬುಧವಾರ ಔಪಚಾರಿಕವಾಗಿ ವಿನಂತಿಸಿತ್ತು.


ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಕೋವಿಶೀಲ್ಡ್​ ಲಸಿಕೆ ಪಡೆದವರು ಸ್ವಿಜರ್​​ಲ್ಯಾಂಡ್​​, ಆಸ್ಟ್ರಿಯಾ, ಜರ್ಮನಿ, ಸ್ಲೊವೇನಿಯಾ, ಐಲ್ಯಾಂಡ್​​, ಐರ್ಲೆಂಡ್​​, ಸ್ಟೇನ್​​ ಹಾಗೂ ಎಸ್ಟೋಲಿಯಾ ಹಾಗೂ ಗ್ರೀಸ್​ ರಾಷ್ಟ್ರಕ್ಕೆ ಪ್ರಯಾಣಿಸಬಹುದಾಗಿದೆ. ಭಾರತ ಮನವಿಯನ್ನು ಐರೋಪ್ಯ ಒಕ್ಕೂಟ ಪುರಸ್ಕರಿಸಿದೆ. ಯುರೋಪ್​​ ರಾಷ್ಟ್ರಗಳಿಗೆ ಲಸಿಕೆ ಪಡೆದವರು ಮುಕ್ತವಾಗಿ ಸಂಚರಿಸಬಹುದು.


ಭಾರತೀಯ ಸಿನಿಮಾಗಳು ಸಾಂಗ್​ ಶೂಟಿಂಗ್​ಗಾಗಿ ಹೆಚ್ಚಾಗಿ ಸ್ವಿಜರ್​ಲ್ಯಾಂಡ್​ ಸೇರಿದಂತೆ ಯುರೋಪ್​ ದೇಶಗಳಿಗೆ ತೆರಳುವುದು ಹೆಚ್ಚು. ಕೊರೊನಾ ಸಾಂಕ್ರಾಮಿಕ ರೋಗದ ಬಳಿಕ ಮತ್ತೆ ಅನುಮತಿ ಸಿಕ್ಕಿರುವುದರಿಂದ ಸಿನಿಮಾ ತಂಡಗಳು ಈ ದೇಶಗಳತ್ತ ಮುಖ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

Published by:Kavya V
First published: