Rahul Gandhi: ದ್ವೇಷದ ಬುಲ್ಡೋಜರ್​​ಗಳನ್ನು ಆಫ್ ಮಾಡಿ: PM Modi ವಿರುದ್ಧ ರಾಹುಲ್ ವಾಗ್ದಾಳಿ

"ಮೋದಿ ಜೀ, ವಿದ್ಯುತ್ ಕಡಿತವು ಸಣ್ಣ ಕೈಗಾರಿಕೆಗಳನ್ನು ನಾಶ ಮಾಡುತ್ತದೆ, ಹೆಚ್ಚಿನ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತದೆ. ದ್ವೇಷದ ಬುಲ್ಡೋಜರ್‌ಗಳನ್ನು ಆಫ್ ಮಾಡಿ ಮತ್ತು ವಿದ್ಯುತ್ ಸ್ಥಾವರಗಳನ್ನು ಆನ್ ಮಾಡಿ"

ರಾಹುಲ್​ ಗಾಂಧಿ

ರಾಹುಲ್​ ಗಾಂಧಿ

  • Share this:
ನವದೆಹಲಿ: ದೆಹಲಿ ಮತ್ತು ಮಧ್ಯಪ್ರದೇಶದ (Delhi and Madhya Pradesh) ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಬುಲ್ಡೋಜರ್‌ಗಳ (Bulldozers) ಬಳಕೆಗೆ ಸಂಬಂಧಿಸಿದಂತೆ ಕೇಂದ್ರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Congress leader Rahul Gandhi), "ದ್ವೇಷದ ಬುಲ್ಡೋಜರ್‌ಗಳನ್ನು" ಆಫ್ ಮಾಡಿ ಮತ್ತು ವಿದ್ಯುತ್ ಸ್ಥಾವರಗಳನ್ನು ಆನ್ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತಿನಲ್ಲೇ ತಿವಿದಿದ್ದಾರೆ. ದೆಹಲಿಯ ಹಿಂಸಾಚಾರ ಪೀಡಿತ ಜಹಾಂಗೀರ್‌ಪುರಿ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿಯು ಗಲಭೆಯಲ್ಲಿ ತೊಡಗಿದೆ ಎಂದು ಆರೋಪಿಸುತ್ತಿರುವ ಜನರ ವಿರುದ್ಧ ಅತಿಕ್ರಮಣ ವಿರೋಧಿ ಕಾರ್ಯಾಚರಣೆಯಲ್ಲಿ ಬುಲ್ಡೋಜರ್‌ಗಳ ಬಳಕೆಯನ್ನು ರಾಹುಲ್​ ಗಾಂಧಿ ಖಂಡಿಸಿದರು.

ವಿದ್ಯುತ್ ಸ್ಥಾವರಗಳನ್ನು ಆನ್ ಮಾಡಿ

"ಮೋದಿ ಜೀ, ವಿದ್ಯುತ್ ಕಡಿತವು ಸಣ್ಣ ಕೈಗಾರಿಕೆಗಳನ್ನು ನಾಶ ಮಾಡುತ್ತದೆ, ಹೆಚ್ಚಿನ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತದೆ. ದ್ವೇಷದ ಬುಲ್ಡೋಜರ್‌ಗಳನ್ನು ಆಫ್ ಮಾಡಿ ಮತ್ತು ವಿದ್ಯುತ್ ಸ್ಥಾವರಗಳನ್ನು ಆನ್ ಮಾಡಿ" ಎನ್ನುವ ಮೂಲಕ ವಿದ್ಯುತ್​ ಕಡಿತವನ್ನು ಉಲ್ಲೇಖಿಸಿ ವ್ಯಂಗ್ಯವಾಡಿದರು. ಬುಲ್ಡೋಜರ್‌ಗಳಿಂದ ಮನೆಗಳನ್ನು ಕೆಡವುವುದಷ್ಟೇ ಅಲ್ಲ, ನಮ್ಮ ಪ್ರತಿಷ್ಠೆಯನ್ನೂ ಕೆಡವಲಾಗುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್​ ಮಾಡಿದೆ.

ದ್ವೇಷದ ಬುಲ್ಡೋಜರ್ ಮೇಲೆ ಸವಾರಿ ಮಾಡುವ ಮೂಲಕ ಆಡಳಿತಾರೂಢ ಬಿಜೆಪಿ ಸಂಪೂರ್ಣವಾಗಿ ವಿಚಲಿತವಾಗಿದೆ. ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿಯವರು ಈ ಕೆಳಮಟ್ಟಕ್ಕೆ ಇಳಿದಿದ್ದಾರೆ. ಆದ್ದರಿಂದಲೇ ಇದರ ವಿರುದ್ಧ ಧ್ವನಿ ಎತ್ತುವ ಅಗತ್ಯವಿದೆ.

ಕೇವಲ 8 ದಿನಗಳಿಗೆ ಆಗುವಷ್ಟು ಕಲ್ಲಿದ್ದಲು ದಾಸ್ತಾನು ಉಳಿದಿದೆ

ದೇಶದಲ್ಲಿ ಕಲ್ಲಿದ್ದಲು ಕೊರತೆಯ ವಿಷಯವನ್ನು ಪ್ರಸ್ತಾಪಿಸಿದರು. ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ಕಡಿಮೆಯಾದ ಕಾರಣ ಭಾರತವು ವಿದ್ಯುತ್​ ಕೊರತೆಯನ್ನು ಎದುರಿಸುತ್ತಿದೆ. ಎಂಟು ವರ್ಷಗಳ ಆಡಳಿತದ ಪರಿಣಾಮವಾಗಿ ಭಾರತದಲ್ಲಿ ಕೇವಲ 8 ದಿನಗಳ ಕಲ್ಲಿದ್ದಲು ದಾಸ್ತಾನು ಇದೆ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. "ಭಾರತದಲ್ಲಿ ಕೇವಲ 8 ದಿನಗಳಿಗೆ ಆಗುವಷ್ಟು ಕಲ್ಲಿದ್ದಲು ದಾಸ್ತಾನು ಉಳಿದಿದೆ. ಬಿಜೆಪಿಯ ದ್ವೇಷದ ರಾಜಕೀಯದಿಂದಾಗಿ ಬೀದಿಗಳಲ್ಲಿ ಉರಿಯುತ್ತಿರುವ ಬೆಂಕಿಯು ಮನೆಗಳನ್ನು ಬೆಳಗಿಸುವುದಿಲ್ಲ" ಎಂದು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹೇಳಿದೆ.

ಇದನ್ನೂ ಓದಿ: Jahangirpuri: ಗಲಭೆ ಪೀಡಿತ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳ ನೆಲಸಮ ಕಾರ್ಯಾಚರಣೆಗೆ ಸುಪ್ರೀಂ ತಡೆ

ಬೃಂದಾ ಕಾರಂಟ್​ ಆಕ್ರೋಶ

ಘಟನೆ ಕುರಿತು ಪ್ರತಿಕ್ರಿಯಿಸಿದ ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್, ಅಕ್ರಮವಾಗಿ ತೆರವು ಕಾರ್ಯಾಚರಣೆಗೆ ಮುಂದಾಗಲಾಗಿದೆ. ಸುಪ್ರೀಂ ಕೋರ್ಟ್​ ಆದೇಶದ ನಂತರವೂ ಕಾರ್ಯಾಚರಣೆ ಮುಂದುವರೆಸಿದ್ದ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಅವರು ನೆಲಸಮ ಕಾರ್ಯಾಚರಣೆ ನಿಲ್ಲಿಸಲಾಗಿದ್ದು, ಜಹಾಂಗೀರ್‌ಪುರದ ಜನರಿಗೆ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ಮನವ ಮಾಡಿದರು. ಅಕ್ರಮ ತೆರುವು ಪ್ರಕ್ರಿಯೆ ಸಂವಿಧಾನಕ್ಕೆ ವಿರುದ್ಧವಾಗಿತ್ತು ಎಂದು ಕಿಡಿಕಾರಿದರು.

ಏಪ್ರಿಲ್ 16 ರಂದು ಜಹಾಂಗೀರಪುರಿ ಮೂಲಕ ಹನುಮ ಜಯಂತಿ ಮೆರವಣಿಗೆಗೆ ಸಾಗುವಾಗ ಗಲಭೆಕೋರರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಗುಪ್ತಾ ಹೇಳಿದ್ದಾರೆ. ಇದೇ ವೇಳೆ ಅವರು, ಘಟನೆಗೆ ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಅತಿಕ್ರಮಣಗಳು ಮತ್ತು ಅಕ್ರಮ ಕಟ್ಟಡಗಳ ನಿರ್ಮಾಣವೂ ಕಾರಣ ಎಂದು ಆರೋಪಿಸಿದರು. ಅಲ್ಲದೇ, ಗಲಭೆಕೋರರ ಅಕ್ರಮ ನಿರ್ಮಾಣಗಳು ಮತ್ತು ಅತಿಕ್ರಮಣಗಳನ್ನು ಗುರುತಿಸಬೇಕು. ಇವುಗಳ ನೆಲಸಮಕ್ಕೆ ಶೀಘ್ರವಾಗಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಮೇಯರ್ ರಾಜಾ ಇಕ್ಬಾಲ್‌ಗೆ ಪತ್ರ ಬರೆದಿದ್ದರು.
Published by:Kavya V
First published: