• Home
 • »
 • News
 • »
 • national-international
 • »
 • Gujarat: ಹಿಂದೂ ಧರ್ಮದವರೇ ಸ್ವಿಗ್ಗಿ ಪಾರ್ಸೆಲ್ ತಂದು ಕೊಡ್ಬೇಕು! ಗ್ರಾಹಕನ ಬೇಡಿಕೆಗೆ ನೆಟ್ಟಿಗರಿಂದ ಕ್ಲಾಸ್

Gujarat: ಹಿಂದೂ ಧರ್ಮದವರೇ ಸ್ವಿಗ್ಗಿ ಪಾರ್ಸೆಲ್ ತಂದು ಕೊಡ್ಬೇಕು! ಗ್ರಾಹಕನ ಬೇಡಿಕೆಗೆ ನೆಟ್ಟಿಗರಿಂದ ಕ್ಲಾಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಹಾರಕ್ಕೆ ಯಾವುದೇ ರೀತಿಯ ಧರ್ಮವಿರುವುದಿಲ್ಲ ಅಂತ ಹೇಳುವುದನ್ನು ನಾವು ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ಸ್ವಿಗ್ಗಿ ಗ್ರಾಹಕ ಆಹಾರ ನೀಡುವವರ ಬಗ್ಗೆ ತುಂಬಾನೇ ನಿರ್ದಿಷ್ಟವಾಗಿರುವಂತೆ ಕಾಣುತ್ತಿದೆ ನೋಡಿ. ಫುಡ್ ಅಗ್ರಿಗೆಟರ್ ಅಪ್ಲಿಕೇಶನ್ ನಲ್ಲಿರುವ ಸೂಚನೆ ವಿಭಾಗದಲ್ಲಿ ತನ್ನ ಆಹಾರವನ್ನು ಹಿಂದೂ ಡೆಲಿವರಿ ಬಾಯ್ ತಲುಪಿಸಬೇಕು ಎಂದು ಹೇಳಿದ್ದಾರೆ ನೋಡಿ.

ಮುಂದೆ ಓದಿ ...
 • News18 Kannada
 • Last Updated :
 • Gujarat, India
 • Share this:

  ಸಾಮಾನ್ಯವಾಗಿ ನಾವು ಯಾವುದೋ ಒಂದು ಕೆಲಸದಲ್ಲಿ ಬ್ಯುಸಿಯಾಗಿರುವುದರಿಂದ (Busy) ಹೊರಗೆ ಹೊಟೇಲ್ (Hotel) ​ಗೆ ಹೋಗಿ ಊಟ ಮಾಡುವಷ್ಟು ಸಮಯ ಇರದೇ ಇದ್ದಾಗ ನಮ್ಮ ಮೊಬೈಲ್ (Mobile)  ನಲ್ಲಿ ಡೌನ್ಲೋಡ್ (Download) ಮಾಡಿಕೊಂಡಿರುವ ಫುಡ್ ಅಗ್ರಿಗೆಟರ್ ಅಪ್ಲಿಕೇಶನ್ (Application) ನಲ್ಲಿ ನಮಗೆ ಬೇಕಾದ ಹೊಟೇಲ್ ನಿಂದ ಇಷ್ಟವಾದ ಆಹಾರವನ್ನು (Food) ಆರ್ಡರ್ (Order) ಮಾಡಿಕೊಳ್ಳುತ್ತೇವೆ. ಆ ಫುಡ್ ಅಗ್ರಿಗೆಟರ್ ಅಪ್ಲಿಕೇಶನ್ ನಲ್ಲಿ ನಮಗೆ ಊಟ ತಂದು ತಲುಪಿಸುವ  ಡೆಲಿವರಿ (Food deliveryಬಾಯ್ ಗೆ ಏನಾದರೂ ಸೂಚನೆಗಳನ್ನು ಎಂದರೆ ಮನೆಯ (Home) ಬಾಗಿಲಿಗೆ ಊಟದ ಪ್ಯಾಕೆಟ್ ಅನ್ನು ಸಿಕ್ಕಿಸಿ ಹೋಗಿ, ಬೆಲ್ ಬಾರಿಸಬೇಡಿ ಅಥವಾ ಬರುವಾಗ 500 ರೂಪಾಯಿಗೆ ಚಿಲ್ಲರೆ ತೆಗೆದುಕೊಂಡು ಬನ್ನಿ ಮತ್ತು ಊಟದ ಜೊತೆಗೆ ಈರುಳ್ಳಿ  (Onion) ಮತ್ತು ನಿಂಬೆಹಣ್ಣನ್ನು (lemon) ಕಳುಹಿಸಬೇಡಿ ಅಂತೆಲ್ಲಾ ಗ್ರಾಹಕರು ಸೂಚನೆಯನ್ನು ಬರೆಯಬಹುದು. ಆ ಡೆಲಿವರಿ ಬಾಯ್ ನಿಮ್ಮ ಸೂಚನೆಗಳನ್ನು ಚಾಚು ತಪ್ಪದೆ ಪಾಲಿಸುತ್ತಾರೆ ಮತ್ತು ಇದೆಲ್ಲಾ ಗ್ರಾಹಕರ (Coustemer) ಅನುಕೂಲಕ್ಕಾಗಿ ಫುಡ್ ಅಗ್ರಿಗೆಟರ್ ಗಳು ತಮ್ಮ ಮೊಬೈಲ್ ಅಪ್ಲಿಕೇಶನ್ ನಲ್ಲಿ ನೀಡಿರುತ್ತಾರೆ ಅಂತ ಹೇಳಬಹುದು. ಆದರೆ ಇಲ್ಲೊಬ್ಬ ಗ್ರಾಹಕ ಏನಂತ ಸೂಚನೆ ನೀಡಿದ್ದಾರೆ ನೀವೇ ನೋಡಿ.


  ಆಹಾರವನ್ನು ಹಿಂದೂ ಡೆಲಿವರಿ ಬಾಯ್ ತಲುಪಿಸಬೇಕಂತೆ!:


  ಆಹಾರಕ್ಕೆ ಯಾವುದೇ ರೀತಿಯ ಧರ್ಮವಿರುವುದಿಲ್ಲ ಅಂತ ಹೇಳುವುದನ್ನು ನಾವು ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ಸ್ವಿಗ್ಗಿ ಗ್ರಾಹಕ ಆಹಾರ ನೀಡುವವರ ಬಗ್ಗೆ ತುಂಬಾನೇ ನಿರ್ದಿಷ್ಟವಾಗಿರುವಂತೆ ಕಾಣುತ್ತಿದೆ ನೋಡಿ. ಫುಡ್ ಅಗ್ರಿಗೆಟರ್ ಅಪ್ಲಿಕೇಶನ್ ನಲ್ಲಿರುವ ಸೂಚನೆ ವಿಭಾಗದಲ್ಲಿ ತನ್ನ ಆಹಾರವನ್ನು ಹಿಂದೂ ಡೆಲಿವರಿ ಬಾಯ್ ತಲುಪಿಸಬೇಕು ಎಂದು ಹೇಳಿದ್ದಾರೆ ನೋಡಿ.


  ಫುಡ್ ಅಗ್ರಿಗೇಟರ್ ಅಪ್ಲಿಕೇಶನ್ ನಲ್ಲಿ ನೀಡಲಾದ ಸೂಚನೆಯ ಆಯ್ಕೆಯಲ್ಲಿ, ಈ ಗ್ರಾಹಕ 'ದಯವಿಟ್ಟು ಹಿಂದೂ ಡೆಲಿವರಿ ವ್ಯಕ್ತಿಗೆ ಮಾತ್ರ ನನಗೆ ಆಹಾರ ತಲುಪಿಸುವ ಅವಕಾಶ ನೀಡಿ' ಎಂದು ಉಲ್ಲೇಖಿಸಿದ್ದಾರೆ.


  ಈ ಸೂಚನೆ ಬಗ್ಗೆ ಧ್ವನಿ ಎತ್ತಿದ ಶೇಖ್ ಸಲಾವುದ್ದೀನ್:


  ಈ ಸೂಚನೆ ಬೆಳಕಿಗೆ ಬಂದ ನಂತರ, ತೆಲಂಗಾಣ ಗಿಗ್ ಮತ್ತು ಪ್ಲಾಟ್ಫಾರ್ಮ್ ವರ್ಕರ್ಸ್ ಯೂನಿಯನ್ (ಟಿಜಿಪಿಡಬ್ಲ್ಯೂಯು) ಅಧ್ಯಕ್ಷ ಶೇಖ್ ಸಲಾವುದ್ದೀನ್ ಈ ಸೂಚನೆಯ ಸ್ಕ್ರೀನ್ ಶಾಟ್ ಅನ್ನು ತೆಗೆದುಕೊಂಡು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.


  ಅಷ್ಟೇ ಅಲ್ಲದೆ ಇವರು ಗ್ರಾಹಕರ ಇಂತಹ ಮನವಿಗಳ ವಿರುದ್ಧ ಒಂದು ಸ್ಪಷ್ಟವಾದ ನಿಲುವು ತೆಗೆದುಕೊಳ್ಳುವಂತೆ ಫುಡ್ ಅಗ್ರಿಗೆಟರ್ ಸ್ವಿಗ್ಗಿಯನ್ನು ವಿನಂತಿಸಿಕೊಂಡಿದ್ದು, ‘ನೀವು ನಿಮ್ಮ ವ್ಯವಹಾರವನ್ನು ಅನೇಕ ಕಾರ್ಮಿಕರ ಸಹಾಯದಿಂದ ಮತ್ತು ಬೆಂಬಲದಿಂದ ನಡೆಸುತ್ತಿರುತ್ತೀರಿ. ಕೆಲಸದಲ್ಲಿ ಅವರ ಸುರಕ್ಷತೆ ಮತ್ತು ಘನತೆಯನ್ನು ಕಾಪಾಡುವ ಸಂಪೂರ್ಣ ಜವಾಬ್ದಾರಿ ನಿಮ್ಮದಾಗಿರುತ್ತದೆ‘ ಎಂದು ಅವರು ಬರೆದಿದ್ದಾರೆ.


  ಇದನ್ನೂ ಓದಿ: Swiggy: ಆರ್ಡರ್​ ಲೇಟಾಯ್ತು ಅಂತ ಗುರ್​ ಅಂತಿದ್ದ ವ್ಯಕ್ತಿ; ಡೆಲಿವರಿ ಬಾಯ್ ಬಂದಾಗ ಮಾತ್ರ ಆಗಿದ್ದೇ ಬೇರೆ!
  ಈ ಬಗ್ಗೆ  ಪ್ರತಿಕ್ರಿಯಿಸದ ಸ್ವಿಗ್ಗಿ :


  ಈ ಘಟನೆ ಬೆಳಕಿಗೆ ಬಂದ ನಂತರ ಸಹ ಫುಡ್ ಅಗ್ರಿಗೆಟರ್ ಸ್ವಿಗ್ಗಿ ಇನ್ನೂ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಈ ರೀತಿಯ ಘಟನೆ ಹೈದರಾಬಾದಿನಲ್ಲೂ ಈ ಹಿಂದೆ ನಡೆದಿತ್ತು. ಅಲ್ಲಿನ ಡೆಲಿವರಿ ಬಾಯ್ ಗಳು ಇದೇ ರೀತಿಯ ಸನ್ನಿವೇಶಗಳನ್ನು ಎದುರಿಸಿದ್ದರು.


  ಇದನ್ನೂ ಓದಿ:  Swiggy: ಸ್ವಿಗ್ಗಿಯಲ್ಲಿ ಆರ್ಡರ್ ಮಾಡ್ತಿದ್ರೆ ಇಲ್ಲಿಯವರೆಗೆ ಎಷ್ಟು ಖರ್ಚು ಮಾಡಿದ್ದೀರಿ ಅನ್ನೋದನ್ನೂ ಹೀಗೆ ನೋಡಬಹುದು


  ಈ ವರ್ಷದ ಆಗಸ್ಟ್ ತಿಂಗಳಲ್ಲಿ ಹೈದರಾಬಾದಿನ ಸ್ವಿಗ್ಗಿ ಗ್ರಾಹಕರೊಬ್ಬರು 'ಮುಸ್ಲಿಂ ಡೆಲಿವರಿ ಪರ್ಸನ್ ಬೇಡ' ಎಂದು ಸೂಚನೆಯಲ್ಲಿ ಬರೆದಿದ್ದರು. ಇದಕ್ಕೂ ಮೊದಲು, ಹೈದರಾಬಾದ್ ನ ಸ್ವಿಗ್ಗಿಯ ಇನ್ನೊಬ್ಬ ಗ್ರಾಹಕ 'ತುಂಬಾ ಕಡಿಮೆ ಮಸಾಲೆಯುಕ್ತವಾಗಿದೆ ಮತ್ತು ದಯವಿಟ್ಟು ಹಿಂದೂ ಡೆಲಿವರಿ ಬಾಯ್ ಅನ್ನು ಆಯ್ಕೆ ಮಾಡಿ. ಎಲ್ಲಾ ರೇಟಿಂಗ್ ಗಳು ಇದನ್ನು ಆಧರಿಸಿರುತ್ತವೆ' ಎಂದು ಬರೆದಿದ್ದರು.


  ಸ್ವಿಗ್ಗಿ ಮಾತ್ರವಲ್ಲ, ಮತ್ತೊಂದು ಫುಡ್ ಡೆಲಿವರಿ ಕಂಪನಿ ಜೊಮ್ಯಾಟೋ ಕೂಡ ಇದೇ ರೀತಿಯ ಸೂಚನೆಗಳನ್ನು ಗ್ರಾಹಕರಿಂದ ಪಡೆದಿವೆ ಎಂದು ಹೇಳಲಾಗುತ್ತಿದೆ. ಆ ಸಮಯದಲ್ಲಿ, ಜೊಮ್ಯಾಟೋ ಸಿಇಒ ಮತ್ತು ಸಂಸ್ಥಾಪಕ ದೀಪಿಂದರ್ ಗೋಯಲ್ ಟ್ವೀಟ್ ಮಾಡಿ "ನಮ್ಮ ಗೌರವಾನ್ವಿತ ಗ್ರಾಹಕರು ಮತ್ತು ಪಾಲುದಾರರ ವೈವಿಧ್ಯತೆಯ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ. ನಾವು ಯಾವುದೇ ವ್ಯವಹಾರವನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ" ಎಂದು ಹೇಳಿದ್ದರು.

  First published: