Swiggy Delivery Boy: ಪಾರ್ಸಲ್ ತಡವಾಗಿದ್ದಕ್ಕೆ ಹೋಟೆಲ್ ಮಾಲೀಕನನ್ನು ಗುಂಡಿಕ್ಕಿ ಕೊಂದ ಸ್ವಿಗ್ಗಿ ಡಿಲಿವರಿ ಬಾಯ್!

shoots restaurant owner : ಬಿರಿಯಾನಿ ನೀಡುವುದು ತಡವಾಗಿದೆ. ಇದರಿಂದ ರೆಸ್ಟೋರೆಂಟ್ ಸಿಬ್ಬಂದಿ ಮತ್ತು ಡಿಲಿವರಿ ಬಾಯ್​​​​ ನಡುವೆ ವಾಗ್ವಾದ ನಡೆದಿದೆ. ಡೆಲಿವರಿ ಏಜೆಂಟ್ ಹೋಟೆಲ್​​ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣ ರೆಸ್ಟೋರೆಂಟ್ ಮಾಲೀಕರು ಮಧ್ಯಪ್ರವೇಶಿಸಿದ್ದಾರೆ. ಆಗ ಡೆಲಿವರಿ ಏಜೆಂಟ್ ಆತನ ತಲೆಗೆ ಗುಂಡು ಹಾರಿಸಿದ್ದಾನೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
Swiggy delivery boy shoots : ಹಗಲು-ರಾತ್ರಿ ಫುಡ್​​ ಡಿಲಿವರಿ ಮಾಡುವ ಸಂಸ್ಥೆಗಳ ಸಂಬಂಧ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ದೆಹಲಿ ಸಮೀಪವಿರುವ ಯುಪಿಯ ಗ್ರೇಟರ್​​ ನೋಯ್ಡಾದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಊಟ ಪಾರ್ಸಲ್​​ ತಡ ಮಾಡಿದ್ದಕ್ಕೆ ಹೋಟೆಲ್​​ ಮಾಲೀಕನನ್ನು ಸ್ವಿಗ್ಗಿ ಡಿಲಿವರಿ ಬಾಯ್​ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ನಡೆದಿದೆ. ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿ ಡೆಲಿವರಿ ಬಾಯ್ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದ ಹೋಟೆಲ್​​ ಮಾಲೀಕ ಸುನೀಲ್ ಅಗರ್ವಾಲ್ ಎಂದು ಗುರುತಿಸಲಾಗಿದೆ. ಕೊಲೆಯಾದ ಸುನೀಲ್ ಅಗರ್ವಾಲ್ ಇಲ್ಲಿನ ಮಿತ್ರ ಎಂಬ ವಸತಿ ಸಂಕೀರ್ಣದಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದರು.

ಗ್ರಾಹಕರು ಆನ್​ಲೈನ್​​​ ಫುಡ್​ ಡಿಲಿವರಿ ಆ್ಯಪ್​​ ಸ್ವಿಗ್ಗಿ ಮೂಲಕ ಸುನೀಲ್ ಅಗರ್ವಾಲ್ ಹೋಟೆಲ್​​ನಲ್ಲಿ ಚಿಕಿನ್​ ಬಿರಿಯಾನಿ ಆರ್ಡರ್​ ಮಾಡಿದ್ದರು. ಪಾರ್ಸಲ್​​ ತೆಗೆದುಕೊಳ್ಳಲು ಡಿಲಿವರಿ ಬಾಯ್​​ ಹೋಟೆಲ್​​ ಬಳಿ ಬಂದಿದ್ದರು. ಈ ವೇಳೆ ಬಿರಿಯಾನಿ ನೀಡುವುದು ತಡವಾಗಿದೆ. ಇದರಿಂದ ರೆಸ್ಟೋರೆಂಟ್ ಸಿಬ್ಬಂದಿ ಮತ್ತು ಡಿಲಿವರಿ ಬಾಯ್​​​​ ನಡುವೆ ವಾಗ್ವಾದ ನಡೆದಿದೆ. ಡೆಲಿವರಿ ಏಜೆಂಟ್ ಹೋಟೆಲ್​​ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣ ರೆಸ್ಟೋರೆಂಟ್ ಮಾಲೀಕರು ಮಧ್ಯಪ್ರವೇಶಿಸಿದ್ದಾರೆ. ಅಗರ್ವಾಲ್ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದಾಗ, ಡೆಲಿವರಿ ಏಜೆಂಟ್ ಆತನ ತಲೆಗೆ ಗುಂಡು ಹಾರಿಸಿದ್ದಾನೆ. ಅಗರ್ವಾಲ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಗುಂಡು ತಲೆಯನ್ನು ಹೊಕ್ಕಿದ್ದರಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಮಾಲೀಕರಿಗೆ ಗುಂಡು ಹಾರಿಸಿರುವ ಬಗ್ಗೆ ರೆಸ್ಟೋರೆಂಟ್ ಸಿಬ್ಬಂದಿ ನನಗೆ ಮಾಹಿತಿ ನೀಡಿದರು. ನಾನು ತಲುಪಿದಾಗ, ಅವನು ಇನ್ನೂ ಉಸಿರಾಡುತ್ತಿದ್ದನು. ನಾನು ಮೊದಲು 100 ಕ್ಕೆ ಕರೆ ಮಾಡಿದೆ ಮತ್ತು ನಂತರ ಆಂಬ್ಯುಲೆನ್ಸ್‌ಗೆ ಕರೆ ಮಾಡಿದೆ. ನಾವು ಆತನನ್ನು ನಮ್ಮ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು ಎಂದು ಸ್ಥಳಕ್ಕೆ ಆಗಮಿಸಿದ ಪೊಲೀಸ್​​ ಸಿಬ್ಬಂದಿ ವರದಿಯಲ್ಲಿ ಉಲ್ಲೇಖಿಸದ್ದಾರೆ. ಆರೋಪಿ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Mother Beating Child: ಕರುಳ ಕುಡಿಯನ್ನೇ ಹಿಂಸಿಸುತ್ತಿದ್ದ ಕ್ರೂರಿ ತಾಯಿ ಬಂಧನ; ಅಕ್ರಮ ಸಂಬಂಧವೇ ಕಾರಣ?

ಕೆಲ ತಿಂಗಳುಗಳ ಹಿಂದೆ ಬೆಂಗಳೂರಲ್ಲಿ ಝೊಮ್ಯಾಟೋ ಡಿಲಿವರಿ ಬಾಯ್​ ಹಾಗೂ ಗ್ರಾಹಕಿಯ ನಡುವೆ ಜಟಾಪಟಿ ನಡೆದಿತ್ತು. ಪಾರ್ಸಲ್​ ತಡವಾಗಿದ್ದಕ್ಕೆ ಹಲ್ಲೆ ಮಾಡಿದರು ಎಂದು ಪರಸ್ಪರರ ಮೇಲೆ ಇಬ್ಬರೂ ಆರೋಪಿಸಿದ್ದರು. ಬಾಲಿವುಡ್​ ತಾರೆಯರಿಂದ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಈ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇನ್ನು ಇತ್ತೀಚೆಗಿನ ಬೆಳವಣಿಗೆಯಲ್ಲಿ ಕಳ್ಳರು ರಾತ್ರಿ ವೇಳೆ ಅಪರಾಧ ಪ್ರಕರಣಗಳಲ್ಲಿ ತೊಡಗಿ ಪೊಲೀಸರ ಕಣ್ಣಿಗೆ ಮಣ್ಣೆರೆಚಲು ಝೊಮ್ಯಾಟೋ-ಸ್ವಿಗ್ಗಿ ಡಿಲಿವರಿ ಬಾಯ್​​​ ಶರ್ಟ್​ಗನ್ನು ಧರಿಸುತ್ತಿದ್ದಾರೆ ಎಂದ ಸಂಗತಿ ಬಯಲಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: