ನವದೆಹಲಿ: ದೇಶದಲ್ಲಿ ಹೊಸವರ್ಷವನ್ನು(New Year) ಜನರು ಬಹಳ ಸಂಭ್ರಮದಿಂದ ಆಚರಿಸಿದ್ದಾರೆ. 2022ಗೆ ಬೈ ಬೈ ಹೇಳಿದ ಜನ 2023ಗೆ ಹಾಯ್ ಹಾಯ್ ಎಂದಿದ್ದಾರೆ. ಹೊಸ ಆಸೆ, ಕನಸು, ಗುರಿಯನ್ನಿಟ್ಟುಕೊಂಡು ಈ ಹೊಸ ವರ್ಷವನ್ನು ಬಹಳ ಸಂತೋಷದಿಂದ ಬರಮಾಡಿಕೊಂಡಿದ್ದಾರೆ. ಈ ನಡುವೆ ಫುಡ್ ಡೆಲಿವರಿ ಆ್ಯಪ್ಗಳಿಗಂತೂ(Food Delivery Application) ಭರ್ಜರಿಯಾಗಿ ವ್ಯಾಪಾರವಾಗಿದೆ. ಅದರಲ್ಲಿಯೂ ಜನಪ್ರಿಯ ಫುಡ್ ಡೆಲಿವರಿ ಆ್ಯಪ್ ಸ್ವಿಗ್ಗಿಯಲ್ಲಿ (Swiggy) ಜನ ಎಷ್ಟು ಬಿರಿಯಾನಿಯನ್ನು ಆರ್ಡರ್ ಮಾಡಿದ್ದಾರೆ ಎಂದು ಕೇಳಿದರೆ ನಿಜಕ್ಕೂ ಎಲ್ಲರೂ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವುದು ಗ್ಯಾರಂಟಿ. ಹೌದು, ಶನಿವಾರ ಆನ್ಲೈನ್ ಸ್ವಿಗ್ಗಿ ಆ್ಯಪ್ನಲ್ಲಿ ಜನ 3.50 ಲಕ್ಷ ಬಿರಿಯಾನಿ (Biriyani) ಆರ್ಡರ್ ಮಾಡಿದ್ದಾರೆ. ಅಲ್ಲದೇ ರಾತ್ರಿ 10.25ರಷ್ಟೊತ್ತಿಗೆ ದೇಶಾದ್ಯಂತ 61,000 ಪಿಜ್ಜಾಗಳನ್ನು (Pizza) ಕಂಪನಿ ವಿತರಿಸಿದೆ ಎಂದು ಕಂಪನಿಯ ಮೂಲಗಳು ತಿಳಿಸಿದೆ.
ಶೇಕಡಾ 75.4 ರಷ್ಟು ಸೇಲ್ ಆಯ್ತು ಹೈದರಾಬಾದಿ ಬಿರಿಯಾನಿ
ಟ್ವಿಟರ್ನಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಶೇಕಡಾ 75.4 ರಷ್ಟು ಹೈದರಾಬಾದಿ ಬಿರಿಯಾನಿ ಆರ್ಡರ್ಗಳು ಬಂದಿವೆ. ನಂತರ ಲಕ್ನೋವಿ ಬಿರಿಯಾನಿಗೆ ಶೇಕಡಾ 14.2 ಮತ್ತು ಕೋಲ್ಕತ್ತಾ ಬಿರಿಯಾನಿಗೆ ಶೇಕಡಾ 10.4 ಆರ್ಡರ್ಗಳು ಸ್ವಿಗ್ಗಿಗೆ ಬಂದಿದೆ. ಸ್ವಿಗ್ಗಿಗೆ ಒಟ್ಟು 3.50 ಲಕ್ಷ ಆರ್ಡರ್ಗಳು ಬಂದಿದ್ದು, ಅದರಲ್ಲಿಯೂ ಹೆಚ್ಚಾಗಿ ಕಂಪನಿ ವಿತರಿಸಿದ ಆಹಾರ ಬಿರಿಯಾನಿಯಾಗಿದೆ ಎಂದು ಕಂಪನಿ ಹೇಳಿದೆ.
15 ಟನ್ ಬಿರಿಯಾನಿ ಸಿದ್ಧಪಡಿಸಿದ್ದ ಖ್ಯಾತ ರೆಸ್ಟೋರೆಂಟ್
ಶನಿವಾರ ಸಂಜೆ 7.20 ರಷ್ಟೊತ್ತಿಗೆ 1.65 ಲಕ್ಷ ಬಿರಿಯಾನಿ ಆರ್ಡರ್ಗಳು ಜನರಿಗೆ ಸ್ವಿಗ್ಗಿ ತಲುಪಿಸಿದೆ. ಹೈದರಾಬಾದ್ನ ಟಾಪ್ ಬಿರಿಯಾನಿ ಮಾರಾಟದ ರೆಸ್ಟೋರೆಂಟ್ಗಳಲ್ಲಿ ಒಂದಾದ ಬವರ್ಚಿ, 2021 ರ ಹೊಸ ವರ್ಷದ ಮುನ್ನಾ ದಿನದಂದು ನಿಮಿಷಕ್ಕೆ ಎರಡು ಬಿರಿಯಾನಿಗಳನ್ನು ವಿತರಿಸಿದೆ ಮತ್ತು 2022 ಡಿಸೆಂಬರ್ 31ಕ್ಕೆ ಬೇಡಿಕೆಯನ್ನು ಪೂರೈಸಲು 15 ಟನ್ ಬಿರಿಯಾನಿ ಸಿದ್ಧಪಡಿಸಿತ್ತು.
ಇನ್ಸ್ಟಾಮಾರ್ಟ್ನಲ್ಲಿ 1.76 ಲಕ್ಷ ಚಿಪ್ಸ್ ಪ್ಯಾಕೆಟ್ ಆರ್ಡರ್
ಇನ್ನೂ ಡೋಮಿನೊಸ್ 61,287 ಪಿಜ್ಜಾಗಳನ್ನು ವಿತರಿಸಿದೆ. ಆರ್ಡರ್ಗೆ ಹೋಗುವ ಓರೆಗಾನೊ ಪ್ಯಾಕೆಟ್ಗಳ ಸಂಖ್ಯೆಯನ್ನು ಮಾತ್ರ ನಾವು ಊಹಿಸಬಹುದು. ಶನಿವಾರ ಸಂಜೆ 7 ಗಂಟೆ ಅಷ್ಟೋತ್ತಿಗೆ ಸ್ವಿಗ್ಗಿ ಇನ್ಸ್ಟಾಮಾರ್ಟ್ನಲ್ಲಿ 1.76 ಲಕ್ಷ ಚಿಪ್ಸ್ ಪ್ಯಾಕೆಟ್ಗಳನ್ನು ಆರ್ಡರ್ ಮಾಡಲಾಗಿದೆ. ಹೊಸ ವರ್ಷದ ಮುನ್ನಾದಿನದಂದು ಭಾರತದಾದ್ಯಂತ ಸುಮಾರು 12,344 ಜನರು ಖಿಚಡಿಯನ್ನು ಆರ್ಡರ್ ಮಾಡಿದ್ದಾರೆ ಎಂದು ಸ್ವಿಗ್ಗಿ ಮತ್ತೊಂದು ಟ್ವೀಟ್ನಲ್ಲಿ ಹೇಳಿದೆ.
ಕೇವಲ ಸ್ವಿಗ್ಗಿ ಆ್ಯಪ್ನಲ್ಲಿ ಮಾತ್ರವಲ್ಲದೇ ಸ್ವಿಗ್ಗಿ ಇನ್ಸ್ಮಾರ್ಟ್ನಲ್ಲೂ (SwiggyInstamart) ಜನರು 15,920 ಈರುಳ್ಳಿ ಪಿಜ್ಜಾಗಳು, 7,622 ಈರುಳ್ಳಿ ಕಚೋರಿಯಗಳು, 5,498 ಈರುಳ್ಳಿ ಉತ್ತಪಮ್ನಗಳು, 9,692 ಈರುಳ್ಳಿ ದೋಸೆಗಳು, 6,357 ಈರುಳ್ಳಿ ಪರಾಠಗಳನ್ನು ಆರ್ಡರ್ ಮಾಡಿದ್ದರು.
ಇನ್ಸ್ಟಾಮಾರ್ಟ್ನಿಂದ 2,757 ಪ್ಯಾಕೆಟ್ ಡ್ಯೂರೆಕ್ಸ್ ಕಾಂಡೋಮ್ ಸೇಲ್
ಕಿರಾಣಿ ವಿತರಣಾ ವೇದಿಕೆಯಾದ ಸ್ವಿಗ್ಗಿ ಇನ್ಸ್ಟಾಮಾರ್ಟ್ನಿಂದ 2,757 ಪ್ಯಾಕೆಟ್ ಡ್ಯೂರೆಕ್ಸ್ ಕಾಂಡೋಮ್ಗಳನ್ನು ವಿತರಿಸಲಾಗಿದೆ ಎಂದು ಹೇಳುತ್ತಾ, 4,212 ಆರ್ಡರ್ ಮಾಡಲು ಜನರನ್ನು ವಿನಂತಿಸಲಾಗಿತ್ತು. ಆದರೆ 6969 ಮಂದಿ ಆರ್ಡರ್ ಮಾಡಿದ್ದಾರೆ ಮತ್ತು ಚೆನ್ನಾಗಿದೆ ಎಂದು ಹೇಳಿದ್ದಾರೆ. 4,212ರಷ್ಟು ಆರ್ಡರ್ ಮಾಡಲು ಜನರನ್ನು ವಿನಂತಿಸಲಾಗಿತ್ತು. ಆದರೆ ಅದಕ್ಕಿಂತಲೂ ಹೆಚ್ಚಾಗಿ 6969 ಆರ್ಡರ್ ಬಂದಿತ್ತು. ಅಲ್ಲದೇ ಚೆನ್ನಾಗಿದೆ ಎಂಬ ಪ್ರತಿಕ್ರಿಯೆ ದೊರೆತಿದೆ.
ನಾವು ಈಗಾಗಲೇ 1.3 ಮಿಲಿಯನ್ ಆರ್ಡರ್ಗಳನ್ನು ತಲುಪಿಸಿದ್ದು, ಮತ್ತಷ್ಟು ಎಣಿಸುತ್ತಿದ್ದೇವೆ. ನಮ್ಮ ಫ್ಲೀಟ್ ಮತ್ತು ರೆಸ್ಟೋರೆಂಟ್ ಪಾಲುದಾರರು ಈ ಹೊಸ ವರ್ಷವನ್ನು ಅನ್ನು ಅವಿಸ್ಮರಣೀಯವಾಗಿಸಲು ಸಜ್ಜಾಗಿದ್ದಾರೆ ಎಂದು ಸ್ವಿಗ್ಗಿ ಸಿಇಒ ಶ್ರೀಹರ್ಷ ಮೆಜೆಟಿ ನಿನ್ನೆ ಸಂಜೆ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ