Swiggy 2021 Report: ದೇಶದಲ್ಲಿ ನಿಮಿಷಕ್ಕೆ 115 ಚಿಕನ್​​ ಬಿರಿಯಾನಿ ಆರ್ಡರ್​​; ಬೆಂಗಳೂರಿಗರು ಮನಸೋತಿದ್ದು ಮಸಾಲೆ ದೋಸೆಗೆ ಅಂತೆ

ಆಹಾರ ಪ್ರಿಯರ ಅಚ್ಚುಮೆಚ್ಚಿನ ಫುಡ್​​ ಡೆಲಿವರಿ ಆ್ಯಪ್ (Food Delivery App) ಮುಖಾಂತರ ದೇಶದ ನಾನಾಭಾಗಗಳಲ್ಲಿನ ಜನರು ಅತಿ ಹೆಚ್ಚು ಚಿಕನ್​ ಬಿರಿಯಾನಿ (Chicken Biriyani) ಆರ್ಡರ್​ ಮಾಡಿದ್ದಾರೆ

ಬಿರಿಯಾನಿ

ಬಿರಿಯಾನಿ

 • Share this:
  ಹೊಸ ವರ್ಷ ಆಗಮನಕ್ಕೂ ಮುನ್ನ ಹಳೆ ವರ್ಷದ ಮೆಲುಕು ಹಾಕುವುದು ಸಂಪ್ರದಾಯ. ಅದೇ ರೀತಿ 2021ರಲ್ಲಿ ತಮ್ಮಲ್ಲಿ ಹೆಚ್ಚು ಆರ್ಡರ್ ಮಾಡಿದ ಆಹಾರ ಯಾವುದು ಎಂಬ ವರದಿಯನ್ನು ಸ್ವಿಗ್ಗಿ (Swiggy 2021 Report) ಬಿಡುಗಡೆ ಮಾಡಿದೆ. ಕೋವಿಡ್​ ಎರಡನೇ ಅಲೆ ಸಮಯದಲ್ಲಿ ಜನರು ಹೆಚ್ಚಾಗಿ ಆನ್​ಲೈನ್​ ಮುಖಾಂತರವೇ ತಮ್ಮಿಷ್ಟದ ಊಟವನ್ನು ಮನೆಯಲ್ಲಿ ಕುಳಿತು ಸ್ವಾದಿಸುವ ಅವಕಾಶ ಸ್ವಿಗ್ಗಿ ನೀಡಿತ. ಅದರ ವರದಿ ಈಗ ಬಿಡುಗಡೆ ಮಾಡಿದೆ. ವಿಶೇಷ ಎಂದರೆ, ಕಳೆದ ಆರು ವರ್ಷಗಳಿಂದ ಈ ವರದಿ ಬಿಡುಗಡೆ ಮಾಡುತ್ತಿದ್ದು, ಪ್ರತಿಬಾರಿಯೂ ಜನರ ಮನಸ್ಸು ಗೆದ್ದಿದ್ದು, ಬಿರಿಯಾಗಿ ಆಗಿದೆ. ಆಹಾರ ಪ್ರಿಯರ ಅಚ್ಚುಮೆಚ್ಚಿನ ಫುಡ್​​ ಡೆಲಿವರಿ ಆ್ಯಪ್ (Food Delivery App) ಮುಖಾಂತರ ದೇಶದ ನಾನಾಭಾಗಗಳಲ್ಲಿನ ಜನರು ಅತಿ ಹೆಚ್ಚು ಚಿಕನ್​ ಬಿರಿಯಾನಿ (Chicken Biriyani) ಆರ್ಡರ್​ ಮಾಡಿದ್ದಾರೆ. ನಿಮಿಷಕ್ಕೆ 115 ಚಿಕನ್​ ಬಿರಿಯಾನಿ ಆರ್ಡರ್ ಆಗಿದೆ ಎಂದಿದೆ.

  ಆರು ವರ್ಷದಿಂದಲೂ ಚಿಕನ್​ ಬಿರಿಯಾನಿಗೆ ಮೊದಲ ಸ್ಥಾನ

  ಇನ್ನು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಚಿಕನ್ ಬಿರಿಯಾನಿ ಪ್ರಿಯರ ಸಂಖ್ಯೆ ಹೆಚ್ಚಿದೆ ಎಂದರೆ ತಪ್ಪಾಗಲಾರದು ಕಾರಣ, 2020ರಲ್ಲಿ ನಿಮಿಷಕ್ಕೆ 90 ಚಿಕನ್​ ಬಿರಿಯಾನಿ ಆರ್ಡರ್​ ಮಾಡಿದ ದಾಖಲೆ ಹೊಂದಿತ್ತು. ಇನ್ನು ಇದರಲ್ಲಿ ವೆಜ್​ ಬಿರಿಯಾನಿ ಆರ್ಡರ್​​ ಮಾಡುವ ಸಂಖ್ಯೆ 4.3 ಕಡಿಮೆ ಆಗಿದೆ. ಚೆನ್ನೈ, ಹೈದ್ರಾಬಾದ್, ಕೊಲ್ಕತ್ತಾ ಮತ್ತು ಲಕ್ನೋ ಚಿಕನ್​ ಬಿರಿಯಾನಿ ಆರ್ಡರ್​ ಮಾಡಿದ ಟಾಪ್ ಸ್ಥಾನ ಪಡೆದಿದೆ. ಇನ್ನು ಹಳೆ ಗ್ರಾಹಕರ ಹೊರತಾಗಿ ಹೊಸ ಗ್ರಾಹಕರು ಚಿಕನ ಬಿರಿಯಾನಿಯನ್ನು ಹೆಚ್ಚು ಆರ್ಡರ ಮಾಡಿರುವುದಾಗಿ ಸ್ವಿಗ್ಗಿ ತಿಳಿಸಿದೆ.

  ಇದನ್ನು ಓದಿ:  ಚುಮು ಚುಮು ಚಳಿಯಲ್ಲಿ ಬೆಳಗಿನ ತಿಂಡಿಗೆ ಸೋಯಾಬೀನ್​ ಇಡ್ಲಿ ಇದ್ರೆ ಸೂಪರ್ ಅಲ್ವಾ? ಹಾಗಾದ್ರೆ ಇಲ್ಲಿದೆ ರೆಸಿಪಿ

  ಯಾವ್ಯಾವ ನಗರದಲ್ಲಿ ಯಾವ ಫುಡ್​ ಹೆಚ್ಚು ಆರ್ಡರ್​

  ಇನ್ನು ಮುಂಬೈನ ಜನರು ಚಿಕನ್​ ಬಿರಿಯಾನಿಗಿಂತ ಹೆಚ್ಚಾಗಿ ದಾಲ್​ ಕಿಚಡಿಗೆ ಮನಸೋತಿದ್ದಾರೆ. ಜೈಪುರ ಜನರು ದಾಲ್​ ಪ್ರೈ ಅತಿ ಹೆಚ್ಚು ಆರ್ಡರ್​ ಮಾಡಿದ್ದಾರೆ. ಇನ್ನು ದೆಹಲಿಯಲ್ಲಿ ದಾಲ್ ಮಖನಿ ಆಹಾರ ಪ್ರಿಯರ ಮೊದಲ ಆದ್ಯತೆಯಾದರೆ, ಬೆಂಗಳೂರಿಗರು ಮಸಾಲೆ ದೋಸೆಯನ್ನು ಹೆಚ್ಚಾಗಿ ಆರ್ಡರ್​ ಮಾಡಿ ಮನಸೋತಿದ್ದಾರೆ. ಚೆನ್ನೈನಲ್ಲಿ ಪ್ರತಿಬಾರಿಯಂತೆ ಚಿಕನ್ ಬಿರಿಯಾನಿ ಮೊದಲ ಸ್ಥಾನ ಪಡೆದಿದೆ.

  ಇದನ್ನು ಓದಿ: ಪರೋಟ ಅಂದ್ರೆ ಇಷ್ಟನಾ? ಹಾಗಾದ್ರೆ ಮನೆಯಲ್ಲಿಯೇ ಮಾಡಿ ಬಾಯಿ ನೀರೂರಿಸುವ ಗೋಬಿ ಪರೋಟ

  ಆರೋಗ್ಯಯುತ ಊಟಕ್ಕೆ ಮನಸೋತ ಬೆಂಗಳೂರಿಗರು
  ಇನ್ನು ಕೋವಿಡ್ ಸೋಂಕಿನ ಆತಂಕ, ಲಾಕ್​ಡೌನ್​ ಹಿನ್ನಲೆ ಫುಡ್​ ಆ್ಯಪ್​ ಮೂಲಕ ಆರ್ಡರ್​ ಮಾಡುವವರ ಸಂಖ್ಯೆ ಕೂಡ ಕಳೆದ ವರ್ಷಕ್ಕೆ ಹೋಲಿಸಿದರೆ, 2021ರಲ್ಲಿ ಹೆಚ್ಚಾಗಿದೆ. ಅದರಲ್ಲೂ ಹೆಲ್ತಿ ಫುಡ್​ ಆದ ಸ್ವಿಗ್ಗಿ ಹೆಲ್ತ್​ ಹಬ್​ ಗ್ರಾಹಕರ ಸಂಖಯೆ 200ರಷ್ಟು ಅಧಿಕ ಗೊಂಡಿದೆ. ಇದರಲ್ಲಿ ಕೆಟೊ ಫುಡ್ 23, ವೆಗನ್ ಫುಡ್​​ ಹಾಗೂ ಸಸ್ಯಾಧಾರಿದ ಆಹಾರ 83ರಷ್ಟು ಹೆಚ್ಚಿದೆ. ಅದರಲ್ಲಿ ಬೆಂಗಳೂರಿಗರು ಈ ಆರೋಗ್ಯಯುತ ಆಹಾರಕ್ಕೆ ಹೆಚ್ಚು ಪ್ರಾಶ್ಯಸ್ತ ನೀಡಿದ್ದಾರೆ.

  ಸ್ನಾಕ್​ನಲ್ಲಿ ಸಮೋಸ, ಡೆಸಾರ್ಟ್​ನಲ್ಲಿ ಗುಲಾಬ್​ ಜಾಮುನ್ ಮೊದಲು
  ಇನ್ನು ಸ್ನಾಕ್ಸ್​​ನಲ್ಲಿ ಸೊಮೋಸ ಚಟ್ನಿ ತಿಂಡಿ ಪ್ರಿಯರ ಮನ ಗೆದ್ದಿದದೆ. 2021ರ ಸ್ನಾಕ್​ನಲ್ಲಿ ಸಮೋಸ ಮೊದಲ ಸ್ಥಾನ ಪಡೆದರೆ, ಚಿಕನ್​ ವಿಂಗ್ ಗಿಂತ ಹೆಚ್ಚಾಗಿ ಪಾವ್​ ಬಾಜಿ ಆರ್ಡರ್​ ಮಾಡಲಾಗಿದೆ. ಇದರ ಹೊರತಾಗಿ ಚೀಸಿ ಗಾರ್ಲಿಕ್ ಬ್ರೇಡ್​, ಪಾಪ್​ ಕಾರ್ನ್​​, ಫ್ರೆಂಚ್​ ಫ್ರೈಸ್ ಅನ್ನು ಈ ಫುಡ್​ ಆ್ಯಪ್​ ಮೂಲಕ ತರಿಸಲಾಗಿದೆ. ಇನ್ನು ಡೆಸರ್ಟ್​ನಲ್ಲಿ ಗುಲಾಬ್​ ಜಾಮುನ್​​ ನಂಬರ್ 1 ಸ್ಥಾನ ಪಡೆದರೆ, ರಸ್​ಮಲಾಯಿ 1.27 ಮಿಲಿಯನ್ ಜನರು ಆರ್ಡರ್​ ಮಾಡಿ ಟಾಪ್​ 2 ಸ್ಥಾನ ಪಡೆದಿದೆ.
  Published by:Seema R
  First published: