• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಕಸ ಗುಡಿಸುತ್ತಿದ್ದ ಮಹಿಳೆ ಈಗ ಜಿಲ್ಲಾಧಿಕಾರಿ.. ಅವಮಾನಗಳನ್ನು ಮೆಟ್ಟಿನಿಂತ ರಾಜಸ್ಥಾನದ ಗಟ್ಟಿಗಿತ್ತಿ..!

ಕಸ ಗುಡಿಸುತ್ತಿದ್ದ ಮಹಿಳೆ ಈಗ ಜಿಲ್ಲಾಧಿಕಾರಿ.. ಅವಮಾನಗಳನ್ನು ಮೆಟ್ಟಿನಿಂತ ರಾಜಸ್ಥಾನದ ಗಟ್ಟಿಗಿತ್ತಿ..!

ಸಾಧಕಿ ಆಶಾ

ಸಾಧಕಿ ಆಶಾ

ನಾನು ಕಸ ಗುಡಿಸುವ ಕೆಲಸದಲ್ಲಿ ಹಲವರಿಂದ ಅವಮಾನ ಅನುಭವಿಸಿದೆ. ನಿಮ್ಮ ತಂದೆ ಜಿಲ್ಲಾಧಿಕಾರಿನಾ? ಇಲ್ಲಿ ಯಾಕೆ ನಿಂತುಕೊಂಡಿದ್ದೀಯಾ? ಇಲ್ಲೇನು ನಿನಗೆ ಕೆಲಸ.. ಹೀಗೆ ನಾನಾ ರೀತಿಯಲ್ಲಿ ಅವಮಾನಿಸಿದರು. ಆದರೆ ನಾನು ಎಲ್ಲಾ ಅವಮಾನಗಳನ್ನು ಎದುರಿಸಿ ಜಿಲ್ಲಾಧಿಕಾರಿಯಾಗುತ್ತಿದ್ದೇನೆ.

  • Share this:

    ಜಗತ್ತಿನಲ್ಲಿ ಮನುಷ್ಯನಿಗೆ ಅಸಾಧ್ಯವಾದುದು ಯಾವುದು ಇಲ್ಲ. ಮನುಷ್ಯನಲ್ಲಿ ಹೆಣ್ಣು-ಗಂಡು, ಬಡವ-ಬಲ್ಲಿಗ, ಮೇಲು ಕೀಳು ಎಂಬುವುದಿಲ್ಲ. ಪ್ರಯತ್ನ, ಶ್ರಮ, ತಾಳ್ಮೆ ಎಂಬ ಈ ಮೂರು ಮಾನದಂಡಗಳ ಹಿಡಿದು ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗುತ್ತದೆ. ಇದಕ್ಕೆ ಉತ್ತಮ ನಿದರ್ಶನ ರಾಜಸ್ಥಾನದ ಮಹಿಳೆ. ಜೋಧಪುರ ಮಹಾನಗರ ಪಾಲಿಕೆಯ  ಪೌರಕಾರ್ಮಿಕೆಯಾಗಿದ್ದಾಕೆ ರಾಜಸ್ಥಾನ ಆಡಳಿತ ಸೇವಾ ಪರೀಕ್ಷೆಯನ್ನು ಉತ್ತೀರ್ಣಗೊಳಿಸಿದ್ದು, ಶೀಘ್ರದಲ್ಲೇ ಅವರು ಜಿಲ್ಲಾಧಿಕಾರಿ ಹುದ್ದೆ ಅಲಂಕರಿಸಲಿದ್ದಾರೆ.


    ಆಶಾ ಕಂದಾರ.. ಅದ್ವಿತೀಯ ಸಾಧನೆ ಮಾಡಿದ ಮಹಿಳೆ. ಈಕೆಗೆ ಇಬ್ಬರು ಮಕ್ಕಳಿದ್ದಾರೆ. ಇವರು ಜೋಧಪುರ ಮಹಾನಗರ ಪಾಲಿಕೆ ಅಡಿಯಲ್ಲಿ ಬೀದಿ ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತಿದ್ದರು. ಇದೀಗ ಪ್ರತಿಷ್ಟಿತ ರಾಜ್ಯ ನಾಗರೀಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಾವಿರಾರು ಮಂದಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ.


    ಎಂಟು ವರ್ಷಗಳ ಹಿಂದೆ ತನ್ನ ಗಂಡನಿಂದ ದೂರವಾದ ಆಶಾ, ಇಬ್ಬರು ಮಕ್ಕಳನ್ನು ಬೆಳೆಸುವ ಜವಾಬ್ದಾರಿಯ ಜೊತೆಯಲ್ಲೇ ಪದವಿ ಮುಗಿಸಿದರು. ನಂತರ ಎರಡು ವರ್ಷಗಳ ಹಿಂದೆ ರಾಜ್ಯ ನಾಗರೀಕ ಸೇವಾ ಪರೀಕ್ಷೆ ಎದುರಿಸಿದರು. ಆದರೆ ಫಲಿತಾಂಶ ವಿಳಂಬವಾಯಿತು. ಆಗ ಆಶಾ ಪರೀಕ್ಷೆ ಬರೆದ ನಂತರ ಜೋಧಪುರ ಮುನ್ಸಿಪಾಲ್ ಕಾರ್ಪೋರೇಶನ್‍ನಲ್ಲಿ ಕಸ ಗುಡಿಸುವ ಕೆಲಸಕ್ಕೆ ಸೇರಿದರು. ಏಕೆಂದರೆ ಇಬ್ಬರು ಮಕ್ಕಳ ಆರೈಕೆಯ ಜವಾಬ್ದಾರಿ ಆಕೆಯ ಮೇಲಿತ್ತು.


    ಇತ್ತೀಚೆಗೆ ಪರಿಕ್ಷೆಯ ಫಲಿತಾಂಶವೂ ಹೊರಬಿತ್ತು, ಆಶಾ ಅವರ ಕಷ್ಟದ ದಿನಗಳು ಮುಗಿದು,  ಖುಷಿಯ ಬದುಕು ಎದುರಾಗಿದೆ.  ತಾನು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ವಿಚಾರ ತಿಳಿದಾಗ ಆಕೆಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಶೀಘ್ರದಲ್ಲೇ ಆಶಾ ಅವರನ್ನು ರಾಜ್ಯದಲ್ಲಿ ಉಪಸಂಗ್ರಹಕಾರ ಅಧಿಕಾರಿಯಾಗಿ ನೇಮಕಗೊಳ್ಳಲಿದ್ದಾರೆ.


    ಮನಸ್ಸಲ್ಲಿ ಸಾಧಿಸುವ ಛಲ, ಗುರಿ, ದೃಢ ನಿಶ್ಚಯವಿದ್ದರೆ, ಸೋಲು ಹತ್ತಿರವೂ ಸುಳಿಯುವುದಿಲ್ಲ. ನಾನು ಕಸ ಗುಡಿಸುವ ಕೆಲಸದಲ್ಲಿ ಹಲವರಿಂದ ಅವಮಾನ ಅನುಭವಿಸಿದೆ. ನಿಮ್ಮ ತಂದೆ ಜಿಲ್ಲಾಧಿಕಾರಿನಾ? ಇಲ್ಲಿ ಯಾಕೆ ನಿಂತುಕೊಂಡಿದ್ದೀಯಾ? ಇಲ್ಲೇನು ನಿನಗೆ ಕೆಲಸ.. ಹೀಗೆ ನಾನಾ ರೀತಿಯಲ್ಲಿ ಅವಮಾನಿಸಿದರು. ಆದರೆ ನಾನು ಎಲ್ಲಾ ಎಲ್ಲೆ, ಅವಮಾನಗಳನ್ನು ಎದುರಿಸಿ ಜಿಲ್ಲಾಧಿಕಾರಿಯಾಗುತ್ತಿದ್ದೇನೆ. ನನ್ನ ಈ ಸಾಧನೆಗೆ ನನ್ನ ಕುಟುಂಬದವರ ಬೆಂಬಲವೇ ಕಾರಣ ಎಂದು ಸಾಧನೆ ಹಿಂದಿನ ನೋವನ್ನು ಬಿಚ್ಚಿಟ್ಟರು.


    ಇದನ್ನೂ ಓದಿ: ಒಟ್ಟಿಗೆ ರಾಜಸ್ಥಾನ ಆಡಳಿತ ಸೇವಾ ಪರೀಕ್ಷೆ ಪಾಸಾದ ಮೂವರು ಸಹೋದರಿಯರು

    ನನ್ನ ಸುತ್ತಮುತ್ತಲಿನ ಜನರ ಅವಮಾನದ ಮಾತುಗಳೇ ನನಗೆ ಸ್ಪೂರ್ತಿ. ಜಾತೀಯತೆ ಇಲ್ಲ ಎನ್ನುತ್ತಾರೆ. ಆದರೆ ಅದನ್ನು ಅನುಭವಿಸಿದವರಿಗಷ್ಟೆ ಗೊತ್ತಾಗುತ್ತದೆ ಎಂದು ಹೇಳುವ ಆಶಾ, ಜನರ ಟೀಕೆ, ವ್ಯಂಗ್ಯಗಳೇ ನಾನು ಮೇಲೇರಲು ಕಾರಣವಾಯಿತು. ಸಮಾಜಕ್ಕೆ ಉತ್ತಮ ಕೆಲಸ ಮಾಡಬೇಕೆಂಬುದೇ ನನ್ನ ಗುರಿ ಎಂದು ಹೇಳಿದರು. ಕೇರಳದ ತಿರುವನಂತಪುರ ಜಿಲ್ಲೆಯಲ್ಲಿ ಮಗುವಿನ ತಾಯಿಯಾಗಿದ್ದ ಅನಿ ಶಿವಾ ಎಂಬುವವರು ಸಬ್‍ಇನ್ಸ್‍ಪೆಕ್ಟರ್ ಆಗಿ ಹೊರಹೊಮ್ಮಿದ್ದರು. ಇದು ಕೂಡ ಭಾರೀ ಸುದ್ದಿಯಾಗಿತ್ತು.


    ಯಾವಾಗಲೂ ತಾನು ಪೊಲೀಸ್ ಅಧಿಕಾರಿಯಾಗಬೇಕೆಂದು ಕನಸು ಕಾಣುತ್ತಿದ್ದ ಅನಿ ಶಿವಾ ಗಂಡ ಆಕೆಯನ್ನು ತೊರೆದಿದ್ದರು. ಜೀವನ ನಿರ್ವಹಣೆಗಾಗಿ ಮನೆಮನೆಗೆ ಹೋಗಿ ಸೋಪು, ಡಿಟರ್ಜೆಂಟ್ ಮಾರಿದಳು, ದಿನಸಿ ಸಾಮಾನುಗಳನ್ನು ಸಾಗಿಸಿದಳು, ನಿಂಬೆ ಪಾನಕ ಹಾಗೂ ಕೆಲವು ಪಾನೀಯಗಳನ್ನು ಮಾರಿದಳು. ಈ ಎಲ್ಲಾ ಕೆಲಸ ಮಾಡುತ್ತಲೇ ಸಮಾಜ ಶಾಸ್ತ್ರದಲ್ಲಿ ಪದವಿ ಪಡೆದಳು. 2019ರಲ್ಲಿ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಪರೀಕ್ಷೆ ಎದುರಿಸಿದ ಅನಿ ಶಿವಾ ಪರಿಕ್ಷೆ ಪಾಸಾದಳು. ಸುಮಾರು ಒಂದು ವರೆ ವರ್ಷಗಳ ಕಾಲ ಯಶಸ್ವಿಯಾಗಿ ತರಬೇತಿ ಮುಗಿಸಿ, ಸಬ್‍ಇನ್ಸ್‍ಪೆಕ್ಟರ್ ಆದರು.

    Published by:Kavya V
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು