ನವದೆಹಲಿ: ದೆಹಲಿ ಮಹಿಳಾ ಆಯೋಗದ (Delhi Commission for Women) ಮುಖ್ಯಸ್ಥೆ ಸ್ವಾತಿ ಮಲಿವಾಲ್ (Swati Malival) ತಾವೂ ಬಾಲ್ಯದಲ್ಲಿ ತಮ್ಮ ತಂದೆಯಿಂದಲೇ (Father) ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ ಎಂಬ ಆಘಾತಕಾರಿ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ಚಿಕ್ಕ ವಯಸ್ಸಿಯನಲ್ಲೇ ತಾವೂ ತಂದೆಯಿಂದಲೇ ಅನುಭವಿಸಿದ ಯಾತನೆಯನ್ನು ನೆನಪಿಸಿಕೊಂಡ ಮಲಿವಾಲ್, ತನ್ನ ತಂದೆ ತನ್ನನ್ನು ನಿರಂತರವಾಗಿ ಥಳಿಸುತ್ತಿದ್ದರು ( Assault) ಮತ್ತು ನಾನು 4ನೇ ತರಗತಿವರೆಗೂ ಅವರಿಂದ ನಿಂದನೆಗೆ ಒಳಗಾಗಿದ್ದೆ ಎಂದು ಆರೋಪಿಸಿದ್ದಾರೆ.
ದೆಹಲಿಯಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಾಲ್ಯದಲ್ಲಿ ನನ್ನ ತಂದೆಯಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೆ, ಆ ಸಮಯದಲ್ಲಿ ನಾನು ತುಂಬಾ ಚಿಕ್ಕವಳಾಗಿದ್ದೆ. ಅವರು ನನ್ನನ್ನು ಹೊಡೆಯುತ್ತಿದ್ದರು. ನಾನು ಭಯಗೊಂಡು ಹಾಸಿಗೆಯ ಕೆಳಗೆ ಅಡಗಿಕೊಳ್ಳುತ್ತಿದ್ದೆ. ನಾನು 4 ನೇ ತರಗತಿಯವರೆಗೆ ನನ್ನ ತಂದೆಯೊಂದಿಗೆ ವಾಸಿಸುತ್ತಿದ್ದು, ಈ ವೇಳೆ ಹಲವಾರು ಬಾರಿ ಹಲ್ಲೆಗೆ ಒಳಗಾಗಿದ್ದೆ ಎಂದು ತಿಳಿಸಿದ್ದಾರೆ.
ಮಹಿಳೆಯರಿಗೆ ಸಹಾಯ ಮಾಡಲು ಯೋಚನೆ
ನಾನು ಪ್ರತಿಬಾರಿ ಹೆದರಿ ಹಾಸಿಗೆಯ ಕೆಳಗೆ ಅಡಗಿಕೊಂಡಾಗ, ಮಹಿಳೆಯರು ಮತ್ತು ಮಕ್ಕಳನ್ನು ನಿಂದಿಸುವ ಇಂತಹ ಪುರುಷರಿಗೆ ನಾನು ಹೇಗೆ ಪಾಠ ಕಲಿಸಬೇಕು ಮತ್ತು ಮಹಿಳೆಯರಿಗೆ ಹೇಗೆ ಸಹಾಯ ಮಾಡಬಹುದು ಎಂಬುದರ ಬಗ್ಗೆಯೇ ಯೋಚಿಸುತ್ತಿದ್ದೆ. ನನಗೆ ನನ್ನ ತಂದೆ ಕಂಡರೆ ತುಂಬಾ ಭಯವಿತ್ತು, ಆ ಸಮಯದಲ್ಲಿ, ಅಂತಹ ದೌರ್ಜನ್ಯಗಳ ವಿರುದ್ಧ ಮಹಿಳೆಯರನ್ನು ಹೇಗೆ ಸಬಲಗೊಳಿಸಬೇಕು ಎಂದು ಇಡೀ ರಾತ್ರಿ ಯೋಚಿಸುತ್ತಿದ್ದೆ ಎಂದು ತಿಳಿಸಿದ್ದಾರೆ.
ನನ್ನ ಕೂದಲನ್ನು ಹಿಡಿದು ಗೋಡೆಗೆ ಹೊಡೆಸುತ್ತಿದ್ದರು
ನನ್ನ ತಂದೆ ನನ್ನ ಮೇಲೆ ಪ್ರತಿದಿನ ಹಲ್ಲೆ ಮಾಡುತ್ತಿದ್ದರೂ, ನನ್ನ ಕೂದಲನ್ನು ಹಿಡಿದುಕೊಂಡು ನನ್ನ ತಲೆಯನ್ನು ಗೋಡೆಗೆ ಬಲವಾಗಿ ಹೊಡೆಸುತ್ತಿದ್ದರು. ಇದರಿಂದ ನನಗೆ ಹಲವು ಬಾರಿ ಗಾಯಗಳಾಗಿ ರಕ್ತ ಸುರಿಯುತ್ತಿತ್ತು. ನೋವನ್ನು ಯಾರಿಗೂ ಹೇಳಿಕೊಳ್ಳಲಾಗದೆ ನರಳಿದ್ದೆ. ಆದರೆ, ಈ ಘಟನೆ ಮಹಿಳೆಯರ ಕಲ್ಯಾಣಕ್ಕಾಗಿ ಕೆಲಸ ಮಾಡುವ ನನ್ನಲ್ಲಿನ ದೃಢತೆಯನ್ನು ಹೆಚ್ಚಿಸಿತು ಎಂದು ನಾನು ನಂಬುತ್ತೇನೆ ಎಂದು ಮಲಿವಾಲ್ ಹೇಳಿದ್ದಾರೆ.
ಇದನ್ನೂ ಓದಿ: Khushbu Sundar: ತಂದೆಯಿಂದಲೇ ಸತತ ದೌರ್ಜನ್ಯಕ್ಕೊಳಗಾಗಿದ್ರು ಈ ಸೌತ್ ನಟಿ
ಲಕ್ಷಾಂತರ ಮಹಿಳೆಯರಿಗೆ ನೆರವಾಗಿದ್ದೇವೆ
ಕಳೆದ ಆರು ವರ್ಷಗಳಲ್ಲಿ ಡಿಸಿಡಬ್ಲ್ಯು ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ ಎಂದು ಮಲಿವಾಲ್ ಹೇಳಿದ್ದಾರೆ. ಹಿಂದೆ ಡಿಸಿಡಬ್ಲ್ಯೂ ಮುಖ್ಯಸ್ಥರಾಗಿದ್ದವರು ಎಂಟು ವರ್ಷಗಳಲ್ಲಿ ಕೇವಲ ಒಂದು ಪ್ರಕರಣವನ್ನು ಮಾತ್ರ ಆಲಿಸಿದ್ದರು. ಕಳೆದ ಆರು ವರ್ಷಗಳಲ್ಲಿ ನಾವು ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ಆಲಿಸಿದ್ದೇವೆ. ನಾವು 181 ಮಹಿಳಾ ಸಹಾಯವಾಣಿ ಮೂಲಕ ಪ್ರತಿದಿನ 2000-4000 ಕರೆಗಳನ್ನು ಸ್ವೀಕರಿಸುತ್ತಿದ್ದೇವೆ ಮತ್ತು ನಾವು ಲಕ್ಷಾಂತರ ಮಹಿಳೆಯರಿಗೆ ನೇರವಾಗಿ ಸಹಾಯ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ಜಪಾನ್ ಹುಡುಗಿಗೆ ಕಿರುಕುಳ
ಇತ್ತೀಚೆಗೆ ಹೋಳಿ ಸಂದರ್ಭದಲ್ಲಿ ಕೆಲವರು ಹುಡುಗರು ಜಪಾನಿನ ಯುವತಿಗೆ ಕಿರುಕುಳ ನೀಡುತ್ತಿರುವ ವೈರಲ್ ವೀಡಿಯೊ ವೈರಲ್ ಆಗಿದೆ. ಈ ಕುರಿತು ದೆಹಲಿ ಪೊಲೀಸರಿಗೆ ನೋಟಿಸ್ ನೀಡುವುದಾಗಿ ಡಿಸಿಡಬ್ಲ್ಯೂ ಮುಖ್ಯಸ್ಥೆ ಹೇಳಿದ್ದಾರೆ. " ಆ ಯುವತಿಗೆ ಬಣ್ಣ ಬಳಿದು, ಮೊಟ್ಟೆ ಹೊಡೆದು ಕಿರುಕುಳ ನೀಡಲಾಗಿದೆ ಮತ್ತು ಸಹಾಯಕ್ಕಾಗಿ ಕಿರುಚಾಡಿದ್ದಾಳೆ. ಆದರೂ ಯುವಕರು ತಮ್ಮ ಕಿರುಕುಳ ನಿಲ್ಲಿಸಿಲ್ಲ. ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡುತ್ತಿದ್ದೇವೆ. ಆ ವ್ಯಕ್ತಿಗಳನ್ನು ಗುರುತಿಸಿ ಜೈಲಿಗೆ ಹಾಕಬೇಕು" ಎಂದು ಹೇಳಿದರು.
100 ಮಹಿಳೆಯರಿಗೆ ಸನ್ಮಾನ
ಇದೇ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಡಿಸಿಡಬ್ಲ್ಯೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಿದರು. ದೆಹಲಿ ಮಹಿಳಾ ಆಯೋಗದ ಈ ಪ್ರಶಸ್ತಿಗಳನ್ನು ಸುಮಾರು 100 ಮಹಿಳೆಯರು ಪಡೆದುಕೊಂಡರು. ಮಹಿಳೆಯರ ಬಗ್ಗೆ ಅಸಾಧಾರಣ ಧೈರ್ಯ ಮತ್ತು ಬದ್ಧತೆಯನ್ನು ಪ್ರದರ್ಶಿಸಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
2015ರಲ್ಲಿ ಆಮ್ ಆದ್ಮಿ ಪಕ್ಷ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸ್ವಾತಿ ಮಲಿವಾಲ್ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆಯಾದರು. ನಂತರ ಅವರ ಅಧಿಕಾರಾವಧಿಯನ್ನು ವಿಸ್ತರಿಸಲಾಗಿದೆ. ಇದಕ್ಕೂ ಮೊದಲು ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಲಹೆಗಾರರಾಗಿ ಕೆಲಸ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ