ವಾಜಪೇಯಿಗೆ ಅಂತಿಮ ನಮನ ಸಲ್ಲಿಸಲು ಹೋದ ಸ್ವಾಮಿ ಅಗ್ನಿವೇಶ್​ ಮೇಲೆ ಮತ್ತೆ ಹಲ್ಲೆ

ಅಗಲಿದ ಅಜಾತ ಶತ್ರು ವಾಜಪೇಯಿ ಅವರಿಗೆ ಅಂತಿಮ ನಮನ ಸಲ್ಲಿಸಲು ಆಗಮಿಸಿದ್ದ ಸ್ವಾಮಿ ಅಗ್ನಿವೇಶ್​ ಮೇಲೆ ಮತ್ತೆ ಹಲ್ಲೆ ನಡೆಸಲಾಗಿದೆ

Sharath Sharma Kalagaru | news18
Updated:August 17, 2018, 2:32 PM IST
ವಾಜಪೇಯಿಗೆ ಅಂತಿಮ ನಮನ ಸಲ್ಲಿಸಲು ಹೋದ ಸ್ವಾಮಿ ಅಗ್ನಿವೇಶ್​ ಮೇಲೆ ಮತ್ತೆ ಹಲ್ಲೆ
ಜುಲೈ ತಿಂಗಳಿನಲ್ಲಿ ಜಾರ್ಖಂಡ್​ನಲ್ಲಿ ಕರಸೇವಕರಿಂದ ಥಳಿತಕ್ಕೊಳಗಾಗಿದ್ದ ಸ್ವಾಮಿ ಅಗ್ನಿವೇಶ್​
  • Advertorial
  • Last Updated: August 17, 2018, 2:32 PM IST
  • Share this:
ನವದೆಹಲಿ (ಆಗಸ್ಟ್​ 17): ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್​ ಮೇಲೆ ಬಿಜೆಪಿ ನವದೆಹಲಿ ಕಚೇರಿಯ ಮುಂದೆ ಮತ್ತೆ ಹಲ್ಲೆ ಮಾಡಲಾಗಿದೆ. ಅಗಲಿದ ಹಿರಿಯ ಚೇತನ ವಾಜಪೇಯಿ ಅವರ ಅಂತಿಮ ದರ್ಶನ ಪಡೆಯಲು ಹೋದ ವೇಳೆ ಈ ಘಟನೆ ನಡೆದಿದೆ. ಅಗ್ನಿವೇಶ್​ರನ್ನು ಕೋಮೊಂದು ಅಟ್ಟಿಸಿಕೊಂಡು ಹಲ್ಲೆ ಮಾಡುತ್ತಿದ್ದರೂ ಸುತ್ತ ನೆರೆದಿದ್ದ ಜನ ಘಟನೆಯನ್ನು ವಿಡಿಯೋ ಮಾಡುತ್ತಿದ್ದರೇ ಹೊರತು ತಡೆಯಲು ಮುಂದಾಗಲಿಲ್ಲ.

ಕಡೆಗೆ ಸ್ಥಳಕ್ಕೆ ಧಾವಿಸಿದ ದೆಹಲಿ ಪೊಲೀಸರು ಅಗ್ನಿವೇಶ್​ರನ್ನು ರಕ್ಷಿಸಿದರು. ದೆಹಲಿಯ ದೀನ ದಯಾಳ್​ ಉಪಾಧ್ಯಾಯ ಮಾರ್ಗದಲ್ಲಿ ಈ ಘಟನೆ ನಡೆದಿದೆ. ಹಲ್ಲೆ ನಡೆಯುತ್ತಿದ್ದಾಗ ಸುಮಾರು ನೂರಕ್ಕೂ ಹೆಚ್ಚು ಮಂದಿ ಸುತ್ತಮುತ್ತ ಇದ್ದರು. ಆದರೆ ಯಾರೂ ಅಗ್ನಿವೇಶ್​ರ ಸಹಾಯಕ್ಕೆ ಧಾವಿಸಲಿಲ್ಲ. ಬದಲಾಗಿ ಮೊಬೈಲ್​ ತೆಗೆದು ಚಿತ್ರೀಕರಣ ಮಾಡುತ್ತಿದ್ದರು. ಕೇವಲ ಒಬ್ಬ ವ್ಯಕ್ತಿ ಮಾತ್ರ ಅಗ್ನಿವೇಶ್​ರ ಮೇಲೆ ಹಲ್ಲೆಯಾಗುವುದನ್ನು ತಡೆಯಲು ಯತ್ನಿಸುತ್ತಿರುವುದು ವಿಡಿಯೋದಲ್ಲಿ ಕಾಣುತ್ತದೆ.

ಕಳೆದ ತಿಂಗಳಾದ ಜುಲೈ 17ರಂದು ಜಾರ್​ಖಂಡ್​ನ ಪಾಕುರ್​ ಜಿಲ್ಲೆಯಲ್ಲಿ ಅಗ್ನಿವೇಶ್​ ಮೇಲೆ ಹಲ್ಲೆ ನಡೆದಿತ್ತು. ಅಖಿಲ ಭಾರತ ವಿದ್ಯಾರ್ಥಿ ಪರಿಷತ್​ ಸದಸ್ಯರು ಮತ್ತು ಭಾರತೀಯ ಜನತಾ ಯುವ ಮೋರ್ಚಾ ಈ ಹಲ್ಲೆಯ ಹಿಂದಿದೆ ಎಂಬ ಆರೋಪವಿತ್ತು.

"ಇದೊಂದು ಪೂರ್ವನಿಯೋಜಿತ ಹಲ್ಲೆ. ಹಲ್ಲೆ ಮಾಡಿದವರು ಆರ್​ಎಸ್​ಎಸ್ ಮತ್ತು ಬಿಜೆಪಿಗೆ ಸೇರಿದವರು. ಹಲ್ಲೆ ಮಾಡಿದವರ ಹೆಸರುಗಳನ್ನು ಪೊಲೀಸರಿಗೆ ನೀಡಲಾಗಿದೆ," ಎಂದು ಅಗ್ನಿವೇಶ್​ ಜುಲೈನಲ್ಲಿ ಹೇಳಿಕೆ ನೀಡಿದ್ದರು.

ಘಟನೆಗೂ ಮುನ್ನ ಅಗ್ನಿವೇಶ್​ ಜಾರ್​ಖಂಡ್​ನ ಪಾಕುರ್​ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದರೂ ಸೂಕ್ತ ಭದ್ರತೆ ನೀಡಿರಲಿಲ್ಲ ಎಂದು ಆರೋಪ ಹೊರಿಸಿದ್ದರು. ಅಗ್ನಿವೇಶ್​ ತಂಗಿದ್ದ ಹೋಟೆಲ್​ನಿಂದ ಹೊರ ಬಂದ ತಕ್ಷಣ ಕಪ್ಪು ಬಾವುಟ ಹಿಡಿದಿದ್ದ ಗುಂಪೊಂದು ಹಲ್ಲೆ ಮಾಡಿತ್ತು. ಈ ಬಾರಿಯೂ ಅಗ್ನಿವೇಶ್​ ಆಗಮನಕ್ಕಾಗಿಯೇ ಕಾದು ಕುಳಿತು ಹಲ್ಲೆ ಮಾಡಿರುವ ಸಾಧ್ಯತೆಯಿದೆ.
First published:August 17, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ