ದೆಹಲಿಯ ಜೆಎನ್​ಯು ಕ್ಯಾಂಪಸ್​ನಲ್ಲಿ ಸ್ವಾಮಿ ವಿವೇಕಾನಂದ ಪ್ರತಿಮೆಗೆ ಹಾನಿ

ನಿನ್ನೆ ಕೂಡ ಜೆಎನ್​ಯು ಆಡಳಿತ ವಿಭಾಗಕ್ಕೆ ನುಗ್ಗಿದ ವಿದ್ಯಾರ್ಥಿಗಳು ಉಪಕುಲಪತಿ ಎಂ. ಜಗದೀಶ್ ಕುಮಾರ್ ವಿರುದ್ಧ ಆವರಣದಲ್ಲಿ ಸಂದೇಶಗಳನ್ನು ಬರೆದಿದ್ದರು. “ನೀವು ನಮ್ಮ ಉಪಕುಲಪತಿಗಳಿಲ್ಲ. ನಿಮ್ಮ ಸಂಘಕ್ಕೆ ನೀವು ಮರಳಿರಿ” ಎಂಬ ಘೋಷಣೆನ್ನು ಉಪಕುಲಪತಿ ಕಚೇರಿಯ ಬಾಗಿಲುಗಳಿಗೆ ಪೇಂಟ್ ಮಾಡಿ ಬಳಿದಿದ್ದರು.

news18
Updated:November 14, 2019, 6:10 PM IST
ದೆಹಲಿಯ ಜೆಎನ್​ಯು ಕ್ಯಾಂಪಸ್​ನಲ್ಲಿ ಸ್ವಾಮಿ ವಿವೇಕಾನಂದ ಪ್ರತಿಮೆಗೆ ಹಾನಿ
ಜೆಎನ್​ಯು ಕ್ಯಾಂಪಸ್​ನಲ್ಲಿರುವ ವಿವೇಕಾನಂದ ಪ್ರತಿಮೆ
  • News18
  • Last Updated: November 14, 2019, 6:10 PM IST
  • Share this:
ನವದೆಹಲಿ(ನ. 14): ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯದಲ್ಲಿ ಉಪಕುಲಪತಿ ಮತ್ತು ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿಯುತ್ತಲೇ ಇದೆ. ಇದೇ ಹೊತ್ತಿನಲ್ಲಿ ಜೆಎನ್​ಯು ಕ್ಯಾಂಪಸ್​ನಲ್ಲಿರುವ ಸ್ವಾಮಿ ವಿವೇಕಾನಂದ ಪ್ರತಿಮೆಗೆ ಕಿಡಿಗೇಡಿಗಳು ಧಕ್ಕೆ ಉಂಟು ಮಾಡಿದ್ದಾರೆ. ಪ್ರತಿಮೆಯ ಮೇಲೆ ಬಿಜೆಪಿ  ಮತ್ತು ಸಂಘಪರಿವಾರದವರ ವಿರುದ್ಧ ಆಕ್ಷೇಪಾರ್ಹ ಸಂದೇಶಗಳನ್ನು ಬರೆಯಲಾಗಿದೆ. ಆದರೆ, ಯಾರು ಈ ಕೃತ್ಯ ಎಸಗಿದ್ದಾರೆ ಎಂಬುದು ಗೊತ್ತಾಗಿಲ್ಲ.

ಜೆಎನ್​ಯು ಹಾಸ್ಟೆಲ್ ಶುಲ್ಕಗಳ ಏರಿಕೆ ವಿರೋಧಿಸಿ ವಿದ್ಯಾರ್ಥಿ ಸಂಘದ ಸದಸ್ಯರು ಕೆಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಮೂರು ದಿನಗಳ ಹಿಂದೆ ಎಐಸಿಟಿಇ ಕಟ್ಟಡಕ್ಕೆ ನುಗ್ಗಲು ಯತ್ನಿಸಿದಾಗ ವಾಟರ್ ಕ್ಯಾನನ್​ಗಳನ್ನ ಬಳಸಿ ಹಿಮ್ಮೆಟ್ಟಿಸಲಾಗಿತ್ತು. ಪ್ರತಿಭಟನೆಗೆ ಜಗ್ಗಿದ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಹಾಸ್ಟೆಲ್ ಶುಲ್ಕ ಹೇರಿಕೆಯಲ್ಲಿ ಒಂದಷ್ಟು ಕಡಿತ ಕೂಡ ಮಾಡಿತ್ತು. ಆದರೂ ವಿದ್ಯಾರ್ಥಿಗಳ ಪ್ರತಿಭಟನೆ ನಿಂತಿಲ್ಲ.

ಇದನ್ನೂ ಓದಿ: 50:50 ಸೂತ್ರದ ಬಗ್ಗೆ ಅಮಿತ್ ಶಾ ಪ್ರಧಾನಿಗೆ ತಿಳಿಸಿದಿದ್ದರೆ ಈ ಸ್ಥಿತಿಯೇ ಉದ್ಭವವಾಗುತ್ತಿರಲಿಲ್ಲ; ಸಂಜಯ್ ರಾವತ್

ನಿನ್ನೆ ಕೂಡ ಜೆಎನ್​ಯು ಆಡಳಿತ ವಿಭಾಗಕ್ಕೆ ನುಗ್ಗಿದ ವಿದ್ಯಾರ್ಥಿಗಳು ಉಪಕುಲಪತಿ ಎಂ. ಜಗದೀಶ್ ಕುಮಾರ್ ವಿರುದ್ಧ ಆವರಣದಲ್ಲಿ ಸಂದೇಶಗಳನ್ನು ಬರೆದಿದ್ದರು. “ನೀವು ನಮ್ಮ ಉಪಕುಲಪತಿಗಳಿಲ್ಲ. ನಿಮ್ಮ ಸಂಘಕ್ಕೆ ನೀವು ಮರಳಿರಿ” ಎಂಬ ಘೋಷಣೆನ್ನು ಉಪಕುಲಪತಿ ಕಚೇರಿಯ ಬಾಗಿಲುಗಳಿಗೆ ಪೇಂಟ್ ಮಾಡಿ ಬಳಿದಿದ್ದರು.

ಉಪಕುಲಪತಿಗಳನ್ನು ಭೇಟಿ ಮಾಡಿ ಮಾತನಾಡುವ ವಿದ್ಯಾರ್ಥಿಗಳ ಪ್ರಯತ್ನ ಮಾತ್ರ ಇನ್ನೂ ಕೈಗೂಡಿಲ್ಲ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 14, 2019, 6:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading