ಇಂದು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಪುಣ್ಯತಿಥಿ. ಪ್ರತೀ ವರ್ಷ ಜುಲೈ 4ನ್ನು ಸ್ವಾಮಿ ವಿವೇಕಾನಂದರ ಪುಣ್ಯತಿಥಿಯನ್ನು ಆಚರಿಸಲಾಗುತ್ತದೆ. ಭಾರತೀಯ ಚಿಂತನೆ ಮತ್ತು ತತ್ವಾದರ್ಶಗಳ ಬೆಳಕನ್ನು ಜಾಗತಿಕವಾಗಿ ಬೆಳಗಿದ ಅವರ ಸಮಾಜಮುಖಿ ಸಂದೇಶಗಳು ನಿರಂತರ ಸ್ಫೂರ್ತಿಯ ಚಿಲುಮೆಗಳಾಗಿವೆ. ಯೋಗ ಮತ್ತು ವೇದಾಂತದ ತತ್ವಚಿಂತನೆಗಳನ್ನು ಪಶ್ಚಿಮಕ್ಕೆ ಪರಿಚಿಯಿಸುವಲ್ಲಿ ಸ್ವಾಮಿ ವಿವೇಕಾನಂದರು ಪ್ರಮುಖ ಪಾತ್ರ ವಹಿಸಿದ್ದಾರೆ. 1893ರಲ್ಲಿ ಚಿಕಾಗೋದ ವರ್ಲ್ಡ್ ಪಾರ್ಲಿಮೆಂಟ್ ಆಫ್ ರಿಲೀಜನ್ನಲ್ಲಿ ಅವರು ಮಾಡಿದ ಭಾಷಣ ಎಲ್ಲೆಡೆ ಜನಜನಿತವಾಗಿದೆ. ಅಮೆರಿಕದ ನನ್ನ ಸಹೋದರ ಸಹೋದರಿಯರೇ ಎಂದು ಸ್ವಾಮಿ ವಿವೇಕಾನಂದರು ಮಾತುಗಳನ್ನು ಆರಂಭಿಸಿದ್ದರು. ಈ ಮಾತು ಇಂದಿಗೂ ಎಲ್ಲರ ಮನಸಲ್ಲೂ ಚಿರಸ್ಥಾಯಿಯಾಗಿ ಉಳಿದಿವೆ.
ಸ್ವಾಮಿ ವಿವೇಕಾನಂದರು 1863 ಜನವರಿ 12ರಂದು ಬಂಗಾಳಿ ಕುಟುಂಬದಲ್ಲಿ ಜನಿಸಿದರು. ಇವರ ಬಾಲ್ಯದ ಹೆಸರು ನರೇಂದ್ರನಾಥ ದತ್ತ. ಇವರ ತಂದೆ ವಿಶ್ವನಾಥ ದತ್ತ. ಕೊಲ್ಕತ್ತಾ ಹೈಕೋರ್ಟ್ನಲ್ಲಿ ಅಟಾರ್ನಿ ಜನರಲ್ ಆಗಿದ್ದರು. ತಾಯಿ ಭುವನೇಶ್ವರಿ ದೇವಿ ಗೃಹಿಣಿ. ವಿವೇಕಾನಂದರು ತಮ್ಮ ಚಿಕ್ಕ ವಯಸ್ಸಿನಿಂದಲೇ ಹಿಂದುತ್ವ ಹಾಗೂ ಆಧ್ಯಾತ್ಮದ ಕಡೆಗೆ ಹೆಚ್ಚಿನ ಒಲವು ಹೊಂದಿದ್ದರು.
ಇಂದು ಸ್ವಾಮಿ ವಿವೇಕಾನಂದರ ಪುಣ್ಯತಿಥಿ ಹಿನ್ನೆಲೆ, ದೇಶಾದ್ಯಂತ ಸಾರ್ವಜನಿಕರು ಹಾಗೂ ರಾಜಕೀಯ ನಾಯಕರು ಗೌರವ ಸಲ್ಲಿಸಿದ್ದಾರೆ. ಕರ್ನಾಟಕ ಸಿಎಂ ಬಿಎಸ್ ಯಡಿಯೂರಪ್ಪ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರ ಪುಣ್ಯತಿಥಿ ಅಂಗವಾಗಿ ಇಂದು ಅಧಿಕೃತ ನಿವಾಸ 'ಕಾವೇರಿ'ಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು.
ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರ ಪುಣ್ಯತಿಥಿ ಅಂಗವಾಗಿ ಇಂದು ಅಧಿಕೃತ ನಿವಾಸ 'ಕಾವೇರಿ'ಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಲಾಯಿತು. pic.twitter.com/ykOuCD7Dxl
— B.S. Yediyurappa (@BSYBJP) July 4, 2021
On this day in 1902, Swami Vivekananda attained Mahasamadhi.
We shall forever remain indebted to him for his teachings on individual freedom, social equality and justice into the Indian ethos. His thoughts & ideas are our guiding light, even today.
— Mamata Banerjee (@MamataOfficial) July 4, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ