HOME » NEWS » National-international » SWAERO MOVEMENT HERO IPS OFFICER PRAVEEN KUMAR CLARIFIES ON BHEEM DEEKSHA VIDEO ROW SNVS

Praveen Kumar IPS - ಹಿಂದೂ ಧರ್ಮದ ಅವಹೇಳನ ಆರೋಪ: ಸ್ವೇರೋ ಚಳವಳಿಯ ರೂವಾರಿ ನೀಡಿದ ಪ್ರತಿಕ್ರಿಯೆ ಇದು

Swaero Movement - ಸ್ವೇರೋ ಆಂದೋಲನದ ಭಾಗವಾಗಿ ನಡೆದ ಭೀಮ್ ದೀಕ್ಷಾ ಕಾರ್ಯಕ್ರಮದಲ್ಲಿ ಬೌದ್ಧ ಕುಟುಂಬವೊಂದು ಕೆಲ ಹಿಂದೂ ದೇವರುಗಳನ್ನ ನಿಂದಿಸಿದೆ. ಇದಕ್ಕೆ ಐಪಿಎಸ್ ಅಧಿಕಾರಿ ಪ್ರವೀಣ್ ಕುಮಾರ್ ಅವರ ಕುಮ್ಮಕ್ಕಿದೆ ಎಂದು ತೆಲಂಗಾಣದ ಬಿಜೆಪಿ ನಾಯಕರು ಆರೋಪ ಮಾಡಿದ್ಧಾರೆ.

news18
Updated:March 16, 2021, 2:08 PM IST
Praveen Kumar IPS - ಹಿಂದೂ ಧರ್ಮದ ಅವಹೇಳನ ಆರೋಪ: ಸ್ವೇರೋ ಚಳವಳಿಯ ರೂವಾರಿ ನೀಡಿದ ಪ್ರತಿಕ್ರಿಯೆ ಇದು
ಐಪಿಎಸ್ ಅಧಿಕಾರಿ ಪ್ರವೀಣ್ ಕುಮಾರ್
  • News18
  • Last Updated: March 16, 2021, 2:08 PM IST
  • Share this:
ಹೈದರಾಬಾದ್(ಮಾ. 16): ಸರ್ವ ಧರ್ಮ ಸಮನ್ವಯತೆ ಸಾಧಿಸಿ ಸಮಾಜದಲ್ಲಿ ಒಗ್ಗಟ್ಟು ಸ್ಥಾಪಿಸುವ ಉದ್ದೇಶದಿಂದ ಸ್ಥಾಪಿತಗೊಂಡಿರುವ ಸ್ವೇರೋ ಚಳವಳಿ (Swaero Movement) ಈಗ ವಿವಾದಕ್ಕೆ ಸಿಲುಕಿದೆ. ಆಂದೋಲನ ಕಾರ್ಯಕ್ರಮದ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು ಅದರಲ್ಲಿ ಹಿಂದೂ ಧರ್ಮದ ಅವಹೇಳನ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಸ್ವೇರೋ ಆಂದೋಲನದ ರೂವಾರಿ ಐಪಿಎಸ್ ಅಧಿಕಾರಿ ಪ್ರವೀಣ್ ಕುಮಾರ್ ಅವರು ಶಾಲಾ ಮಕ್ಕಳಲ್ಲಿ ಹಿಂದೂ ಧರ್ಮದ ವಿರುದ್ಧ ವಿಷಭಾವನೆಯ ಬೀಜ ಬಿತ್ತುತ್ತಿದ್ದಾರೆ ಎಂದು ತೆಲಂಗಾಣದ ಬಿಜೆಪಿ ನಾಯಕರು ಆಪಾದನೆ ಮಾಡುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಪೊಲೀಸ್ ಅಧಿಕಾರಿ ಪ್ರವೀಣ್ ಕುಮಾರ್, ತಮ್ಮ ಸ್ವೇರೋ ಆಂದೋಲನವು ಯಾವುದೇ ಧರ್ಮವನ್ನು ದುರುದ್ದೇಶಪೂರ್ವಕವಾಗಿ ಟೀಕಿಸುವುದಿಲ್ಲ. ಎಲ್ಲಾ ಧರ್ಮಗಳ ಸಕಾರಾತ್ಮಕ ಅಂಶಗಳನ್ನ ಗಣಿಸಿ ಮಕ್ಕಳಿಗೆ ಸಕಾರಾತ್ಮಕ ಚಿಂತನೆ ಮೂಡಿಸುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.

ವೈರಲ್ ಆಗಿರುವ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಕಾರ್ಯಕ್ರಮದ ಯಾವುದೇ ಘಟನೆಯು ಯಾರಿಗಾದರೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದ್ದರೆ ವಿಷಾದಿಸುತ್ತೇವೆ. ಈ ವಿಡಿಯೋದಲ್ಲಿ ಮಾತನಾಡಿದ ಬೌದ್ಧ ಕುಟುಂಬದ ಹೇಳಿಕೆಯನ್ನು ನಾವು ಸಮರ್ಥಿಸುವುದಿಲ್ಲ. ನಮ್ಮ ಕಾರ್ಯಕ್ರಮ ಸಂಘಟಕರು ಆ ವೇದಿಕೆಯಲ್ಲಿ ಎಲ್ಲಾ ಅಭ್ಯರ್ಥಿಗಳಿಗೂ ಕೂಡಲೇ ಸ್ಪಷ್ಟೀಕರಣ ಕೊಟ್ಟರು ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಫೋನ್ ಟ್ಯಾಪಿಂಗ್ ಆರೋಪ ಒಪ್ಪಿಕೊಂಡ ರಾಜಸ್ಥಾನ ಸರ್ಕಾರ; ಸಿಎಂ ರಾಜೀನಾಮೆಗೆ ಬಿಜೆಪಿ ಒತ್ತಾಯ

ಈ ವಿವಾದಿತ ವಿಡಿಯೋ ಸ್ವೇರೋ ಆಂದೋಲನದಿಂದ ಆಯೋಜನೆಯಾದ ಭೀಮ್ ದೀಕ್ಷಾ ಕಾರ್ಯಕ್ರಮದ ಘಟನೆಗೆ ಸಂಬಂಧಿಸಿದ್ದಾಗಿದೆ. 1956ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ಐತಿಹಾಸಿಕ ಕಾರ್ಯಕ್ರಮವೊಂದರಲ್ಲಿ ಬಿಆರ್ ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದರು. ಅಂದು ಅವರು ಕೈಗೊಂಡ ಶಪಥಗಳನ್ನ ಇದೀಗ ಭೀಮ್ ದೀಕ್ಷಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬೌದ್ಧ ಕುಟುಂಬವೊಂದರ ಸದಸ್ಯರು ಪುನರುಚ್ಚರಿಸಿದ್ದರು. ಈ ವೇಳೆ ಕೆಲ ಹಿಂದೂ ದೇವರುಗಳ ಅವಹೇಳನ ಕೂಡ ಮಾಡಲಾಗಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ವೇದಿಕೆಯಲ್ಲಿದ್ದ ಪ್ರವೀಣ್ ಕುಮಾರ್ ಕೂಡ ಇದಕ್ಕೆ ಪುಷ್ಟಿ ನೀಡಿದರು ಎಂಬುದು ಬಲಪಂಥೀಯರ ಆರೋಪವಾಗಿದೆ.
ಹಿರಿಯ ಐಪಿಎಸ್ ಅದಿಕಾರಿಯಾಗಿರುವ ಪ್ರವೀಣ್ ಕುಮಾರ್ ಅವರು ತೆಲಂಗಾಣದ ಸಾಮಾಜಿಕ ಮತ್ತು ಬುಡಕಟ್ಟು ಕಲ್ಯಾಣ ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಕೂಡ ಆಗಿದ್ದಾರೆ. ಸ್ವೇರೋ ಆಂದೋಲನವನ್ನು ಆರಂಭಿಸಿರುವ ಇವರು ಇತ್ತೀಚೆಗೆ ಪೆದ್ದಪಲ್ಲಿ ಜಿಲ್ಲೆಯ ಧೂಳಿಕಟ್ಟ ಬೌದ್ಧ ದೇವಾಲದಯಲ್ಲಿ ಸ್ವೇರೋ ಮಾಸಾಚರಣೆಗೆ ಚಾಲನೆ ನೀಡಿದ್ದರು. ಒಂದು ತಿಂಗಳ ಕಾಲ ಡಾ. ಅಂಬೇಡ್ಕರ್ ಅವರ ಕಾರ್ಯಚಟುವಟಿಕೆಗಳನ್ನ ಮೆಲುಕು ಹಾಕುವ ಕೆಲಸ ಮಾಡಲಾಗುತ್ತಿದೆ. ಇಂಥದ್ದೊಂದು ಕಾರ್ಯಕ್ರಮದ ವೇಳೆ ಈ ವಿವಾದಿತ ವಿಡಿಯೋ ಬೆಳಕಿಗೆ ಬಂದಿದೆ. ಇದನ್ನೇ ಗುರಿಯಾಗಿಸಿರುವ ಬಿಜೆಪಿ, ವಿಹಿಂಪ ನಾಯಕರು, ಪ್ರವೀಣ್ ಕುಮಾರ್ ಕಾರ್ಯದರ್ಶಿಯಾಗಿರುವ ಬುಡಕಟ್ಟು ಶಾಲೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಭಾವನೆಗಳನ್ನ ತುಂಬುತ್ತಿದ್ದಾರೆ ಎಂದು ಆಪಾದಿಸುತ್ತಾ ಬಂದಿವೆ.

ಇದನ್ನೂ ಓದಿ: Belagavi Border Dispute: ಲೋಕಸಭೆಯಲ್ಲಿ ಬೆಳಗಾವಿ ಗಡಿ ವಿವಾದದ ಪ್ರಸ್ತಾಪ: ಶಿವಸೇನೆಗೆ ತಕ್ಕ ಉತ್ತರ ನೀಡಿದ ರಾಜ್ಯದ ಸಂಸದರು

ಈ ಆಪಾದನೆಗಳನ್ನ ಸಾರಸಗಟಾಗಿ ತಳ್ಳಿಹಾಕಿರುವ ಐಪಿಎಸ್ ಅಧಿಕಾರಿ ಪ್ರವೀಣ್ ಕುಮಾರ್, “ಸ್ವೇರೋ ಸಂಘಟನೆಯಲ್ಲಿ ಎಲ್ಲಾ ಧರ್ಮೀಯರೂ ಇದ್ದಾರೆ. ಎಲ್ಲಾ ಧರ್ಮಗಳ ಒಳ್ಳೆಯ ಅಂಶಗಳನ್ನ ನಾವು ಗಣಿಸುತ್ತೇವೆ. ನಮ್ಮ ಮನೆಗಳಲ್ಲಾಗಲೀ, ಕೆಲಸದಲ್ಲಾಗಲೀ ಯಾವುದೇ ಧರ್ಮದ ವಿರುದ್ಧ ಪೂರ್ವಗ್ರಹಪೀಡಿತರಾಗಿ ಬೋಧನೆ ಮಾಡುವುದಿಲ್ಲ. ನಾವು ಎಲ್ಲಾ ಧರ್ಮಗಳ ಹಬ್ಬಗಳನ್ನೂ ಆಚರಿಸುತ್ತೇವೆ. ನಾವು ಶಿಕ್ಷಣ, ಆರೋಗ್ಯ ಜಾಗೃತಿ, ವೈಜ್ಞಾನಿಕ ಚಿಂತೆ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೆಲಸ ಮಾಡುತ್ತೇವೆಯೇ ಹೊರತು ದ್ವೇಷವನ್ನು ಹರಡುವುದಿಲ್ಲ” ಎಂದು ಡಾ. ಆರ್ ಎಸ್ ಪ್ರವೀಣ್ ಕುಮಾರ್ ಹೇಳಿಕೆ ನೀಡಿದ್ದಾರೆ.
Published by: Vijayasarthy SN
First published: March 16, 2021, 2:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories