• Home
  • »
  • News
  • »
  • national-international
  • »
  • Nobel Prize Winners: ಅಪ್ಪನಿಗೂ ನೊಬೆಲ್, ಮಗನಿಗೂ ನೊಬೆಲ್! ಈ ಅಪರೂಪದ ಸಾಧನೆ ಮಾಡಿದ್ದು ಇವರೇ!

Nobel Prize Winners: ಅಪ್ಪನಿಗೂ ನೊಬೆಲ್, ಮಗನಿಗೂ ನೊಬೆಲ್! ಈ ಅಪರೂಪದ ಸಾಧನೆ ಮಾಡಿದ್ದು ಇವರೇ!

ವಿಜ್ಞಾನಿ ಸ್ವಾಂಟೆ ಪಾಬೊ

ವಿಜ್ಞಾನಿ ಸ್ವಾಂಟೆ ಪಾಬೊ

ಈ ಬಾರಿಯ ಪ್ರತಿಷ್ಠಿತ ಪ್ರಶಸ್ತಿ ನೊಬೆಲ್‌ಗೆ ಭಾಜನವಾಗಿರುವ ಸ್ವಾಂಟೆ ಪಾಬೊ ಅವರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಹೀಗಿದೆ.

  • Share this:

ತಂದೆಯ ನಂತರ ಮಗ ಕೂಡ ಪ್ರತಿಷ್ಠಿತ ನೊಬೆಲ್‌ ಪ್ರಶಸ್ತಿಗೆ ಭಾಜನರಾಗಿರುವ ಹೆಮ್ಮೆಯ ಕ್ಷಣಕ್ಕೆ ವಿಜ್ಞಾನಿ ಸ್ವಾಂಟೆ ಪಾಬೊ (Svante Paabo) ಸಾಕ್ಷಿಯಾಗಿದ್ದಾರೆ. 1982ರಲ್ಲಿ ಇವರ ತಂದೆ ಸುನೆ ಬರ್ಗ್‌ಸ್ಟ್ರಾಮ್ ವೈದ್ಯಕೀಯ ನೊಬೆಲ್‌ ಅನ್ನು ಪಡೆದುಕೊಂಡಿದ್ದರು. ಇದಾದ 40 ವರ್ಷಗಳ ಬಳಿಕ ಪಾಬೊ ಕೂಡ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ವಿಜ್ಞಾನಿ ಸ್ವಾಂಟೆ ಪಾಬೊ ಅವರು ಈ ಬಾರಿಯ ಮೆಡಿಸಿನ್‌ ವಿಭಾಗದಲ್ಲಿ ಪ್ರತಿಷ್ಠಿತ ನೊಬೆಲ್‌ ಪ್ರಶಸ್ತಿಗೆ (2022 Nobel Prize Winner) ಭಾಜನರಾಗಿದ್ದಾರೆ. ಅಳಿವಿನಂಚಿನಲ್ಲಿರುವ ಹೋಮಿನಿನ್‌ಗಳು ಮತ್ತು ಮಾನವ ವಿಕಾಸದ ಜೀನೋಮ್‌ಗಳಿಗೆ ಸಂಬಂಧಿಸಿದ ಅವರ ಸಂಶೋಧನೆಗೆ ವೈದ್ಯಕೀಯ ವಿಭಾಗದಲ್ಲಿ ನೊಬೆಲ್‌ ಪ್ರಶಸ್ತಿ ಲಭಿಸಿದೆ.


ಸ್ವಾಂಟೆ ಪಾಬೊ ಅವರು ಇಂದಿನ ಮಾನವರ ಅಳಿವಿನಂಚಿನಲ್ಲಿರುವ ದೂರದ ಸಂಬಂಧಿ ನಿಯಾಂಡರ್ತಲ್‌ಗಳು ಮತ್ತು ಡೆನಿಸೋವನ್‌ಗಳೊಂದಿಗೆ ಡಿಎನ್‌ಎ ಹಂಚಿಕೊಳ್ಳುತ್ತಾರೆ ಎಂಬುದನ್ನು ಸಾಬೀತುಪಡಿಸಿದ ಅವರ ಅಸಾಮಾನ್ಯ ಆವಿಷ್ಕಾರಕ್ಕಾಗಿ ಸ್ವಾಂಟೆ ಪಾಬೊ ಅವರಿಗೆ ಸೋಮವಾರ 2022ರ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ.


ಇವರ ತಂದೆಗೂ ಸಿಕ್ಕಿತ್ತು ನೊಬೆಲ್!
ವಿಶೇಷ ಎಂದರೆ ಸ್ವಾಂಟೆ ಪಾಬೊ 1982 ರಲ್ಲಿ ವೈದ್ಯಕೀಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಗೆದ್ದ ಸುನೆ ಬರ್ಗ್‌ಸ್ಟ್ರಾಮ್ ಅವರ ಮಗ. ಅಪ್ಪನ ಬಳಿಕ ಮಗ ಕೂಡ ನೊಬೆಲ್‌ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.


ಯಾವ ಸಂಶೋಧನೆಗೆ ಸಂದ ಬಹುಮಾನ?
ನಿಯಾಂಡರ್ತಲಸ್‌ಗಳಿಂದ ಹೋಮೋ ಸೇಫಿಯನ್ಸ್‌ಗಳಿಗೆ ವಂಶವಾಹಿಗಳ ಹರಿವು ಸಂಭವಿಸಿದೆ ಎಂಬುದನ್ನು ಪಾಬೊ ಹಾಗೂ ಅವರ ತಂಡ ಪತ್ತೆಹಚ್ಚಿದೆ. ಸಹಬಾಳ್ವೆಯ ಕಾಲಘಟ್ಟದಲ್ಲಿ ಇವರು ಒಟ್ಟಿಗೆ ಮಕ್ಕಳನ್ನು ಹೊಂದಿದ್ದರು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ನೊಬೆಲ್‌ ಸಮಿತಿ ಮುಖ್ಯಸ್ಥ ಆನಾ ವೆಡೆಲ್‌ ತಿಳಿಸಿದ್ದಾರೆ.


ಹಾಗಾದರೆ ಈ ಬಾರಿಯ ಪ್ರತಿಷ್ಠಿತ ಪ್ರಶಸ್ತಿ ನೊಬೆಲ್‌ಗೆ ಭಾಜನವಾಗಿರುವ ಸ್ವಾಂಟೆ ಪಾಬೊ ಅವರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಹೀಗಿದೆ.


ಯಾರು ಸ್ವಾಂಟೆ ಪಾಬೊ?
1955ರಲ್ಲಿ ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಜನಿಸಿದ ಸ್ವಾಂಟೆ ಪಾಬೊ ಪ್ರಸ್ತುತ ಲೀಪ್‌ಜಿಗ್‌ನಲ್ಲಿರುವ ಮ್ಯಾಕ್ಸ್ ಪ್ಲ್ಯಾಂಕ್ ಇನ್‌ಸ್ಟಿಟ್ಯೂಟ್ ಫಾರ್ ಎವಲ್ಯೂಷನರಿ ಆಂಥ್ರೊಪಾಲಜಿಯ ನಿರ್ದೇಶಕರಾಗಿದ್ದಾರೆ.


ಅವರು ಉಪ್ಸಲಾ ವಿಶ್ವವಿದ್ಯಾನಿಲಯದಲ್ಲಿ ತಮ್ಮ ವೈದ್ಯಕೀಯ ಅಧ್ಯಯನವನ್ನು ಪೂರ್ಣಗೊಳಿಸಿದರು ಮತ್ತು 1980 ರಲ್ಲಿ ಸೆಲ್ ಬಯಾಲಜಿ ವಿಭಾಗದಲ್ಲಿ ಅರೆಕಾಲಿಕ ಸಂಶೋಧನೆ ಮತ್ತು ಬೋಧನೆಯನ್ನು ಪ್ರಾರಂಭಿಸಿದರು.


ಏನೇನನ್ನೆಲ್ಲಾ ಮಾಡಿದ್ದಾರೆ ಗೊತ್ತೇ?
ಇವರು 1986ರಲ್ಲಿ ಪಿಎಚ್‌ಡಿ ಪಡೆದರು. ಅದೇ ವರ್ಷದಲ್ಲಿ ಇನ್ಸ್ಟಿಟ್ಯೂಟ್ ಫಾರ್ ಮಾಲಿಕ್ಯುಲರ್ ಬಯಾಲಜಿ II ನಲ್ಲಿ ಪೋಸ್ಟ್‌ಡಾಕ್ಟರಲ್ ಸಂಶೋಧನೆಯನ್ನು ಪ್ರಾರಂಭಿಸಿದರು. ಪಾಬೊ ಆಧುನಿಕ ಮಾನವರ ಮತ್ತು ಇತರ ಹೋಮಿನಿನ್‌ಗಳ - ನಿಯಾಂಡರ್ತಲ್‌ಗಳು ಮತ್ತು ಡೆನಿಸೋವನ್‌ಗಳ ಜೀನೋಮ್ ಅನ್ನು ಹೋಲಿಸಲು ಸಂಶೋಧಕರಿಗೆ ಅವಕಾಶ ನೀಡುವ ಹೊಸ ತಂತ್ರಗಳ ಅಭಿವೃದ್ಧಿಯನ್ನು ಮುನ್ನಡೆಸಿದ್ದಾರೆ.


ಆವಿಷ್ಕಾರ ಏನು?
"ಪ್ರಸ್ತುತ ಅಳಿದು ಹೋಗಿರುವ ಹೋಮಿನಿನ್ಸ್‌ನಿಂದ ಹೋಮೊ ಸೇಪಿಯನ್ಸ್‌ಗೆ ವಂಶವಾಹಿಗಳು ವರ್ಗಾವಣೆಯಾಗಿರುವುದನ್ನು ಸ್ವಾಂಟೆ ಪಾಬೊ ಪತ್ತೆ ಮಾಡಿದ್ದಾರೆ. ಪಾಬೊ ಅವರ ಮೂಲ ಸಂಶೋಧನೆಯು ಸಂಪೂರ್ಣವಾಗಿ ಹೊಸ ವೈಜ್ಞಾನಿಕ ಶಿಸ್ತನ್ನು ಹುಟ್ಟುಹಾಕಿದೆ.


ಎಲ್ಲಾ ಜೀವಂತ ಮಾನವರನ್ನು ಅಳಿವಿನಂಚಿನಲ್ಲಿರುವ ಹೋಮಿನಿನ್‌ಗಳಿಂದ ಪ್ರತ್ಯೇಕಿಸುವ ಆನುವಂಶಿಕ ವ್ಯತ್ಯಾಸಗಳನ್ನು ಬಹಿರಂಗಪಡಿಸುವ ಮೂಲಕ, ಅವರ ಸಂಶೋಧನೆಗಳು ನಮ್ಮನ್ನು ಅನನ್ಯ ಮಾನವರನ್ನಾಗಿ ಮಾಡುವ ಅನ್ವೇಷಣೆಗೆ ಆಧಾರವನ್ನು ಒದಗಿಸುತ್ತವೆ" ಎಂದು ನೊಬೆಲ್ ಸಮಿತಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


ಇದನ್ನೂ ಓದಿ: Satyanarayan Puja: ಸತ್ಯನಾರಾಯಣ ಪೂಜೆ ಮಾಡಿಸಿದ್ರೂ ಹೆಣ್ಣು ಸಿಕ್ಕಿಲ್ಲ! ಅರ್ಚಕರಿಗೆ ಹಿಗ್ಗಾಮುಗ್ಗಾ ಥಳಿತ!


ಮೊದಲ ದಿನ ಮೆಡಿಸಿನ್‌ ವಿಭಾಗದಲ್ಲಿ ನೋಬೆಲ್‌ ಘೋಷಣೆಯಾಗುತ್ತದೆ. ಮರುದಿನ ಕೆಮಿಸ್ಟ್ರಿ ವಿಭಾಗದ ನೊಬೆಲ್‌ ಘೋಷಣೆಯಾಗುತ್ತದೆ. ಬಳಿಕ ಸಾಹಿತ್ಯಕ್ಕೆ ನೋಬೆಲ್‌ ಘೋಷಣೆಯಾಗುತ್ತದೆ. ಅಕ್ಟೋಬರ್‌ 10ರಂದು ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿ ಘೋಷಿಸಲಾಗುತ್ತದೆ.


ನೊಬೆಲ್‌ ಪ್ರಶಸ್ತಿ
ಪ್ರತಿ ನೊಬೆಲ್‌ ಪ್ರಶಸ್ತಿಯು 10 ದಶಲಕ್ಷ ಕ್ರೊನೊರ್‌ (ಸುಮಾರು 7.36 ಕೋಟಿ ರೂಪಾಯಿ) ಮೊತ್ತವನ್ನು ಹೊಂದಿರುತ್ತದೆ. ಡಿಸೆಂಬರ್‌ ಹತ್ತರಂದು ನೊಬೆಲ್‌ ಪಡೆದವರಿಗೆ ಪ್ರಶಸ್ತಿ ಸರ್ಟಿಫಿಕೇಟ್‌ ಮತ್ತು ಚಿನ್ನದ ಪದಕವನ್ನೂ ನೀಡಲಾಗುತ್ತದೆ.


ಇದನ್ನೂ ಓದಿ: Gaucher Disease: ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಒಂದು ಕೋಟಿ ಮೊತ್ತ ನೀಡಿದ ಸಿಎಂ ಜಗನ್!


ನೊಬೆಲ್‌ ಪ್ರಶಸ್ತಿಯನ್ನು ಸ್ವಿಡನ್‌ನ ಕೈಗಾರಿಕೋದ್ಯಮಿ ಆಲ್‌ಫ್ರೆಡ್‌ ನೊಬೆಲ್‌ ಅವರು ಆರಂಭಿಸಿದರು 1901ರಲ್ಲಿ ಮೊದಲ ಬಾರಿಗೆ ನೊಬೆಲ್‌ ಪ್ರಶಸ್ತಿ ನೀಡಲಾಯಿತು. ನೋಬೆಲ್‌ ಅವರು ಮರಣ ಹೊಂದಿದ ಐದು ವರ್ಷಗಳ ತರುವಾಯ ಮೊದಲ ನೊಬೆಲ್‌ ಪ್ರಶಸ್ತಿ ಘೋಷಿಸಲಾಯಿತು.

Published by:ಗುರುಗಣೇಶ ಡಬ್ಗುಳಿ
First published: