ಅಮಿತ್​ ಶಾ ನೇತೃತ್ವದಲ್ಲಿ ಬಿಜೆಪಿ ಸೇರಿದ ಟಿಎಂಸಿ ರೆಬೆಲ್​ ಸುವೇಂದು ಅಧಿಕಾರಿ; ದೀದಿ ವಿರುದ್ಧ ಟೀಕಾ ಪ್ರಹಾರ

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್​ಗೆ ಮೂರು ದಶಕ, ಕಮ್ಯೂನಿಸ್ಟರಿಗೆ 27 ವರ್ಷ, ಮಮತಾ ದೀದಿಗೆ 10 ವರ್ಷ ಕಾಲವಕಾಶ ನೀಡಿದ್ದೀರಾ. ನಮಗೂ ಐದು ವರ್ಷ ಅಧಿಕಾರ ನೀಡಿ ಎಂದು ಅಮಿತ್​ ಶಾ ಕೋರಿಕೊಂಡರು

ಅಮಿತ್​ ಶಾ ನೇತೃತ್ವದಲ್ಲಿ ಬಿಜೆಪಿ ಸೇರಿದ ಟಿಎಂಸಿ ರೆಬೆಲ್​ ಸುವೇಂದು

ಅಮಿತ್​ ಶಾ ನೇತೃತ್ವದಲ್ಲಿ ಬಿಜೆಪಿ ಸೇರಿದ ಟಿಎಂಸಿ ರೆಬೆಲ್​ ಸುವೇಂದು

 • Share this:
  ಕೋಲ್ಕತ್ತಾ (ಡಿ. 19): ತೃಣಮೂಲ ಕಾಂಗ್ರೆಸ್​ ತೊರೆದ ಸುವೇಂದು ಅಧಿಕಾರಿ ಇಂದು ಕೇಂದ್ರ ಸಚಿವ ಅಮಿತ್​ ಶಾ ನೇತೃತ್ವದಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡನೆಯಾದರು. ಮುಂಬರುವ ವಿಧಾನಸಭಾ ಚುನಾವಣಾ ಹಿನ್ನಲೆ ಪಶ್ಚಿಮ ಬಂಗಾಳದಲ್ಲಿ ಎರಡುದಿನಗಳ ಕಾಲ ಪ್ರವಾಸ ನಡೆಸಿರುವ ಅಮಿತ್​ ಶಾ ಇಂದು ಪಶ್ಚಿಮ್​ ಮಿಡ್ನಾಪುರದಲ್ಲಿ ಬೃಹತ್​ ಸಮಾವೇಶ ನಡೆಸಿದರು. ಈ ಸಮಾವೇಶದಲ್ಲಿ ಸುವೇಂದು ಅಧಿಕಾರಿ ಜೊತೆ ತಪಸಿ ಮೊಂಡಲ್​, ಅಸೋಕ್​ ದಿಂಡೆ, ಸುದೀಪ್​ ಮುಖರ್ಜಿ, ಸೈಕತ್​ ಪಂಜಾ, ಶಿಲಭದ್ರ ದತ್​, ದೀಪಲಿ ಬಿಸ್ವಾಸ್​ ಸೇರಿದಂತೆ ಅನೇಕ ಕಾಂಗ್ರೆಸ್​, ಟಿಎಂಸಿ ಹಾಗೂ ಸಿಪಿಐ ನಾಯಕರು ಬಿಜೆಪಿ ಸೇರಿದರು. ಈ ವೇಳೆ ಮಾತನಾಡಿದ ಅಮಿತ್​ ಶಾ, ತೃಣಮೂಲ ಕಾಂಗ್ರೆಸ್ ಅನ್ನು​ ಅಧಿಕಾರದಿಂದ ಕೆಳಗಿಳಿಸಿ, 200ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಸರ್ಕಾರ ರಚಿಸುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು. ಇದೇ ವೇಳೆ ಪಶ್ಚಿಮ ಬಂಗಾಳ ಸಿಎಂ ವಿರುದ್ಧ ಹರಿಹಾಯ್ದ ಅವರು, ಮಮತಾ ಬ್ಯಾನರ್ಜಿಗೆ ತಮ್ಮ ಸೋದರಳಿಯನ ಬಗ್ಗೆ ಮಾತ್ರ ಕಾಳಜಿ ಇದೆ. ಆತನನ್ನು ಅವರು ಮುಂದಿನ ಸಿಎಂ ಆಗಿ ಮಾಡುವ ಇಚ್ಛೆ ಹೊಂದಿದ್ದಾರೆ. ಭ್ರಷ್ಟಚಾರ ಮುಕ್ತ ಮಾಡುವುದಾಗಿ ಅವರು ಹೇಳುತ್ತಾರೆ ಆದರೆ, ಅಪರಾಧಿಗಳನ್ನೆ ಅವರು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.

  ಇದೇ ವೇಳೆ ಕೇಂದ್ರದ ಪರಿಹಾರ ಹಣ ಯಾಕೆ ಪಶ್ಚಿಮ ಬಂಗಾಳದ ಜನರ ಕೈ ಸೇರುತ್ತಿಲ್ಲ ಎಂದು ಪ್ರಶ್ನಿಸಿದರು. ಅಂಫನ್​ ಚಂಡಮಾರುತದ ಪರಿಹಾರ ಹಣ ಇನ್ನು ಸಂತ್ರಸ್ತರ ಕೈ ಸೇರಿಲ್ಲ. ಬಿಜೆಪಿ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಭೇಟಿ ನೀಡಿದಾಗ ಹಲ್ಲೆ ನಡೆಸಿ, ಅವರನ್ನು ಬೆದರಿಸಿದರು. 300ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿದೆ. ಆದರೂ ನಾವು ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

  ಇದನ್ನು ಓದಿ: ರೈತರ ಪ್ರತಿಭಟನೆಯಲ್ಲಿ ಮೃತಪಟ್ಟವರ ಗೌರವಾರ್ಥ ನಾಳೆ ಶೋಕ ದಿನ ಆಚರಣೆ

  ಬಿಜೆಪಿ ಇತರೆ ರಾಜಕೀಯ ಪಕ್ಷಗಳ ನಾಯಕರನ್ನು ಕರೆದೊಯ್ಯುತ್ತಿದೆ ಎಂದು ಅವರು ಆಪಾದಿಸುತ್ತಾರೆ. ಈ ಸಂದರ್ಭದಲ್ಲಿ ಅವರು ಕಾಂಗ್ರೆಸ್​ನಲ್ಲಿದ್ದ ದಿನ ನೆನಪಿಸಲು ಬಯಸುತ್ತೇವೆ. ಬಂಗಾಳದ ಜನರು ಪರಿವರ್ತನೆ ಬಯಸಿ ಬಿಜೆಪಿ ಸೇರುತ್ತಿರುವಾಗ, ಯಾಕೆ ನಿಮಗೆ ಚಿಂತೆ ಎಂದು ಪ್ರಶ್ನಿಸಿದರು. ಬಂಗಾಳದ ಯುವಕರೇ ನಿಮ್ಮ ತಪ್ಪೇನು? ಯಾಕೆ ಇಲ್ಲಿ ಅಭಿವೃದ್ಧಿಯಾಗುತ್ತಿಲ್ಲ ಪ್ರಧಾನಿ ಮೋದಿಯವರ ವಾರ್ಷಿಕ 6 ಸಾವಿರ ರೂ ಯಾಕೆ ರೈತರ ಕೈ ಸೇರುತ್ತಿಲ್ಲ ಎಂದು ಪ್ರಶ್ನಿಸಿದರು.

  ಬಂಗಾಳದಲ್ಲಿ ಕಾಂಗ್ರೆಸ್​ಗೆ ಮೂರು ದಶಕ, ಕಮ್ಯೂನಿಸ್ಟರಿಗೆ 27 ವರ್ಷ, ಮಮತಾ ದೀದಿಗೆ 10 ವರ್ಷ ಕಾಲವಕಾಶ ನೀಡಿದ್ದೀರಾ. ನಮಗೂ ಐದು ವರ್ಷ ಅಧಿಕಾರ ನೀಡಿ ಎಂದರು
  Published by:Seema R
  First published: