ಉಗ್ರರಿಗೆ ಆಶ್ರಯ ನೀಡಿದ್ದ ಆರೋಪ; ಪೊಲೀಸ್ ಅಧಿಕಾರಿ ದವೀಂದರ್ ಸಿಂಗ್ ಶೌರ್ಯ ಪ್ರಶಸ್ತಿ ಮುಟ್ಟುಗೋಲು

ಜಮ್ಮುವಿನ ಪೊಲೀಸ್ ಅಧಿಕಾರಿ ದವೀಂದರ್​​ ಸಿಂಗ್ ತನ್ನ ಮನೆಯಲ್ಲಿ ಮೂವರು ಉಗ್ರರಿಗೆ ಆಶ್ರಯ ನೀಡಿದ್ದ ವಿಷಯ ಬಹಿರಂಗವಾಗುತ್ತಿದ್ದಂತೆ ದವೀಂದರ್ ಅವರನ್ನು ಅಮಾನತು ಮಾಡಲಾಗಿತ್ತು. ಹೀಗಾಗಿ, 2018ರಲ್ಲಿ ಅವರಿಗೆ ನೀಡಲಾಗಿದ್ದ ಶೌರ್ಯ ಪದಕವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

Sushma Chakre | news18-kannada
Updated:January 16, 2020, 8:48 AM IST
ಉಗ್ರರಿಗೆ ಆಶ್ರಯ ನೀಡಿದ್ದ ಆರೋಪ; ಪೊಲೀಸ್ ಅಧಿಕಾರಿ ದವೀಂದರ್ ಸಿಂಗ್ ಶೌರ್ಯ ಪ್ರಶಸ್ತಿ ಮುಟ್ಟುಗೋಲು
ದೇವಿಂದರ್​​ ಸಿಂಗ್
  • Share this:
ನವದೆಹಲಿ (ಜ. 16): ತಮ್ಮ ಮನೆಯಲ್ಲಿ ಉಗ್ರರಿಗೆ ಆಶ್ರಯ ನೀಡಿದ್ದ ಜಮ್ಮು-ಕಾಶ್ಮೀರದ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್‌ ಪೊಲೀಸ್‌ ದವೀಂದರ್ ಸಿಂಗ್ ಅವರನ್ನು ಅಮಾನತು ಮಾಡಲಾಗಿತ್ತು. ಇದರ ಬೆನ್ನಲ್ಲೇ ದವೀಂದರ್ ಸಿಂಗ್ ಅವರಿಗೆ ನೀಡಲಾಗಿದ್ದ ಶೇರ್-ಇ-ಕಾಶ್ಮೀರ್ ಪೊಲೀಸ್ ಪದಕವನ್ನು ಹಿಂಪಡೆಯಲಾಗಿದೆ.

ದವೀಂದರ್ ಸಿಂಗ್ ಅವರಿಗೆ ನೀಡಲಾಗಿದ್ದ ಶೇರ್-ಇ-ಕಾಶ್ಮೀರ ಎಂಬ ಶೌರ್ಯ ಪ್ರಶಸ್ತಿಯನ್ನು ಜಮ್ಮು ಕಾಶ್ಮೀರ ಆಡಳಿತದಿಂದ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಶ್ರೀನಗರದ ಬಾದಾಮಿ ಬಾಗ್ ಕಂಟೋನ್ಮೆಂಟ್ ಬಳಿಯ ಎಕ್ಸ್​​ ವಿ ಕಾರ್ಪ್ಸ್ ಸೇನೆಯ ಪ್ರಧಾನ ಕಚೇರಿಯ ಪಕ್ಕದ ತನ್ನ ಮನೆಯಲ್ಲಿ ಮೂವರು ಉಗ್ರರಿಗೆ ದವೀಂದರ್​​ ಸಿಂಗ್ ಆಶ್ರಯ ನೀಡಿದ್ದ ವಿಷಯ ಬಹಿರಂಗವಾಗುತ್ತಿದ್ದಂತೆ ದವೀಂದರ್ ಅವರನ್ನು ಅಮಾನತು ಮಾಡಲಾಗಿತ್ತು. ಹೀಗಾಗಿ, 2018ರಲ್ಲಿ ನೀಡಲಾಗಿದ್ದ ಶೌರ್ಯ ಪದಕವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಭಯೋತ್ಪಾದಕ ಚಟುವಟಿಕೆಯಲ್ಲಿ ಗುರುತಿಸಿಕೊಂಡಿರುವವರಿಗೆ ರಾಷ್ಟ್ರಪತಿ ಪದಕ ಅಥವಾ ಶೌರ್ಯ ಪ್ರಶಸ್ತಿಯನ್ನು ನೀಡುವಂತಿಲ್ಲ. ಹೀಗಾಗಿ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜಮ್ಮು ಆಡಳಿತ ತಿಳಿಸಿದೆ.

ಇದನ್ನೂ ಓದಿ: 370ನೇ ವಿಧಿ ರದ್ದು ಮಾಡಿದ 5 ತಿಂಗಳ ಬಳಿಕ ಜಮ್ಮು-ಕಾಶ್ಮೀರಕ್ಕೆ ಮೊದಲ ಬಾರಿಗೆ 36 ಕೇಂದ್ರ ಸಚಿವರ ನಿಯೋಗ ಭೇಟಿಗೆ ಸಿದ್ಧತೆ

ಭಾನುವಾರ ಜಮ್ಮು-ಕಾಶ್ಮೀರದ ಡಿವೈಎಸ್​ಪಿ ದವೀಂದರ್ ಸಿಂಗ್​​ ಸೇರಿದಂತೆ ಇಬ್ಬರು ಉಗ್ರರ ಬಂಧನವಾಗಿತ್ತು. ದಕ್ಷಿಣ ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಲಷ್ಕರ್- ಇ-ತೊಯ್ಬಾ ಸಂಘಟನೆಗೆ ಸೇರಿದ ಇಬ್ಬರು ಉಗ್ರರ ಜತೆಗೆ ಹಿರಿಯ ಪೊಲೀಸ್​ ಅಧಿಕಾರಿ ದವೀಂದರ್ ಸಿಂಗ್ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ ಮೂವರ ವಿರುದ್ಧ ಎಫ್​​ಐಆರ್​​ ದಾಖಲಿಸಿಕೊಂಡ ಜಮ್ಮು-ಕಾಶ್ಮೀರದ ಪೊಲೀಸರು ವಿಚಾರಣೆ ನಡೆಸಿದ್ದರು.

ದವೀಂದರ್​​ ಸಿಂಗ್​​​ ಶ್ರೀನಗರ ಇಂಟರ್​ನ್ಯಾಷನಲ್ ಏರ್​ಪೋರ್ಟ್​ನಲ್ಲಿ ಆ್ಯಂಟಿ ಹೈಜಾಕಿಂಗ್ ಸ್ಕ್ವಾಡ್​ನಲ್ಲಿ ಡಿಎಸ್​​​ಪಿ ಕಾರ್ಯ ನಿರ್ವಹಿಸುತ್ತಿದ್ದರು. ಜಮ್ಮು ಕಾಶ್ಮೀರದಿಂದ ಹೊರಹೋಗಲು ಸಹಾಯ ಮಾಡುವ ಸಲುವಾಗಿ ದವೀಂದರ್ ಸಿಂಗ್ ತಮ್ಮ ಕಾರಿನಲ್ಲಿ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಸೈಯದ್ ನಾವೀದ್ ಮುಷ್ತಾಕ್, ರಫಿ ರಾಥೆರ್ ಹಾಗೂ ವಕೀಲ ಇರ್ಫಾನ್ ಶಫಿ ಮೀರ್ ಅವರನ್ನು ಕರೆದೊಯ್ಯುತ್ತಿದ್ದರು. ಆದರೆ, ಸಿಕ್ಕಿಬಿದ್ದ ಮೇಲೆ ವರಸೆಯನ್ನೇ ಬದಲಿಸಿದ್ದ ದವೀಂದರ್ ಸಿಂಗ್ ವಿಚಾರಣೆ ವೇಳೆ ಮುಷ್ತಾಕ್ ಮತ್ತು ರಫಿಯನ್ನು ಶರಣಾಗತಿಗೆಂದು ಪೊಲೀಸರಿಗೆ ಒಪ್ಪಿಸಲು ತಮ್ಮ ಕಾರಿನಲ್ಲಿ ಕರೆದೊಯ್ಯುತ್ತಿದ್ದೆ ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಗರ್ಭಿಣಿಯನ್ನು ಹೆಗಲ ಮೇಲೆ ಹೊತ್ತು ಹಿಮದಲ್ಲಿ ಸಾಗಿದ ಯೋಧರು; ವಿಡಿಯೋ ನೋಡಿ ಸಲಾಂ ಎಂದ ಪ್ರಧಾನಿ ಮೋದಿ

ಆದರೆ, ಮುಷ್ತಾಕ್ ಮತ್ತು ರಫಿ ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿದಾಗ ಅವರು ಶರಣಾಗತಿಯ ಯಾವುದೇ ವಿಚಾರ ತಮಗೆ ಗೊತ್ತಿಲ್ಲ ಎಂದು ಹೇಳಿದ್ದರು. ಪ್ರಾಥಮಿಕ ತನಿಖೆಯಿಂದ ಪೊಲೀಸರಿಗೆ ತಿಳಿದುಬಂದ ಮಾಹಿತಿ ಎಂದರೆ, ಉಗ್ರಗಾಮಿಗಳನ್ನು ಸಾಗಿಸಲು ದವಿಂದರ್ 12 ಲಕ್ಷಕ್ಕೆ ಡೀಲ್ ಕುದುರಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಯ ಕಾರನ್ನು ಯಾರೂ ತಡೆದು ತಪಾಸನೆ ನಡೆಸುವುದಿಲ್ಲವಾದ್ದರಿಂದ ಅವರು ತಮ್ಮ ಕಾರಿನಲ್ಲೇ ಅವರನ್ನು ಸಾಗಿಸುತ್ತಿದ್ದರು. ಹಿಜ್ಬುಲ್ ಕಮಾಂಡರ್ ಆಗಿರುವ ನಾವೀದ್ ಮುಷ್ತಾಕ್ ಅವರು ಹಿಂದೆ ಪೊಲೀಸ್ ಇಲಾಖೆಯಲ್ಲೇ ಇದ್ದವರು. ಈಗ ಉಗ್ರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. 370ನೇ ವಿಧಿ ರದ್ದಾದ ಬಳಿಕ ಸೇಬು ಸಾಗಿಸುವ ಟ್ರಕ್ ಡ್ರೈವರ್​​ಗಳ ಹತ್ಯೆಯಲ್ಲಿ ಇವರ ಕೈವಾಡ ಇರುವ ಶಂಕೆ ಇದೆ.ಪೊಲೀಸರ ಪ್ರಕಾರ ದವೀಂದರ್​​ ಅವರು ಉಗ್ರರನ್ನು ಸಾಗಿಸಿದ್ದು ಇದೇ ಮೊದಲಲ್ಲ. ಹಿಂದೆ ಕನಿಷ್ಠ ಐದಾರು ಸಂದರ್ಭಗಳಲ್ಲಿ ಅವರು ಉಗ್ರರನ್ನು ಬನಿಹಾಲ್ ಹಾದಿಯಲ್ಲಿ ಜಮ್ಮುವಿಗೆ ಸಾಗಿಸಿದ್ದರು. ದವೀಂದರ್ ಸಿಂಗ್ ಅವರು ಈ ಉಗ್ರರನ್ನು ತಮ್ಮ ನಿವಾಸಕ್ಕೆ ಕರೆದೊಯ್ದು ಅಲ್ಲಿಂದ ತಮ್ಮ ಖಾಸಗಿ ವಾಹನದಲ್ಲಿ ಜಮ್ಮುವಿಗೆ ಕರೆದೊಯ್ಯುತ್ತಿದ್ದರೆನ್ನಲಾಗಿದೆ. ಇನ್ನು, ಮುಷ್ತಾಕ್ ಮತ್ತು ರಫಿ ಜೊತೆ ಇದ್ದ ಮೀರ್ ಎಂಬ ವಕೀಲರಿಗೆ ಪಾಕಿಸ್ತಾನದೊಂದಿಗೆ ನಂಟಿದೆ. ಈತ ಐದು ಬಾರಿ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದು, ಅಲ್ಲಿಯವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದವು.

 

 
First published:January 16, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading