HOME » NEWS » National-international » SUSPENDED AAP COUNCILLOR TAHIR HUSSAIN ARRESTED IN DELHI COURT OVER IB STAFFERS MURDER SNVS

ದೆಹಲಿ ಪಾಲಿಕೆ ಸದಸ್ಯ ತಾಹಿರ್ ಹುಸೇನ್ 4 ದಿನ ಪೊಲೀಸ್ ಕಸ್ಟಡಿಗೆ

ಕಳೆದ ತಿಂಗಳು ನಡೆದ ದೆಹಲಿ ಕೋಮುಗಲಭೆ ಸಂದರ್ಭದಲ್ಲಿ ಐಬಿ ಅಧಿಕಾರಿ ಅಂಕಿತ್ ಶರ್ಮಾ ಕೊಲೆಯಾಗಿದ್ದರು. ಈ ಪ್ರಕರಣದಲ್ಲಿ ತಾಹಿರ್ ಹುಸೇನ್ ವಿರುದ್ಧ ದೂರಿದೆ.

Vijayasarthy SN | news18-kannada
Updated:March 16, 2020, 7:12 PM IST
ದೆಹಲಿ ಪಾಲಿಕೆ ಸದಸ್ಯ ತಾಹಿರ್ ಹುಸೇನ್ 4 ದಿನ ಪೊಲೀಸ್ ಕಸ್ಟಡಿಗೆ
ತಾಹಿರ್ ಹುಸೇನ್
  • Share this:
ನವದೆಹಲಿ(ಮಾ. 16): ದೆಹಲಿ ಹಿಂಸಾಚಾರದ ವೇಳೆ ಗುಪ್ತಚರ ಅಧಿಕಾರಿ ಅಂಕಿತ್ ಶರ್ಮಾ ಕಗ್ಗೊಲೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಾಹಿರ್ ಹುಸೇನ್ ಅವರನ್ನು ದೆಹಲಿ ನ್ಯಾಯಾಲಯವೊಂದು ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ದೆಹಲಿಯ ಮುಖ್ಯ ಮೆಟ್ರೋಪೊಲಿಟನ್ ಮ್ಯಾಜಿಸ್ಟ್ರೇಟ್ ಪವನ್ ಸಿಂಗ್ ರಾಜಾವತ್ ಅವರು ಈ ತೀರ್ಪು ನೀಡಿದರು. ಆಮ್ ಆದ್ಮಿಯಿಂದ ಅಮಾನತಾಗಿರುವ ತಾಹಿರ್ ಹುಸೇನ್ ಅವರನ್ನು ಪೊಲೀಸರು 5 ದಿನ ಕಸ್ಟಡಿಗೆ ಒಪ್ಪಿಸುವಂತೆ ಕೋರಿಕೆ ಸಲ್ಲಿಸಿದರು. ಆದರೆ, ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು 4 ದಿನ ಮಾತ್ರ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ.

ಕಳೆದ ತಿಂಗಳು ಪೌರತ್ವ ಕಾಯ್ದೆ ಪ್ರತಿಭಟನೆ ವಿಚಾರವಾಗಿ ದೆಹಲಿಯಲ್ಲಿ ಹಿಂಸಾಚಾರಗಳು ನಡೆದಿದ್ದವು. ಈ ವೇಳೆ ಗುಪ್ತಚರ ಸಂಸ್ಥೆ ಐಬಿಯ ಅಧಿಕಾರಿ 26 ವರ್ಷದ ಅಂಕಿತ್ ಶರ್ಮಾ ಅವರ ಮೃತದೇಹವು ಮನೆಯ ಬಳಿಯ ಚರಂಡಿಯಲ್ಲಿ ಸಿಕ್ಕಿತ್ತು. ಹಿಂಸಾಚಾರ ನಡೆದ ಚಾಂದ್ ಬಾಗ್ ಪ್ರದೇಶದಲ್ಲೇ ಅವರ ಮನೆ ಇತ್ತು. ಅವರನ್ನು ಕೊಲೆ ಮಾಡಲಾಗಿತ್ತು. ಆಮ್ ಆದ್ಮಿ ಪಕ್ಷದ ಕೌನ್ಸಿಲರ್ ಆಗಿದ್ದ ತಾಹಿರ್ ಹುಸೇನ್ ಅವರೇ ಅಂಕಿತ್ ಶರ್ಮಾರನ್ನು ಕೊಲೆ ಮಾಡಿಸಿದ್ದಾರೆ ಎಂದು ತಂದೆ ದೂರು ಕೊಟ್ಟಿದ್ದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿಗಿದೆ. ಈ ಘಟನೆ ಬೆಳಕಿಗೆ ಬರುತ್ತಲೇ ಆಮ್ ಆದ್ಮಿ ಪಕ್ಷವು ತಾಹಿರ್ ಹುಸೇನ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದೆ. ಇದೇ ವೇಳೆ, ತಾಹಿರ್ ಹುಸೇನ್ ಅವರು ತಾವು ಅಮಾಯಕರೆಂದು ಪ್ರತಿಪಾದಿಸುತ್ತಿದ್ದಾರೆ.

ಇದನ್ನೂ ಓದಿ: ಕೊರೋನಾ ಭೀತಿ: ರಾಜ್ಯಸಭೆ ಮತ್ತು ಲೋಕಸಭೆಯಲ್ಲೂ ಥರ್ಮಲ್ ಸ್ಕ್ರೀನಿಂಗ್

ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಗೆ ಪ್ರತಿಯಾಗಿ ಪೌರತ್ವ ಕಾಯ್ದೆ ಪರ ಮೆರವಣಿಗೆ ಪ್ರಾರಂಭವಾಗುತ್ತಲೇ ಈ ಹಿಂಸಾಚಾರಗಳು ದೆಹಲಿಯಲ್ಲಿ ಆರಂಭಗೊಂಡಿದ್ದವು. ಕಳೆದ ತಿಂಗಳು ನಡೆದ ಈ ಕೋಮು ಗಲಭೆಯಲ್ಲಿ 50ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಪಿಟಿಐ ಸುದ್ದಿ ಸಂಸ್ಥೆ ವರದಿ

Youtube Video
First published: March 16, 2020, 7:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories