Father kills Children: ಹೆಂಡತಿಯ ಶೀಲ ಶಂಕಿಸಿ ಇಬ್ಬರು ಮಕ್ಕಳನ್ನು ಕೊಂದ ಪಾಪಿ.. ಮಕ್ಕಳೇನು ಮಾಡಿದ್ದರು!?

Suspecting wife of adultery: ನಿರ್ಜನ ಪ್ರದೇಶಕ್ಕೆ ತೆರಳಿ ಮಕ್ಕಳಿಬ್ಬರನ್ನು ಮರಕ್ಕೆ ನೇಣು ಹಾಕಿ ವೀಡಿಯೋ ಮಾಡಿದ್ದಾನೆ. ವೀಡಿಯೋದಲ್ಲಿ ನಿಮಗೆ ಇದೇ ಬೇಕಿತ್ತು ಅಲ್ವಾ ಎಂದು ಹೆಂಡತಿಯನ್ನು ಪ್ರಶ್ನಿಸಿದ್ದಾರೆ.

ಪಾಪಿ ತಂದೆ ಮುರುಗನ್

ಪಾಪಿ ತಂದೆ ಮುರುಗನ್

  • Share this:
    ಚೆನ್ನೈ: ವ್ಯಕ್ತಿಯೋರ್ವ ಪತ್ನಿಯ ನಡೆತ (Suspecting wife of adultery) ಮೇಲೆ ಅನುಮಾನಗೊಂಡು ಮಕ್ಕಳಿಬ್ಬರನ್ನು ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನ ಸೇಲಂ (Tamil Nadu's Salem) ಜಿಲ್ಲೆಯಲ್ಲಿ ನಡೆದಿದೆ. ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಪತಿ ಅನುಮಾನಿಸುತ್ತಿದ್ದನು. ತನ್ನ 9 ಮತ್ತು 5 ವರ್ಷದ ಮಕ್ಕಳನ್ನ ಮರಕ್ಕೆ ನೇಣು ಹಾಕಿದ್ದಾನೆ. ನಂತರ ವೀಡಿಯೋ ಮಾಡಿ ಕುಟುಂಬಸ್ಥರಿಗೆ ಕಳುಹಿಸಿದ್ದಾನೆ. 33 ವರ್ಷದ ಮುರುಗನ್ ಮಕ್ಕಳನ್ನ ಕೊಂದ ಪಾಪಿ ತಂದೆ. ಮುರುಗನ್ ಮದುವೆ ಮುರುಗೇಶ್ವರಿ ಎಂಬಾಕೆ ಜೊತೆ ನಡೆದಿತು. ದಂಪತಿಗೆ ಚಿನ್ನದಂತಹ 9 ವರ್ಷದ ಮಗ ಮತ್ತು 5 ವರ್ಷದ ಮಗಳಿದ್ದರು. ಮುರುಗನ್ ಕಳೆದ 13 ವರ್ಷಗಳಿಂದ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡಿಕೊಂಡಿದ್ದನು.

    ಮುರುಗನ್ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಅವಘಡ ನಡೆದಿದ್ದರಿಂದ ಕಳೆದ 10 ದಿನಗಳಿಂದ ಮನೆಯಲ್ಲಿಯೇ ಉಳಿದುಕೊಂಡಿದ್ದನು. ಈ ವೇಳೆ ಪತ್ನಿ ಅಪರಿಚಿತರ ಜೊತೆ ಹೆಚ್ಚು ಮಾತನಾಡುತ್ತಿರೋದು ಮುರುಗನ್ ಗಮನಕ್ಕೆ ಬಂದಿದೆ. ಇದರಿಂದ ಕೋಪಗೊಂಡ ಮುರುಗನ್ ಪತ್ನಿಗೆ ಎಚ್ಚರಿಕೆ ನೀಡಿದ್ದಾನೆ.

    ಕುಟುಂಬಸ್ಥರಿಗೆ ಕಳಿಸಿದ ವೀಡಿಯೋದಲ್ಲಿ ಹೇಳಿದ್ದೇನು?

    ಭಾನುವಾರ ಸಂಜೆ ಮುರುಗನ್ ಪತ್ನಿಯ ಮೊಬೈಲ್ (Wife Mobile) ತೆಗೆದುಕೊಂಡು ಮಕ್ಕಳ ಜೊತೆ ಸಮೀಪದ ಅಂಗಡಿಗೆ ಹೋಗಿದ್ದಾನೆ. ಕೆಲ ಸಮಯದ ಬಳಿಕ ನಿರ್ಜನ ಪ್ರದೇಶಕ್ಕೆ ತೆರಳಿ ಮಕ್ಕಳಿಬ್ಬರನ್ನು ಮರಕ್ಕೆ ನೇಣು ಹಾಕಿ ವೀಡಿಯೋ ಮಾಡಿದ್ದಾನೆ. ವೀಡಿಯೋದಲ್ಲಿ ನಿಮಗೆ ಇದೇ ಬೇಕಿತ್ತು ಅಲ್ವಾ? ನೀವು ನಮ್ಮನ್ನು ಕೊಲ್ಲಲು ಪ್ಲಾನ್ ಮಾಡಿದ್ದೀರಿ ಅಂತ ನನಗೆ ಗೊತ್ತು. ಈಗ ನೋಡಿ ನಾವೇ ಸಾಯುತ್ತಿದ್ದೇವೆ ಎಂದು ಮುರುಗನ್ ಹೇಳಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ವಿಡಿಯೋ ನೋಡಿ ಶಾಕ್​​ ಆದ ಪತ್ನಿ..!

    ಇನ್ನೂ ಮುರುಗನ್ ವೀಡಿಯೋ ನೋಡುತ್ತಿದ್ದಂತೆ ಆತಂಕಗೊಂಡ ಪತ್ನಿ ಮರುಗೇಶ್ವರಿ ಮತ್ತು ಕುಟುಂಬಸ್ಥರು ಗ್ರಾಮದ ತುಂಬ ಹುಡುಕಾಡಿದ್ದಾರೆ, ಕೊನೆಗೆ ಎಲ್ಲಿಯೂ ಪತ್ತೆಯಾಗದಿದ್ದಾಗ ತಡಮಾಡದೇ ಸಂಗಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೂರು ಶವಗಳು ಸಮೀಪದ ಮಾವಿನ ತೋಟದಲ್ಲಿ ಪತ್ತೆಯಾಗಿವೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತ್ನಿ ಮರುಗೇಶ್ವರಿ ಮತ್ತು ಕುಟುಂಬಸ್ಥರ ಹೇಳಿಕೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಇದನ್ನೂ ಓದಿ: Divorce: ಹೆಂಡತಿ ದಿನನಿತ್ಯ ಸ್ನಾನ ಮಾಡುವುದಿಲ್ಲ ಎಂದು ಡೈವೋರ್ಸ್ ನೀಡಿದ ಗಂಡ!

    ಮರಣೋತ್ತರ ಶವ ಪರೀಕ್ಷೆಯ ನಂತರ ಮೃತದೇಹಗಳನ್ನು ಕುಟುಂಬಸ್ಥರಿಗೆ ರವಾನಿಸಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪತಿಯ ಜೊತೆ ಮಕ್ಕಳನ್ನು ಕಳೆದುಕೊಂಡ ಮುರುಗೇಶ್ವರಿ ದಿಗ್ಬ್ರಮೆಯಲ್ಲಿದ್ದಾರೆ. ಗ್ರಾಮಸ್ಥರು ಮುರುಗೇಶ್ ಸಾವಿನ ಬಗ್ಗೆ ನಾನಾ ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದು, ಮೂರು ಸಾವುಗಳಿಂದಾಗಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿಕೊಂಡಿದೆ.

    ಮಧ್ಯಪ್ರದೇಶದಲ್ಲಿ ಪತ್ನಿಯ ಮೂಗು ಕಚ್ಚಿದ ಪತಿ

    ಪತಿಯ ಕಿರುಕುಳದಿಂದ ಬೇಸತ್ತ ಪತ್ನಿ ವಿಚ್ಚೇಧನ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಕ್ಕೆ ಮೂಗು ಕಚ್ಚಿರುವ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಮದ್ಯವ್ಯಸನಿಯಾಗಿದ್ದ ಪತಿ ದಿನೇಶ್ ಮನೆ ತೊರೆದ ಟೀನಾ ಮಕ್ಕಳ ಜೊತೆ ಸೇರಿಕೊಂಡಿದ್ದಳು. ವಿಚ್ಛೇದನದ ಜೊತೆ ಪರಿಹಾರ ನೀಡಬೇಕೆಂದು ನ್ಯಾಯಾಲಯದಲ್ಲಿ ಟೀನಾ ಮನವಿ ಮಾಡಿಕೊಂಡಿದ್ದರು. ಕೇಸ್ ಹಿಂಪಡೆಯಲು ಪತ್ನಿ ಟೀನಾ ಒಪ್ಪದಿದ್ದಾಗ ಕೋಪಗೊಂಡ ದಿನೇಶ್ ಮೂಗು ಕಚ್ಚಿ ಗಾಯಗೊಳಿಸಿ ಎಸ್ಕೇಪ್ ಆಗಿದ್ದನು. ಪತ್ನಿ ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
    Published by:Kavya V
    First published: