ದೆಹಲಿಯಲ್ಲಿ ಐಸಿಸ್ ಶಂಕಿತ ಉಗ್ರನ ಬಂಧನ; ಭಾರೀ ಪ್ರಮಾಣದ ಸ್ಫೋಟಕ ವಶ

ಬಂಧಿತ ಐಸಿಸ್ ಉಗ್ರ

ಬಂಧಿತ ಐಸಿಸ್ ಉಗ್ರ

ಐಸಿಸ್ ಸಂಘಟನೆಯ ಬಂಧಿತ ಉಗ್ರನನ್ನು ಅಬು ಯೂಸುಫ್ ಎಂದು ಗುರುತಿಸಲಾಗಿದೆ. ಆತನನ್ನು ಲೋಧಿ ಕಾಲೋನಿಯ ವಿಶೇಷ ಪೊಲೀಸ್​ ಸೆಲ್ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

  • Share this:

    ನವದೆಹಲಿ (ಆ. 22): ಐಸಿಸ್​ (ಇಸ್ಲಾಮಿಕ್ ಸ್ಟೇಟ್) ಉಗ್ರ ಸಂಘಟನೆಗೆ ಸೇರಿದ ವ್ಯಕ್ತಿಯನ್ನು ನಿನ್ನೆ ರಾತ್ರಿ ದೆಹಲಿ ಪೋಲೀಸರು ಬಂಧಿಸಿದ್ದಾರೆ. ದೆಹಲಿ ಪೊಲೀಸ್​ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯ ಬಳಿಕ ಉಗ್ರನೊಬ್ಬನನ್ನು ಬಂಧಿಸಲಾಗಿದೆ. ಆತನಿಂದ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.


    ಬಂಧಿತ ಉಗ್ರನನ್ನು ಅಬು ಯೂಸುಫ್ ಎಂದು ಗುರುತಿಸಲಾಗಿದೆ. ಆತನನ್ನು ಲೋಧಿ ಕಾಲೋನಿಯ ವಿಶೇಷ ಪೊಲೀಸ್​ ಸೆಲ್ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ದೆಹಲಿಯ ಕರೋಲ್ ಬಾಗ್ ಹಾಗೂ ದೌಲಾ ಕುವಾನ್​ ಪ್ರದೇಶಗಳಲ್ಲಿ ನಿನ್ನೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಬೈಕ್​ನಲ್ಲಿ ಹೋಗುತ್ತಿದ್ದ ಉಗ್ರ ಅಬು ಯೂಸುಫ್​ನನ್ನು ಬಂಧಿಸಲಾಗಿದೆ. ಆತನಿಂದ ಸ್ಫೋಟಕ ವಸ್ತುಗಳು, ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.


    ಇದನ್ನೂ ಓದಿ: Ganesh Chaturthi 2020: ಈ ಬಾರಿ ಅರಿಶಿಣ ಪುಡಿಯಿಂದ ತಯಾರಿಸಲಾದ ಆರೋಗ್ಯಸ್ನೇಹಿ ಗಣಪನನ್ನು ಆರಾಧಿಸಿ!


    ಉಗ್ರನಿಂದ ಎರಡು ಐಇಡಿ ಹಾಗೂ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಐಇಡಿಗಳನ್ನು ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ಸ್​​​ ನಿಷ್ಕ್ರಿಯಗೊಳಿಸಿದ್ದಾರೆ ಎಂದು ಪೊಲೀಸ್ ಉಪ ಆಯುಕ್ತ ಪ್ರಮೋದ್ ಸಿಂಗ್ ಕುಶ್ವಾಹಾ ತಿಳಿಸಿದ್ದಾರೆ. ದೆಹಲಿ ಪೊಲೀಸ್ ವಿಶೇಷ ಘಟಕವು ದೆಹಲಿಯ ದೌಲಾ- ಕುವಾನ್ ಪ್ರದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರನೊಬ್ಬನನ್ನು ಬಂಧಿಸಿದ್ದಾರೆ. ಈ ಬಂಧನಕ್ಕೂ ಮೊದಲು ಪೊಲೀಸರು ಮತ್ತು ಉಗ್ರನ ನಡುವೆ ಕೆಲ ಸಮಯ ಗುಂಡಿನ ಚಕಮಕಿ ನಡೆದಿದೆ.



    ಅಬು ಯೂಸುಫ್ ದೆಹಲಿಯ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಹೊಂಚು ಹಾಕುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಐಸಿಸ್ ಸಂಘಟನೆಗೆ ಸೇರಿದ್ದ ರೆಹಮಾನ್ ಎಂಬಾತನನ್ನು ಬಂಧಿಸಲಾಗಿತ್ತು. ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ರೆಹಮಾನ್​ನ ವಿಚಾರಣೆ ಇನ್ನೂ ನಡೆಯುತ್ತಿದೆ.

    Published by:Sushma Chakre
    First published: