ದನದ ಕಳ್ಳ ಎಂದು ಯುವಕನನ್ನು ಥಳಿಸಿ ಸಾಯಿಸಿದ ಜನರು

ವಿಷಯ ತಿಳಿದ ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಆ ಯುವಕನನ್ನು ರಕ್ಷಿಸಲು ಮುಂದಾಗಿದ್ಧಾರೆ.

news18
Updated:July 4, 2019, 12:00 PM IST
ದನದ ಕಳ್ಳ ಎಂದು ಯುವಕನನ್ನು ಥಳಿಸಿ ಸಾಯಿಸಿದ ಜನರು
ಪ್ರಾತಿನಿಧಿಕ ಚಿತ್ರ
  • News18
  • Last Updated: July 4, 2019, 12:00 PM IST
  • Share this:
ತ್ರಿಪುರಾ,(ಜು.04): ಜನರ ಗುಂಪೊಂದು ಯುವಕನನ್ನು ದನದ ಕಳ್ಳನೆಂದು ಶಂಕಿಸಿ ಮನಬಂದಂತೆ ಥಳಿಸಿ ಸಾಯಿಸಿರುವ ಘಟನೆ ತ್ರಿಪುರಾದ ದಲೈ ಜಿಲ್ಲೆಯ ರೈಶ್ಯಬರಿ ಗ್ರಾಮದಲ್ಲಿ ನಡೆದಿದೆ.

ಮೃತ ಯುವಕನನ್ನು ಬುಧಿ ಕುಮಾರ್​ ತ್ರಿಪುರಾ(36) ಎಂದು ಗುರುತಿಸಲಾಗಿದೆ. ರೈಶ್ಯಬರಿ ಪೊಲೀಸ್​ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ಧಾರೆ. ತಡರಾತ್ರಿ ಕುಮಾರ್​ ದನದ ಶೆಡ್​ಗೆ ನುಗ್ಗಿ ಗೋವುಗಳನ್ನು ಕದಿಯುತ್ತಿದ್ದ. ಆಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದದಾನೆ. ಜನರೆಲ್ಲರೂ ಸೇರಿ ಆತನನ್ನು ಹಿಡಿದು ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಎಸ್​ಆರ್​ಟಿಸಿ ಬಸ್​-ಆಟೋ ನಡುವೆ ಮುಖಾಮುಖಿ ಡಿಕ್ಕಿ; ಸ್ಥಳದಲ್ಲೇ ಐವರ ದುರ್ಮರಣ

ವಿಷಯ ತಿಳಿದ ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಆ ಯುವಕನನ್ನು ರಕ್ಷಿಸಲು ಮುಂದಾಗಿದ್ಧಾರೆ. ತಕ್ಷಣ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕುಮಾರ್ ಮೃತಪಟ್ಟಿದ್ಧಾನೆ. ಆತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

First published:July 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ