ಮೊಬೈಲ್ ಆ್ಯಪ್ ಮೂಲಕವೇ ಪಾಸ್ಪೋರ್ಟ್​ಗೆ ಅರ್ಜಿ ಹಾಕಿ: mPassportSeva Mobile Appಗೆ ಸುಷ್ಮಾ ಸ್ವರಾಜ್ ಚಾಲನೆ


Updated:June 26, 2018, 9:47 PM IST
ಮೊಬೈಲ್ ಆ್ಯಪ್ ಮೂಲಕವೇ ಪಾಸ್ಪೋರ್ಟ್​ಗೆ ಅರ್ಜಿ ಹಾಕಿ: mPassportSeva Mobile Appಗೆ ಸುಷ್ಮಾ ಸ್ವರಾಜ್ ಚಾಲನೆ

Updated: June 26, 2018, 9:47 PM IST
-ನ್ಯೂಸ್ 18

ನವದೆಹಲಿ(ಜೂ.26): ದೇಶದ ಯಾವುದೇ ಭಾಗದಿಂದಾದರೂ ಮೊಬೈಲ್ ಆಫ್ ಮೂಲಕ ಪಾಸ್ ಪೋರ್ಟ್​ಗೆ ಅರ್ಜಿ ಹಾಕಬಲ್ಲ ಯೋಜನೆ ಒಳಗೊಂಡ mPassportSeva Mobile Appಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇವತ್ತು ಚಾಲನೆ ನೀಡಿದ್ದಾರೆ.

ಪಾಸ್ ಪೋರ್ಟ್​ ಸೇವಾ ದಿವಸ್ 6ನೇ ವರ್ಷಾಚರಣೆ ಅಂಗವಾಗಿ ಈ ಹೊಸ ಮೊಬೈಲ್ ಆಪ್ ಅನ್ನ ಸುಷ್ಮಾ ಸ್ವರಾಜ್ ಬಿಡುಗಡೆಗೊಳಿಸಿದ್ದು, ಆಂಡ್ರಾಯ್ಡ್ ಮತ್ತು ಐಓಎಸ್ ತಂತ್ರಜ್ಞಾನ ಹೊಂದಿರುವ ಸ್ಮಾರ್ಟ್ ಫೋನ್​ಗಳಲ್ಲಿ ಈ ಆಪ್ ಬಳಕೆ ಮಾಡಬಹುದಾಗಿದೆ. ಇದರಲ್ಲಿ ಪಾಸ್ ಪೋರ್ಟ್​ಗೆ ಅರ್ಜಿ ತುಂಬುವ, ಶುಲ್ಕ ಪಾವತಿಸುವ ಮತ್ತು ಪಾಸ್ ಪೋರ್ಟ್ ಕಚೇರಿ ಭೇಟಿಗೆ ಅವಕಾಶ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯವಿದೆ.

ಈ ಹೊಸ mPassport Seva App ಸೇವೆಯಿಂದಾಗಿ ದೇಶದ ಜನರು ಪಾಸ್ ಪೋರ್ಟ್'ಗೆ ಅರ್ಜಿ ಹಾಕಲು ಕಂಪ್ಯೂಟರ್ ಮತ್ತು ಪ್ರಿಂಟರ್ ಮೊರೆ ಹೋಗುವುದು ತಪ್ಪುತ್ತದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಈ ಕ್ರಾಂತಿಕಾರಿ ಹೆಜ್ಜೆ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ದೇಶದ ನಾಗರಿಕರಿಗೆ ನೇರವಾಗಿ ಸಂಪರ್ಕ ಹೊಂದಿರುವ ಎರಡು ಅಂಶಗಳು ಪಾಸ್​ ಪೋರ್ಟ್ ಮತ್ತು ಹಜ್ ಯಾತ್ರಿಕರಿಗೆ ಅಗತ್ಯವಾಗಿ ಬೇಕಿರುವ ವೀಸಾ ಎಂಬುದನ್ನ ಅರಿತು ಈ ನಿರ್ಧಾರಕ್ಕೆ ಬಂದೆ ಎಂದಿದ್ದಾರೆ.

ಹೊಸ ಆಪ್​ನಲ್ಲಿ ಹೊಸ ಬಳಕೆದಾರರ ನೋಂದಣಿ, ಪಾಸ್ ಪೋರ್ಟ್ ಮತ್ತು ಪೊಲೀಸ್ ಕ್ಲಿಯರೆನ್ಸ್​ಗೆ ಅರ್ಜಿ ತುಂಬುವಿಕೆ, ಭೇಟಿಗೆ ಅವಕಾಶ ನಿಗದಿ, ಅರ್ಜಿ ಲಭ್ಯತೆಯ ಸ್ಥಿತಿ, ಪಾಸ್ ಪೋರ್ಟ್ ಸೇವೆಗೆ ಅರ್ಜಿ ತುಂಬುವಿಕೆ, ದಾಖಲೆಗಳ ಸಲಹೆ, ಶುಲ್ಕ ಲೆಕ್ಕಾಚಾರದ ಮಾಹಿತಿಗಳು ಲಭ್ಯವಿದೆ.

ಸಚಿವಾಲಯದ ಪ್ರಕಟಣೆ ಪ್ರಕಾರ, ಇದರಲ್ಲಿರುವ ಇನ್ನೊಂದು ಹೊಸ ಯೋಜನೆಯಲ್ಲಿ ಪ್ರಾದೇಶಿಕ ಕಚೇರಿ ಆಯ್ಕೆ, ಪಿಎಸ್​ಕೆ, ಪೋಸ್ಟ್ ಆಫೀಸ್ ಪಾಸ್​ಪೋರ್ಟ್ ಸೇವಾ ಕೇಂದ್ರವನ್ನ ಆಯ್ದುಕೊಳ್ಳುವ ಅವಕಾಶವಿದೆ.
First published:June 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...