ಕಾಶ್ಮೀರವನ್ನು ದೇಶದೊಂದಿಗೆ ವಿಲೀನಮಾಡುವುದು ಸುಷ್ಮಾ ಸ್ವರಾಜ್ ಅವರ ಕೊನೆಯ ಆಸೆಯಾಗಿತ್ತೆ?; ಸತ್ಯ ತೆರೆದಿಟ್ಟ ಟ್ವಿಟ್ಟರ್​​ನಲ್ಲಿ ಏನಿದೆ?

ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಹಠಾತ್ ಮರಣ ಇಡೀ ದೇಶವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಆದರೆ, ಅವರು ಕೊನೆಯುಸಿರೆಳೆಯುವ ಮುನ್ನ ಟ್ವೀಟ್ ಮೂಲಕ ರವಾನಿಸಿರುವ ಆ ಒಂದು ಕೊನೆಯ ಸಂದೇಶ ಇದೀಗ ದೇಶದಾದ್ಯಂತ ಹತ್ತಾರು ಪ್ರಶ್ನೆಗಳಿಗೆ ಹಾಗೂ ಚರ್ಚೆಗೆ ಗ್ರಾಸವಾಗಿರುವುದಂತೂ ದಿಟ.

MAshok Kumar | news18
Updated:August 7, 2019, 2:28 PM IST
ಕಾಶ್ಮೀರವನ್ನು ದೇಶದೊಂದಿಗೆ ವಿಲೀನಮಾಡುವುದು ಸುಷ್ಮಾ ಸ್ವರಾಜ್ ಅವರ ಕೊನೆಯ ಆಸೆಯಾಗಿತ್ತೆ?; ಸತ್ಯ ತೆರೆದಿಟ್ಟ ಟ್ವಿಟ್ಟರ್​​ನಲ್ಲಿ ಏನಿದೆ?
ಸುಷ್ಮಾ ಸ್ವರಾಜ್
  • News18
  • Last Updated: August 7, 2019, 2:28 PM IST
  • Share this:


ಸಾಮಾನ್ಯವಾಗಿ ಎಲ್ಲರಿಗೂ ಕೊನೆಯ ಆಸೆ ಎಂಬುದೊಂದಿರುತ್ತದೆ. ಹಾಗೆಯೇ ಮಾಜಿ ಕೇಂದ್ರ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರಿಗೂ ಕೊನೆಯ ಆಸೆ ಇತ್ತೆ? ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಕಲಂ 370 ನಿಷೇಧ ಮಾಡಬೇಕು, ಭಾರತ ದೇಶದ ಸಂವಿಧಾನ ಕಣಿವೆ ರಾಜ್ಯಕ್ಕೂ ಅನ್ವಯವಾಗಬೇಕು ಎಂಬುದು ಅವರ ಆಸೆಯಾಗಿತ್ತೆ? ಕೊನೆಗೂ ಕಾಶ್ಮೀರ ಭಾರತದ ಜೊತೆ ಅಧಿಕೃತವಾಗಿ ವಿಲೀನವಾಗುವ ಈ ದಿನವನ್ನು ನೋಡುವುದಕ್ಕಾಗಿ ಅವರು ಇಷ್ಟು ದಿನ ಬದುಕಿದ್ದರೆ? ಹೀಗೊಂದು ಚರ್ಚೆಗೆ ಕಾರಣವಾಗಿದೆ ಸುಷ್ಮಾ ಸ್ವರಾಜ್ ಅವರ ಕೊನೆಯ ಟ್ವೀಟ್.

ಕಳೆದ ಹಲವು ವರ್ಷಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಸುಷ್ಮಾ ಸ್ವರಾಜ್ ಇದೇ ಕಾರಣಕ್ಕಾಗಿ 2019ರ ಲೋಕಸಭಾ ಚುನಾವಣೆಯಲ್ಲೂ ಸಹ ಸ್ಪರ್ಧೆ ಮಾಡಿರಲಿಲ್ಲ. ಆದರೆ, ಅನಾರೋಗ್ಯದ ನಡುವೆಯೂ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಸುಷ್ಮಾ ಸ್ವರಾಜ್ ಮಂಗಳವಾರ ಕೊನೆಯುಸಿರೆಳೆಯುವ ಮುನ್ನವೂ ಸಹ ಟ್ವೀಟ್ ಮಾಡಿದ್ದರು. ಅದೇ ಅವರ ಕೊನೆಯ ಟ್ವೀಟ್ ಆಗಿದ್ದು ವಿಪರ್ಯಾಸ.

ಮಂಗಳವಾರ ಜಮ್ಮು ಮತ್ತು ಕಾಶ್ಮೀರ ಪುನಾರಚನೆ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದ ಕೇಂದ್ರ ಸರ್ಕಾರ ಕೊನೆಗೂ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಮಸೂದೆಗೆ ಒಪ್ಪಿಗೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿತ್ತು. ಈ ಕುರಿತು ಟ್ವೀಟ್ ಮೂಲಕ ಸಂಸತ ವ್ಯಕ್ತಪಡಿಸಿದ್ದ ಸುಷ್ಮಾ ಸ್ವರಾಜ್, “ಪ್ರಧಾನ ಮಂತ್ರಿಯವರಿಗೆ ಧನ್ಯವಾದಗಳು. ಈ ದಿನವನ್ನು ನೋಡುವುದಕ್ಕಾಗಿ ನಾನು ಜೀವಮಾನವಿಡೀ ಕಾದಿದ್ದೆ” ಎಂದು ಟ್ವೀಟ್ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದರು.


ಹೀಗೆ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಅವರು ತೀವ್ರ ಹೃದಯಾಘಾತಕ್ಕೆ ತುತ್ತಾಗಿ ಬಾರದ ಲೋಕಕ್ಕೆ ತೆರಳಿದ್ದಾರೆ. ಅವರು ಇಂದು ಭೌತಿಕವಾಗಿ ನಮ್ಮನ್ನು ಅಗಲಿದ್ದಾರೆ. ಆದರೆ, ಅವರು ಟ್ವೀಟ್ ಮೂಲಕ ರವಾನಿಸಿರುವ ಆ ಒಂದು ಕೊನೆಯ ಸಂದೇಶ ಹಾಗೂ ಅವರ ಹಠಾತ್ ಮರಣ ಇಂದು ದೇಶದಾದ್ಯಂತ ಹತ್ತಾರು ಪ್ರಶ್ನೆಗಳಿಗೆ ಹಾಗೂ ಚರ್ಚೆಗೆ ಗ್ರಾಸವಾಗಿರುವುದಂತೂ ದಿಟ.

ಇದನ್ನೂ ಓದಿ : ಅಪ್ಪಟ ರಾಪ್ಟ್ರೀಯವಾದಿ, ಕಾಂಗ್ರೆಸ್ ವಿರೋಧಿ ಹಾಗೂ ರೆಬೆಲ್ ನಾಯಕಿ; 1970-2019 ಸುಷ್ಮಾ ಸ್ವರಾಜ್ ಸವೆಸಿದ ರಾಜಕೀಯ ಹೋರಾಟದ ಹಾದಿ!First published: August 7, 2019, 2:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading