Sushma Swaraj: ರೆಫ್ರಿಜರೇಟರ್​​ ಸರಿ ಇಲ್ಲ ಎಂದು ದೂರಿದ್ದ ಸಾಮಾನ್ಯನಿಗೂ ಉತ್ತರಿಸಿದ್ದ ಸುಷ್ಮಾ ಸ್ವರಾಜ್​!

SoSushma Swaraj: ಕಳೆದ ವರ್ಷ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದಾಗ ಭಾರೀ ಮಳೆಯಿಂದಾಗಿ ಭಾರತದ ಯಾತ್ರಾರ್ಥಿಗಳು ಮಾರ್ಗ ಮಧ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರು. ಈ ವೇಳೆ ಸುಷ್ಮಾ ಸ್ವರಾಜ್​ ಸಹಾಯಕ್ಕೆ ಮುಂದಾಗಿದ್ದರು. ಕನ್ನಡ ಸೇರಿ ಐದು ಭಾಷೆಗಳಲ್ಲಿ ಸಹಾಯವಾಣಿ ಆರಂಭಿಸಿದ್ದರು.

Rajesh Duggumane | news18
Updated:August 7, 2019, 11:06 AM IST
Sushma Swaraj: ರೆಫ್ರಿಜರೇಟರ್​​ ಸರಿ ಇಲ್ಲ ಎಂದು ದೂರಿದ್ದ ಸಾಮಾನ್ಯನಿಗೂ ಉತ್ತರಿಸಿದ್ದ ಸುಷ್ಮಾ ಸ್ವರಾಜ್​!
ಸುಷ್ಮಾ ಸ್ವರಾಜ್
Rajesh Duggumane | news18
Updated: August 7, 2019, 11:06 AM IST
ನವದೆಹಲಿ (ಆ.7): ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್​ ಅವರು ನಮ್ಮನ್ನು ಅಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿದ್ದ ಅವರು ವಿದೇಶಾಂಗ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ತಂದಿದ್ದರು. ಕೇಂದ್ರ ಸಚಿವೆಯಾದರೂ ಸುಷ್ಮಾ ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯರ ಕಷ್ಟವನ್ನೂ ಆಲಿಸುತ್ತಿದ್ದರು. ಟ್ವೀಟ್​ಗೆ ಉತ್ತರಿಸುವ ಮೂಲಕ ಸಂತ್ರಸ್ತರಿಗೆ ಅಭಯ ಹಸ್ತ ನೀಡುತ್ತಿದ್ದರು. ಅವರ ಸಾವಿನ ವಾರ್ತೆ ಕೇಳುತ್ತಿದ್ದಂತೆ ಸೋಷಿಯಲ್​ ಮೀಡಿಯಾದಲ್ಲಿ ಸಂತಾಪದ ಸುರಿಮಳೆಯೇ ಹರಿದು ಬಂದಿದೆ.

ಸಾಮಾಜಿಕ ಜಾಲತಾಣದಿಂದ ಬದಲಾವಣೆ ಸಾಧ್ಯ ಎಂಬುದನ್ನು ಸುಷ್ಮಾ ಬಲವಾಗಿ ನಂಬಿದ್ದರು. 2014ರಲ್ಲಿ ಮೋದಿ ಸಚಿವಾಲಯ ಸೇರಿಕೊಂಡ ನಂತರ ಮತದಾರರ ಜೊತೆ ಸಂಪರ್ಕದಲ್ಲಿರಲು ಅವರು ಬಳಸಿದ್ದು ಟ್ವಿಟ್ಟರ್​. 2019ರ ಲೋಕಸಭಾ ಚುನಾವಣೆಯಲ್ಲಿ ಸುಷ್ಮಾ ಸ್ವರಾಜ್​ ಸ್ಪರ್ಧಿಸುವುದಿಲ್ಲ ಎನ್ನುವ ವಿಚಾರ ತಿಳಿಯುತ್ತಿದ್ದಂತೇ ಅನೇಕರು ಮರುಕ ವ್ಯಕ್ತಪಡಿಸಿದ್ದರು.

2017ರಲ್ಲಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮಾಡಲು ಪಾಕಿಸ್ತಾನದ ಬಾಲಕಿಗೆ 1 ವರ್ಷದ ವೀಸಾ ನೀಡಿದ್ದರು. ನಂತರ ಮತ್ತೆರಡು ಪಾಕಿಸ್ತಾನದ ನಾಗರೀಕರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಇದೇ ರೀತಿ ವೀಸಾ ನೀಡಿ ಟ್ವಿಟ್ಟರ್​ನಲ್ಲಿ ಮೆಚ್ಚುಗೆ ಪಡೆದುಕೊಂಡಿದ್ದರು.

2015ರಲ್ಲಿ ಭಾರತೀಯನ್ನು ಮದುವೆಯಾದ ಯೆಮೆನ್​ ಮಹಿಳೆಗೆ ಸಂಕಷ್ಟ ಎದುರಾಗಿತ್ತು. ಈ ವೇಳೆ ಸಂತ್ರಸ್ತೆ ಟ್ವೀಟ್​ ಮಾಡುವ ಮೂಲಕ ಸಹಾಯ ಕೋರಿದ್ದರು. ತಕ್ಷಣ ಟ್ವೀಟ್​ಗೆ ಅವರು ಸ್ಪಂದಿಸಿದ್ದರು.

ಇರಾನ್​ನ ಬಸ್ರಾದಲ್ಲಿ ಸಿಲುಕಿದ 168 ಭಾರತೀಯರಿಗೆ ಸುಷ್ಮಾ ನೆರವಿನ ಸಹಾಯ ಚಾಚಿದ್ದರು. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋ ನೋಡಿ ಅವರು ಸಹಾಯ ಮಾಡಲು ಮುಂದಾಗಿದ್ದರು ಎಂಬುದು ವಿಶೇಷ.



ಕಳೆದ ವರ್ಷ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದಾಗ ಭಾರೀ ಮಳೆಯಿಂದಾಗಿ ಭಾರತದ ಯಾತ್ರಾರ್ಥಿಗಳು ಮಾರ್ಗ ಮಧ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರು. ಈ ವೇಳೆ ಸುಷ್ಮಾ ಸ್ವರಾಜ್​ ಸಹಾಯಕ್ಕೆ ಮುಂದಾಗಿದ್ದರು. ಕನ್ನಡ ಸೇರಿ ಐದು ಭಾಷೆಗಳಲ್ಲಿ ಸಹಾಯವಾಣಿ ಆರಂಭಿಸಿದ್ದರು.



ಇನ್ನು, ಕೆಲವರು ದುರುದ್ದೇಶ ಇಟ್ಟುಕೊಂಡು ಮಾಡುತ್ತಿದ್ದ ಟ್ವೀಟ್​ಗೂ ಸುಷ್ಮಾ ತಿರುಗೇಟು ನೀಡಿದ್ದಿದೆ. “ನನಗೆ ಹಾಳಾದ ರೆಫ್ರಿಜರೇಟರ್ ನೀಡಿದ್ದಾರೆ. ಅದನ್ನು ಹಿಂಪಡೆಯಲು ಒಪ್ಪುತ್ತಿಲ್ಲ. ಇದಕ್ಕೆ ಸಹಾಯ ಮಾಡಿ,”  ಎಂದು ಸುಷ್ಮಾ ಸ್ವರಾಜ್​ ಬಳಿ ವ್ಯಕ್ತಿಯೋರ್ವ ಟ್ವೀಟ್​ ಮಾಡಿ ಕೋರಿದ್ದ. ಇದಕ್ಕೆ ಉತ್ತರಿಸಿದ್ದ ಸುಷ್ಮಾ, “ರೆಫ್ರಿಜರೇಟರ್​ ವಿಚಾರದಲ್ಲಿ ನಾನು ಸಹಾಯ ಮಾಡಲು ಸಾಧ್ಯವಿಲ್ಲ.ಸಂಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಮಾಡುವುದರಲ್ಲಿ ನಾನ್ಉ ಬ್ಯುಸಿ ಇದ್ದೇನೆ,” ಎಂದು ಬರೆದುಕೊಂಡಿದ್ದರು.



ಇದು ಕೆಲವೇ ಕೆಲವು ಉದಾಹರಣೆಗಳಷ್ಟೇ. ಸುಷ್ಮಾ ಸ್ವರಾಜ್​ ಅವರು ಇಂಥ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಅವರ ಕೆಲಸಗಳು, ಸಹಾಯಗಳು ಸದಾ ಜನರ ನೆನಪಲ್ಲಿ ಉಳಿಯುತ್ತವೆ.

First published:August 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...